ಇಂದು 27 ಏಪ್ರಿಲ್ 2025 ಭಾನುವಾರ. ವಿಶ್ವವಸು ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ಅಮಾವಾಸ್ಯೆ. ಸಂಜೆ 05:02 ರಿಂದ 06:36 ವರೆಗೆ ರಾಹುಕಾಲವಿರುತ್ತದೆ. ಮೇಷ ರಾಶಿಯವರು ಇಂದು ತಾವು ಮಾಡುವ ಕೆಲಸದಲ್ಲಿ ಗೊಂದಲ ಹೆಚ್ಚಾಗಿರುತ್ತದೆ. ಮೀನ ರಾಶಿಯವರು ಯಾರೊಂದಿಗೆ ಮಾತನಾಡುವಾಗಲೂ ಎಚ್ಚರಿಕೆಯಿಂದ ಪದಬಳಕೆ ಮಾಡಬೇಕು.
ಮೇಷ ರಾಶಿ
ಮಾಡುವ ಎಲ್ಲಾ ಕೆಲಸಗಳನ್ನೂ ಉತ್ಸಾಹ ಹೆಚ್ಚಾಗಿರುತ್ತದೆ. ಇದರಿಂದ ಮನಸ್ಸಿಗೆ ಖುಷಿ ಇದ್ದರೂ ಮನಸ್ಸಿಗೆ ಒಂದು ವಿಧವಾದ ಗೊಂದಲವಿರುತ್ತದೆ. ಯಾವ ಕೆಲಸ ಮಾಡುವುದು, ಯಾವುದನ್ನು ಬಿಡುವುದು ಎಂಬ ಯೋಚನೆಗೆ ಒಳಗಾಗುವಿರಿ. ಹೋಟೆಲ್ ಬಿಸ್ನೆಸ್ ಮಾಡುವವರಿಗೆ ಈ ದಿನ ಯಥೇಚ್ಛ ಲಾಭವಿದೆ.
ವೃಷಭ ರಾಶಿ
ಅಧಿಕವಾದ ಖರ್ಚು ಇರುತ್ತದೆ, ಆದಾಯಕ್ಕಿಂತ ಖರ್ಚು ಹೆಚ್ಚಾಗಿರುತ್ತದೆ. ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಉಂಟಾಗುತ್ತದೆ, ಜಾಗ್ರತೆಯಿಂದಿರಿ. ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರು ಹಾಗೂ ಇವೆಂಟ್ ಮ್ಯಾನೇಜ್ಮೆಂಟ್ ನಡೆಸುವರು ವ್ಯವಹಾರದಲ್ಲಿ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ನಷ್ಟ ಉಂಟಾಗುವ ಸಾಧ್ಯತೆ ಇದೆ.
ಮಿಥುನ ರಾಶಿ
ಮನಸ್ಸಿನ ಇಷ್ಟಾರ್ಥಗಳು ನೆರವೇರುತ್ತದೆ. ಬಹಳ ದಿನಗಳಿಂದ ನೀವು ಅಂದುಕೊಂಡ ಕೆಲಸಗಳಲ್ಲಿ ಯಶಸ್ಸು ಗಳಿಸುವಿರಿ, ಆಟೋ, ಕ್ಯಾಬ್ ಚಾಲಕರಿಗೆ ಈ ದಿನ ಲಾಭ ಕಡಿಮೆ ಇರುತ್ತದೆ. ಕೃಷಿಕರಿಗೆ ಲಾಭ ಇರುತ್ತದೆ. ಆತ್ಮೀಯ ಸ್ನೇಹಿತರನ್ನು ಭೇಟಿ ಮಾಡುವುದರಿಂದ ಮನಸ್ಸಿಗೆ ನೆಮ್ಮದಿ ಇರುತ್ತದೆ.
ಕಟಕ ರಾಶಿ:
ನೀವು ಮಾಡಬೇಕಾದ ಕೆಲಸಗಳು ಅಂದುಕೊಂಡಂತೆ ಸಾಗುವುದಿಲ್ಲ, ಕೆಲಸಗಳು ನಿಧಾನವಾಗಿ ಸಾಗುತ್ತದೆ. ಆರೋಗ್ಯ ಸಮಸ್ಯೆ ಕಾಡಬಹುದು, ಏಕಾಗ್ರತೆ ಕೊರತೆ ಕಾಡುತ್ತದೆ. ನೀವು ಆಡುವ ಮಾತುಗಳಿಂದಲೇ ಶತ್ರುಗಳು ಹೆಚ್ಚಾಗಿ ಸಮಸ್ಯೆ ಅನುಭವಿಸುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಸ್ವಲ್ಪ ಲಾಭ ದೊರೆಯಲಿದೆ.
ಸಿಂಹ ರಾಶಿ
ಈಗಾಗಲೇ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅದು ಇನ್ನಷ್ಟು ಹೆಚ್ಚಾಗಬಹುದು, ಮನಸ್ಸಿನಲ್ಲಿ ಯಾವುದೋ ವಿಚಾರದ ಬಗ್ಗೆ ಬಹಳ ಯೋಚನೆ ಮಾಡುವಿರಿ, ಕೌಟುಂಬಿಕ ಕಲಹಗಳು ಇರುತ್ತದೆ. ಮತ್ತೊಬ್ಬರೊಂದಿಗೆ ಮಾತನಾಡುವಾಗ ಎಚ್ಚರಿಕೆ ವಹಿಸಿ, ದೂರದ ಪ್ರಯಾಣ ಮಾಡುವಾಗ ಜಾಗ್ರತೆಯಿಂದ ಇರಿ.
ಕನ್ಯಾ ರಾಶಿ
ಕೆಲಸದಲ್ಲಿ ಅಭಿವೃದ್ಧಿ ಕಾಣಬಹುದು, ವ್ಯಾಪಾರದಲ್ಲಿ ಕೂಡಾ ಲಾಭ ದೊರೆಯಲಿದೆ. ದೂರದ ಮಿತ್ರರಿಂದ ಸಿಹಿಸುದ್ದಿ ಕೇಳುವಿರಿ, ಇದರಿಂದ ನೀವು ಖುಷಿಯಾಗುವಿರಿ, ಬಿದ್ದು ಮೂಳೆಗೆ ಪೆಟ್ಟಾಗುವ ಸಾಧ್ಯತೆ ಇದೆ, ಆದ್ದರಿಂದ ಜಾಗ್ರತೆಯಿಂದ ಇರಿ.
ತುಲಾ ರಾಶಿ
ಈ ದಿನ ಒತ್ತಡಗಳಿಂದ ತುಂಬಿರುತ್ತದೆ. ಇಡೀ ದಿನ ಕೆಲಸದಲ್ಲಿ ಮುಳುಗಿರುತ್ತೀರಿ, ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಇಂದು ನಷ್ಟದ ದಿನವಾಗಿರುತ್ತದೆ. ಹೂವು, ಹಣ್ಣು, ಜ್ಯೂಸ್ ವ್ಯಾಪಾರ ಮಾಡುವವರಿಗೆ ಇಂದು ಉತ್ತಮ ಲಾಭ ದೊರೆಯುತ್ತದೆ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಮನೆಯಲ್ಲಿ ಕಲಹ ಉಂಟಾಗುವ ಸಾಧ್ಯತೆ ಇದೆ.
ವೃಶ್ಚಿಕ ರಾಶಿ
ಯಾವುದೇ ಕೆಲಸವಾಗಲಿ ಯಶಸ್ಸು ಗಳಿಸುವಿರಿ, ವ್ಯಾಪಾರ ವ್ಯವಹಾರದಲ್ಲಿ ದುಪ್ಪಟ್ಟು ಲಾಭವಾಗುತ್ತದೆ. ಇದರಿಂದ ನೀವು ಖುಷಿಯಾಗಿರುತ್ತೀರಿ, ಕ್ರೀಡಾ ಕ್ಷೇತ್ರದಲ್ಲಿರುವವರಿಗೆ ಒಳ್ಳೆ ದಿನ. ನೀವು ಜನರಿಂದ ಗುರುತಿಸಲ್ಪಡುವಿರಿ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಹಿನ್ನಡೆ ಇರಲಿದೆ. ಮತ್ತೊಬ್ಬರು ಮಾಡುವ ತಪ್ಪುಗಳಿಂದ ನಿಮಗೆ ಸಮಸ್ಯೆ ಆಗಲಿದೆ, ಆದ್ದರಿಂದ ಎಚ್ಚರಿಕೆಯಿಂದಿರಿ.
ಧನು ರಾಶಿ
ಎಲ್ಲಾ ಕೆಲಸಗಳಲ್ಲೂ ವಿಳಂಬ ಉಂಟಾಗಲಿದೆ. ಕೆಲಸಗಳು ಸಮಯಕ್ಕೆ ಸರಿಯಾಗಿ ಸಾಗುವುದಿಲ್ಲ. ನಿರೀಕ್ಷಿಸಿದ ಯಶಸ್ಸು ಕೂಡಾ ದೊರೆಯುವುದಿಲ್ಲ. ಇಷ್ಟವಾದ ವ್ಯಕ್ತಿಗಳೊಂದಿಗೆ ಹೊರಗೆ ಸಮಯ ಕಳೆಯುವಿರಿ, ಭೂರಿ ಭೋಜನ ಮಾಡುವಿರಿ. ಯಾರೊಂದಿಗಾದರೂ ಹಣದ ವ್ಯವಹಾರ ಮಾಡುವಾಗ ಎಚ್ಚರಿಕೆಯಿಂದ ಇರಿ. ಇಲ್ಲದಿದ್ದರೆ ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಯಾವುದಾದರೂ ಹೊಸ ಬಿಸ್ನೆಸ್ ಆರಂಭಿಸಬೇಕು ಎಂಬ ಯೋಚನೆ ಇದ್ದರೆ ಅದನ್ನು ಮುಂದೂಡುವುದು ಉತ್ತಮ.
ಮಕರ ರಾಶಿ
ಕೆಲಸಗಳಲ್ಲಿ ಅಭಿವೃದ್ಧಿ ಇದ್ದರೂ ಮನೆಯಲ್ಲಿ ಸಣ್ಣ ಪುಟ್ಟ ಮನಸ್ತಾಪ ಇರಲಿದೆ. ಇದರಿಂದ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಜನಗಳ ವಿರೋಧ ಎದುರಿಸುವಿರಿ, ಹಿತಶತ್ರುಗಳ ಕಾಟವೂ ಇರಲಿದೆ. ಆದರೆ ಇಷ್ಟವಾದ ವ್ಯಕ್ತಿಗಳೊಂದಿಗೆ ಸಮಯ ಕಳೆಯುವುದರಿಂದ ಮನಸ್ಸಿಗೆ ಸ್ವಲ್ಪ ಮಟ್ಟಿಗೆ ಸಮಾಧಾನವಿರುತ್ತದೆ.
ಕುಂಭ ರಾಶಿ
ಸಾಡೇಸಾತಿ ಅನುಭವಿಸುತ್ತಿರುವ ಕುಂಭ ರಾಶಿಯವರಿಗೆ ಈ ದಿನ ಅಭಿವೃದ್ಧಿಯ ದಿನವಾಗಿದೆ. ನಿಮ್ಮ ವ್ಯಾಪಾರ ವ್ಯವಹಾರದಲ್ಲಿ ಯಥೇಚ್ಚ ಲಾಭ ದೊರೆಯುತ್ತದೆ. ಬಹಳ ದಿನಗಳಿಂದ ಬಾಕಿ ಉಳಿದಿದ್ದ ಕೆಲಸ ಇಂದು ಪೂರ್ಣಗೊಳ್ಳಲಿದೆ. ಇನ್ಮುಂದೆ ನೀವು ಹೊಸ ಹೆಜ್ಜೆ ಇಡಲಿದ್ದೀರಿ. ಮನಸ್ಸಿಗೆ ತೃಪ್ತಿಯಾಗಲಿದೆ. ಸ್ನೇಹಿತರೊಂದಿಗೆ ವಿರೋಧ ಎದುರಾಗಬಹುದು, ಆದ್ದರಿಂದ ಎಚ್ಚರಿಕೆಯಿಂದ ವ್ಯವಹಾರ ಮಾಡಿ.
ಮೀನ ರಾಶಿ
ಈ ದಿನ ಅಧಿಕವಾದ ಖರ್ಚು ಇರುತ್ತದೆ, ಯಾವುದೇ ಕೆಲಸಕ್ಕೂ ಹಣ ನೀಡುವುದಿದ್ದರೆ ಯೋಚನೆ ಮಾಡಿ ಮುಂದುವರೆಯಿರಿ. ಸಾಲದ ಸುಳಿಯಿಂದ ಹೊರ ಬರಲು ಪ್ರಯತ್ನಿಸುತ್ತಿದ್ದೀರಿ, ಸಾಧ್ಯವಾದಷ್ಟೂ ಉಳಿತಾಯ ಮಾಡಿ. ನೀವು ಅಡುವ ಮಾತುಗಳಿಂದಲೇ ಸಮಸ್ಯೆ ಎದುರಿಸುವ ಸಾಧ್ಯತೆ ಇದೆ. ನಿಮ್ಮ ಕೈ ಮೀರಿ ಮತ್ತೊಬ್ಬರಿಗೆ ಸಹಾಯ ಮಾಡಲು ಹೋಗಿ ನೀವು ಸಮಸ್ಯೆಗೆ ಸಿಲುಕದಿರಿ. ಮನೆಯಲ್ಲಿ ಮಾತನಾಡುವಾಗ ಮಾತುಗಳ ಮೇಲೆ ಜಾಗ್ರತೆ ಇರಲಿ, ಇಲ್ಲವಾದರೆ ನೀವು ವಿವಾದಕ್ಕೆ ಸಿಲುಕಬಹುದು.
ಶ್ರೀ ದರ್ಶನ್ ದೀಕ್ಷಿತ್ ಗುರೂಜಿಯನ್ನು ನೇರವಾಗಿ ಭೇಟಿ ಮಾಡಲು 9902595318, 9041874187 ಮೊಬೈಲ್ ನಂಬರನ್ನು ಸಂಪರ್ಕಿಸಿ



