ಕನ್ನಡ ಕಿರುತೆರೆಯಲ್ಲಿ ಟಿಆರ್ಪಿ ವಿಷಯದಲ್ಲಿ ಮೇಲುಗೈ ಸಾಧಿಸುತ್ತಿರುವ ಧಾರಾವಾಹಿ ಲಕ್ಷ್ಮಿನಿವಾಸ. ಕರ್ನಾಟಕದಲ್ಲಿ ಇದು ನಂಬರ್1 ಧಾರಾವಾಹಿ ಎನ್ನುವ ಸ್ಥಾನಕ್ಕೆ ಬಂದು ನಿಂತಿದೆ. ಈ ಧಾರಾವಾಹಿ ಜೀಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಶುಕ್ರವಾರದವರೆಗೂ ಪ್ರಸಾರ ಆಗುವ ಧಾರಾವಾಹಿ. ಇಲ್ಲಿ ಹಲವು ಕಲಾವಿದರು ಅಭಿನಯಿಸುತ್ತಿದ್ದಾರೆ. ಕರ್ಪೂರದ ಗೊಂಬೆ ಸಿನಿಮಾ ಖ್ಯಾತಿಯ ನಟಿ ಶ್ವೇತಾ ಅವರು ನಾಯಕಿ ಲಕ್ಷ್ಮೀ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಅಶೋಕ್ ಜಂಬೆ ಅವರು ಶ್ರೀನಿವಾಸ್ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಇನ್ನುಳಿದ ಹಾಗೆ ಇನ್ನು ಹಲವು ಕಲಾವಿದರು ಅಭಿನಯಿಸುತ್ತಿದ್ದಾರೆ.

ಒಂದೊಂದು ಕಲಾವಿದರ ಪಾತ್ರಕ್ಕೂ ಈ ಧಾರಾವಾಹಿಯಲ್ಲಿ ಒಳ್ಳೆಯ ಪ್ರಮುಖ್ಯತೆ ನೀಡಲಾಗಿದೆ. ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನಟಿ ದಿಶಾ ಮದನ್, ಚಂದನ ಅನಂತಕೃಷ್ಣ, ನಟ ದೀಪಕ್, ಲಕ್ಷ್ಮೀ ಹೆಗ್ಡೆ, ಹಿರಿಯನಟಿ ಎಂ.ಎನ್ ಲಕ್ಷ್ಮೀದೇವಿ ಸೇರಿದಂತೆ ದೊಡ್ಡ ಕಲಾವಿದರ ಬಳಗವೇ ಲಕ್ಷ್ಮೀನಿವಾಸ ಧಾರಾವಾಹಿಯಲ್ಲಿ ಇದೆ. ಈ ಧಾರಾವಾಹಿಯಲ್ಲಿ ಲಕ್ಷ್ಮೀ ಶ್ರೀನಿವಾಸ್ ದಂಪತಿ ಮನೆ ಕಟ್ಟುವ ಹಾಗೂ ಮಕ್ಕಳಿಗೆ ಮದುವೆ ಮಾಡುವ ಕನಸು ಇಟ್ಟುಕೊಂಡಿದ್ದು, ಅರ್ಧ ಕನಸುಗಳು ನೆರವೇರಿದೆ. ಹಾಗೆಯೇ ಇವರು ಬದುಕಿನಲ್ಲಿ ಬರುವ ಒಂದೊಂದು ಚಾಲೆಂಜ್ ಗಳನ್ನು ಹೇಗೆ ಎದುರಿಸುತ್ತಾರೆ ಎನ್ನುವುದನ್ನು ಸಹ ಚೆನ್ನಾಗಿ ತೋರಿಸಲಾಗಿದೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಲಕ್ಷ್ಮೀನಿವಾಸ ಧಾರಾವಾಹಿಯ ಮುಖ್ಯವಾದ ಪಾತ್ರಗಳಲ್ಲಿ ಲಕ್ಷ್ಮಿ ಮತ್ತು ಶ್ರೀನಿವಾಸ್ ದತ್ತು ಪಡೆದಿರುವ ಮಗ ವೆಂಕಿ ಸಹ ಒಂದು. ಮಾತು ಬರದೇ ಇದ್ದರು, ಈ ಪಾತ್ರದ ಅಭಿನಯ ಅದ್ಭುತವಾಗಿದೆ. ವೆಂಕಿ ಪಾತ್ರದ ಜೋಡಿಯಾಗಿ ಚೆಲುವಿ ಪಾತ್ರವಿದೆ. ಹೂಮಾರುವ ಬಡ ಹುಡುಗಿ ಆದರೂ, ಸ್ವಾಭಿಮಾನ ಹೊಂದಿರುವ, ಸಂಪಾದನೆ ಮಾಡುತ್ತಾ, ತಾಯಿಯನ್ನು ನೋಡಿಕೊಳ್ಳುತ್ತಾ, ಮನೆಯ ಜವಾಬ್ದಾರಿ ತೆಗೆದುಕೊಂಡಿದ್ದಾಳೆ ಚೆಲುವಿ. ಈ ಪಾತ್ರ ಜನರಿಗೆ ತುಂಬಾ ಇಷ್ಟವಾಗಿದೆ. ಈ ಪಾತ್ರದಲ್ಲಿ ಅಭಿನಯಿಸುತ್ತಿರುವ ಕಲಾವಿದೆಯ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಸಹ ಎಲ್ಲರಿಗೂ ಇದೆ. ಇವರ ಬಗ್ಗೆ ಇಂದು ತಿಳಿಸುತ್ತೇವೆ ನೋಡಿ..

ಲಕ್ಷ್ಮಿನಿವಾಸ ಧಾರಾವಾಹಿಯ ಚೆಲುವಿ ಪಾತ್ರದಲ್ಲಿ ನಟಿಸುತ್ತಿರುವವರು ಅಶ್ವಿನಿ ಮೂರ್ತಿ. ಇವರಿಗೆ ಇದು ಒಳ್ಳೆಯ ಹೆಸರು ತಂದುಕೊಟ್ಟಿರುವ ಪಾತ್ರ ಆಗಿದೆ. ಅಶ್ವಿನಿ ಮೂರ್ತಿ ಅವರಿಗೆ ಇದು ಮೊದಲ ಧಾರಾವಾಹಿ ಅಲ್ಲ. ಈ ಮೊದಲು ಲಕ್ಷಣ ಧಾರಾವಾಹಿಯಲ್ಲಿ ನಕ್ಷತ್ರ ತಂಗಿ ಪಾತ್ರದಲ್ಲಿ ಅಭಿನಯಿಸುತ್ತಿದ್ದರು. ಮರಳಿ ಮನಸಾಗಿದೆ ಧಾರಾವಾಹಿಯಲ್ಲಿ ಈ ಮೊದಲೇ ಅಭಿನಯಿಸಿದ್ದಾರೆ. ಹಾಗಾಗಿ ಜನರಿಗೆ ಇವರ ಬಗ್ಗೆ ಚೆನ್ನಾಗಿ ಪರಿಚಯ ಇದೆ. ಇನ್ನು ಇವರು ಹಾಸನದವರಾಗಿದ್ದು, ಓದಿರುವುದು ಎಲ್ಲಿಯೂ ಹಾಸನದಲ್ಲಿಯೇ ಆಗಿದ್ದು, ನಟನೆಯಲ್ಲಿ ಆಸಕ್ತಿ ಇದ್ದ ಕಾರಣ ಬೆಂಗಳೂರಿಗೆ ಬಂದರು. ಈಗ ಒಳ್ಳೆಯ ಅವಕಾಶಗಳನ್ನು ಪಡೆಯುತ್ತಿದ್ದಾರೆ.
ಅಶ್ವಿನಿ ಅವರು ನಟಿ ಮಾತ್ರವಲ್ಲ, ಇವರು ಬ್ಯುಸಿನೆಸ್ ಸಹ ಮಾಡುತ್ತಿದ್ದಾರೆ. ಅಶ್ವಿನಿ ಅವರು ಕಾಸ್ಮಿಟಾಲಜಿಸ್ಟ್ ಆಗಿದ್ದು, ಅವರದ್ದೇ ಆದ ಸ್ವಂತ ಯುನಿಸೆಕ್ಸ್ ಸಲೂನ್ ಹೊಂದಿದ್ದಾರೆ. ರಾಜಾಜಿನಗರದಲ್ಲಿ ಇದೆ. ಅಶ್ವಿನಿ ಅವರ ಸಲೂನ್ ನಲ್ಲಿ ಮೇಕಪ್, ನೈಲ್ ಆರ್ಟ್, ಹೇರ್ ಡು ಸೇರಿದಂತೆ ಎಲ್ಲವೂ ಲಭ್ಯವಿದೆ. ಇಷ್ಟೆಲ್ಲಾ ಮಾಡಿದ್ದಾರೆ ಅಶ್ವಿನಿ ಅವರು. ಇನ್ನು ಇವರು ಧಾರಾವಾಹಿಯಲ್ಲಿ ಯಾವಾಗಲೂ ಲಂಗಾ ದಾವಣಿ ಧರಿಸಿರುತ್ತಾರೆ. ಆದರೆ ರಿಯಲ್ ಲೈಫ್ ನಲ್ಲಿ ಬಹಳ ಮಾಡರ್ನ್ ಆಗಿದ್ದಾರೆ. ಇವರು ಚೆಲುವಿ ಅವರೇನಾ ಎಂದು ಅನ್ನಿಸುವ ಹಾಗಿದ್ದಾರೆ ಎಂದು ಹೇಳಿದರು ತಪ್ಪಲ್ಲ. ಮುಂದಿನ ದಿನಗಳಲ್ಲಿ ಇವರಿಗೆ ಇನ್ನು ಒಳ್ಳೆಯ ಅವಕಾಶಗಳು ಹೆಚ್ಚಾಗಿ ಸಿಗಲಿ..