ಆಮಿರ್ ಖಾನ್ ಬಾಲಿವುಡ್ ಚಿತ್ರರಂಗ ಕಂಡಂತ ಅದ್ಭುತ ನಟ, ಯಾವುದೇ ಪಾತ್ರಕೊಟ್ಟರು ಅದನ್ನ ಅಚ್ಚುಕಟ್ಟಾಗಿ ಮಾಡಿ ಅಭಿಮಾನಿಗಳ ಪಾಲಿನ ಫೇವರೇಟ್ ಹೀರೊ ಆಗಿದ್ದ ಆಮಿರ್ ಖಾನ್ ಸದ್ಯ ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಪಿಕೆ, ಗಜನಿ,3 ಈಡಿಯಟ್ಸ್, ದಂಗಲ್, ಸೇರಿದಂತೆ ಅನೇಕ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸುವ ಮೂಲಕ ಸೈ ಎನಿಸಿಕೊಂಡಿದ್ದರು. ಆಮಿರ್ ಖಾನ್ ನಟನೆ ಜೊತೆ ಜೊತೆಗೆ ಅನೇಕ ವಿವಾದಗಳಿಗೂ ಕಾರಣವಾದ ನಟನಾಗಿ ಕೆಲ ವರ್ಷಗಳ ಹಿಂದೆ ಅಸಹಿಷ್ಣುತೆ ಇದೆ ಭಾರತದಲ್ಲಿ ಎನ್ನುವ ವಿವಾದಾತ್ಮಕ ಹೇಳಿಕೆ ಕೊಟ್ಟು, ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದ್ದರು.

ಸತತವಾಗಿ ಸೋಲನ್ನು ಕಂಡಿರುವ ಅಮಿರ್ ಖಾನ್ ಆ ಸೋಲಿನಿಂದ ವಿಚಲಿತರಾಗಿ ಚಿತ್ರರಂಗದಿಂದ ದೂರ ಉಳಿದಿದ್ದರು. ಇದೀಗ ಆಮಿರ್ ಖಾನ್ ಕುಟುಂಬದ ಸದಸ್ಯರ ಜೊತೆ ಕಾಲ ಕಳೆಯಲು ನಿರ್ಧರಿಸಿ, ಚಿತ್ರರಂಗದಿಂದ ದೂರ ಉಳಿದಿದ್ದಾರೆ. ಆಮಿರ್ ಖಾನ್ ಚಿತ್ರರಂಗದಿಂದ ದೂರ ಉಳಿದಿರೋದು ಅವರ ಅಸಂಖ್ಯಾತ ಅಭಿಮಾನಿ ಬಳಗಕ್ಕೆ ಬೇಸರವನ್ನ ತರಿಸಿದ್ದು, ಹಾಗಾದ್ರೆ ಆಮಿರ್ ಖಾನ್ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡ್ತಾರಾ, ಎಷ್ಟು ದಿನ ಆಮಿರ್ ಖಾನ್ ಚಿತ್ರರಂಗದಿಂದ ದೂರವೀರಲು ಕಾರಣವೇನು ಇವೆಲ್ಲದರ ಬಗ್ಗೆ ಇಂದು ನಾವು ನಿಮಗೆ ತಿಳಿಸಿಕೊಡುತ್ತೇವೆ.
ಆಮಿರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಸಿನಿಮಾ ಪ್ಲಾಪ್ ಆಗಿದ್ದು, ಹಾಲಿವುಡ್ ಫಾರೆಸ್ಟ್ ಗಂಪ್ ಚಿತ್ರವನ್ನ ಹಿಂದಿಗೆ ರಿಮೇಕ್ ಮಾಡಿ ಆಮಿರ್ ಖಾನ್ ಹಿನ್ನೆಡೆ ಅನುಭವಿಸಿದ್ದರು. ಇದೆ ಕಾರಣಕ್ಕಾಗಿ ಇದೀಗ ಆಮಿರ್ ಖಾನ್ ಸಿನಿಮಾರಂಗದಿಂದ ಬ್ರೇಕ್ ಪಡೆಯಲು ನಿರ್ಧರಿಸಿ ನಟನೆಯಿಂದ ದೂರ ಉಳಿದು ತಮ್ಮ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಕೆಲ ದಿನಗಳ ಹಿಂದೆ ಕ್ಯಾರಿ ಅನ್ ಜಟ್ಟಾ 3 ಪಂಜಾಬಿ ಚಿತ್ರದ ಟ್ರೇಲರ್ ರಿಲೀಸ್ ನಲ್ಲಿ ಕಾಣಿಸಿಕೊಂಡ ಆಮಿರ್ ಖಾನ್ ಲಾಲ್ ಸಿಂಗ್ ಚಡ್ಡಾ ಚಿತ್ರದ ಬಳಿಕ ಯಾವುದೇ ಸಿನಿಮಾ ಅನೌನ್ಸ್ ಮಾಡಿಲ್ಲ ಎನ್ನುವ ಮಾಧ್ಯಮದವರ ಪ್ರಶ್ನೆಗೆ ಆಮಿರ್ ಖಾನ್ ಉತ್ತರಿಸಿ ಕುಟುಂಬದವರ ಜೊತೆ ಸಮಯ ಕಳೆಯುತ್ತಿದೆ, ಸದ್ಯಕ್ಕೆ ಯಾವುದೇ ಸಿನಿಮಾ ಮಾಡೋ ನಿರ್ಧಾರ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.
ಸದ್ಯಕ್ಕೆ ಕುಟುಂಬದವರ ಜೊತೆ ಸಂತೋಷವಾಗಿದ್ದೇನೆ, ಭಾವನಾತ್ಮಕವಾಗಿ ಸಿದ್ದನಾದ ಮೇಲೆ ಸಿನಿಮಾ ಕಡೆ ಬರಲು ನಿರ್ಧರಿಸುತ್ತೇನೆ ಎಂದು ಹೇಳಿದ್ದಾರೆ. ಆಮಿರ್ ಖಾನ್ ವಯಕ್ತಿಕ ಕಾರಣದಿಂದಲೂ ಸಾಕಷ್ಟು ಸುದ್ದಿಯಾಗುತ್ತಿದರು, ಈ ಹಿಂದೆ ತಮ್ಮ ದಾಂಪತ್ಯ ಜೀವನದಲ್ಲೂ ಬಿರುಕು ಬಿಟ್ಟು ತಮ್ಮ ಹೆಂಡತಿ ಕಿರಣ್ ರಾವ್ ಜೊತೆಗಿನ ಸಂಬಂಧಕ್ಕೆ 2021 ರಲ್ಲಿ ಫುಲ್ ಸ್ಟಾಪ್ ಇಟ್ಟಿದ್ದರು. ಇದೀಗ ಫಾತಿಮಾ ಸನಾ ಶೇಕ್ ಜೊತೆ ಉತ್ತಮ ಸಂಬಂಧವನ್ನ ಹೊಂದಿದ್ದು, ಆಮಿರ್ ಖಾನ್ ಹಾಗೂ ಫಾತಿಮಾ ಸನಾ ಶೇಕ್ ಮದುವೆಯಾಗಬಹುದು ಎನ್ನುವ ಗುಮಾನಿ ಕೂಡ ಎಲ್ಲೆಡೆ ಹರಡಿತ್ತು. ಸದ್ಯದ ಪರಿಸ್ಥಿತಿಯಲ್ಲಿ ಆಮಿರ್ ಖಾನ್ ಚಿತ್ರರಂಗದಿಂದ ದೂರವಾಗಿದ್ದು, ಅನೇಕ ಅಭಿಮಾನಿಗಳಿಗೆ ನಿರಾಸೆಯನ್ನ ಮೂಡಿಸಿದೆ.
ಭಾರತದ ಚಿತ್ರರಂಗದಲ್ಲಿ ಅನೇಕ ಏಳು ಬೀಳುಗಳನ್ನ ಕಂಡ ನಟರುಗಳ ಪೈಕಿ ಆಮಿರ್ ಖಾನ್ ಕೂಡ ಒಬ್ಬರಾಗಿದ್ದು, ಆಮಿರ್ ಖಾನ್ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಆಗುತ್ತಾರೆ ಎನ್ನುವ ವಿಶ್ವಾಸ ಅಭಿಮಾನಿಗಳಲ್ಲಿ ಮೂಡಿದ್ದು, ಮುಂಬರುವ ದಿನಗಳಲ್ಲಿ ಉತ್ತಮ ಸಿನಿಮಾಗಳ ಮೂಲಕ ಮತ್ತೆ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿ ಅಭಿಮಾನಿಗಳನ್ನ ಮನೋರಂಜನೆಯ ಕಡಲಲ್ಲಿ ತೇಲುವಂತೆ ಮಾಡಲಿ ಎನ್ನುವುದೇ ನಮ್ಮೆಲ್ಲರ ಆಶಯ.