ನಟಿ ರಾಧಿಕಾ ಪಂಡಿತ್ ಯಾರಿಗೆ ಗೊತ್ತಿಲ್ಲ ಹೇಳಿ? ಹೆಚ್ಚುಕಮ್ಮಿ ಒಂದೂವರೆ ದಶಕದವರೆಗೂ ತಮ್ಮ ಅಭಿಮಾನಿಗಳನ್ನು, ಪ್ರೇಕ್ಷಕರನ್ನು ಹಲವಾರು ಸಿನಿಮಾಗಳ ಮೂಲಕ ರಂಜಿಸಿದ ನಟಿ ರಾಧಿಕಾ ಪಂಡಿತ್ ಕನ್ನಡ ಸಿನಿಮಾರಂಗಕ್ಕೆ ಬಹಳ ಅದ್ಭುತವಾದ ಕೊಡುಗೆಯನ್ನೇ ಕೊಟ್ಟಿದ್ದಾರೆ.
ನಟ ಯಶ್ ಅವರನ್ನು ಮದುವೆಯಾಗಿರುವ ಈಕೆ ತನ್ನ ವೈಯಕ್ತಿಕ ಜೀವನಕ್ಕೆ ಪ್ರಾಮುಖ್ಯತೆ ಕೊಟ್ಟಿದ್ದು, ತೆರೆಮರೆಯಲ್ಲಿದ್ದಾರೆ. ಇದೀಗ ನಟನೆಯಿಂದಲೇ ಬಹುದೊಡ್ಡ ಬ್ರೇಕ್ ತೆಗೆದುಕೊಂಡಿರುವ ನಟಿ ರಾಧಿಕಾ ಪಂಡಿತ್ ಎರಡು ಮುದ್ದಾದ ಮಕ್ಕಳ ತಾಯಿಯಾಗಿ ಪತಿ ಯಶ್ ಜೊತೆಗೆ ಸುಖ ಸಂಸಾರವನ್ನು ನಡೆಸುತ್ತಿದ್ದಾರೆ.
ಆದರೆ ರಾಧಿಕಾ ಪಂಡಿತ್ ಅವರು ನಟನಾ ಜರ್ನಿಯಲ್ಲಿ ಕೊಟ್ಟ ಸಿನಿಮಾಗಳ ಕೊಡುಗೆ ಒಂದೆರಡು ಅಲ್ಲ! ಹಾಗಾದರೆ ನಟಿ ರಾಧಿಕಾ ಪಂಡಿತ್ ಅವರ ನಟನೆಯ ನೋಡಲೇಬೇಕಾದ ಸಿನಿಮಾಗಳ ಪಟ್ಟಿ ಏನೆಂದು ನೋಡೋಣ ಬನ್ನಿ.

ಮೊಗ್ಗಿನ ಮನಸ್ಸು
ಮೊಗ್ಗಿನ ಮನಸ್ಸು ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ನಟಿ ರಾಧಿಕಾ ಪಂಡಿತ್ ಚಂಚಲ ಎಂಬ ಪಾತ್ರದ ಮೂಲಕ ಜನಮನ ಗೆದ್ದರು. ಹದಿಹರೆಯ ವಯಸ್ಸಿನ ಮನಸ್ಸುಗಳ ಕಥೆಯಾದ ಈ ಸಿನಿಮಾದಲ್ಲಿ ಹೀರೋ ಆಗಿ ನಟ ಯಶ್ ನಟಿಸಿದರು. ಇದು ಇವರಿಬ್ಬರಿಗೂ ಮೊದಲನೆಯ ಸಿನಿಮಾವಾಗಿತ್ತು.
ಲವ್ ಗುರು
ನಂತರ ಲವ್ ಗುರು ಸಿನಿಮಾದಲ್ಲಿ ಖುಷಿ ಎಂಬ ಪಾತ್ರದ ಮೂಲಕ ಮತ್ತೆ ಸ್ಯಾಂಡಲ್ ವುಡ್ ಪ್ರಿಯರನ್ನು ರಂಜಿಸಿದರು ನಟಿ ರಾಧಿಕಾ ಪಂಡಿತ್. ಈ ಸಿನಿಮಾದಲ್ಲಿ ಪ್ರಬುದ್ಧ ಪಾತ್ರ ಒಂದನ್ನು ಮಾಡಿ ಸೈ ಎನಿಸಿಕೊಂಡರು.
ಕೃಷ್ಣನ್ ಲವ್ ಸ್ಟೋರಿ
ಕೃಷ್ಣನ್ ಲವ್ ಸ್ಟೋರಿ ಸಿನಿಮಾದಲ್ಲಿ ನಟ ಅಜಯ್ ಅವರು ಹೀರೋ ಆದರೆ ನಟಿ ರಾಧಿಕಾ ಪಂಡಿತ್ ಗೀತಾ ಎಂಬ ಪಾತ್ರಕ್ಕೆ ಜೀವ ತುಂಬಿದರು. ಚಿತ್ರಕಥೆ ಹಾಗೂ ಪಾತ್ರಗಳ ನಟನೆ ಬಹಳ ವಿಭಿನ್ನವಾಗಿದ್ದು ಚಿತ್ರ ಯಶಸ್ಸನ್ನು ಕಂಡಿತು.

ಹುಡುಗರು
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿನಯದ ಹುಡುಗರು ಸಿನಿಮಾದಲ್ಲಿ ಬಹಳ ಮುಖ್ಯವಾದ ಪಾತ್ರ ಒಂದನ್ನು ಮಾಡಿ ಮತ್ತೆ ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತು ಮಾಡಿದ್ದರು ನಟಿ ರಾಧಿಕಾ ಪಂಡಿತ್. ತಮಿಳು ಸಿನಿಮಾ ನಾಡೋಡಿಗಲ್ ನಾ ರಿಮೇಕ್ ಈ ಸಿನಿಮಾವಾಗಿದ್ದು, ಇದರಲ್ಲಿ ನಟರಾದ ಲೂಸ್ ಮಾದ ಯೋಗಿ ಹಾಗೂ ಶ್ರೀನಗರ ಕಿಟ್ಟಿ ಅವರು ಪ್ರಮುಖ ಪಾತ್ರವನ್ನುವಹಿಸಿದ್ದರು. ಸಿನಿಮಾ ಭರ್ಜರಿ ಹಿಟ್ ಆಯ್ತು.
ಅದ್ದೂರಿ
ಧ್ರುವ ಸರ್ಜಾ ಅವರು ನಟಿಸಿದ ಅದ್ದೂರಿ ಸಿನಿಮಾದಲ್ಲಿ ನಾಯಕ ನಟಿಯಾಗಿ ಕಾಣಿಸಿಕೊಂಡ ನಟಿ ರಾಧಿಕಾ ಪಂಡಿತ್ ಮತ್ತೆ ವಿಭಿನ್ನ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳುವ ಮೂಲಕ ಜನಮನ ಗೆದ್ದರು.
ಡ್ರಾಮಾ
ನಿರ್ದೇಶಕ ಯೋಗರಾಜ್ ಭಟ್ ಅವರ ನಿರ್ದೇಶನದಲ್ಲಿ ಅದ್ಭುತವಾಗಿ ಮೂಡಿ ಬಂದ ಡ್ರಾಮಾ ಕಾಮಿಡಿ ಸಿನಿಮಾ ಬಹಳ ಹಿಟ್ ಆಯಿತು. ಇದರಲ್ಲಿ ಯಶ್ ಹಾಗೂ ರಾಧಿಕಾ ಪಂಡಿತ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುವ ಮೂಲಕ ತಮ್ಮ ಅಭಿಮಾನಿಗಳಿಗೆ ಮತ್ತಷ್ಟು ಹತ್ತಿರವಾದರು. ನಂದಿನಿ ಎಂಬ ಪಾತ್ರದ ಮೂಲಕ ಬಹಳ ವಿಭಿನ್ನ ಹಾಗೂ ವಿಶೇಷವಾಗಿ ಕಾಣಿಸಿಕೊಂಡರು ನಟಿ ರಾಧಿಕಾ ಪಂಡಿತ್.

ಬಹದ್ದೂರ್
ಬಹದ್ದೂರ್ ಚಿತ್ರದ ಮೂಲಕ ಮತ್ತೊಮ್ಮೆ ದ್ರುವ ಸರ್ಜಾ ಹಾಗೂ ರಾಧಿಕಾ ಪಂಡಿತ್ ಜೋಡಿಯಾದರು. ಅಶೋಕ ಹಾಗೂ ಅಂಜಲಿ ಎಂಬ ಪಾತ್ರಗಳ ಬಗ್ಗೆ ಜೀವ ತುಂಬಿದರು. ಬಹದ್ದೂರ್ ಸಿನಿಮಾ ಕೂಡ ಸೂಪರ್ ಹಿಟ್ ಆಯಿತು.
ಕಡ್ಡಿಪುಡಿ
ಕಡ್ಡಿಪುಡಿ ಸಿನಿಮಾದಲ್ಲಿ ಉಮಾ ಎಂಬ ಪಾತ್ರದ ಮೂಲಕ ನಟಿಸಿದ ನಟಿ ರಾಧಿಕಾ ಪಂಡಿತ್ ಶಿವಣ್ಣ ಅವರಿಗೆ ಜೋಡಿಯಾಗಿ ಕಾಣಿಸಿಕೊಂಡರು. ಬಹಳ ಬೋಲ್ಡ್ ಹಾಗೂ ವಿಭಿನ್ನ ಪಾತ್ರ ಇದಾಗಿದ್ದು ರಾಧಿಕಾ ಪಂಡಿತ್ ಅವರ ಅಭಿನಯ ಶ್ಲಾಘನೀಯವಾಗಿತ್ತು.
ಆದಿಲಕ್ಷ್ಮಿ ಪುರಾಣ
ಆದಿಲಕ್ಷ್ಮಿ ಪುರಾಣ ಚಿತ್ರದ ಮೂಲಕ ನಟ ನಿರೂಪ್ ಭಂಡಾರಿ ಅವರಿಗೆ ಜೋಡಿಯಾದ ನಟಿ ರಾಧಿಕಾ ಪಂಡಿತ್ ವಿಭಿನ್ನ ಕಥೆ ಹಾಗೂ ಪಾತ್ರದೊಂದಿಗೆ ಕಾಣಿಸಿಕೊಂಡರು. ಲಕ್ಷ್ಮಿ ಎಂಬ ಪಾತ್ರದಲ್ಲಿ ನಟಿಸಿದ ರಾಧಿಕಾ ಪಂಡಿತ್ ಮೊದಲ ಬಾರಿಗೆ ಮದುವೆಯಾದ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡು ಪ್ರೇಕ್ಷಕರ ಮನ ಗೆದ್ದರು.
ನಂತರ ನಿಜ ಜೀವನದಲ್ಲಿಯೂ ಮದುವೆಯಾದ ನಟಿ ರಾಧಿಕಾ ಪಂಡಿತ್ ಇದೀಗ ಸಿನಿಮಾಗಳಿಂದ ದೂರವೇ ಇದ್ದಾರೆ. ಆದರೂ ಪತಿ ಯಶ್ ಅವರ ಯಶಸ್ಸಿನ ಹಿಂದಿನ ಶಕ್ತಿಯಾಗಿ ಎರಡು ಮಕ್ಕಳ ತಾಯಿಯಾಗಿ, ಆಗಾಗ ಸಾರ್ವಜನಿಕ ಸಮಾರಂಭಗಳಲ್ಲಿ, ತಮ್ಮ ಮಕ್ಕಳ ಹುಟ್ಟುಹಬ್ಬ ಹಾಗೂ ಇನ್ನಿತರೆ ವಿಶೇಷ ಸಂದರ್ಭಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತಾರೆ.