ಎಷ್ಟೋ ಜನ ಯುವಕರು ಮದುವೆಯಾಗಲು ಹುಡುಗಿ ಸಿಗದೆ ಬೇಸತ್ತು ಹೋಗಿದ್ದಾರೆ. ಹೀಗಿರುವಾಗ ಇಲ್ಲೊಬ್ಬ ಅಮೆರಿಕದ ಸುಂದರ ಚೆಲುವೆ ‘ನನಗೆ ಗಂಡು ಹುಡುಕಿ ಕೊಟ್ಟವರಿಗೆ 5 ಸಾವಿರ ಡಾಲರ್ ಅಂದರೆ 4.5 ಲಕ್ಷ ಬಹುಮಾನ ಕೊಡುತ್ತೆನೆ’ ಎಂದಿದ್ದಾಳೆ. ಹಾಗಿದ್ದರೆ ಈ ದುಬಾರಿ ವಧು ಯಾರು? ಬನ್ನಿ ನೋಡೋಣ.

ಅಮೆರಿಕದ ಲಾಸ್ ಏಂಜಲೀಸ್ ಮೂಲದ ಈವ್ ಟೆಲ್ಲಿ ಕೋಲ್ಸನ್ ಎಂಬ 35 ವರ್ಷದ ಮಹಿಳೆ ಹೀಗೊಂದು ಘೋಷಣೆ ಮಾಡಿ ಎಲ್ಲರನ್ನು ಅಚ್ಚರಿಗೊಳಿಸಿದ್ದಾಳೆ. ಜೊತೆಗೆ ವಿಡಿಯೋವನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಗಂಡು ಹುಡುಕಿ ಕೊಡುವಂತೆ ವಿನಂತಿ ಮಾಡಿಕೊಂಡಿದ್ದಾಳೆ.
ಹುಡುಗನನ್ನು ಅರಸುತ್ತಿರುವ ಈವ್ ಟೆಲ್ಲಿ ಕೋಲ್ಸನ್ ಈ ಹಿಂದೆ ಡೇಟಿಂಗ್ ಅ್ಯಪ್ ಒಂದರಲ್ಲಿ ವರನಿಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದಳಂತೆ. ಆದರೆ ಸೂಕ್ತ ಹುಡುಗ ಸಿಗದ ಕಾರಣ ಇದೀಗ ಇನ್ಸ್ಟ್ರಾಗ್ರಾಮ್ ಮೂಲಕ ನೇರವಾಗಿ ಮನವಿ ಮಾಡಿದ್ದಾಳೆ. ಜೊತೆಗೆ ನನಗೆ ವರ ಹುಡುಕಿ ಕೊಡಿ ಆತನೊಂದಿಗೆ 20 ವರ್ಷಗಳ ಕಾಲವಷ್ಟೇ ಜೀವನ ನಡೆಸುತ್ತೇನೆ’ ಎಂದು ಬರೆದುಕೊಂಡಿದ್ದಾಳೆ. ಸದ್ಯ, ಈ ಒಂದು ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.