ಚಿತ್ರರಂಗಕ್ಕೆ ಪ್ರತಿ ವರ್ಷ ಹಲವಾರು ನಟಿಯರು ಬರುತ್ತಾರೆ, ಆದರೆ ಎಲ್ಲರಿಗೂ ಕೂಡ ಉತ್ತಮವಾದ ಅವಕಾಶಗಳು ಮತ್ತು ಯಶಸ್ಸು ಸಿಗುತ್ತದೆ. ಎಲ್ಲರಿಗೂ ಕೂಡ ಜನರ ಮನಸ್ಸಿನಲ್ಲಿ ಉಳಿಯುವಂಥ ಪಾತ್ರಗಳು ಸಿಗುವುದಿಲ್ಲ. ಕೆಲವರಿಗೆ ಮಾತ್ರ ಈ ಅದೃಷ್ಟ ಸಿಗುತ್ತದೆ. ಅಂಥ ಸಾಲಿಗೆ ಸೇರುವ ನಟಿಯರಲ್ಲಿ ಒಬ್ಬರು ನಟಿ ಸಿಂಧು ಮೆನನ್. ಒಂದು ಕಾಲದಲ್ಲಿ ಕನ್ನಡದ ಸ್ಟಾರ್ ಹೀರೋಗಳ ಜೊತೆಗೆ ನಟಿಸಿದ್ದ ಇವರು ಇಂದು ಚಿತ್ರರಂಗದಿಂದಲೇ ದೂರ ಉಳಿದಿದ್ದಾರೆ. ಪ್ರಸ್ತುತ ಈ ನಟಿ ಎಲ್ಲಿದ್ದಾರೆ ಗೊತ್ತಾ?
ನಟಿ ಸಿಂಧು ಮೆನನ್ ಅವರು ಯಾರಿಗೆ ತಾನೇ ಗೊತ್ತಿಲ್ಲ!? ಇವರ ಮಾತೃ ಭಾಷೆ ಮಲಯಾಳಂ ಆದರೂ, ಮಲಯಾಳಿ ಕುಟುಂಬದಲ್ಲಿ ಹುಟ್ಟಿದವರಾದರು, ಇವರು ಹುಟ್ಟಿ ಬೆಳೆದದ್ದು, ಓದಿದ್ದು ಎಲ್ಲವು ಬೆಂಗಳೂರಿನಲ್ಲಿ. ಸಿಂಧು ಮೆನನ್ ಅವರು ನಟನೆ ಶುರು ಮಾಡಿದ್ದು, ಬಾಲನಟಿಯಾಗಿ. ಕನ್ನಡದ ಖ್ಯಾತ ನಟಿ ಶ್ರುತಿ ಅವರು ನಾಯಕಿಯಾಗಿದ್ದ ರಶ್ಮಿ ಸಿನಿಮಾದಲ್ಲಿ ಬಾಲನಟಿಯಾಗಿ ನಟಿಸುವ ಮೂಲಕ ನಟನೆಯನ್ನು ಶುರು ಮಾಡಿದರು.


ರಶ್ಮಿ ಸಿನಿಮಾದ ಇಬ್ಬನಿ ತಬ್ಬಿದ ಇಳೆಯಲಿ ಹಾಡು ಇಂದಿಗೂ ತುಂಬಾ ಫೇಮಸ್ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಬಳಿಕ ನಾಯಕಿಯಾಗಿಯೂ ಹಲವು ಸಿನಿಮಾಗಳಲ್ಲಿ ನಟಿಸಿದರು, ಇವರು ಕನ್ನಡದಲ್ಲಿ ಮಾತ್ರವಲ್ಲ ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ನಟಿಸಿದ್ದಾರೆ. ಕನ್ನಡದ ಸ್ಟಾರ್ ಹೀರೋಗಳಾದ ದರ್ಶನ್ ಅವರೊಡನೆ ಧರ್ಮ ಸಿನಿಮಾದಲ್ಲಿ, ಸುದೀಪ್ ಅವರೊಡನೆ ನಂದಿ ಸಿನಿಮಾದಲ್ಲಿ ನಟಿಸಿದ್ದಾರೆ. ತೆಲುಗು ಹಾಗೂ ತಮಿಳಿನಲ್ಲಿ ಸಹ ಹಲವು ಸ್ಟಾರ್ ಹೀರೋಗಳ ಜೊತೆಗೆ ನಟಿಸಿದ್ದಾರೆ.
ಆದರೆ ಬೇರೆ ಭಾಷೆಗಳಲ್ಲಿ ಅಷ್ಟೇನು ಹೆಸರು ಸಿಗಲಿಲ್ಲ. ಇವರು ಎರಡನೇ ನಾಯಕಿಯಾಗಿ ಹಲವು ಪಾತ್ರಗಳಲ್ಲಿ ನಟಿಸುವುದಕ್ಕೆ ಕೂಡ ಶುರು ಮಾಡಿದರು ಹಾಗಿದ್ದರೂ ಅಷ್ಟೇನು ಹೇಳಿಕೊಳ್ಳುವಂಥ ಪಾತ್ರಗಳು ಸಿಗಲಿಲ್ಲ. ಕೊನೆಯದಾಗಿ 2012ರಲ್ಲಿ ಮಲಯಾಳಂನ ಮಂಜಡಿಕ್ಕುರು ಎನ್ನುವ ಸಿನಿಮಾದಲ್ಲಿ ನಟಿಸಿದರು. ಹಾಗೆಯೇ ಕೆಲವು ಮಲಯಾಳಂ ಧಾರಾವಾಹಿಗಳಲ್ಲಿ ಸಹ ನಟಿಸಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.
ಆದರೆ ಇದೆಲ್ಲವೂ ಆದ ನಂತರ ಸಿಂಧು ಮೆನನ್ ಅವರು ಡಾಮಿನಿಕ್ ಪ್ರಭು ಎನ್ನುವವರೊಡನೆ ಮದುವೆಯಾದರು. ಇವರು ಇದ್ದದ್ದು ನ್ಯೂಯಾರ್ಕ್ ನಲ್ಲಿ, ಈ ಕಾರಣಕ್ಕೆ ಸಿಂಧು ಮೆನನ್ ಅವರು ಸಹ ಗಂಡನ ಜೊತೆಗೆ ನ್ಯೂಯಾರ್ಕ್ ಗೆ ಹೋಗಿದ್ದು, ಅಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಈಗ ಇಬ್ಬರು ಗಂಡುಮಕ್ಕಳು ಹಾಗೂ ಒಬ್ಬಳು ಮಗಳು ಇದ್ದಾರೆ. ಹೊರದೇಶದಲ್ಲಿ ಸಂತೋಷದ ಜೀವನ ನಡೆಸುತ್ತಿದ್ದಾರೆ.