ಇಂದು 26 ಏಪ್ರಿಲ್ 2025 ಶನಿವಾರ. ವಿಶ್ವವಸು ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ತ್ರಯೋದಶಿ. ಬೆಳಗ್ಗೆ 09:15 ರಿಂದ 10:48 ವರೆಗೆ ರಾಹುಕಾಲವಿರುತ್ತದೆ. ಮೀನ ರಾಶಿಯವರು ಇಂದು ಹಣಕಾಸಿನ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಮೀನ ರಾಶಿಯವರಿಗೆ ಕೆಲಸದ ಒತ್ತಡ ಹೆಚ್ಚಾಗಲಿದೆ.
ಮೇಷ ರಾಶಿ
ಮೇಷ ರಾಶಿಯವರು ಇಂದು ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ. ಯಾರಿಗೋ ಸಾಲ ನೀಡುವ ಮೂಲಕ ಅಥವಾ ದುಂದುವೆಚ್ಚ ಮಾಡುವ ಮೂಲಕ ನೀವು ಆರ್ಥಿಕ ನಷ್ಟ ಅನುಭವಿಸುವ ಸಾಧ್ಯತೆ ಇದೆ. ಆದ್ದರಿಂದ ಹಣವನ್ನು ಖರ್ಚು ಮಾಡುವಾಗ ಬಹಳ ಜಾಗರೂಕರಾಗಿರಿ. ಈ ದಿನ ಕೆಲಸದಲ್ಲಿ ಬಹಳ ಒತ್ತಡ ಇರುತ್ತದೆ. ಮಾಡುತ್ತಿರುವ ಕೆಲಸದಲ್ಲಿ ಸ್ವಲ್ಪ ಮಟ್ಟಿಗೆ ಪ್ರಗತಿ ಇರಲಿದೆ. ಆದರೆ ಮೊದಲೇ ಹೇಳಿದಂತೆ ಹಣಕಾಸಿನ ವಿಚಾರದಲ್ಲಿ ಬಹಳ ಎಚ್ಚರಿಕೆಯಿಂದ ಇರುವುದು ಅಗತ್ಯ.
ವೃಷಭ ರಾಶಿ
ಈ ದಿನ ನಿಮ್ಮ ಮನಸ್ಸಿನ ಬಹುತೇಕ ಆಸೆಗಳು ಈಡೇರುತ್ತದೆ. ಇದರಿಂದ ನೀವು ಬಹಳ ಖುಷಿಯಾಗಿರುತ್ತೀರಿ, ಯಾವುದೋ ಹೊಸ ಕೆಲಸ ಮಾಡಲು ಉತ್ಸಾಹದಿಂದ ಇರುವಿರಿ, ವ್ಯಾಪಾರದಲ್ಲಿ ಲಾಭ ಹೆಚ್ಚಾಗಿರುತ್ತದೆ. ಹಾಲು, ಸಿಹಿ ಪದಾರ್ಥ, ಮಂಗಳ ದ್ರವ್ಯಗಳ ವ್ಯಾಪಾರ ಮಾಡುವವರಿಗೆ ಯಥೇಚ್ಛ ಲಾಭ ದೊರೆಯಲಿದೆ. ಆದರೆ ಕುಟುಂಬದ ಸದಸ್ಯರ ನಡುವೆ ಸಣ್ಣ ಪುಟ್ಟ ಭಿನ್ನಾಬಿಪ್ರಾಯಗಳು ಇರುತ್ತವೆ, ಜಾಗ್ರತೆ
ಮಿಥುನ ರಾಶಿ
ಆತ್ಮೀಯ ಸ್ನೇಹಿತರ ಸಹಾಯ, ಸಹಕಾರದಿಂದ ನಿಮಗೆ ಲಾಭ ದೊರೆಯಲಿದೆ. ಮನಸ್ಸಿಗೆ ಸಂತೋಷ ಇರಲಿದೆ. ಕೆಲವು ದಿನಗಳಿಂದ ನೀವು ಎದುರಿಸುತ್ತಿದ್ದ ಆರೋಗ್ಯ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಭೂ ವ್ಯವಹಾರದಲ್ಲಿ ಹೇಳಿಕೊಳ್ಳುವಂಥ ಲಾಭ ದೊರೆಯುವುದಿಲ್ಲ. ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡುವವರು ಯೋಚನೆ ಮಾಡಿ ಮುಂದುವರೆಯಿರಿ. ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಅಪನಿಂದನೆ ಎದುರಾಗಲಿದೆ. ಹೋಟೆಲ್ ಉದ್ಯಮದವರಿಗೆ ಇಂದು ದ್ವಿಗುಣ ಲಾಭ ದೊರೆಯಲಿದೆ.
ಕಟಕ ರಾಶಿ:
ಕೃಷಿ ಚಟುವಟಿಕೆಯಲ್ಲಿ ತೊಡಗಿರುವವರಿಗೆ ಯಥೇಚ್ಛ ಲಾಭ ದೊರೆಯಲಿದೆ. ಆದರೆ ಇವೆಂಟ್ ಮ್ಯಾನೇಜ್ಮೆಂಟ್ ಕೆಲಸ ಮಾಡುವವರು ಇಂದು ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ, ಆದ್ದರಿಂದ ಜಾಗರೂಕರಾಗಿರಿ, ಹೂವು, ಹಣ್ಣು ತರಕಾರಿ ಬಿಸ್ನೆಸ್ ಮಾಡುವವರಿಗೆ ಕೂಡಾ ಹೆಚ್ಚಿನ ಲಾಭ ದೊರೆಯುತ್ತದೆ. ಇಷ್ಟದೇವರ ದರ್ಶನ ಮಾಡುವವರಿಗೆ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ.
ಸಿಂಹ ರಾಶಿ
ಸಿಂಹ ರಾಶಿಯವರು ಆರೋಗ್ಯದ ಕಡೆ ನಿರ್ಲಕ್ಷ್ಯ ಮಾಡುವಂತಿಲ್ಲ, ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳ ಕಡೆ ಗಮನಹರಿಸುವುದು ಮುಖ್ಯವಾಗಿದೆ. ಇಲ್ಲದಿದ್ದರೆ ಸಮಸ್ಯೆ ಉಲ್ಬಣವಾಗುತ್ತದೆ. ಯಾರನ್ನೂ ಅತಿಯಾಗಿ ನಂಬದಿರಿ, ನಿಮ್ಮವರಿಂದಲೇ ನೀವು ಅಪನಿಂದನೆ, ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಸ್ವಲ್ಪಮಟ್ಟಿನ ಪ್ರಗತಿ ಇರಲಿದೆ, ಪುಸ್ತಕ ವ್ಯಾಪಾರಿಗಳಿಗೆ ಯಥೇಚ್ಚ ಲಾಭವಿರುತ್ತದೆ, ಆಟೋರಿಕ್ಷಾ, ಕ್ಯಾಬ್ ಚಾಲಕರಿಗೆ ಹೇಳಿಕೊಳ್ಳುವಷ್ಟು ಲಾಭ ದೊರೆಯುವುದಿಲ್ಲ.
ಕನ್ಯಾ ರಾಶಿ
ವ್ಯಾಪಾರದಲ್ಲಿ ಲಾಭ ಇರುತ್ತದೆ, ಟ್ರಾವೆಲಿಂಗ್ ಬಿಸ್ನೆಸ್ ಇರುವವರಿಗೆ ಇಂದು ಶುಭ ದಿನನಾಗಿರುತ್ತದೆ. ಲಕ್ಷ್ಮೀ ಅನುಗ್ರಹ ನಿಮ್ಮ ಮೇಲೆ ಇರಲಿದೆ. ದೂರದ ಪ್ರಯಾಣ ಮಾಡುವವರು ಇಷ್ಟದೇವರನ್ನು ಪ್ರಾರ್ಥಿಸಿ ಹೊರಟರೆ ಯಾವುದೇ ರೀತಿಯ ಅಡೆತಡೆಗಳು ಸಂಭವಿಸುವುದಿಲ್ಲ. ಕುಟುಂಬದಲ್ಲಿದ್ದ ಭಿನ್ನಾಭಿಪ್ರಾಯ ದೂರವಾಗಿ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಏರ್ಪಡುತ್ತದೆ.
ತುಲಾ ರಾಶಿ
ಎಲ್ಲಾ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ ಇರಲಿದೆ, ಇದರಿಂದ ಮನಸ್ಸಿಗೆ ಖುಷಿ ಎನಿಸಿದರೂ ಮನೆಯಲ್ಲಿ ಸಣ್ಣ ಪುಟ್ಟ ಮನಸ್ತಾಪದಿಂದ ಕಿರಿಕಿರಿ ಇರುತ್ತದೆ. ನಿಮಗೆ ಇಷ್ಟವಾದ ವ್ಯಕ್ತಿಗಳೊಂದಿಗೆ ಭೋಜನ ಕೂಟದಲ್ಲಿ ಪಾಲ್ಗೊಳ್ಳುವಿರಿ, ಇದರಿಂದ ಮನಸ್ಸಿಗೆ ಸಮಾಧಾನ ಎನಿಸುತ್ತದೆ. ಹೊಸ ಕೆಲಸಗಳನ್ನು ಮಾಡುವ ಉತ್ಸಾಹ ಇರುತ್ತದೆ, ಹಣ, ಹೆಸರು ಸಂಪಾದನೆ ಮಾಡಲು ನಾನಾ ಪ್ರಯತ್ನ ಮಾಡುವಿರಿ, ಆದರೆ ಯಾವುದೇ ಕೆಲಸ ಮಾಡುವಾಗ ಎಚ್ಚರಿಕೆಯಿಂದ ಇರಿ. ಕೃಷಿ ಕ್ಷೇತ್ರದಲ್ಲಿ ಹೂಡಿಕೆ ಮಾಡುವುದನ್ನು ಮುಂದೂಡಿ.
ವೃಶ್ಚಿಕ ರಾಶಿ
ನೀವು ಆಡುವ ಮಾತುಗಳೇ ನಿಮಗೆ ಸಮಸ್ಯೆ ತಂದೊಡ್ಡಬಹುದು, ಆದ್ದರಿಂದ ಯಾರೊಂದಿಗೆ ಮಾತನಾಡುವಾಗಲೂ ಬಹಳ ಎಚ್ಚರಿಕೆಯಿಂದ ಇರಿ. ಮನೆಯಲ್ಲಿ ಕಿರಿಕಿರಿ ಇರಲಿದೆ. ಆದರೂ ವ್ಯಾಪಾರ ಸ್ಥಳದಲ್ಲಿ ಮನಸ್ಸಿಗೆ ಖುಷಿ ಕೊಡುವಂಥ ಘಟನೆಗಳು ನಡೆಯಲಿವೆ. ಗೃಹಿಣಿಯರು ಮನೆ ಕೆಲಸದ ಜಂಜಾಟ ಬಿಟ್ಟು ಹೊರಗಿನ ಪರಿಸರದೊಂದಿಗೆ ಖುಷಿಯಿಂದ ಸಮಯ ಕಳೆಯಲಿದ್ದೀರಿ.
ಧನು ರಾಶಿ
ಆರೋಗ್ಯದಲ್ಲಿ ಏರುಪೇರಾಗಲಿದೆ, ಸಣ್ಣ ಪುಟ್ಟ ಸಮಸ್ಯೆಗಳನ್ನು ನಿರ್ಲಕ್ಷಿಸದಿರಿ, ಮನಸ್ಸಿಗೆ ಹತ್ತಿರವಾದ ವ್ಯಕ್ತಿಗಳನ್ನು ಭೇಟಿ ಮಾಡುವುದರಿಂದ ತೃಪ್ತಿ ದೊರೆಯುತ್ತದೆ. ಇಷ್ಟವಾದ ಸ್ಥಳಕ್ಕೆ ಭೇಟಿ ನೀಡುವುದರಿಂದ ಮನಸ್ಸು ತಿಳಿಯಾಗುತ್ತದೆ. ವ್ಯಾಪಾರದಲ್ಲಿ ಹೆಚ್ಚಿನ ಲಾಭ ದೊರೆಯಲಿದೆ, ಆದರೂ ಬಹಳ ಎಚ್ಚರಿಕೆಯಿಂದ ಹೆಜ್ಜೆ ಹಾಕಬೇಕು. ಹಣಕಾಸಿನ ವಿಚಾರದಲ್ಲಿ ಬಹಳ ಜಾಗರೂಕರಾಗಿರಬೇಕು. ಅತಿಯಾದ ಆತ್ಮವಿಶ್ವಾಸ ಬೇಡ.
ಮಕರ ರಾಶಿ
ಕೆಲಸಗಳಲ್ಲಿ ಅಭಿವೃದ್ಧಿ ಇರಲಿದೆ, ವ್ಯಾಪಾರದಲ್ಲಿ ಲಾಭ ಇದ್ದರೂ ಮನಸ್ಸಿಗೆ ತೃಪ್ತಿ ಇರುವುದಿಲ್ಲ. ಹೊಸ ಕೆಲಸವನ್ನು ಆರಂಭಿಸಬೇಕು ಎಂದುಕೊಂಡಿರುವವರು ಇಂದು ಮುಂದುವರೆಯಬಹುದು, ಇದರಿಂದ ಯಶಸ್ಸು, ಲಾಭ ದೊರೆಯಲಿದೆ. ಕೆಲಸದ ಒತ್ತಡದಿಂದ ಆರೋಗ್ಯ ಸಮಸ್ಯೆಗಳು ಉಲ್ಬಣಿಸಬಹುದು. ಆದ್ದರಿಂದ ಆರೋಗ್ಯದ ಕಡೆ ಗಮನ ಹರಿಸಿ.
ಕುಂಭ ರಾಶಿ
ಸ್ವಲ್ಪ ಮಟ್ಟಿಗೆ ಹಣ ಕಳೆದುಕೊಳ್ಳಲಿದ್ದೀರಿ. ಇದರಿಂದ ಇಡೀ ದಿನ ಗೊಂದಲದಿಂದ ಕೂಡಿರುತ್ತದೆ, ಆದ್ದರಿಂದ ಜಾಗರೂಕರಾಗಿರಿ. ಆದರೆ ಕೌಟುಂಬಿಕ ವಿಚಾರದಲ್ಲಿ ಇಂದು ಸಂತೋಷದ ದಿನವಾಗಿರುತ್ತದೆ. ಕುಟುಂಬದಲ್ಲಿ ನೀವು ಮಾಡುವ ಪ್ರತಿ ಕೆಲಸಕ್ಕೂ ಉತ್ತಮ ಸಹಕಾರ ದೊರೆಯಲಿದೆ. ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ಖುಷಿಯಾಗಲಿದೆ. ಹೊಸ ಬಿಸ್ನೆಸ್ ಆರಂಭಿಸಲು ಯೋಚಿಸುವಿರಿ.
ಮೀನ ರಾಶಿ
ಕೆಲಸದಲ್ಲಿ ಸ್ವಲ್ಪ ಮಟ್ಟಿನ ಪ್ರಗತಿ ಇರಲಿದೆ. ಕೆಲಸದ ಒತ್ತಡ ಹೆಚ್ಚಾಗಿರುತ್ತದೆ, ದಿನೇ ದಿನೇ ಶತ್ರುಗಳ ವಿರೋಧ ಹೆಚ್ಚಾಗುತ್ತದೆ. ಭಿನ್ನಾಭಿಪ್ರಾಯ ಇರಲಿದೆ. ಆಡುವ ಮಾತುಗಳ ಬಗ್ಗೆ ನಿಗಾ ಇರಲಿದೆ. ಕೆಲವು ಕೆಲಸಗಳು ನಿಧಾನವಾಗಿ ಸಾಗಲಿದೆ. ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಳ್ಳಬೇಕು ಎಂದುಕೊಂಡಿರುವವರು, ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಬೇಕು ಎಂಬ ಪ್ಲ್ಯಾನ್ ಇರುವವರು ಈ ದಿನ ನಷ್ಟ ಅನುಭವಿಸುವ ಸಾಧ್ಯತೆ ಇದೆ. ಆದ್ದರಿಂದ ಕೆಲಸವನ್ನು ಮುಂದೂಡುವುದು ಒಳ್ಳೆಯದು.
ಶ್ರೀ ದರ್ಶನ್ ದೀಕ್ಷಿತ್ ಗುರೂಜಿಯನ್ನು ನೇರವಾಗಿ ಭೇಟಿ ಮಾಡಲು 9902595318, 9041874187 ಮೊಬೈಲ್ ನಂಬರನ್ನು ಸಂಪರ್ಕಿಸಿ.



