ನಟ ದರ್ಶನ್ ತೂಗುದೀಪ ಅವರು ಈ ವರ್ಷ ಬಹಳ ಕಷ್ಟಪಟ್ಟಿದ್ದಾರೆ. ತಮ್ಮ ಗೆಳತಿ ಪವಿತ್ರಾ ಗೌಡ ಅವರಿಗೆ ರೇಣುಕಾಸ್ವಾಮಿ ಎನ್ನುವ ವ್ಯಕ್ತಿ ಕೆಟ್ಟದಾಗಿ ಮೆಸೇಜ್ ಮಾಡಿದ್ದ ಎನ್ನುವ ಕಾರಣಕ್ಕೆ ದರ್ಶನ್ ಅವರು ಆತನನ್ನು ಬೆಂಗಳೂರಿಗೆ ಕರೆಸಿ, ನಂತರ ಏನೆಲ್ಲಾ ನಡೆಯಿತು ಎನ್ನುವ ವಿಷಯ ಗೊತ್ತೇ ಇದೆ. ದರ್ಶನ್ ಅವರ ಈ ಕೇಸ್ ತೀವ್ರವಾದ ಚರ್ಚೆಗೆ ಕಾರಣವಾಯಿತು. ದರ್ಶನ್ ಅವರು ಜೈಲು ಸೇರುವ ಪರಿಸ್ಥಿತಿ ಎದುರಾಯಿತು. 6 ತಿಂಗಳುಗಳ ಕಾಲ ಒಳಗಿದ್ದ ದರ್ಶನ್ ಅವರಿಗೆ ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಜಾ*ಮೀನು ಸಿಕ್ಕಿತು. ಹೊರಗಡೆ ಬಂದ ನಂತರ ಒಂದಷ್ಟು ದಿವಸಗಳ ಕಾಲ ದರ್ಶನ್ ಅವರು ಚಿಕಿತ್ಸೆ ಪಡೆದರು, ರೆಸ್ಟ್ ಮಾಡಿದರು, ಇದೆಲ್ಲವೂ ನಡೆದ ಬಳಿಕ ದರ್ಶನ್ ಅವರು ನಾರ್ಮಲ್ ಆಗಿಯೇ ಶೂಟಿಂಗ್ ನಲ್ಲಿ ಭಾಗಿಯಾಗುತ್ತಿದ್ದಾರೆ. ತಮ್ಮ ಕೆಲಸಗಳನ್ನು ಮಾಡಿಕೊಳ್ಳುತ್ತಾ ಇದ್ದಾರೆ.
ನಟ ದರ್ಶನ್ ಮತ್ತು ಅವರ ಜೊತೆಗಿದ್ದ ಜನರಿಂದ ಆ ವ್ಯಕ್ತಿಯ ಜೀವವೇ ಹೋಯಿತು. ಈಗ ಏನೇ ಮಾಡಿದರು ಸಹ ಆ ವ್ಯಕ್ತಿ ವಾಪಸ್ ಬರುವುದಿಲ್ಲ. ಈ ಕಾರಣಕ್ಕೇ ದರ್ಶನ್ ಅವರು 6 ತಿಂಗಳ ಕಾಲ ಜೈಲಿನಲ್ಲಿ ಕಷ್ಟ ಅನುಭವಿಸಿದರು. ಇವರಿಗೆ ಮಾನಸಿಕವಾಗಿ ಸಹ ಬಹಳ ಹಿಂಸೆ ಆಗಿದೆ ಎಂದು ತಿಳಿದುಬಂದತ್ತು. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಒಂದಷ್ಟು ದಿವಸ, ಅಲ್ಲಿ ಸಮಸ್ಯೆಯಾದ ನಂತರ ಬಳ್ಳಾರಿಯ ಸೆಂಟ್ರಲ್ ಜೈಲ್ ನಲ್ಲಿ ಒಂದಷ್ಟು ತಿಂಗಳು.. ಇಷ್ಟು ದಿವಸಗಳ ಕಾಲ ಜೈಲಿನಲ್ಲಿದ್ದ ದರ್ಶನ್ ಅವರಿಗೆ ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ, ಆರೋಗ್ಯದ ಸಮಸ್ಯೆ ಇದ್ದ ಕಾರಣ ಮಧ್ಯಂತರ ಜಾಮೀನು ಸಿಕ್ಕಿತು. ದರ್ಶನ್ ಅವರಿಗೆ ಬೆನ್ನು ನೋವಿದೆ, ಸರ್ಜರಿ ಮಾಡಿಸಬೇಕು ಇಲ್ಲದೇ ಹೋದರೆ ಪಾರ್ಶ್ವವಾಯು ಆಗುತ್ತದೆ ಎಂದು ವೈದ್ಯರು ಹೇಳಿದ ಕಾರಣ, ದರ್ಶನ್ ಅವರಿಗೆ ಮಧ್ಯಂತರ ಜಾ*ಮೀನು ಕೊಡಲಾಯಿತು.
ಹೊರಗಡೆ ಬಂದಮೇಲೆ ಸ್ವಲ್ಪ ದಿವಸ ಎಲ್ಲವೂ ಕಂಟ್ರೋಲ್ ನಲ್ಲಿತ್ತು, ಬಳಿಕ ಎಲ್ಲವೂ ನಾರ್ಮಲ್ ಆಗಿಯೇ ಇದೆ. ದರ್ಶನ್ ಅವರು ಡೆವಿಲ್ ಸಿನಿಮಾದ ಟಾಕಿ ಪೋರ್ಶನ್ ಅನ್ನು ಕಂಪ್ಲೀಟ್ ಮಾಡಿದ್ದಾರೆ. ಹಾಡುಗಳ ಚಿತ್ರೀಕರಣಕ್ಕಾಗಿ ಅವರು ವಿದೇಶಕ್ಕೆ ಹೋಗಬೇಕಿದೆ, ಅದಕ್ಕೂ ಕೋರ್ಟ್ ಇಂದ ಪರ್ಮಿಶನ್ ಸಿಕ್ಕಿದೆ. ಹಾಗಾಗಿ ಇವರ ಬದುಕು ಇನ್ನು ನಾರ್ಮಲ್ ಆಗಿಯೇ ಇದೆ. ಇನ್ನು ಈ ಪ್ರಕರಣದಲ್ಲಿ ಮತ್ತೊಬ್ಬ ಪ್ರಮುಖ ಆ*ರೋಪಿ ಆಗಿದ್ದವರು ಪವಿತ್ರಾ ಗೌಡ, ಇವರು ಕೂಡ ಯಾವುದೇ ಗಿಲ್ಟ್ ಇಲ್ಲದ ಹಾಗೆ ಜೀವನ ನಡೆಸುತ್ತಿದ್ದಾರೆ. ಪವಿತ್ರಾ ಗೌಡ ಮತ್ತೆ ತಮ್ಮ ಬ್ಯುಸಿನೆಸ್ ಶುರು ಮಾಡಿದ್ದಾರೆ, ಅದರಿಂದ ಒಳ್ಳೆಯ ಲಾಭ ಗಳಿಸುತ್ತಾ ಚೆನ್ನಾಗಿಯೇ ಇದ್ದಾರೆ. ಮಗಳ ಜೊತೆಗೆ ಔಟಿಂಗ್ ಹೋಗುತ್ತಾರೆ, ಪೂಜೆ ಪುನಸ್ಕಾರ ಮಾಡುತ್ತಾ, ದೇವಸ್ಥಾನಗಳಿಗೆ ಹೋಗುತ್ತಾ, ತಮ್ಮ ಜೀವನದಲ್ಲಿ ಬ್ಯುಸಿ ಆಗಿದ್ದಾರೆ..
ಈ ಪ್ರಕರಣದಲ್ಲಿ ಎಲ್ಲವನ್ನು ಕಳೆದುಕೊಂಡಿದ್ದು, ರೇಣುಕಾಸ್ವಾಮಿ ಅವರ ಕುಟುಂಬ. ಅವರ ಪತ್ನಿ ಮತ್ತು ಮಗು. ರೇಣುಕಾಸ್ವಾಮಿ ಅವರ ತಂದೆ ತಾಯಿ ಮನೆಗೆ ಬೆಳಕಾಗಿದ್ದ ಮಗನನ್ನ ಕಳೆದುಕೊಂಡರು. ಇಡೀ ಜೀವನವನ್ನೇ ಆತನ ಜೊತೆಗೆ ಕಳೆಯಬೇಕು ಎಂದುಕೊಂಡಿದ್ದ ಪತ್ನಿ ಆಕೆಯ ಗಂಡನನ್ನು ಕಳೆದುಕೊಂಡಳು. ಹುಟ್ಟುವ ಮೊದಲೇ ಆ ಮಗು ತನ್ನ ತಂದೆಯನ್ನು ಕಳೆದುಕೊಂಡಿತು. ಇದೆಲ್ಲವೂ ಆಗಿದ್ದು ಆ ಒಂದು ಕ್ಷಣದ ನಿರ್ಧಾರದಿಂದ. ಇಷ್ಟೆಲ್ಲಾ ಆಗುವುದಕ್ಕೆ ಕಾರಣ ಆದವರು ನೆಮ್ಮದಿಯಾಗಿ, ಆರಾಮಾಗಿ ಇದ್ದಾರೆ. ಆದರೆ ಆ ಕುಟುಂಬ ಕಷ್ಟಗಳನ್ನ ಅನುಭವಿಸುತ್ತಿದೆ. ಇಷ್ಟೆಲ್ಲಾ ವಿಚಾರಗಳನ್ನ ಈಗ ಹೇಳುತ್ತಿರುವುದು ಯಾಕೆ ಎಂದರೆ, ರೇಣುಕಾಸ್ವಾಮಿ ಘಟನೆ ನಡೆದು ಇವತ್ತಿಗೆ ಒಂದು ವರ್ಷ. ಆತನ ಮನೆಯಲ್ಲಿ ಇಂದು ಮೊದಲನೇ ವರ್ಷದ ಕಾರ್ಯ ಮಾಡಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ರೇಣುಕಾಸ್ವಾಮಿ ತಂದೆಯವರು ಮಾಧ್ಯಮದವರ ಎದುರು ಕೆಲವು ವಿಚಾರಗಳನ್ನು ಹೇಳಿಕೊಂಡಿದ್ದರು. ಅದೇನು ಎಂದರೆ, ದರ್ಶನ್ ಅವರನ್ನ ರೇಣುಕಾಸ್ವಾಮಿ ಕುಟುಂಬ ಭೇಟಿ ಮಾಡಿದೆ, ದರ್ಶನ್ ಅವರಿಂದ ಹಣ ಪಡೆದು, ರಾಜಿ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿ ವೈರಲ್ ಆದಾಗ ಇವರು ಪ್ರೆಸ್ ಮೀಟ್ ಮಾಡಿದ್ದರು. ಈ ವೇಳೆ ಅವರ ತಂದೆ, ನಾವು ಯಾರನ್ನು ಭೇಟಿ ಮಾಡಿಲ್ಲ, ಯಾರಿಂದಲೂ ಏನನ್ನು ಪಡೆದಿಲ್ಲ, ನಮ್ಮ ಸೊಸೆ ಕಷ್ಟದಲ್ಲಿದ್ದಾಲೇ, ಮನೆಯಲ್ಲಿ ಯಾರೂ ಸಹಾಯಕ್ಕೆ ಇಲ್ಲ. ಸರ್ಕಾರ ನಮ್ಮ ಸೊಸೆಗೆ ಒಂದು ನೌಕರಿ ಕೊಡಬೇಕು ಎಂದು ಕೇಳಿಕೊಂಡಿದ್ದರು. ಸರ್ಕಾರ ಇವರ ಮನವಿಯನ್ನು ಒಪ್ಪಲಿಲ್ಲ, ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ಕೆಲಸವನ್ನು ಕೊಡಲಿಲ್ಲ, ಅದಕ್ಕೆ ಒಪ್ಪಲೂ ಇಲ್ಲ. ಈಗಲೂ ಅದೇ ಪರಿಸ್ಥಿತಿ ಆಗಿದೆ.
ಹೌದು, ರೇಣುಕಾಸ್ವಾಮಿ ವಿಧಿವಶರಾಗಿ ಒಂದು ವರ್ಷವಾಗಿದೆ, ಮನೆಯಲ್ಲಿ ಕಾರ್ಯಗಳು ನಡೆದಿದೆ. ರೇಣುಕಾಸ್ವಾಮಿ ಮನೆಗೆ ಮಾಧ್ಯಮದವರು ಹೋಗಿ, ಈಗ ಪರಿಸ್ಥಿತಿ ಹೇಗಿದೆ ಎಂದು ಕೇಳಿದ್ದು, ಅದಕ್ಕೆ ಅವರ ಪತ್ನಿ ಉತ್ತರ ಕೊಟ್ಟಿದ್ದಾರೆ. ಮನೆಯ ಪರಿಸ್ಥಿತಿ ಹಾಗೆ ಇದೆ, ಕಷ್ಟದಲ್ಲಿಯೇ ಇದೆ. ಮಗುವನ್ನು ಸಾಕಲು ಕೆಲಸ ಬೇಕು, ಅತ್ತ ಮಾವನನ್ನು ನೋಡಿಕೊಳ್ಳಬೇಕು, ಕೆಲಸ ಇಲ್ಲ ಎಂದು ಬೇಸರ ಹೊರ ಹಾಕಿದ್ದಾರೆ. ಇವರ ಕಷ್ಟಗಳು ಯಾರಿಗೂ ಕಾಣುತ್ತಿಲ್ಲ ಎನ್ನುವುದು ದುಃಖದ ವಿಷಯ. ರೇಣುಕಾಸ್ವಾಮಿ ತನ್ನ ಪತ್ನಿ ಗರ್ಭಿಣಿ ತನ್ನನ್ನು ಬಿಟ್ಟುಬಿಡಿ ಎಂದು ಎಷ್ಟೇ ಸಾರಿ ಕೇಳಿಕೊಂಡರು ಸಹ, ಬಿಡದೇ ಆ ರೀತಿ ಮಾಡಿಬಿಟ್ಟರು. ಇದಕ್ಕೆಲ್ಲಾ ಯಾರು ಹೊಣೆ, ಪಾಪ ಕಷ್ಟ ಅನುಭವಿಸುತ್ತಿರುವುದು ಬಹಳ ದುಃಖದ ವಿಷಯ ಆಗಿದೆ. ಒಟ್ಟಿನಲ್ಲಿ ಈ ಕುಟುಂಬಕ್ಕೆ ಸಾಧ್ಯ ಆದವರು ಸಹಾಯ ಮಾಡಿದರೆ ಎಲ್ಲವೂ ಒಳ್ಳೆಯದಾಗುತ್ತದೆ.
ಇದೆಲ್ಲವೂ ಒಂದು ಕಡೆಯಾದರೆ, ಮತ್ತೊಂದು ಕಡೆ ನಾವು ಇನ್ನಷ್ಟು ವಿಚಾರಗಳನ್ನು ಅರ್ಥ ಮಾಡಿಕೊಳ್ಳಬೇಕು. ಯಾವ ಸೆಲೆಬ್ರಿಟಿಯೇ ಆಗಲಿ, ಯಾರೇ ಆಗಲಿ, ಅವರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಯಾವುದೇ ಕಾಮೆಂಟ್ ಗಳನ್ನು ಬರೆಯಬಾರದು. ನಮ್ಮ ಕೆಲಸಗಳನ್ನು ನಾವು ನೋಡಿಕೊಂಡು, ನಮ್ಮ ಜೀವನದ ಬಗ್ಗೆ ನಾವು ಗಮನ ಕೊಡಬೇಕು ಎನ್ನುವುದನ್ನು ನಾವು ಅರ್ಥ ಮಾಡಿಕೊಂಡು, ನಮ್ಮ ಲೈಫ್ ಅನ್ನು ನೋಡಿಕೊಂಡು ಮುಂದಕ್ಕೆ ಹೋಗಬೇಕು..



