ಅಗ್ನಿಸಾಕ್ಷಿ ಸೇರಿದಂತೆ ಹಲವು ಧಾರವಾಹಿಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ನಟಿಸಿದ ಇಶಿತ ವರ್ಷ ಹೊಸ ಪೋಸ್ಟ್ ಮೂಲಕ ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಹೌದು ಕಳೆದೊಂದು ದಶಕದಿಂದಲೂ ಧಾರಾವಾಹಿಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ಇಶಿತ ಇದೀಗ ಧಾರಾವಾಹಿಯಿಂದ ದೂರ ಇದ್ದು ಹೊಸದೊಂದು ಹಾಬಿಯನ್ನು ಕಂಡುಕೊಂಡಿದ್ದಾರೆ. ಅದುವೇ ವೈಲ್ಡ್ ಲೈಫ್ ಫೋಟೋಗ್ರಾಫಿ.

ನಿಜ, ವೈಲ್ಡ್ ಲೈಫ್ ಫೋಟೋಗ್ರಾಫಿ ಮೂಲಕ ತನ್ನನ್ನು ಬಹಳ ಬ್ಯುಸಿಯಾಗಿ ಇಟ್ಟುಕೊಂಡಿರುವ ನಟಿ ಇಶಿತ ಇತ್ತೀಚೆಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದಷ್ಟು ಫೋಟೋಗಳನ್ನು ಹಂಚಿಕೊಂಡಿದ್ದು, ನೆಟ್ಟಿಗರ ಗಮನವನ್ನು ತನ್ನತ್ತ ಸೆಳೆದಿದ್ದಾರೆ.
ಸಾಮಾನ್ಯವಾಗಿ ಧಾರಾವಾಹಿ ಸೆಲೆಬ್ರಿಟಿಗಳು ತಮ್ಮ ಫೋಟೋಶೂಟ್ ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಅಭಿಮಾನಿಗಳಿಗೆ ಆಗಾಗ ತಮ್ಮ ಹೊಸ ಲುಕ್ಕುಗಳನ್ನು ನೀಡುತ್ತಿರುತ್ತಾರೆ. ಆದರೆ ನಟಿ ಇಶಿತ ವರ್ಷ ಇದೀಗ ಧಾರವಾಹಿಯಿಂದ ದೂರ ಉಳಿದಿದ್ದು, ತಾವು ಕೈಗೊಂಡಿರುವ ವೈಲ್ಡ್ ಲೈಫ್ ಫೋಟೋಗ್ರಫಿಯ ಕೆಲವು ವಿಚಾರಗಳನ್ನು, ವಿಭಿನ್ನ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಇತ್ತೀಚೆಗಂತೂ ಆಕೆಯ ಸೋಶಿಯಲ್ ಮೀಡಿಯಾ ಪ್ರೊಫೈಲ್ ವೈಡ್ ಅನಿಮಲ್ಸ್ ನಿಂದಲೇ ಕೂಡಿದ್ದು ಬಹಳ ವಿಭಿನ್ನವಾಗಿ ಕಾಣುತ್ತಿದೆ.
ಈ ನಡುವೆ ನಟಿ ಇಶಿತ ಪ್ರಪಂಚದ ಬೇರೆ ಬೇರೆ ಜಾಗಗಳಲ್ಲಿ, ನೈಸರ್ಗಿಕ ತಾಣಗಳಲ್ಲಿ ಫೋಟೋ ಶೂಟ್ ಗಳನ್ನು ಅನ್ನು ಕೂಡ ಮಾಡಿಸುತ್ತಿರುತ್ತಾರೆ. ಸದ್ಯಕ್ಕೆ ಸ್ಟುಡಿಯೋ ಒಂದರಲ್ಲಿ ಮಾಡಿಸಿಕೊಂಡಿರುವ ಫೋಟೋಗಳನ್ನು ಶೇರ್ ಮಾಡಿರುವ ನಟಿ ನೆಟ್ಟಿಗರ ಗಮನ ಸೆಳೆದಿದ್ದಾರೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಕ್ರೀಂ ಬಣ್ಣದ ಲಾಂಗ್ ಸ್ಕರ್ಟ್, ಸ್ಲೀವ್ ಲೆಸ್ ಟ್ಯೂಬ್ ಟಾಪ್, ತಲೆ ಮೇಲೊಂದು ಹ್ಯಾಟ್, ಕಣ್ಣಿಗೆ ಗಾಗಲ್ಸ್ ಧರಿಸಿ, “ಲುಕ್ ಎಟ್ ಮಿ ನಾಟ್ ದಿ ಕ್ಯಾಪ್ಷನ್” ಎಂಬ ಕ್ಯಾಪ್ಶನ್ ನನ್ನು ಕೂಡ ಕೊಟ್ಟಿದ್ದಾರೆ. ನೆಟ್ಟಿಗರಿಂದ ಬಹಳಷ್ಟು ಕಾಂಪ್ಲಿಮೆಂಟ್ ಗಳನ್ನು ಗಳಿಸಿದ್ದಾರೆ. ಈ ಫೋಟೋಸ್ ಬಹಳ ಸುಂದರವಾಗಿ ಬಂದಿದ್ದು, ಗೊಂಬೆಯ ಹಾಗೆ ಕಾಣಿಸುತ್ತಿದ್ದೀರಿ ಸುಂದರಿ ಬ್ಯೂಟಿಫುಲ್ ಮುಂತಾದ ಹಲವು ಕಮೆಂಟ್ಗಳ ಸುರಿಮಳೆಯೇ ಸಿಕ್ಕಿದೆ.

ಎರಡು ವರ್ಷಗಳ ಹಿಂದೆ ತನ್ನ ಪತಿಯೊಂದಿಗೆ ಒಂದು ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ ನಟಿ ಇಶಿತ ವೈಲ್ಡ್ ಲೈಫ್ ಫೋಟೋಗ್ರಾಫಿಯಲ್ಲಿ ಬಹಳ ಬ್ಯುಸಿಯಾಗಿದ್ದಾರೆ.
ಕಳೆದೆರಡು ವರ್ಷಗಳಲ್ಲಿ ಖಾನ ಸೌತ್ ಕೊರಿಯಾ ಸ್ಪಿಟಿ ವ್ಯಾಲಿ, ಕೆನ್ಯಾ ಕಬಿನಿ ಬೆರ್ರಾ ಸೇರಿದಂತೆ ಹಲವಾರು ದೇಶ ಹಾಗೂ ವಿಭಿನ್ನ ನೈಸರ್ಗಿಕ ತಾಣಗಳಿಗೆ ಭೇಟಿ ನೀಡಿರುವ ನಟಿ ಇಷಿತ, ತಮ್ಮ ಫೋಟೋಗ್ರಾಫಿ ಸ್ಕಿಲನ್ನು ದಿನದಿಂದ ದಿನಕ್ಕೆ ಫೈನ್ ಟ್ಯೂನ್ ಮಾಡಿಕೊಳ್ಳುತ್ತಿದ್ದಾರೆ.
ಸದ್ಯಕ್ಕಂತೂ ನಟಿ ಇಶಿತ ನೈನಿತಾಲ್ನಲ್ಲಿ ವೈಲ್ಡ್ ಲೈಫ್ ಫೋಟೋಗ್ರಫಿಯ ಹೊಸ ಯೋಜನೆಯನ್ನು ಹಾಕಿಕೊಂಡಿದ್ದು, ಅಲ್ಲಿನ ಭೀಮ್ ತಾಲ್ ನಲ್ಲಿ ತಮ್ಮ ದಿನಗಳನ್ನು ಎಂಜಾಯ್ ಮಾಡುತ್ತಾ ಕಳೆಯುತ್ತಿದ್ದಾರೆ.
ಅಗ್ನಿಸಾಕ್ಷಿ ಧಾರಾವಾಹಿ ಬಿಟ್ಟರೆ, ಬೇರೆ ಕೆಲವೇ ಕೆಲವು ಧಾರವಾಹಿಗಳಲ್ಲಿ ಚಿಕ್ಕ ಪುಟ್ಟ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟಿ ರಾಜ ರಾಣಿ ರಿಯಾಲಿಟಿ ಶೋ ಮೂಲಕ ಮತ್ತೆ ಮುನ್ನೆಲೆಗೆ ಬಂದಿದ್ದರು. ಅದಾದ ಮೇಲೆ ಕಿರುತೆರೆ ಹಾಗೂ ಧಾರವಾಹಿಗಳಿಂದ ದೂರವೇ ಉಳಿದಿರುವ ನಟಿ ಇಶಿತ ಫೋಟೋಗ್ರಫಿಯಲ್ಲಿ ತಮ್ಮ ವೃತ್ತಿಯನ್ನು ಕಂಡುಕೊಳ್ಳುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಏನೇ ಆದರೂ ಈಕೆಗೆ ಸೋಶಿಯಲ್ ಮೀಡಿಯಾದಲ್ಲಿ ಸಾವಿರ ಗಟ್ಟಲೆ ಫಾಲೋವರ್ಸ್ ಇದ್ದು, ಎಲ್ಲರೂ ಇವರ ಫೋಟೋಗ್ರಫಿಯನ್ನು ಬಹಳ ಮೆಚ್ಚಿಕೊಂಡಿರುವುದು ಕಾಣುತ್ತದೆ.