ನಟ ನಟಿಯರು ತಮ್ಮ ಚಿತ್ರದಲ್ಲಿ ಅಭಿನಯಿಸಿದ ಪಾತ್ರಗಳ ಹೆಸರಲ್ಲಿ ಗುರುತಿಸಿಕೊಳ್ಳುವುದು, ಫೇಮಸ್ ಆಗೋದು ನಾವು ಕಂಡಿದ್ದೇವೆ. ಆದರೆ ತಮ್ಮ ಹೆಸರನ್ನೇ ಚಿತ್ರದ ಹೆಸರನ್ನಾಗಿಟ್ಟು ನಟಿಸಿದ್ದಾರೆ ಯುವ ರಾಜ್ ಕುಮಾರ್.
ಹೌದು ಡಾಕ್ಟರ್ ರಾಜಕುಮಾರ್ ರವರ ಮೊಮ್ಮಗನಾದ ಯುವ ರಾಜ್ ಕುಮಾರ್ ಅವರು ಕನ್ನಡದ ‘ಯುವ ‘ ಚಲನಚಿತ್ರದಲ್ಲಿ ನಾಯಕ ನಟನಾಗಿ ಚಿತ್ರರಂಗಕ್ಕೆ ಕಾಲಿಟ್ಟಿದ್ದರು.

ಇದೀಗ ಸಾಕಷ್ಟು ಮೆಚ್ಚುಗೆ, ಕನ್ನಡಿಗರ ಪ್ರೀತಿ ವಿಶ್ವಾಸವನ್ನು ಗಳಿಸಿದ್ದ ನಟ ಯುವ ರಾಜ್ ಕುಮಾರ್ ತಮ್ಮ ಎರಡನೇ ಸಿನಿಮಾವನ್ನು ಘೋಷಿಸಿದ್ದಾರೆ. ‘ಯುವ’ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ನಟ ಇದೀಗ “ಎಕ್ಕ” ಸಿನಿಮಾ ನಟಿಸಲಿದ್ದಾರೆ.
ಈ ಸಿನಿಮಾ ಕೆ.ಆರ್.ಜಿ ಸ್ಟುಡಿಯೋ, ಪಿಆರ್ಕೆ ಪ್ರೊಡಕ್ಷನ್ಸ್ ಮತ್ತು ಜಯಣ್ಣ ಫಿಲ್ಮ್ಸ್ ಬ್ಯಾನರ್ನಲ್ಲಿ
ನಿರ್ಮಾಣವಾಗಲಿದ್ದು ರೋಹಿತ್ ಪದಕಿ ನಿರ್ದೇಶಕರಾಗಿದ್ದು, ಸಂಪದ ಹುಲಿಮನೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
ಕಿರುತೆರೆಯ ಮೂಲಕ ನಟನಾ ಲೋಕಕ್ಕೆ ಕಾಲಿಟ್ಟ ಸಂಪದ ಹುಲಿಮನೆ ಇವರು ಈಗ ಸ್ಯಾಂಡಲ್ ವುಡ್ ನ ಖ್ಯಾತ ನಟರೊಂದಿಗೆ ನಟಿಸಲು ಸಜ್ಜಾಗಿದ್ದಾರೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಹೌದು ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ “ಮಿಥುನ ರಾಶಿ” ಧಾರಾವಾಹಿಯಲ್ಲಿ ವಿಲನ್ ಪಾತ್ರವನ್ನು ನಟಿಸಿದ್ದ ನಟಿ ಸಂಪದ ಹುಲಿವನ ಇದೀಗ ಸಿನಿಮಾ ಶೂಟಿಂಗ್ ನಲ್ಲಿ ಸಕ್ಕತ್ ಬಿಜಿ.
‘ಎಕ್ಕ’ ಸಿನಿಮಾದ ಶೂಟಿಂಗ್ ಈಗಾಗಲೇ ಶುರುವಾಗಿದ್ದು ನಾಯಕ ನಟಿಯಾಗಿ ಅಭಿನಯಿಸಲಿರುವ ಸಂಪದ ಹುಲಿಮನೆ ಈ ಹಿಂದೆಯೂ ಕೆಲ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಯವರ ರೈಡರ್ ಮೂವಿಯಲ್ಲಿ ಎರಡನೇ ನಾಯಕ ನಟಿಯಾಗಿ ನಟಿಸುವ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ಸಂಪದ ಹುಲಿಮನೆ ತದ ನಂತರ ನಟಿಸಿದ್ದು ಪ್ರಜ್ವಲ್ ದೇವರಾಜ್ ಜೊತೆಗೆ. ಹೌದು, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅವರ “ಕರಾವಳಿ” ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿರುವ ಸಂಪದ ಹುಲಿವನ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸುಮಾರು 137,000ಕ್ಕೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. ಇತ್ತೀಚಿಗಷ್ಟೇ “ಎಕ್ಕ” ಸಿನಿಮಾದ ಮುಹೂರ್ತದ ಫೋಟೋಗಳನ್ನು ‘ ಸೊ ಗ್ರೇಟ್ ಫುಲ್ ಟು ಬಿ ಅ ಪಾರ್ಟ್ ಆಫ್ ದಿಸ್ ಇನ್ಕ್ರೀಡಿಬಲ್ ಟೀಮ್’ ಎಂಬ ಕ್ಯಾಪ್ಷನ್ ಜೊತೆಗೆ ಹಂಚಿಕೊಂಡಿದ್ದಾರೆ.
ಈ ಪೋಸ್ಟಿಗೆ ಹಲವಾರು ಮಂದಿ ಯುವರಾಜನ ಜೊತೆಗೆ ಯುವರಾಣಿ ಎಂದು ಕಮೆಂಟ್ ಮಾಡಿದ್ದಾರೆ.
ಈ ಸುಂದರ ನಟಿ ಕನ್ನಡದಲ್ಲಷ್ಟೇ ಅಲ್ಲದೆ ಪರಭಾಷೆಗಳಲ್ಲೂ ನಟಿಸಿದ್ದಾರೆ. ಹೌದು ಸಂಪದ ಹುಲಿಮನೆ ಇವರು ತೆಲುಗು ಇಂಡಸ್ಟ್ರಿಯ ವಿಶ್ವಕ ಸೇನ್ ರವರೊಂದಿಗೂ ಅಭಿನಯಿಸಿದ್ದಾರೆ. ಇಂಟೀರಿಯರ್ ಡಿಸೈನ್ ನಲ್ಲಿ ತಮ್ಮ ಡಿಗ್ರಿಯನ್ನು ಪೂರ್ಣಗೊಳಿಸಿಕೊಂಡಿರುವ ಈ ನಟಿ ತಮ್ಮ ನಟನೆ ನಟನೆಯೊಂದಿಗೆ ವಿದ್ಯಾಭ್ಯಾಸಕ್ಕೂ ಮಹತ್ವವನ್ನು ನೀಡಿದ್ದಾರೆ.