ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಾಡಿರುವ್ ಟ್ವೀಟ್ ಕುತೂಹಲಕ್ಕೆ ಕಾರಣವಾಗಿದೆ. ಮಹಾನ್ ದೈವಭಕ್ತರಾಗಿರುವ ಡಿ ಕೆ ಶಿವಕುಮಾರ್ ಅವರು ದಂಪತಿ ಸಮೇತ ಮಂತ್ರಾಲಯ ಪ್ರವಾಸದಲ್ಲಿದ್ದಾರೆ. ಅಲ್ಲಿಂದ, ’ರಾಯರಿದ್ದಾರೆ’ ಎಂದು ಟ್ವೀಟ್ (ಎಕ್ಸ್) ಮಾಡಿದ್ದಾರೆ. ಅವರ ಈ ಪದಬಳಕೆ, ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.
ರಾಜ್ಯ ರಾಜಕೀಯದಲ್ಲಿ ನವೆಂಬರ್ ಕ್ರಾಂತಿ ! ನವೆಂಬರ್ನಲ್ಲಿ ಸಂಪುಟ ಪುನರ್ ರಚನೆ, ನಾಯಕತ್ವ ಬದಲಾವಣೆ ಅನ್ನೋದು ಗುಟ್ಟಾಗಿ ಏನು ಉಳಿದಿಲ್ಲ. ಹೀಗೆ ಸಿಎಂ ಕುರ್ಚಿಯ ಚರ್ಚೆ ಮುನ್ನೆಲೆಗೆ ಬಂದಾಗಲೆಲ್ಲಾ ಡಿಕೆ ಶಿವಕುಮಾರ್ ಹೆಸರು ಮುನ್ನೆಲೆಗೆ ಬರುತ್ತೆ.

ಡಿ ಕೆ ಶಿವಕುಮಾರ್ ಅವರು ಪತ್ನಿ ಸಮೇತರಾಗಿ ಉದ್ಯಾನ್ ಎಕ್ಸಪ್ರೆಸ್ ಮೂಲಕ ಮಂತ್ರಾಲಯಕ್ಕೆ ತೆರಳಿ ಗುರುರಾಯರ ಮೂಲ ಬೃಂದಾವನದ ದರ್ಶನ ಪಡೆದು, ಸುಭುದೇಂದ್ರ ತೀರ್ಥ ಸ್ವಾಮೀಜಿಯವರ ಆಶೀರ್ವಾದ ಪಡೆದರು.

ಬಳಿಕ ಪಂಚಮುಖಿ ಆಂಜನೇಯ ದೇಗುಲದಲ್ಲಿ ಮಧು ಅಭಿಷೇಕ, ವಿಶೇಷ ಪುಷ್ಪಾರ್ಚನೆ ಸಲ್ಲಿಸಿದರು.. ಯಾವ ಸಂಕಲ್ಪ ಎಂಬ ಮಾಡಿದ್ರಿ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆ ಶಿವಕುಮಾರ್, ನಾನುಂಟು ಆಂಜನೇಯ ಉಂಟು ಅಂತ ಮಾರ್ಮಿಕವಾಗಿ ಹೇಳಿದರು. ಆದರೆ ಡಿಕೆ ಸಂಕಲ್ಪದ ರಹಸ್ಯ ಬಿಟ್ಟಿಟ್ಟ ಪಂಚಮುಖಿ ಆಂಜನೇಯ ದೇಗುಲದ ಅರ್ಚಕ ಶಾಮಾಚಾರ್ಯ, ಸಿಎಂ ಆಗಬೇಕು ಅನ್ನೋದು ಅವರ ಆಸೆ. ಇಂದು ಸಂಕಲ್ಪ ಮಾಡಿದ್ದಾರೆ ಸಿಎಂ ಆಗಿಯೇ ಆಗ್ತಾರೆ ಎಂದು ಭವಿಷ್ಯ ನುಡಿದ್ದಾರೆ.



