ಸೌತ್ ಇಂಡಿಯಾದಲ್ಲಿ ಭಾರಿ ಹೆಸರು ಮಾಡಿದ 90ರ ದಶಕದ ಖ್ಯಾತ ನಟಿಯರಲ್ಲಿ ಮೀನಾ ಅವರು ಕೂಡ ಒಬ್ಬರು. ಈಗ ಆಗೊಮ್ಮೆ ಈಗೊಮ್ಮೆ ಅಪರೂಪವಾಗಿ ಮೀನಾ ಅವರು ನಟನೆ ಮಾಡುತ್ತಾರೆ, ಇತ್ತೀಚೆಗೆ ಇವರು ಗಂಡನನ್ನು ಕಳೆದುಕೊಂಡರು. ಪ್ರಸ್ತುತ ಮಗಳ ಜೊತೆಗೆ ನಟಿ ಮೀನಾ ಅವರು ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ. ಇವರ ಬಗ್ಗೆ ಒಂದಲ್ಲ ಒಂದು ಸುದ್ದಿಗಳು ವೈರಲ್ ಆಗುತ್ತಲೇ ಇರುತ್ತದೆ. ಅದರಲ್ಲೂ ಮೀನಾ ಅವರು ಎರಡನೇ ಮದುವೆಗೆ ತಯಾರಾಗಿದ್ದಾರೆ ಎನ್ನುವ ವಿಷಯ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ವೈರಲ್ ಆಗಿದೆ. ಒಂಟಿತನದಲ್ಲಿ ಇರಲು ಸಾಧ್ಯ ಆಗದೇ ಮೀನಾ ಅವರು ತಮಿಳಿನ ಖ್ಯಾತ ನಟ ಧನುಷ್ ಅವರ ಜೊತೆಗೆ ಮದುವೆ ಆಗ್ತಾರೆ ಎನ್ನಲಾಗಿದ್ದು, ಈ ಬಗ್ಗೆ ಖುದ್ದು ಮೀನಾ ಅವರು ಹೇಳಿಕೆ ನೀಡಿದ್ದು, ಅವರು ಹೇಳಿರೋದೇನು ಎಂದು ಪೂರ್ತಿ ಡೀಟೇಲ್ಸ್ ಇಲ್ಲಿದೆ..

ನಟಿ ಮೀನಾ ಅವರು ಬಾಲನಟಿಯಾಗಿ ನಟನೆಯ ವೃತ್ತಿಯನ್ನು ಶುರು ಮಾಡಿದರು. ಬಳಿಕ ತಮಿಳಿನಲ್ಲಿ ಹೀರೋಯಿನ್ ಆಗಿ ನಟನೆ ಶುರು ಮಾಡಿದರು. ಇವರು ತಮಿಳಿನಲ್ಲಿ ಮಾತ್ರವಲ್ಲದೆ, ತೆಲುಗು, ತಮಿಳು ಹಾಗೂ ಮಲಯಾಳಂ ಈ ಎಲ್ಲಾ ಭಾಷೆಗಳಲ್ಲಿ ಸಹ ನಟಿಸಿದ್ದಾರೆ. 90ರ ದಶಕದ ದೊಡ್ಡ ಸ್ಟಾರ್ ಹೀರೋಯಿನ್ ಗಳಲ್ಲಿ ಮೀನಾ ಅವರು ಕೂಡ ಒಬ್ಬರು. ಆಗಿನ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ಮೀನಾ ಅವರು ತೆರೆ ಹಂಚಿಕೊಂಡಿದ್ದಾರೆ. ಇವರು ಅಭಿನಯಿಸಿದ ಬಹುತೇಕ ಎಲ್ಲಾ ಸಿನಿಮಾಗಳು ಸೂಪರ್ ಹಿಟ್ ಆಗುತ್ತಿದ್ದವು. ಕನ್ನಡದಲ್ಲಿ ಸಹ ಮೀನಾ ಅವರು ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ರವಿಚಂದ್ರನ್ ಅವರೊಡನೆ ಪುಟ್ನಂಜ, ಜಾಣ, ಮೊಮ್ಮಗ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರಿಬ್ಬರ ಜೋಡಿ ಎಲ್ಲರ ಮೆಚ್ಚಿನ ಜೋಡಿಗಳಲ್ಲಿ ಒಂದು.
ಅಷ್ಟೇ ಅಲ್ಲದೇ ವಿಷ್ಣುವರ್ಧನ್ ಅವರು, ಅಂಬರೀಶ್ ಅವರು ಇವರೆಲ್ಲರ ಜೊತೆಗೆ ಕೂಡ ಕನ್ನಡದಲ್ಲಿ ತೆರೆ ಹಂಚಿಕೊಂಡಿದ್ದಾರೆ. ಇನ್ನು ಬೇರೆ ಎಲ್ಲಾ ಭಾಷೆಗಳಲ್ಲಿ ಕೂಡ ಸ್ಟಾರ್ ನಟರ ಜೊತೆಗೆ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆರಿಯರ್ ನ ಉತ್ತುಂಗದಲ್ಲಿ ಇರುವಾಗಲೇ ಮೀನಾ ಅವರು ಮದುವೆಯಾದರು.
ಇವರು ಮದುವೆಯಾಗಿದ್ದು ಕರ್ನಾಟಕದ ಹುಡುಗನ ಜೊತೆಗೆ. ಬೆಂಗಳೂರಿನ ಮೂಲದ ಉದ್ಯಮಿ ವಿದ್ಯಾಸಾಗರ್ ಅವರೊಡನೆ ಮೀನಾ ಅವರು ಮದುವೆಯಾದರು. ಈ ಜೋಡಿಗೆ ಒಂದು ಮುದ್ದಾದ ಹೆಣ್ಣುಮಗುವಿದೆ. ಮಗುವಿನ ಹೆಸರು ನೈನಿಕಾ ಆಗಿದ್ದು, ಈ ಮಗು ತಮಿಳು ನಟ ವಿಜಯ್ ಅವರ ಜೊತೆಗೆ ತೆರಿ ಸಿನಿಮಾದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದಾರೆ. ಸುಂದರವಾಗಿದ್ದ ಇವರ ಸಂಸಾರದ ಮೇಲೆ ಎಷ್ಟು ದೃಷ್ಟಿ ಬಿದ್ದಿತೋ ಗೊತ್ತಿಲ್ಲ.

ಒಂದೆರಡು ವರ್ಷಗಳ ಹಿಂದೆ ಮೀನಾ ಅವರ ಪತಿ ವಿದ್ಯಾಸಾಗರ್ ಅವರು ವಿಧಿವಶರಾದರು. ಪ್ರಸ್ತುತ ಮೀನಾ ಅವರು ಒಂಟಿಯಾಗಿದ್ದಾರೆ. ಮೀನಾ ಅವರು ಮಗಳನ್ನು ನೋಡಿಕೊಂಡು ಈಗ ಸಿನಿಮಾದಲ್ಲಿ ಕೂಡ ಆಕ್ಟಿವ್ ಆಗಿದ್ದಾರೆ. ಒಂದಷ್ಟು ದಿನಗಳ ಕಾಲ ಇವರು ಬಣ್ಣದ ಲೋಕದಿಂದ ಕೂಡ ದೂರವೇ ಉಳಿದಿದ್ದರು. ಆದರೆ ಮೀನಾ ಅವರು ಕೆಲ ಸಮಯದ ನಂತರ ಮತ್ತೆ ಸಿನಿಮಾದಲ್ಲಿ ನಟಿಸುವುದಕ್ಕೆ ಶುರು ಮಾಡಿದರು, ಟಿವಿ ಶೋಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ಶುರು ಮಾಡಿದರು. ಇವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 45 ವರ್ಷ ಆಗಿದ್ದಕ್ಕೆ ದೊಡ್ಡದಾಗಿ ಕಾರ್ಯಕ್ರಮ ಒಂದನ್ನು ಕೂಡ ಮಾಡಿ, ತಮಿಳಿನ ಎಲ್ಲಾ ಕಲಾವಿದರನ್ನು ಕರೆಸಿ, ದೊಡ್ಡದಾಗಿ ಸೆಲೆಬ್ರೇಟ್ ಮಾಡಲಾಯಿತು. ಈ ರೀತಿ ಮೀನಾ ಅವರ ಜನಪ್ರಿಯತೆ ಹೆಚ್ಚಾಗಿದೆ. ಹಾಗೆಯೇ ಸಿನಿಮಾಗಳಲ್ಲಿ ಕೂಡ ಬ್ಯುಸಿ ಆಗಿದ್ದಾರೆ..
ಅದೇ ಕಾರ್ಯಕ್ರಮದಲ್ಲಿ ಮೀನಾ ಅವರ ಮಗಳು ನೈನಿಕಾ ಮಾಧ್ಯಮದವರ ಬಳಿ ಮನವಿ ಮಾಡಿಕೊಂಡಿದ್ದರು. ನನ್ನ ಅಮ್ಮನ ಬಗ್ಗೆ ಹಾಗೆಲ್ಲ ಬರೆಯಬೇಡಿ, ಅದೆಲ್ಲವನ್ನು ಓದಿದಾಗ ನನಗೂ ಬೇಸರ ಆಗುತ್ತದೆ. ನನ್ನ ಅಮ್ಮ ಹಾಗೆಲ್ಲ ಇಲ್ಲ, ಬರೆಯೋ ಮೊದಲು ನಿಜವಾದ ವಿಷಯ ಏನು ಎಂದು ತಿಳಿದುಕೊಂಡು ಬರೆಯಿರಿ, ನಿಮ್ಮ ಮನೆಯಲ್ಲಿಯು ಮಕ್ಕಳು ಇರ್ತಾರೆ, ನಿಮ್ಮ ಬಗ್ಗೆ ಹೀಗೆ ಏನೇನೋ ಸುದ್ದಿಗಳು ಬಂದರೆ, ನಿಮ್ಮ ಮಕ್ಕಳು ಏನಂದುಕೊಳ್ಳುವುದಿಲ್ಲ ಎಂದು ಬಹಳ ಪ್ರಭುದ್ದತೆಯಿಂದ ಮಾತನಾಡಿದ್ದಳು ನೈನಿಕಾ. ಇದನ್ನು ನೋಡಿ ಸೂಪರ್ ಸ್ಟಾರ್ ರಜನಿಕಾಂತ್ ಅವರು ಕೂಡ ಹೆಮ್ಮೆಯಿಂದ ಮಗುವನ್ನು ಹೊಗಳಿದ್ದರು. ಮೀನಾ ಮತ್ತು ವಿದ್ಯಾಸಾಗರ್ ದಂಪತಿಯ ಮಗಳು ನೈನಿಕಾ ಈಗಾಗಲೇ ಬಾಲನಟಿಯಾಗಿ ವಿಜಯ್ ಅವರೊಡನೆ ಒಂದು ಸಿನಿಮಾದಲ್ಲಿ ನಟಿಸಿದ್ದಾರೆ.

ನೈನಿಕಾ ನಟಿಸಿದ ಸಿನಿಮಾ ಥೆರಿ. ವಿಜಯ್ ಅವರ ಮುದ್ದಿನ ಮಗಳ ಪಾತ್ರದಲ್ಲಿ ನೈನಿಕಾ ನಟಿಸಿದ್ದರು. ಈ ಸಿನಿಮಾ ಸೂಪರ್ ಹಿಟ್ ಆಗಿತ್ತು, ಈ ಸಿನಿಮಾ ನಂತರ ನೈನಿಕಾ ಅವರು ಇನ್ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಓದಿನ ಕಡೆಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಹೀರೋಯಿನ್ ಆಗಿ ಎಂಟ್ರಿ ಕೊಡುತ್ತಾರಾ ಎಂದು ಕಾದು ನೋಡಬೇಕಿದೆ. ಇನ್ನು ಮೀನಾ ಅವರು
ಕೆಲವು ಟಿವಿ ಶೋಗಳಲ್ಲಿ ಕೂಡ ಜಡ್ಜ್ ಆಗಿ ಕಾಣಿಸಿಕೊಂಡಿದ್ದಾರೆ. ಮೀನಾ ಅವರು ಸೋಷಿಯಲ್ ಮೀಡಿಯಾದಲ್ಲಿ ಸಹ ಬಹಳ ಆಕ್ಟಿವ್, ಸಾಕಷ್ಟು ಪೋಸ್ಟ್ ಗಳನ್ನು ಶೇರ್ ಮಾಡಿಕೊಳ್ಳುತ್ತಾರೆ. ಫ್ರೆಂಡ್ಸ್ ಜೊತೆಗೆ ಡ್ಯಾನ್ಸ್ ಮಾಡಿ, ರೀಲ್ಸ್ ಗಳನ್ನು ಕೂಡ ಶೇರ್ ಮಾಡಿಕೊಳ್ಳುತ್ತಾರೆ. ಇನ್ನು ಇವರ ಎರಡನೇ ಮದುವೆ ಸುದ್ದಿ ವೈರಲ್ ಆಗುತ್ತಿರುವ ಕಾರಣ, ಮೀನಾ ಅವರು ಒಂದು ಸಂದರ್ಶನದಲ್ಲಿ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ.

ನಟಿ ಮೀನಾ ಅವರು ಕೆಲವು ಸಂದರ್ಶನಗಳಲ್ಲಿ ಕೂಡ ಪಾಲ್ಗೊಂಡಿದ್ದು, ಅವರ ಎರಡನೇ ಮದುವೆ ಬಗ್ಗೆ ಸುದ್ದಿ ವೈರಲ್ ಆಗಿರುವ ವಿಷಯದ ಬಗ್ಗೆ ಕೂಡ ಮಾತನಾಡಿದ್ದಾರೆ. ಇದೆಲ್ಲವೂ ಸುಳ್ಳು ಸುದ್ದಿ ಎಂದು ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕೇಳಿಬಂದಿರುವ ಗಾಳಿ ಸುದ್ದಿ ಇದು ಅಷ್ಟೇ. ಇದರಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಮೀನಾ ಅವರು ಸ್ಪಷ್ಟನೆ ನೀಡಿದ್ದಾರೆ. ಧನುಷ್ ಅವರು ಪತ್ನಿ ಐಶ್ವರ್ಯ ರಜನಿಕಾಂತ್ ಅವರಿಗೆ ವಿಚ್ಛೇದನ ನೀಡಿದರು ಎನ್ನುವ ಕಾರಣಕ್ಕೆ ಈ ಥರದ ಸುದ್ದಿಯೊಂದು ವೈರಲ್ ಆಯಿತು. ಆದರೆ ಮೀನಾ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.



