ಇಂದು 25 ಏಪ್ರಿಲ್ 2025 ಶುಕ್ರವಾರ. ವಿಶ್ವವಸು ಸಂವತ್ಸರ, ಉತ್ತರಾಯಣ, ವಸಂತ ಋತು, ಚೈತ್ರ ಮಾಸ, ಕೃಷ್ಣ ಪಕ್ಷ, ದ್ವಾದಶಿ. ಬೆಳಗ್ಗೆ 10:48 ರಿಂದ 12:21 ವರೆಗೆ ರಾಹುಕಾಲವಿರುತ್ತದೆ. ಮೀನ ರಾಶಿಯವರು ಹಣದ ವಿಚಾರದಲ್ಲಿ ಎಚ್ಚರಿಕೆಯಿಂದ ಇರಬೇಕು. ಮೀನ ರಾಶಿಯವರಿಗೆ ಕೆಲಸದ ಒತ್ತಡ ಹೆಚ್ಚಾಗಲಿದೆ.
ಮೇಷ ರಾಶಿ
ಮೇಷ ರಾಶಿಯವರಿಗೆ ಕೆಲಸದಲ್ಲಿ ಹೆಚ್ಚು ತಿರುಗಾಟವಿರುತ್ತದೆ, ಅನಾವಶ್ಯಕವಾಗಿ ಖರ್ಚು ಮಾಡಿ ಹಣ ಕಳೆದುಕೊಳ್ಳುವಿರಿ, ಆದ್ದರಿಂದ ಹಣದ ವಿಚಾರದಲ್ಲಿ ಎಚ್ಚರಿಕೆಯಿಂದ ಇರಿ. ಮನಸ್ಸಿಗೆ ಇಷ್ಟವಾದ ಕೆಲಸ ಮಾಡುವಿರಿ, ಕೃಷಿಕರಿಗೆ ಯಥೇಚ್ಛ ಲಾಭ ದೊರೆಯುತ್ತದೆ.
ವೃಷಭ ರಾಶಿ
ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳುವ ದಿನವಿದು. ಇದರಿಂದ ಮನಸ್ಸಿಗೆ ಖುಷಿಯಾಗಲಿದೆ. ಶತ್ರುಗಳ ವಿರೋಧ ಉಂಟಾಗಲಿದೆ, ಕೆಲಸದಲ್ಲಿ ಅಡೆತಡೆಗಳು ಉಂಟಾಗಲಿದೆ, ಜಾಗ್ರತೆಯಿಂದ ಇರಿ.
ಮಿಥುನ ರಾಶಿ
ಮಾಡುವ ಕೆಲಸದಲ್ಲಿ ಒಳ್ಳೆ ಹೆಸರು ಗಳಿಸಲಿದ್ದೀರಿ, ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲ, ಕೀರ್ತಿ ದೊರೆಯುತ್ತದೆ. ಮನಸ್ಸಿಗೆ ನೆಮ್ಮದಿ ಇರಲಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ. ಉತ್ಸಾಹ ಹೆಚ್ಚಾಗಲಿದೆ, ವ್ಯಾಪಾರದಲ್ಲಿ ಲಾಭ ದೊರೆಯಲಿದೆ.
ಕಟಕ ರಾಶಿ:
ಕೆಲಸಗಳಲ್ಲಿ ಹಿನ್ನಡೆ ಇರಲಿದೆ, ವ್ಯಾಪಾರಸ್ಥರು ದ್ವಿಗುಣ ಲಾಭ ಪಡೆಯಲಿದ್ದಾರೆ. ಫೋಟೋಗ್ರಫಿ, ಇವೆಂಟ್ ಮ್ಯಾನೇಜ್ಮೆಂಟ್ ಕೆಲಸ ಮಾಡುವವರಿಗೆ ಹಣ ಹರಿದು ಬರಲಿದೆ. ಮನಸ್ಸಿಗೆ ಇಷ್ಟವಾದಂಥ ಮೃಷ್ಟಾನ್ನ ಭೋಜನ ಮಾಡಲಿದ್ದೀರಿ. ಇದರಿಂದ ಇಡೀ ದಿನ ಖುಷಿಯಾಗಿರುವಿರಿ.
ಸಿಂಹ ರಾಶಿ
ಆರೋಗ್ಯದಲ್ಲಿ ಸಣ್ಣ ಪುಟ್ಟ ಸಮಸ್ಯೆ ಕಾಡುತ್ತದೆ, ಮನೆಯಲ್ಲಿ ಯಾವುದೋ ವಿಚಾರಕ್ಕೆ ಕಿರಿಕಿರಿಯಾಗಲಿದೆ. ವ್ಯಾಪಾರದಲ್ಲಿ ಪ್ರಗತಿ ಇರಲಿದೆ, ಸಮಾಜಸೇವೆ, ರಾಜಕೀಯದಲ್ಲಿ ಗುರುತಿಸಿಕೊಳ್ಳಲು ಬಯಸುತ್ತಿರುವವರಿಗೆ ದಿನ ಚೆನ್ನಾಗಿದೆ.
ಕನ್ಯಾ ರಾಶಿ
ಎಲ್ಲಾ ಕೆಲಸಗಳಲ್ಲೂ ಅಭಿವೃದ್ಧಿ ಕಾಣಲಿದ್ದೀರಿ, ಸಹೋದ್ಯೋಗಿಗಳೊಂದಿಗೆ ಭಿನ್ನಾಭಿಪ್ರಾಯ ಇರಲಿದೆ, ಕೃಷಿಕರು ಹಣ ಕಳೆದುಕೊಳ್ಳುವ ಸಾಧ್ಯತೆ ಇದೆ, ಜಾಗ್ರತೆಯಿಂದ ಇರಿ. ಯಾರಿಗೂ ಸಾಲ ನೀಡದಿರಿ, ಇಲ್ಲದಿದ್ದರೆ ಆರ್ಥಿಕ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ.
ತುಲಾ ರಾಶಿ
ಈ ದಿನ ಸಂತೋಷದ ದಿನವಾಗಿದೆ. ಎಲ್ಲಾ ಕೆಲಸದಲ್ಲೂ ಯಶಸ್ಸು ಗಳಿಸುವಿರಿ, ಸಂಬಂಧಿಕರ ಮಾತುಗಳಿಂದ ಮನಸ್ಸಿಗೆ ಬೇಸರ ಉಂಟಾಗುತ್ತದೆ. ದೂರದ ಪ್ರಯಾಣ ಮಾಡುವ ಮೂಲಕ ಹಾಗೂ ಇಷ್ಟದೇವರ ದರ್ಶನ ಮಾಡುವ ಮೂಲಕ ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ.
ವೃಶ್ಚಿಕ ರಾಶಿ
ದುಡಿಯುವ ಶಕ್ತಿ ಇದ್ದರೂ, ಜನರೊಂದಿಗೆ ಉತ್ತಮ ಬಾಂಧವ್ಯ ಇದ್ದರೂ ಮನಸ್ಸಿಗೆ ಒಂದು ರೀತಿಯ ಕಸಿವಿಸಿ ಇರುತ್ತದೆ. ಕಲಾಕ್ಷೇತ್ರದಲ್ಲಿ ಇರುವವರಿಗೆ ದಿನ ಚೆನ್ನಾಗಿದೆ. ಶಿಕ್ಷಣ ಸಂಸ್ಥೆ ಆರಂಭಿಸುವ ಆಸೆ ಇರುವವರಿಗೆ ಇಂದು ಶುಭ ಸುದ್ದಿ ದೊರೆಯಲಿದೆ.
ಧನು ರಾಶಿ
ಆರೋಗ್ಯ ಸಮಸ್ಯೆಗಳಿದ್ದರೆ ಬಹಳ ಜಾಗರೂಕರಾಗಿರಬೇಕು, ಜನಗಳ ವಿರೋಧ ಎದುರಿಸುವಿರಿ, ಆದರೆ ಭಯ ಪಡುವ ಅಗತ್ಯವಿಲ್ಲ. ಸತ್ಯದ ಮಾರ್ಗದಲ್ಲಿ ಮುಂದುವರೆದರೆ ಯಾವುದೇ ಸಮಸ್ಯೆ ಇದ್ದರೂ, ಅಪನಿಂದನೆ ಇದ್ದರೂ ಅದು ಪರಿಹಾರವಾಗುತ್ತದೆ. ಸಾಲದ ಸುಳಿಯಿಂದ ಹೊರ ಬರಲಿದ್ದೀರಿ. ಆತ್ಮವಿಶ್ವಾಸ ಹೆಚ್ಚಲಿದೆ.
ಮಕರ ರಾಶಿ
ವ್ಯಾಪಾರದಲ್ಲಿ ಅಧಿಕ ಲಾಭ ದೊರೆಯುತ್ತದೆ, ಹೊಸ ಕೆಲಸದಲ್ಲಿ ಉತ್ಸಾಹ ವೃದ್ಧಿಯಾಗುತ್ತದೆ. ಮನಸ್ಸಿನಲ್ಲಿ ಗೊಂದಲವಿರುತ್ತದೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಇರಲಿದೆ, ಆರೋಗ್ಯದಲ್ಲಿ ಏರುಪೇರಾಗಲಿದೆ. ಮನಸ್ಸಿಗೆ ಇಷ್ಟವಾಗುವ ಘಟನೆಗಳು ಸಂಭವಿಸಲಿದೆ.
ಕುಂಭ ರಾಶಿ
ಅಧಿಕ ಖರ್ಚು ಇರುತ್ತದೆ, ಆದಾಯಕ್ಕಿಂದ ಖರ್ಚು ಹೆಚ್ಚಾಗಿರುತ್ತದೆ. ಯೋಚನೆ ಮಾಡಿ ಹಣ ಖರ್ಚು ಮಾಡಿ. ನೀವು ಮಾಡುವ ಕೆಲಸದಲ್ಲಿ ಕುಟುಂಬದವರ ಸಹಕಾರ ಇರುತ್ತದೆ. ಸ್ನೇಹಿತರೊಂದಿಗೆ ದೂರದ ಪ್ರಯಾಣ ಮಾಡುವಿರಿ, ಇದರಿಂದ ಮನಸ್ಸಿಗೆ ಖುಷಿಯಾಗಲಿದೆ.
ಮೀನ ರಾಶಿ
ಅತಿಯಾದ ಬುದ್ದಿವಂತಿಕೆಯಿಂದ ಅತಿಯಾದ ಸಮಸ್ಯೆ ಎದುರಿಸುತ್ತೀರಿ, ಜಾಗ್ರತೆಯಿಂದಿರಿ, ಹಣಕಾಸಿನ ವ್ಯವಹಾರದಲ್ಲಿ ಯೋಚನೆ ಮಾಡಿ ಮುಂದುವರೆಯಿರಿ, ಯಾರಿಗೂ ಸಾಲ ನೀಡಬೇಡಿ, ಕೆಲಸದ ಒತ್ತಡ ಹೆಚ್ಚಾಗಲಿದೆ, ಇದರಿಂದ ಆರೋಗ್ಯ ಸಮಸ್ಯೆ ಉಲ್ಬಣವಾಗಬಹುದು.
ಶ್ರೀ ದರ್ಶನ್ ದೀಕ್ಷಿತ್ ಗುರೂಜಿಯನ್ನು ನೇರವಾಗಿ ಭೇಟಿ ಮಾಡಲು 9902595318, 9041874187 ಮೊಬೈಲ್ ನಂಬರನ್ನು ಸಂಪರ್ಕಿಸಿ.



