ಚಿತ್ರರಂಗ ಅನ್ನೋದು ಒಂದು ಕುಟುಂಬ. ಇಲ್ಲಿ ಎಲ್ಲರೂ ಅಣ್ಣ ತಮ್ಮಂದಿರ ಹಾಗೆ. ಹೊಂದಿಕೊಂಡು ಹೋಗಬೇಕು, ನಾವೆಲ್ಲರೂ ಒಂದೇ ಮನೆಯವರು ಎಂದು ಅಣ್ಣಾವ್ರು ಯಾವಾಗಲೂ ಹೇಳುತ್ತಿದ್ದರು. ಈ ಹೊಂದಾಣಿಕೆ ಒಗ್ಗಟ್ಟು ಎಲ್ಲವೂ ಕೂಡ ಅಣ್ಣಾವ್ರು, ವಿಷ್ಣು ಸರ್, ಅಂಬರೀಶ್ ಅವರು ಇದ್ದ ಕಾಲಕ್ಕೆ ಮುಗಿದು ಹೋಯಿತು. ನಂತರದ ಪೀಳಿಗೆಯ ಕಲಾವಿದರಲ್ಲಿ ಅಂಥಾ ಒಗ್ಗಟ್ಟು ಕಾಣಿಸಿಲ್ಲ. ಇಲ್ಲಿ ಎಲ್ಲವೂ ಬೂದಿಯಲ್ಲಿ ಮುಚ್ಚಿರುವ ಕೆಂಡದ ಹಾಗಿದೆ. ಒಬ್ಬರ ಮೇಲೆ ಮತ್ತೊಬ್ಬರಿಗೆ ಅಸಮಾಧಾನ ಸಿಟ್ಟು, ಎಲ್ಲವೂ ಇದೆ. ಮೊದಲಿನ ಒಗ್ಗಟ್ಟು ಇಲ್ಲ. ದರ್ಶನ್ ಅವರು ಮತ್ತು ಅರ್ಜುನ್ ಸರ್ಜಾ ಅವರ ಕುಟುಂಬದ ವಿಚಾರದಲ್ಲಿ ಸಹ ಹೀಗೆ ಆಗಿದ್ದು, ಇದೀಗ ಅರ್ಜುನ್ ಸರ್ಜಾ ಅವರು ಬಹಳ ಸಮಯದ ಬಗ್ಗೆ ಮೌನ ಮುರಿದು ದರ್ಶನ್ ಅವರ ಬಗ್ಗೆ ಮಾತನಾಡಿದ್ದಾರೆ. ಇವರ ಸ್ನೇಹ ಮತ್ತೆ ಮೊದಲಿನ ಹಾಗೆ ಆಗುತ್ತಾ ಎಂದು ಕಾದು ನೋಡಬೇಕಿದೆ.

ನಟ ದರ್ಶನ್ ಅವರು ಅರ್ಜುನ್ ಸರ್ಜಾ ಅವರ ಕುಟುಂಬದ ಜೊತೆಗೆ ಬಹಳ ಆತ್ಮೀಯರಾಗಿದ್ದರು. ತೂಗುದೀಪ ಶ್ರೀನಿವಾಸ್ ಅವರು ಮತ್ತು ಶಕ್ತಿ ಪ್ರಸಾದ್ ಅವರು ಬಹಳ ಒಳ್ಳೆಯ ಸ್ನೇಹ ಹೊಂದಿದ್ದವರು. ಹಾಗಾಗಿ ಇವರ ಕುಟುಂಬದ ಜೊತೆಗೆ ಒಳ್ಳೆಯ ಒಡನಾಟ ಇತ್ತು. ಕೆಲ ವರ್ಷಗಳ ಹಿಂದೆ ಒಂದೇ ಸಿನಿಮಾದಲ್ಲಿ ದರ್ಶನ್ ಹಾಗೂ ಅರ್ಜುನ್ ಸರ್ಜಾ ನಟಿಸಿದ್ದರು. ಕುರುಕ್ಷೇತ್ರ ಸಿನಿಮಾದಲ್ಲಿ ದರ್ಶನ್ ಅವರದ್ದು ದುರ್ಯೋಧನನ ಪಾತ್ರವಾದರೆ, ಅರ್ಜುನ್ ಸರ್ಜಾ ಅವರದ್ದು ಕರ್ಣನ ಪಾತ್ರ. ಇವರಿಬ್ಬರು ಪಾತ್ರದ ಪರಕಾಯ ಪ್ರವೇಶ ಮಾಡಿ ಅಭಿನಯಿಸಿದ್ದರು. ಆ ವೇಳೆಯಿಂದ ಇಬ್ಬರ ನಡುವೆ ಒಳ್ಳೆಯ ಆತ್ಮೀಯತೆ ಇತ್ತು. ಇನ್ನು ದರ್ಶನ್ ಅವರು ಅರ್ಜುನ್ ಸರ್ಜಾ ಅವರನ್ನು ಸೀನಿಯರ್ ಎಂದೇ ಕರೆಯುತ್ತಿದ್ದರು. ಅರ್ಜುನ್ ಸರ್ಜಾ ಅವರಿಗೂ ಅಷ್ಟೇ ಆತ್ಮೀಯತೆ ಇತ್ತು.

ದರ್ಶನ್ ಅವರು ಇವರ ಕುಟುಂಬದ ಜೊತೆಗಿದ್ದರು. ಅರ್ಜುನ್ ಸರ್ಜಾ ಅವರು ತಮ್ಮ ಮಗಳಿಗಾಗಿ ನಿರ್ದೇಶನ ಮಾಡಿದ ಪ್ರೇಮ ಬರಹ ಸಿನಿಮಾದಲ್ಲಿ ಕೂಡ ದರ್ಶನ್ ಅವರು ಒಂದು ಸ್ಪೆಷಲ್ ಹಾಡಿನಲ್ಲಿ ಕಾಣಿಸಿಕೊಂಡಿದ್ದರು. ಅಷ್ಟು ಆತ್ಮೀಯಯೇ ಅವರ ನಡುವೆ ಇತ್ತು. ಆದರೆ ಇದ್ದಕ್ಕಿದ್ದಂತೆ ಇವರಿಬ್ಬರ ನಡುವೆ ವೈಮನಸ್ಸು ಶುರುವಾಯಿತು. ಒಮ್ಮೆ ಮಾಧ್ಯಮದ ಎದುರು ಮಾತನಾಡಿದ್ದ ಧ್ರುವ ಸರ್ಜಾ, ದರ್ಶನ್ ಸರ್ ಗೆ ಒಂದೆರಡು ಪ್ರಶ್ನೆಗಳನ್ನ ಕೇಳೋದಿದೆ, ಅದನ್ನೆಲ್ಲಾ ಕೇಳಿ ಕ್ಲಾರಿಟಿ ತಗೊಂಡು ಆಮೇಲೆ ಮಾತಾಡ್ತೀನಿ, ಮನಸ್ಸಲ್ಲಿ ಒಂದು ಇಟ್ಕೊಂಡು ಫೇಕ್ ಆಗಿ ಇರೋಕೆ ನನಗೆ ಬರೋದಿಲ್ಲ ಎಂದಿದ್ದರು. ಇದಾದ ನಂತರ ಇವರ ನಡುವಿನ ಕೋಲ್ಡ್ ವಾರ್ಡ್ ಸಾರ್ವಜನಿಕವಾಗಿಯೂ ಕಾಣಿಸಿತ್ತು. ಕಾರ್ಯಕ್ರಮ ಒಂದರ ವೇದಿಕೆಗೆ ದರ್ಶನ್ ಅವರು ಬಂದಾಗ ಧ್ರುವ ಸಪ್ಪೆ ಮುಖ ಮಾಡಿಕೊಂಡರು..

ದರ್ಶನ್ ಅವರು ಎಲ್ಲರನ್ನು ಅಪ್ಪಿ ವಿಶ್ ಮಾಡಿದರು, ಆದರೆ ಧ್ರುವ ಎದ್ದು ಹೊರಟು ಹೋದರು. ಇದೆಲ್ಲಾ ಆದ ನಂತರ ದರ್ಶನ್ ಅವರ ಫ್ಯಾನ್ಸ್ ಧ್ರುವ ಅವರನ್ನು ಟ್ರೋಲ್ ಮಾಡುವುದಕ್ಕೆ ಶುರು ಮಾಡಿದ್ದರು. ಇದಕ್ಕೂ ಪ್ರತಿಕ್ರಿಯೆ ಕೊಟ್ಟಿದ್ದರು. “ದರ್ಶನ್ ಸರ್ ನನ್ನ ಸೀನಿಯರ್. ಅವರ ಬಗ್ಗೆ ನನಗೆ ತುಂಬಾ ಗೌರವ ಇದೆ. ನನ್ನ ಸಿನಿಮಾಗಳಿಗೆ ಅವರು ಸಪೋರ್ಟ್ ಮಾಡಿದ್ದಾರೆ. ಇದೆಲ್ಲಾ ಆದ ನಂತರ ಕೆಲವರು ಫೇಕ್ ಅಕೌಂಟ್ ಗಳನ್ನ ಕ್ರಿಯೇಟ್ ಮಾಡಿ, ಏನೇನೋ ಮೆಸೇಜ್ ಮಾಡ್ತಾರೆ. ಇದೆಲ್ಲಾ ಮಾಡೋಕೆ ಹೋಗಬೇಡಿ. ಒಳ್ಳೆಯದಲ್ಲ. ಆಕಸ್ಮಾತ್ ಮಾಡಿದರು ಹುಷಾರಾಗಿರಿ. ಸಿಕ್ಕಿ ಹಾಕೊಳ್ಳೋಕೆ ಹೋಗಬೇಡಿ..” ಎಂದು ಧ್ರುವ ಹೇಳಿದ್ದರು. ಈ ಮಾತುಗಳು ಕೂಡ ವೈರಲ್ ಆಗಿತ್ತು..ಇನ್ನು ಅಷ್ಟು ಆತ್ಮೀಯವಾಇದ್ದ ಕುಟುಂಬಗಳ ನಡುವೆ ಈ ರೀತಿ ಆಗಿದ್ದು ಯಾಕೆ ಎಂದು ನೋಡುವುದಾದರೆ.

ಅರ್ಜುನ್ ಸರ್ಜಾ ಅವರು ಮಗಳಿಗಾಗಿ ನಿರ್ದೇಶನ ಮಾಡಿದ ಸಿನಿಮಾ ಪ್ರೇಮ ಬರಹ. ಇದು ಕನ್ನಡ ಹಾಗೂ ತಮಿಳು ಎರಡು ಭಾಷೆಯಲ್ಲಿ ನಿರ್ಮಾಣ ಆಯಿತು. ಐಶ್ವರ್ಯ ಸರ್ಜಾ ಅವರಿಗೆ ನಾಯಕನಾಗಿ ನಟಿಸಿದ್ದು ಚಂದನ್ ಅವರು. ಈ ಸಿನಿಮಾದ ಆಂಜನೇಯ ಸ್ವಾಮಿಯ ಹಾಡಿನಲ್ಲಿ ಅರ್ಜುನ್ ಸರ್ಜಾ ಅವರು, ದರ್ಶನ್ ಅವರು, ಚಿರಂಜೀವಿ ಸರ್ಜಾ ಹಾಗೂ ಧ್ರುವ ಸರ್ಜಾ ನಾಲ್ವರು ಕಾಣಿಸಿಕೊಂಡಿದ್ದರು. ಈ ಸಿನಿಮಾಗೆ ದರ್ಶನ್ ಅವರು ಸಾಥ್ ಕೊಟ್ಟಿದ್ದರು. ಸಿನಿಮಾ ವಿತರಣೆಗೆ ಸಂಬಂಧಿಸಿದ ಹಾಗೆ ದರ್ಶನ್ ಅವರ ಆಪ್ತ ಮಲ್ಲಿಕಾರ್ಜುನ ಅಲಿಯಾಸ್ ಮಲ್ಲಿ ಅವರಿಂದ ಅರ್ಜುನ್ ಸರ್ಜಾ ಅವರಿಗೆ 1 ಕೋಟಿಯಷ್ಟು ಮೋಸ ಆಗಿದೆ ಎಂದು ಹೇಳಲಾಗುತ್ತಿದೆ. ಮಲ್ಲಿ ಅವರು ತೂಗುದೀಪ ಪ್ರೊಡಕ್ಷನ್ಸ್ ಕಡೆಯಿಂದ ಸಿನಿಮಾ ವಿತರಣೆ ಮಾಡುವುದಾಗಿ ಹೇಳಿ, ತಾವೇ ವಿತರಣೆ ಮಾಡಿದ್ದರು.

ಹಾಗೆಯೇ ಈ ವಿಚಾರದಲ್ಲಿ ಅಷ್ಟು ದೊಡ್ಡ ಮೊತ್ತದಲ್ಲಿ ಮೋಸ ಮಾಡಿದ ಮಲ್ಲಿ ಎನ್ನುವ ವ್ಯಕ್ತಿ ಇದ್ದಕ್ಕಿದ್ದಂತೆ ನಾಪತ್ತೆಯಾದರು. ಈ ವಿಚಾರವಾಗಿ ದರ್ಶನ್ ಅವರು ಯಾವುದೇ ಸಹಾಯ ಮಾಡಲಿಲ್ಲ ಎಂದು ಅರ್ಜುನ್ ಸರ್ಜಾ ಹಾಗೂ ಅವರ ಕುಟುಂಬಕ್ಕೆ ನೋವಿದೆಯಂತೆ. ಅರ್ಜುನ್ ಸರ್ಜಾ ಅವರ ಜೊತೆಯಲ್ಲಿ ಇರುವವರು ಹೇಳುವ ಹಾಗೆ, ಅಂದು ಮಲ್ಲಿಯ ಬಗ್ಗೆ ಮಾಹಿತಿ ಕಲೆ ಹಾಕುವ ಪ್ರಯತ್ನದಲ್ಲಿ ಇದ್ದಾಗ, ಅರ್ಜುನ್ ಸರ್ಜಾ ಅವರ ಕಡೆಯವರಿಗೆ ದರ್ಶನ್ ಅವರು ಕೆಟ್ಟದಾಗಿ ಬೈದು, ನಿಮ್ಮ ಕೆಲಸ ನೀವು ನೋಡಿಕೊಳ್ಳಿ ಎಂದಿದ್ದರಂತೆ. ಇದರಿಂದ ಅರ್ಜುನ್ ಸರ್ಜಾ ಅವರ ಮನಸ್ಸಿಗೆ ಆಘಾತ ಆಗಿ, ಇನ್ನುಮುಂದೆ ಅವರ ವಿಚಾರವೇ ಬೇಡ ಎಂದು ನಿರ್ಧಾರ ಮಾಡಿ, ಕೋರ್ಟ್ ನಲ್ಲೇ ಹೋರಾಡೋಣ ಎಂದು ಹೇಳಿದರಂತೆ.

ಆಗಿರುವ ಕಥೆ ಇಷ್ಟು. ಇನ್ನು ಮಲ್ಲಿ ಎನ್ನುವವರು ಇತ್ತೀಚೆಗೆ ಗೋವಾದಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದ್ದು, ಅವರ ಬಗ್ಗೆ ಹೆಚ್ಚಿನ ಮಾಹಿತಿ ಸಿಕ್ಕಿಲ್ಲ. ಅರ್ಜುನ್ ಸರ್ಜಾ ಅವರು ಈ ಕೇಸ್ ವಿಚಾರವಾಗಿ ಇನ್ನು ಹೋರಾಟ ನಡೆಸುತ್ತಿದ್ದಾರೆ. ಇದೆಲ್ಲಾ ಬೇಸರ ಇದ್ದರು ಸಹ ಇತ್ತೀಚೆಗೆ ದರ್ಶನ್ ಅವರ ಬಗ್ಗೆ ಮಾಧ್ಯಮದವರು ಪ್ರಶ್ನೆ ಕೇಳಿದಾಗ, ಒಳ್ಳೆ ರೀತಿಯಲ್ಲೇ ಉತ್ತರ ಕೊಟ್ಟಿದ್ದಾರೆ ಅರ್ಜುನ್ ಸರ್ಜಾ ಅವರು. “ದರ್ಶನ್ ಜೊತೆ ಮಾತನಾಡಿ ತುಂಬಾ ಸಮಯ ಆಗಿದೆ, ಮಾತಾಡೋಕೆ ಆಗಿಲ್ಲ. ಈಗ ಡೆವಿಲ್ ಸಿನಿಮಾ ಶೂಟಿಂಗ್ ಮತ್ತೆ ಶುರು ಮಾಡಿದ್ದಾರೆ. ಅವರ ಸಿನಿಮಾಗೆ ಒಳ್ಳೆಯದಾಗಲಿ” ಎಂದು ಹೇಳಿದ್ದಾರೆ ಅರ್ಜುನ್ ಸರ್ಜಾ. ಇದೆಲ್ಲವನ್ನು ನೋಡಿದರೆ ಮುನಿಸು ಬಿಟ್ಟು ಇಬ್ಬರು ಒಂದಾಗುವ ಸೂಚನೆ ಇದೇ ಇರಬಹುದಾ ಎಂದು ಅನ್ನಿಸುವುದಕ್ಕೆ ಶುರುವಾಗಿದೆ.