ನಟ ದರ್ಶನ್, ನಟಿ ಪವಿತ್ರಾ ಗೌಡ ಸೇರಿದಂತೆ ಒಟ್ಟು 17 ಜನರು ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಘಟನೆ ನಮಗೆಲ್ಲಾ ಗೊತ್ತೇ ಇದೆ. ಕಳೆದ ವರ್ಷಾಂತ್ಯದ ವೇಳೆಗೆ ಇವರೆಲ್ಲರಿಗೂ ಕೋರ್ಟ್ ಇಂದ ಜಾಮೀನು ಸಿಕ್ಕಿತು. ಇದು ಕಂಡೀಷನ್ ಇರುವ ಜಾಮೀನು ಆಗಿದ್ದ ಕಾರಣ, ಕೋರ್ಟ್ ಹಾಕುವ ಎಲ್ಲಾ ಶರತ್ತುಗಳಿಗೆ ಒಪ್ಪಿಗೆ ಕೊಟ್ಟ ನಂತರವೇ ಕೋರ್ಟ್ ಇಂದ ಜಾಮೀನು ಸಿಗುತ್ತದೆ. ಕೋರ್ಟ್ ನಿಯಮಗಳ ಅನುಸಾರ, ಕೋರ್ಟ್ ಇಂದ ಕರೆ ಬಂದಾಗ, ದಿನಾಂಕ ನಿಗದಿ ಆದಾಗ ಪ್ರಕರಣದಲ್ಲಿ ಇರುವ ಎಲ್ಲಾ ಆರೋಪಿಗಳು ಕೂಡ ಕೋರ್ಟ್ ಗೆ ಹಾಜರಾಗಬೇಕಾಗುತ್ತದೆ. ಒಂದು ವೇಳೆ ಬರಲು ಸಾಧ್ಯ ಆಗಲಿಲ್ಲ ಎಂದರೆ, ಅದನ್ನು ಕೂಡ ಕೋರ್ಟ್ ಗೆ ತಿಳಿಸಬೇಕಾಗುತ್ತದೆ. ಅದೇ ರೀತಿ ಇಂದು ರೇಣುಕಾಸ್ವಾಮಿ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ 17 ಆ*ರೋಪಿಗಳು ಕೋರ್ಟ್ ಗೆ ಹಾಜರಾಗಿದ್ದಾರೆ. ದರ್ಶನ್ ಅವರು ಮತ್ತು ಪವಿತ್ರಾ ಗೌಡ ಸಹ ಬಂದಿದ್ದಾರೆ.
ಕೋರ್ಟ್ ನಲ್ಲಿ ಇಂದು ವಿಚಾರಣೆ ನಡೆಯುತ್ತಿದೆ. ಹಲವು ವಿಷಯಗಳ ಚರ್ಚೆ ಸಹ ನಡೆಯುತ್ತಿದೆ. ಪವಿತ್ರಾ ಗೌಡ ಕೋರ್ಟ್ ನಲ್ಲಿ ಒಳಗೆ ನಿಂತಿದ್ದರೆ, ದರ್ಶನ್ ಅವರು ಕೋರ್ಟ್ ಬೆಂಚ್ ಮೇಲೆ ಕುಳಿತಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಅಕ್ಕಪಕ್ಕದಲ್ಲೇ ಇದ್ದರು ಸಹ ಪವಿತ್ರಾ ಗೌಡ ಅವರ ಜೊತೆಗೆ ದರ್ಶನ್ ಅವರು ಒಂದೇ ಒಂದು ಮಾತನ್ನು ಸಹ ಆಡಿಲ್ಲ ಎಂದು ವರದಿಗಳ ಮೂಲಕ ತಿಳಿದುಬಂದಿದೆ. ದರ್ಶನ್ ಅವರು ಕಳೆದ ಬಾರಿ ಪವಿತ್ರಾ ಗೌಡ ಅವರ ಜೊತೆಗೆ ಸ್ವಲ್ಪ ಆದರೂ ಮಾತನಾಡಿದ್ದರು, ಆದರೆ ಈ ಸಾರಿ ಒಂದೂ ಮಾತನ್ನು ಆಡಿಲ್ಲ. ಆಕೆ ಇರುವುದು ನೋಡಿದರೂ ಸಹ ಸುಮ್ಮನೆ ಇದ್ದಾರೆ. ಇನ್ನು ಪವಿತ್ರಾ ಗೌಡ ಸಹ ದರ್ಶನ್ ಅವರನ್ನು ಮಾತನಾಡಿಸುವ ಪ್ರಯತ್ನ ಮಾಡಲಿಲ್ಲ ಎಂದು ಹೇಳಲಾಗುತ್ತಿದ್ದು, ಇದರಿಂದ ಡಿಬಾಸ್ ಫ್ಯಾನ್ಸ್ ಗೆ ಸಂತೋಷ ಆಗಿದೆ. ದರ್ಶನ್ ಅವರು ಆಕೆಯ ಜೊತೆಗೆ ಮಾತನಾಡಿಸದೇ ಇರುವುದೇ ಒಳ್ಳೆಯದು ಎನ್ನುವ ಅಭಿಪ್ರಾಯ ಅಭಿಮಾನಿಗಳದ್ದು.

ಇಂದು ಕೇಸ್ ಗೆ ಸಂಬಂಧಿಸಿದ ಹಾಗೆ ಹಲವು ವಿಚಾರಗಳು ಚರ್ಚೆ ಆಗುತ್ತಿದ್ದು, ದರ್ಶನ್ ಅವರ ಪರವಾಗಿ ವಾದ ಮಾಡುತ್ತಿರುವ ವಕೀಲರಾದ ಸುನೀಲ್ ಅವರು ಒಂದು ಪ್ರಮುಕವಾದ ವಿಚಾರವನ್ನು ಜಡ್ಜ್ ಮುಂದೆ ತಿಳಿಸಿದ್ದಾರೆ. ಅದು ಏನು ಎಂದರೆ, ಪೊಲೀಸರು ಎಲ್ಲಾ ಆ*ರೋಪಿಗಳಿಗೆ ನೀವು ಅಪ್ರೂವರ್ ಆಗಿ ಎಂದು ಒತ್ತಡ ಹೇರುತ್ತಿದ್ದಾರಂತೆ. ಈ ಒಂದು ವಿಚಾರವನ್ನು ಲಾಯರ್ ಕೋರ್ಟ್ ನಲ್ಲಿ ಹೇಳಲಿದ್ದು, ಕೋರ್ಟ್ ಇಂದ ಇದಕ್ಕಾಗಿ ಯಾವ ಪ್ರತಿಕ್ರಿಯೆ ಜಡ್ಜ್ ಏನು ಹೇಳುತ್ತಾರೆ ಎಂದು ಕಾದು ನೋಡಬೇಕಿದೆ. ಕಳೆದ ಬಾರಿ ಕೋರ್ಟ್ ನೀಡಿದ ತೀರ್ಪು ರೇಣುಕಾಸ್ವಾಮಿ ಕುಟುಂಬಕ್ಕೆ ಬೇಸರ ತಂದಿತ್ತು, ಅಂಥದ್ದೊಂದು ಕೆಲಸ ಮಾಡಿದವರು ಸುಲಭವಾಗಿ ಹೊರಗಡೆ ಬಂದರು ನನ್ನ ಮಗನಿಗೆ ನ್ಯಾಯ ಸಿಗಲಿಲ್ಲ ಎಂದು ರೇಣುಕಾಸ್ವಾಮಿ ಅವರ ತಂದೆ ಕಣ್ಣೀರು ಹಾಕಿದರು.
ಇಷ್ಟೆಲ್ಲಾ ಆದ ಬಳಿಕ ಇಂದು ಕೋರ್ಟ್ ನಲ್ಲಿ ಯಾವ ರೀತಿ ಎಲ್ಲವೂ ತೀರ್ಮಾನ ಆಗುತ್ತದೆ ಎಂದು ಕಾದು ನೋಡಬೇಕಿದೆ. ಇನ್ನು ರೇಣುಕಾಸ್ವಾಮಿ ಬಗ್ಗೆ ಹೇಳುವುದಾದರೆ, ಚಿತ್ರದುರ್ಗಕ್ಕೆ ಸೇರಿದ ಈ ವ್ಯಕ್ತಿ, ಮಾಡಿದ ಕೆಟ್ಟ ಮೆಸೇಜ್ ಇಂದಾಗಿ ಇಂಥ ಶಿಕ್ಷೆ ಅನುಭವಿಸಬೇಕಾಯಿತು. ಈಗ ಆತ ಇಲ್ಲದೇ ಹೋದರು, ಆತನ ಪತ್ನಿ ಮತ್ತು ತಂದೆ ತಾಯಿ ಕಷ್ಟಪಡುತ್ತಿದ್ದಾರೆ. ರೇಣುಕಾಸ್ವಾಮಿ ಪತ್ನಿ ಜೀವನ ನಡೆಸಿ, ಮಗುವನ್ನು ನೋಡಿಕೊಳ್ಳೋಕೆ ಯಾವುದೇ ಆಸರೆ ಇಲ್ಲ, ಯಾರ ಸಪೋರ್ಟ್ ಕೂಡ ಇಲ್ಲ ಅವಳಿಗೆ ಸರ್ಕಾರಿ ನೌಕರಿ ಕೊಡಬೇಕು ಎಂದು ರೇಣುಕಾಸ್ವಾಮಿ ತಂದೆ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದರು, ಆದರೆ ಸರ್ಕಾರ ಆ ಮನವಿಯನ್ನು ಪೂರೈಸಲು ಸಾಧ್ಯ ಆಗಲಿಲ್ಲ. ಆಕೆಗೆ ಸರ್ಕಾರಿ ಕೆಲಸ ಸಿಗಲಿಲ್ಲ. ಆದರೆ ಗಂಡುಮಗುವಿಗೆ ಜನ್ಮ ನೀಡಿ, ಚೆನ್ನಾಗಿ ನೋಡಿಕೊಳ್ಳುತ್ತಿದ್ದಾಳೆ.
ಇತ್ತೀಚೆಗೆ ರೇಣುಕಾಸ್ವಾಮಿ ಮಗುವನ್ನು ತಂದೆಯ ಮನೆಗೆ ಕರೆದುಕೊಂಡು ಹೋಗಿ, ನಾಮಕರಣ ಶಾಸ್ತ್ರವನ್ನು ಕೂಡ ಮಾಡಲಾಗಿದೆ. ಮಗುವಿಗೆ ಶಶಿಧರ ಸ್ವಾಮಿ ಎಂದು ಹೆಸರಿಡಲಾಗಿದೆ. ಮನೆಯಲ್ಲಿ ಸಂಭ್ರಮ ಮನೆಮಾಡಿದ್ದು, ಮಗು ನೋಡೋಕೆ ರೇಣುಕಾಸ್ವಾಮಿ ಥರವೇ ಇದೆ ಎಂದು ಆತನ ತಂದೆ ತಿಳಿಸಿದ್ದರು. ಇನ್ನು ದರ್ಶನ್ ಅವರು ಆರೋಗ್ಯದ ಕಡೆಗೆ ಗಮನ ಕೊಡುತ್ತಿದ್ದು ಶೀಘ್ರದಲ್ಲೇ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರ ಬರ್ತ್ ಡೇ ಸಹ ಆಚರಿಸಿಕೊಳ್ಳಲಿಲ್ಲ. ಇನ್ನು ಪವಿತ್ರಾ ಗೌಡ ಪ್ರೇಮಿಗಳ ದಿನದಂದು ತಮ್ಮ ರೆಡ್ ಕಾರ್ಪೆಟ್ ಸ್ಟುಡಿಯೋಸ್ ಸಂಸ್ಥೆಯನ್ನು ರೀ ಲಾಂಚ್ ಮಾಡಿ, ಹೊಸ ಪ್ರಾಡಕ್ಟ್ ಗಳನ್ನು ಲಾಂಚ್ ಮಾಡಿದ್ದಾರೆ. ಮುಂದೆ ಈ ಕೇಸ್ ಯಾವ ಹಂತಕ್ಕೆ ತಲುಪುತ್ತದೆ ಎಂದು ಕಾದು ನೋಡಬೇಕಿದೆ.