ನಟ ಡಾಲಿ ಧನಂಜಯ್ ಅವರು ಮೊನ್ನೆ ಕನ್ನಡ ರಾಜ್ಯೋತ್ಸವದ ದಿವಸ ಹಾಗೂ ದೀಪಾವಳಿ ಎರಡರ ವಿಶೇಷವಾಗಿ ಸಿಹಿ ಸುದ್ದಿಯನ್ನು ನೀಡಿದರು. ಡಾಕ್ಟರ್ ಧನ್ಯತಾ ಅವರೊಡನೆ ಮದುವೆ ಆಗುತ್ತಿರುವುದಾಗಿ ತಿಳಿಸಿದ ಧನಂಜಯ್ ಸುಂದರವಾದ ಕವಿತೆಯೊಂದನ್ನು ಓದಿ, ತಮ್ಮ ಭಾವಿ ಪತ್ನಿಯ ಪರಿಚಯ ಮಾಡಿದರು. ಧನಂಜಯ್ ಅವರೇನೋ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ, ಈ ವಿಚಾರ ಹೊರಬರುತ್ತಿದ್ದ ಹಾಗೆ ನಟಿ ಅಮೃತಾ ಅಯ್ಯಂಗಾರ್ ಅವರ ಮದುವೆ ಸುದ್ದಿ ಹೈಲೈಟ್ ಆಗಿದೆ..
ಕನ್ನಡ ಚಿತ್ರಪ್ರೇಮಿಗಳು ಅಮೃತಾ ಅಯ್ಯಂಗಾರ್ ಅವರ ಮದುವೆ ಯಾವಾಗ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಕೆಲವು ವರ್ಷಗಳಿಂದ ಧನಂಜಯ್ ಹಾಗೂ ಅಮೃತಾ ಇಬ್ಬರು ಲವ್ ಮಾಡುತ್ತಿದ್ದಾರೆ, ಮದುವೆಯಾಗುತ್ತಾರೆ ಎನ್ನುವ ಸುದ್ದಿಯೊಂದು ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆ ಸುದ್ದಿಗೆ ತಕ್ಕ ಹಾಗೆ ಇಬ್ಬರು ಕೂಡ ಎಲ್ಲಾ ಕಡೆ ಜೊತೆಯಾಗಿ ಕಾಣಿಸಿಕೊಂಡಿದ್ದರು. ಹಾಗೆಯೇ ಕೆಲವು ಕಲಾವಿದರು ಕೂಡ ಇವರಿಬ್ಬರ ನಡುವೆ ಪ್ರೀತಿ ಇದೆ ಎನ್ನುವ ಅರ್ಥದಲ್ಲಿ ಮಾತನಾಡಿದ್ದರು..

ಇದೆಲ್ಲವೂ ಒಂದು ಕಡೆಯಾದರೆ ಮತ್ತೊಂದು ಕಡೆ, ಒಂದು ಕಾರ್ಯಕ್ರಮದಲ್ಲಿ ಟಾಸ್ಕ್ ಎನ್ನುವ ಹಾಗೆ ಡಾಲಿ ಧನಂಜಯ್ ಅವರು ಮಂಡಿಯೂರಿ ಅಮೃತಾ ಅವರಿಗೆ ಪ್ರೊಪೋಸ್ ಮಾಡಿದ್ದರು. ಹೂವನ್ನು ಖುಷಿಯಿಂದ ಸ್ವೀಕರಿಸಿದ್ದ ಅಮೃತಾ ನಾಚಿಕೊಂಡಿದ್ದರು. ಈ ಘಟನೆ ಬಳಿಕ ಹೆಚ್ಚಿನ ಜನರು ಹಾಗೂ ಅಭಿಮಾನಿಗಳು ಇವರಿಬ್ಬರ ಲವ್ ಹಾಗೂ ಮದುವೆ ಬಗ್ಗೆ ಪ್ರಶ್ನೆ ಮಾಡುವುದಕ್ಕೆ ಶುರು ಮಾಡಿದರು. ಅದೇ ರೀತಿ ಇಬ್ಬರು ಸಹ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದರು..
ಹಲವು ಕಾರ್ಯಕ್ರಮಗಳಲ್ಲಿ ಸಾರ್ವಜನಿಕವಾಗಿ ಇಬ್ಬರೂ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದರು. ಆದರೆ ಧನಂಜಯ್ ಅವರು ಮಾತ್ರ ಕೆಲವು ಸಾರಿ ಈ ಗಾಸಿಪ್ ಇಂದ ಯಾರು ಹೆಣ್ಣು ಕೋಡೋದಕ್ಕೆ ಒಪ್ತಾ ಇಲ್ಲ ಅಂಡಿದ್ದುಂಟು. ಆದರೆ ಈಗ ಧನಂಜಯ್ ಅವರಿಗೆ ಡಾಕ್ಟರ್ ಧನ್ಯತಾ ಸಿಕ್ಕಿದ್ದಾಗಿದೆ. ಇಬ್ಬರ ಮದುವೆ 2025ರ ಫೆಬ್ರವರಿ ತಿಂಗಳಿನಲ್ಲಿ ನಡೆಯುತ್ತದೆ ಎನ್ನುವುದು ಕೂಡ ಗೊತ್ತಾಗಿದೆ. ಆದರೆ ಅಮೃತಾ ಅವರ ಮದುವೆ ಯಾವಾಗ, ಅವರ ಕಥೆ ಏನು ಎನ್ನುವ ಪ್ರಶ್ನೆಯೂ ಶುರುವಾಗಿದೆ.
ಅಮೃತಾ ಅಯ್ಯಂಗಾರ್ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ನೆಟ್ಟಿಗರು ಪ್ರಶ್ನೆ ಮಾಡಿದ್ದಾರೆ. ಅಣ್ಣ ಮದುವೆ ಆಗ್ತಾ ಅವ್ರೇ, ನಿಮ್ದು ಯಾವಾಗ ಎಂದು ಅಮೃತಾ ಅವರನ್ನು ಕೇಳಿದ್ದಾರೆ. ಅದಕ್ಕೆ ಉತ್ತರ ಕೊಟ್ಟಿರುವ ಅಮೃತಾ ಅವರು, ಗೊತ್ತಿಲ್ಲ ಇನ್ನು ಎಂದು ಹೇಳಿದ್ದಾರೆ. ಅದಕ್ಕೆ ಇನ್ನೊಬ್ಬ ಅಭಿಮಾನಿ ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು ಎಂದು ವಿಶ್ ಮಾಡಿದ್ದಾರೆ..ಒಟ್ಟಿನಲ್ಲಿ ಈಗ ಅಮೃತಾ ಮದುವೆ ಯಾವಾಗ ಎನ್ನುವ ವಿಷಯ ಭಾರಿ ಸದ್ದು ಮಾಡುತ್ತಿದೆ.