ಇತ್ತೀಚೆಗಷ್ಟೇ ಟ್ರೋಲಿಗರಿಗೆ ಹೆದರಿ ಗಳಗಳನೆ ಅತ್ತಿದ್ದ ಸೋನು ಗೌಡ ಇದೀಗ ಮಾಲ್ಡೀವ್ಸ್ನಲ್ಲೊ ಎಂಜಾಯ್ ಮಾಡುತ್ತಿದ್ದಾರೆ. ಇಕ್ ಟಾಕ್, ರೀಲ್ಸ್ ಗಳಿಂದ ಮುನ್ನೆಲೆಗೆ ಬಂದು ಬಳಿಕ ಬಿಗ್ ಬಾಸ್ ಸ್ಪರ್ಧಿಯಾಗಿ ಸಾಕಷ್ಟು ವಿವಾದ ಹಾಗೂ ಹೆಸರು ಮಾಡಿದ್ದ ಸೋನು ಗೌಡ ಇದೀಗ ಟ್ರೋಲಿಗರನ್ನು ಲೆಕ್ಕಿಸದೆ ಮತ್ತೆ ತಮ್ಮ ಬಿಕಿನಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಸೋನಿ ಗೌಡ ಹಸಿಬಿಸಿ ಫೋಟೋ ಕಂಡಿರುವ ನೆಟ್ಟಿಗರು ‘ಈಕೆ ಕರ್ನಾಟಕದ ಬೆಂಕಿ’ಎಂದಿದ್ದಾರೆ. ಬಿಕಿನಿ ಫೋಟೋಗಳು ಇದೀಗ ವೈರಲ್ ಆಗಿದೆ.

ಬಿಗ್ ಬಾಸ್ ಬೆಡಗಿ ಸೋನು ಗೌಡ ಈಗ ಕೆಂಪು ಬಣ್ಣದ ಬಿಕಿನಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕ್ಯಾಮೆರಾ ಕಣ್ಣಿಗೆ ಸಖತ್ ಹಾಟ್ ಆಗಿ ಪೋಸ್ ನೀಡಿದ್ದಾರೆ. ಈ ಮೂಲಕ ಪಡ್ಡೆಹುಡುಗರ ನಿದ್ದೆ ಕದ್ದಿದ್ದಾರೆ. ಮಾಲ್ಡೀವ್ಸ್ ವೆಕೇಷನ್ ಎಂಜಾಯ್ ಮಾಡುತ್ತಿರುವ ಸೋನು, ಬಿಕಿನಿ ವಿಡಿಯೋಗಳನ್ನ ಹಂಚಿಕೊಂಡಿದ್ದರು. ವಿಡಿಯೋ ಶೇರ್ ಮಾಡಿದ ಕೆಲವೇ ಗಂಟೆಗಳಲ್ಲಿ 14 ಲಕ್ಷಕ್ಕೂ ಅಧಿಕ ವಿವ್ಸ್ ಪಡೆದುಕೊಂಡಿದೆ.
ತನ್ನ ವಿಚಾರದಲ್ಲಿ ಯಾರಾದರೂ ಟ್ರೋಲ್ ಮಾಡಿದರೆ ಕಣ್ಣೀರು ಹಾಕುವ ಸೋನು ಶ್ರೀನಿವಾಸ್ ಗೌಡ, ಟ್ರೋಲ್ ಆಗುವಂತಹ ಹಲವಾರು ವಿಚಾರಗಳನ್ನು ಅವರು ಮಾಡುತ್ತಲೇ ಇರುತ್ತಾರೆ. ಹಾಗಾಗಿಯೇ ಟ್ರೋಲ್ ಮಾಡುವವರು ಇವರ ವಿಡಿಯೋಗಾಗಿ ಕಾಯುತ್ತಿರುತ್ತಾರೆ ಎನ್ನುವುದು ಸುಳ್ಳಲ್ಲ. ಇದೀಗ ಸೋನು ಮಾಲ್ಡೀವ್ಸ್ನಲ್ಲಿ ಬಿಕಿನಿ ಧರಿಸಿ ಎಂಜಾಯ್ ಮಾಡುತ್ತಿದ್ದು, ಸಕ್ಕತ್ ಹಾಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಹಸಿಬಿಸಿ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಕಾಡ್ಗಿಚ್ಚಿನಂತೆ ವೈರಲ್ ಆಗುತ್ತಿದೆ.