ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಪಕ್ಷಾಂತರ ಮಾಡೋದು ರಾಜಕಾರಣಿಗಳಿಗೆ ಕಾಮನ್ ಆಗಿದೆ. ಈ ಹಿಂದೆ ಕೂಡ ಅನೇಕರು ಈ ರೀತಿ ಪಕ್ಷದಿಂದ ಪಕ್ಷಕ್ಕೆ ಹೋಗಿದ್ದಾರೆ. ಇದರ ಮಧ್ಯೆ ಒಂದು ಪಕ್ಷದಲ್ಲಿ ಇದ್ದು ಮತ್ತೊಂದು ಪಕ್ಷದ ನಾಯಕರ ಕುರಿತು ಮಾತನಾಡುವುದು ಸಾಮಾನ್ಯವಾಗಿ ಬಿಟ್ಟಿದೆ. ಅದರಿಂದ ಅನೇಕರು ಹೊರತಾಗಿಲ್ಲ. ಈಗ ಜೆಡಿಎಸ್ ಪಕ್ಷದಿಂದ ಅಂತರ ಕಾಯ್ದುಕೊಂಡಿರೋ ಜಿಟಿಡಿ ಹೊಸ ವರಸೆ ತೋರಿಸಿದ್ದಾರೆ.
ಕಳೆದ ಹಲವು ತಿಂಗಳಿಂದ ಜೆಡಿಎಸ್ ನಾಯಕರು ಹಾಗೂ ಪಕ್ಷದಿಂದ ದೂರ ಉಳಿದಿರುವ ಜೆಡಿಎಸ್ ಶಾಸಕ ಜಿಟಿ ದೇವೇಗೌಡರು ಸಿದ್ದರಾಮಯ್ಯ ಪರ ಮಾತಾಡ್ತಾ ಇರೋದು ಆಶ್ಚರ್ಯ ಏನಲ್ಲ. ಆಗಾಗ್ಲೇ ವೇದಿಕೆ ಮೇಲೆ ಸಿದ್ದರಾಮಯ್ಯ ಪರವಾಗಿ ಬ್ಯಾಟ್ ಬೀಸುತ್ತಲೇ ಬಂದಿದ್ದಾರೆ. ಅಷ್ಟೆ ಅಲ್ಲ ಇದು ಜೆಡಿಎಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದರು. ಈಗ ಮತ್ತೊಮ್ಮೆ ಕಾಂಗ್ರೆಸ್ ನಾಯಕರನ್ನ ಹೊಗಳಿ ಜೆಡಿಎಸ್ ನಾಯಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಇಂದಿನಿಂದ ಬಜೆಟ್ ಅಧಿವೇಶನ ಆರಂಭ ಆಗಿದೆ. ಇಂದು ಸದನದಲ್ಲಿ ಸಂತಾಪ ಸೂಚನೆ ಮಾಡಲಾಯ್ತು. ಈ ವೇಳೆ ಮಾಜಿ ಪಿಎಂ ಮನಮೋಹನ್ ಸಿಂಗ್ ಗೆ ಸಂತಾಪ ಸೂಚನೆ ಮಾಡಲಾಯ್ತು. ಸಂತಾಪ ಸೂಚನೆಗೆ ಅಂತ ಎದ್ದು ನಿಂತ ಮಾತನಾಡಲು ಜಿಟಿ ದೇವೇಗೌಡರ ಪ್ರಾರಂಭ ಮಾಡಿದರು. ಮನಮೋಹನ್ ಸಿಂಗ್ ಬಗ್ಗೆ ಮಾತನಾಡುತ್ತಾ ಸೋನಿಯಾಗಾಂಧಿ ಹಾಡಿ ಹೊಗಳಿದ್ದಾರೆ.
ಜಿಟಿ ದೇವೇಗೌಡರು ಆಗಿಂದಾಗ್ಲೇ ಕಾಂಗ್ರೆಸ್ ನಾಯಕರು ಹಾಗೂ ಸಿಎಂ ಸಿದ್ದರಾಮಯ್ಯ ಪರವಾಗಿ ಮಾತನಾಡುತ್ತಿರೋ ಜಿಟಿ ದೇವೇಗೌಡರು, ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಇದೀಗ ಮತ್ತೊಮ್ಮೆ ಸದನದಲ್ಲೇ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿಯನ್ನ ಹೊಗಳಿದ್ದಾರೆ. ಮನಮೋಹನ್ ಸಿಂಗ್ ಅವರು ಆರ್ಥಿಕ ತಜ್ಞರಾಗಿದ್ದವರು. ಇಡೀ ದೇಶವನ್ನ ಅಭಿವೃದ್ಧಿ ಪಥದಲ್ಲಿ ತೆಗೆದುಕೊಂಡು ಹೋಗಲು ಯೋಜನೆ ರೂಪಿಸಿ ಜಾರಿಗೆ ತಂದವರು.
ಅವರು ಯಾವುದೇ ಚುನಾವಣೆಯಲ್ಲಿ ಸ್ಪರ್ಧೆ ಮಾಡಿರಲಿಲ್ಲ. ಅಂತವರನ್ನ ಗುರಿತಿಸಿ ಪ್ರಧಾನಿ ಮಾಡಿದ್ದು ಸೋನಿಯಾ ಗಾಂಧಿ. ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ಅಂದು ಅವರು ಹಾಗೆ ಮಾಡದೇ ಇದ್ದರೆ ಆರ್ಥಿಕ ಪ್ರಗತಿ ಆಗುತ್ತಿಲಿಲ್ಲ. ಸೋನಿಯಾ ಗಾಂಧಿ ಪ್ರಧಾನಿ ಆಗಲಿ ಅಂತ ಇಡೀ ದೇಶ ಎದುರು ನೋಡ್ತಾ ಇತ್ತು. ಅಂತಹ ಸಂದರ್ಭದಲ್ಲಿ ಅಂತ ನಾಯಕನನ್ನ ಗುರಿತಿಸಿದ್ರು. ಅಂಬೇಡ್ಕರ್ ಯಾವ ರೀತಿ ದೇಶಕ್ಕೆ ಸಂವಿಧಾನ ಕೊಟ್ರೋ ಅದರ ಪರಿಣಾಮವಾಗಿ ಎಲ್ಲಾ ಆದರ್ಶಗಳನ್ನು ಜಾರಿಗೆ ತಂದಿದ್ದು ಮನಮೋಹನ್ ಸಿಂಗ್ ಎಂದು ಹೇಳಿದರು. ಈ ವೇಳೆ ಕಾಂಗ್ರೆಸ್ ನಾಯಕರು ಟೇಬಲ್ ತಟ್ಟೋ ಮೂಲಕ ಅವರ ಮಾತಿಗೆ ಸಹಮತ ವ್ಯಕ್ತಪಡಿಸಿದರು.
ಸೋನಿಯಾ ಗಾಂಧಿಯವರನ್ನ ಹಾಗೂ ಮನಮೋಹನ್ ಸಿಂಗ್ ಹೊಗಳುವ ಮೂಲಕ ತಾನು ಕಾಂಗ್ರೆಸ್ ಕಡೆ ವಾಲಿದ್ದೇನೆ ಅನ್ನೋದನ್ನ ಮಗದೊಂದು ಸಲ ಜೆಡಿಎಸ್ ನಾಯಕರಿಗೆ ತಲುಪಿಸಿದ್ದಾರೆ ಜಿಟಿ ದೇವೇಗೌಡರು. ಜಿಟಿ ದೇವೇಗೌಡರು ಮಾತನಾಡುವಾಗ ಜೆಡಿಎಸ್ ನ ಎಲ್ಲಾ ಶಾಸಕರು ಅಲ್ಲಿಯೇ ಇದ್ಧದ್ದು ಒಂದು ರೀತಿ ಮುಜುಗರಕ್ಕೆ ಒಳಗಾಗುವಂತೆ ಮಾಡಿದ್ದಂತೂ ಸುಳ್ಳಲ್ಲ.