ಇಂದು 28 ಏಪ್ರಿಲ್ 2025 ಸೋಮವಾರ. ವಿಶ್ವವಸು ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಶುಕ್ಲ ಪಕ್ಷ. ಇಂದು ಬೆಳಗ್ಗೆ07:40 ರಿಂದ 09:13 ವರೆಗೆ ರಾಹುಕಾಲವಿರುತ್ತದೆ. ಸರ್ಕಾರಿ ಕೆಲಸದಲ್ಲಿರುವ ಮೇಷ ರಾಶಿಯವರಿಗೆ ಒತ್ತಡ ಹೆಚ್ಚಾಗಲಿದೆ, ಮೀನ ರಾಶಿಯವರಿಗೆ ಹಿತಶತ್ರುಗಳ ಕಾಟ ಎದುರಾಗಲಿದೆ.
ಮೇಷ ರಾಶಿ
ಈ ದಿನ ಸರ್ಕಾರಿ ಕೆಲಸದಲ್ಲಿರುವವರಿಗೆ ಹೆಚ್ಚಿನ ಕೆಲಸವಿರುತ್ತದೆ. ಒತ್ತಡ ಇರುತ್ತದೆ, ತಾಳ್ಮೆಯಿಂದ ಕೆಲಸ ಮಾಡಿ. ಆರೋಗ್ಯದಲ್ಲಿ ಸ್ವಲ್ಪ ಮಟ್ಟಿಗೆ ಏರುಪೇರು ಇರುತ್ತದೆ. ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಭಯ ಪಡುವ ಅವಶ್ಯಕತೆ ಇಲ್ಲ, ನಿಮ್ಮ ಶ್ರದ್ಧೆ, ಪ್ರಾಮಾಣಿಕತೆಯೇ ನಿಮಗೆ ಒಳ್ಳೆಯ ಭವಿಷ್ಯ ರೂಪಿಸುತ್ತದೆ.
ವೃಷಭ ರಾಶಿ
ಯಾವುದೇ ಕ್ಷೇತ್ರದಲ್ಲಿ ಹೂಡಿಕೆ ಮಾಡುವಂತಿದ್ದರೆ, ಅಥವಾ ಹೊಸ ಕೆಲಸ ಆರಂಭಿಸಬೇಕು ಎಂಬ ಯೋಚನೆ ಇದ್ದರೆ ಮುಂದೂಡುವುದು ಒಳ್ಳೆಯದು, ಇಂದು ಹೂಡಿಕೆಗೆ ಸೂಕ್ತ ದಿನವಲ್ಲ, ಇಲ್ಲದಿದ್ದರೆ ನಷ್ಟ ಅನುಭವಿಸಬೇಕಾದೀತು. ಕುಟುಂಬದಲ್ಲಿ ಸಣ್ಣ ಪುಟ್ಟ ಕಿರಿಕಿರಿ ಇರುತ್ತದೆ. ಸಮಸ್ಯೆಗಳನ್ನು ಮಾತುಕತೆಯಿಂದ ಪರಿಹರಿಸಿಕೊಳ್ಳಿ. ವ್ಯಾಪಾರದಲ್ಲಿ ಲಾಭ ಹೆಚ್ಚಾಗಿರುತ್ತದೆ..
ಮಿಥುನ ರಾಶಿ
ವ್ಯಾಪಾರ, ವ್ಯವಹಾರದಲ್ಲಿ ಲಾಭ ಇರಲಿದೆ. ಮನಸ್ಸಿಗೆ ಇಷ್ಟವಾದ ಕೆಲಸ ಮಾಡುವಿರಿ, ಇದರಿಂದ ಮನಸ್ಸು ಖುಷಿಯಾಗಿರುತ್ತದೆ. ಕ್ರೀಡಾಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂಬ ಆಸೆ ಇರುವವರಿಗೆ ವಿಶೇಷ ವ್ಯಕ್ತಿಯೊಬ್ಬರು ಸಹಾಯ ಮಾಡಲಿದ್ದಾರೆ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದನ್ನು ಮುಂದೂಡಿದರೆ ಉತ್ತಮ, ಇಲ್ಲವಾದರೆ ನಷ್ಟ ಉಂಟಾಗುವ ಸಾಧ್ಯತೆ ಇದೆ.
ಕಟಕ ರಾಶಿ:
ಕಟಕ ರಾಶಿಯ ಹೂ ಬೆಳೆಗಾರರಿಗೆ ಇಂದು ದುಪ್ಪಟ್ಟು ಲಾಭ ದೊರೆಯುತ್ತದೆ, ಇವೆಂಟ್ ಮ್ಯಾನೇಜ್ಮೆಂಟ್ ನಡೆಸುವವರು ಸ್ವಲ್ಪ ಮಟ್ಟಿಗೆ ಜಾಗ್ರತೆ ವಹಿಸಬೇಕು, ಇಲ್ಲದಿದ್ದರೆ ನಷ್ಟ ಉಂಟಾಗಬಹುದು, ಆಟೋ, ಕ್ಯಾಬ್ ಚಾಲಕರಿಗೆ ಲಾಭವಿರುತ್ತದೆ. ಹಿತಶತ್ರುಗಳಿಂದ ನಿಮಗೆ ಅಪಕೀರ್ತಿ ಉಂಟಾಗುವ ಸಾಧ್ಯತೆ ಇದೆ, ಎಚ್ಚರಿಕೆಯಿಂದ ಇರಿ.
ಸಿಂಹ ರಾಶಿ
ಈ ದಿನ ಹೊಸ ಕೆಲಸಗಳಲ್ಲಿ ಅಡೆತಡೆಗಳು ಉಂಟಾಗಲಿದೆ. ಆದರೆ ಯಾವುದಕ್ಕೂ ಹೆದರದೆ ಶ್ರದ್ಧೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಖಂಡಿತ ಜಯ ನಿಮ್ಮದಾಗುತ್ತದೆ, ಆದರೂ ಎಚ್ಚರಿಕೆಯಿಂದ ಹೆಜ್ಜೆ ಇಡಿ, ರಿಯಲ್ ಎಸ್ಟೇಟ್ ವ್ಯವಹಾರ ಮಾಡುವವರು ಕೂಡಾ ಮೈಯೆಲ್ಲಾ ಕಣ್ಣಾಗಿರಬೇಕು. ಕುಟುಂಬದಲ್ಲಿ ಮನಸ್ತಾಪ ಹೆಚ್ಚಾಗಲಿದೆ, ಸಂಬಂಧದಲ್ಲಿ ಬಿರುಕು ಉಂಟಾಗುವ ಸಾಧ್ಯತೆ ಇದೆ. ಪರಿಸ್ಥಿತಿಯನ್ನು ತಾಳ್ಮೆಯಿಂದ ನಿಭಾಯಿಸಿ. ನಿಮ್ಮ ಜೀವನ ನಿಮ್ಮ ಕೈಯಲ್ಲೇ ಇದೆ.
ಕನ್ಯಾ ರಾಶಿ
ವ್ಯಾಪಾರ, ವ್ಯವಹಾರದಲ್ಲಿ ಲಾಭ ದೊರೆಯಲಿದೆ. ಸ್ನೇಹಿತರ ಸಹಾಯದಿಂದ ಹಣಕಾಸಿನ ಸಮಸ್ಯೆಗಳಿಂದ ಮುಕ್ತಿ ಹೊಂದುವಿರಿ, ಆರೋಗ್ಯದಲ್ಲಿ ಏರುಪೇರು ಉಂಟಾಗಲಿದೆ, ಸಿನಿಮಾ ಕ್ಷೇತ್ರ, ರಂಗಭೂಮಿ ಕಲಾವಿದರು ದೂರದ ಪ್ರಯಾಣ ಮಾಡುವಾಗ ಎಚ್ಚರಿಕೆಯಿಂದ ಇರಬೇಕು.
ತುಲಾ ರಾಶಿ
ರಿಯಲ್ ಎಸ್ಟೇಟ್ ಬಿಸ್ನೆಸ್ ಮಾಡುವವರಿಗೆ ಇಂದು ಲಾಭದಾಯಕ ದಿನವಾಗಿದೆ. ದಿನಸಿ ವ್ಯಾಪಾರಿಗಳಿಗೂ ಒಳ್ಳೆಯ ದಿನವಾಗಿದೆ. ಕುಟುಂಬದಲ್ಲಿ ಏರ್ಪಟ್ಟಿದ್ದ ಭಿನ್ನಾಭಿಪ್ರಾಯಗಳು ಮರೆಯಾಗಿ ಮನಸ್ಸಿಗೆ ಖುಷಿಯಾಗಲಿದೆ. ಇದರಿಂದ ನೀವು ಏಕಾಗ್ರತೆ ಎಲ್ಲಾ ಕೆಲಸದಲ್ಲೂ ಪಾಲ್ಗೊಳ್ಳುವಿರಿ, ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭವಿರುತ್ತದೆ.
ವೃಶ್ಚಿಕ ರಾಶಿ
ಯಾವುದೇ ಕೆಲಸ ಮಾಡಿದರೂ ಯಶಸ್ಸು ಗಳಿಸಿ, ಯಥೇಚ್ಛ ಲಾಭ ದೊರೆಯುತ್ತದೆ. ಇಷ್ಟು ದಿನ ಆರ್ಥಿಕ ವಿಚಾರದ ಬಗ್ಗೆ ಇದ್ದ ಬೇಸರ ದೂರಾಗುತ್ತದೆ. ಉದ್ಯೋಗ ಮಾಡುವ ಸ್ಥಳದಲ್ಲಿ ಸಹೋದ್ಯೋಗಿಗಳೊಂದಿಗೆ ಮನಸ್ತಾಪ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಯಾರೊಂದಿಗಾದರೂ ಮಾತನಾಡುವಾಗ ಎಚ್ಚರಿಕೆಯಿಂದ ಮಾತನಾಡಿ, ವಿದ್ಯಾರ್ಥಿಗಳಿಗೆ ಉತ್ತಮ ದಿನವಾಗಿದೆ.
ಧನು ರಾಶಿ
ಕೆಲಸದಲ್ಲಿ ಕಿರಿಕಿರಿ ಇರಲಿದೆ, ವಿಘ್ನಗಳು ಎದುರಾಗಬಹುದು. ಆದರೆ ನೀವು ಊಹೆ ಕೂಡಾ ಮಾಡದಂತೆ ಅದೃಷ್ಟ ಲಕ್ಷ್ಮಿ ಇಂದು ನಿಮಗೆ ಒಲಿಯಲಿದ್ದಾಳೆ. ಕಬ್ಬಿಣ ಸೇರಿದಂತೆ ಕಟ್ಟಡ ನಿರ್ಮಾಣ ವಸ್ತುಗಳ ವ್ಯಾಪಾರ ಮಾಡುವವರಿಗೆ ಒಳ್ಳೆ ಲಾಭವಿರುತ್ತದೆ, ಮತ್ತೊಬ್ಬರೊಂದಿಗೆ ವ್ಯವಹರಿಸುವಾಗ ಎಚ್ಚರದಿಂದ ಇರಿ, ಇಲ್ಲದಿದ್ದರೆ ಸಮಸ್ಯೆಗೆ ಸಿಲುಕಬಹುದು.
ಮಕರ ರಾಶಿ
ಈಗಾಗಲೇ ಆರೋಗ್ಯ ಸಮಸ್ಯೆ ಎದುರಿಸುತ್ತಿರುವವರು ಇನ್ನಷ್ಟು ಜಾಗರೂಕರಾಗಿರಬೇಕು, ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡಬೇಕು ಎಂದುಕೊಂಡಿರುವರ ಆಸೆ ನೆರವೇರುತ್ತದೆ. ಬಹಳ ದಿನಗಳಿಂದ ಅರ್ಧಕ್ಕೆ ನಿಂತಿದ್ದ ಕೆಲಸ ಇಂದು ಪೂರ್ಣಗೊಳ್ಳಲಿದೆ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದಂತೆ ಸಮಸ್ಯೆ ಉಂಟಾಗಬಹುದು, ಹಿತಶತ್ರುಗಳ ಕಾಟ ಹೆಚ್ಚಾಗಬಹುದು, ಜಾಗ್ರತೆ
ಕುಂಭ ರಾಶಿ
ಆದಾಯಕ್ಕಿಂದ ಖರ್ಚು ಹೆಚ್ಚಾಗಲಿದೆ, ಎಚ್ಚರದಿಂದ ಖರ್ಚು ಮಾಡಿ, ಹೊಸ ವ್ಯಾಪಾರ ಆರಂಭಿಸಬೇಕು ಎಂದುಕೊಂಡಿರುವವರು ಎಚ್ಚರಿಕೆಯಿಂದ ಇರಬೇಕು, ಸ್ನೇಹಿತರೊಂದಿಗೆ ಭಿನ್ನಾಭಿಪ್ರಾಯ ಉಂಟಾಗಬಹುದು, ಆಡುವ ಮಾತುಗಳ ಬಗ್ಗೆ ಹಿಡಿತ ಇರಲಿ, ಇಲ್ಲದಿದ್ದರೆ ಸಮಸ್ಯೆಯ ಸುಳಿಯಲ್ಲಿ ಸಿಲುಕುವಿರಿ.
ಮೀನ ರಾಶಿ
ಇಂದು ಉತ್ಸಾಹ ಹೆಚ್ಚಾಗಲಿದೆ, ಖುಷಿಯಿಂದ ಇರುವಿರಿ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಕೀರ್ತಿ ಹೆಚ್ಚಾಗಲಿದೆ, ಸಾಲದ ಸುಳಿಯಿಂದ ಹೊರ ಬರಲಿದ್ದೀರಿ, ಕೆಲಸದಲ್ಲಿ ಒತ್ತಡ ಇರಲಿದೆ, ಹಿತಶತ್ರುಗಳ ಕಾಟ ಇರಲಿದೆ, ಎಲ್ಲವನ್ನೂ ತಾಳ್ಮೆಯಿಂದ ನಿಭಾಯಿಸಿ.
ಶ್ರೀ ದರ್ಶನ್ ದೀಕ್ಷಿತ್ ಗುರೂಜಿಯನ್ನು ನೇರವಾಗಿ ಭೇಟಿ ಮಾಡಲು 9902595318, 9041874187 ಮೊಬೈಲ್ ನಂಬರನ್ನು ಸಂಪರ್ಕಿಸಿ



