ಬದುಕು ಯಾವಾಗ ಬದಲಾಗುತ್ತದೋ ಹೇಳುವುದಕ್ಕೆ ಸಾಧ್ಯವಿಲ್ಲ. ಇಂದು ಬಡವನಾಗಿದ್ದವನು ರಾತ್ರೋರಾತ್ರಿ ಕೋಟ್ಯಾಧಿಪತಿಯಾಗಬಲ್ಲ. ಇಂತಹ ಉದಾಹರಣೆಗಳು ಕೇರಳದಲ್ಲಿ ಹೇರಳವಾಗಿ ಸಿಗುತ್ತದೆ. ಅದಕ್ಕೆ ಪ್ರಮುಖ ಕಾರಣ ಅಲ್ಲಿನ ಲಾಟರಿ ಟಿಕೆಟ್ ವ್ಯವಹಾರ. ಇದೀಗ ಅಂತಹದ್ದೇ ಒಂದು ಘಟನೆ ಕೇರಳದಲ್ಲಿ ನಡೆಸಿದ್ದು, ಪೌರ ಕಾರ್ಮಿಕ ಮಹಿಳೆಯರು ಮಾನ್ಸೂನ್ ಲಾಟ್ರಿಯಲ್ಲಿ ಬರೋಬ್ಬರಿ 10 ಕೋಟಿ ರೂಪಾಯಿ ಬಹುಮಾಬ ಗೆದ್ದಿದ್ದಾರೆ. ಈ ಬಗೆಗಿನ ಮಾಹಿತಿ ಇಲ್ಲಿದೆ.

ಕೇರಳದ ಮಹಾನಗರ ಪಾಲಿಕೆಯ ‘ಹರಿತಾ ಕರ್ಮಸೇನಾ’ ಎಂಬ ಪ್ಲಾಸ್ಟಿಕ್ ವಿಂಗಡನಾ ಮಹಿಳಾ ತಂಡಕ್ಕೆ ಕೇರಳ ಲಾಟ್ರಿಯಿಂದ ಬಂಪರ್ ಬಹುಮಾನ ಲಭಿಸಿದೆ. ಈ ತಂಡದ ಒಟ್ಟು 11 ಮಂದಿ ಮಹಿಳಾ ಸದಸ್ಯರು ತಲಾ 25ರೂ ಹಾಕಿ 250ರೂಪಾಯಿ ಬೆಲೆಯ ಮಾನ್ಸೂಲ್ ಲಾಟ್ರಿ ಖರೀದಿ ಮಾಡಿದ್ದರು. ಇದೀಗ ಈ ಲಾಟ್ರಿ ಇದೇ ತಂಡಕ್ಕೆ ಲಭಿಸಿದ್ದು, ಮಹಿಳಾ ಮಣಿಗಳು ಬರೋಬ್ಬರಿ 10 ಕೋಟಿ ಬಹುಮಾನ ಪಡೆದಿದ್ದಾರೆ.
ಈ ಹಿಂದೆ ಇದೇಮ ಹಿಳೆಯರ ತಂಡ ಓಣಂ ಸಂಧರ್ಭದಲ್ಲಿ ಲಾಟ್ರಿ ಖರೀದಿಸಿ 7,500 ರೂಪಾಯಿ ಗೆದ್ದಿದ್ದರು. ಅದರಂತೆ ಈ ಬಾರಿ ಮಾನ್ಸೂನ್ ಬಂಪರ್ ಲಾಟರಿ ಗೆಲ್ಲೋಣ ಅಂದುಕೊಂಡು 250 ರೂಪಾಯಿಯ ಲಾಟರಿ ಖರೀದಿಸಿದ್ದರು. ಪ್ರತಿಯೊಬ್ಬರು ಒಂದೊಂದು ಲಾಟರಿ ಖರೀದಿ ಮಾಡಬೇಕು ಅಂದ್ಕೊಂಡಿದ್ದರು. ಆದರೆ ಅವರ ಬಳಿ ಅಷ್ಟೊಂದು ಹಣ ಇರಲಿಲ್ಲ. ಹೀಗಾಗಿ 25 ರೂಪಾಯಿಯಂತೆ 250 ರೂಪಾಯಿ ಹೊಂದಿಸಿ ಖರೀದಿಸಿದ್ದು, ಬಂಪರ್ ಬಹುಮಾನ ಲಭಿಸಿದೆ. ತೆರಿಗೆ ಕಡಿತವಾಗಿ ಪ್ರತಿ ಮಹಿಳೆಗೆ 90 ಲಕ್ಷ ಸಿಗಲಿದೆ ಎಂದು ವರದಿಯಾಗಿದೆ.