ಟೀಂ ಇಂಡಿಯಾದ ವಿಶ್ವಕಪ್ ವೇಳಾಪಟ್ಟಿಯನ್ನು ಮತ್ತೆ ಬಿಡುಗಡೆ ಮಾಡಲಾಗಿದೆ. ಅದರಲ್ಲಿ ಕೆಲವು ಪಂದ್ಯಗಳು ಬದಲಾವಣೆಯಾಗಿದೆ, ಭಾರತದ ಒಂಬತ್ತು ಪಂದ್ಯಗಳಲ್ಲಿ ಏಳು ಮ್ಯಾಚ್ ಗಳು ಮೊದಲೇ ನಿರ್ಧಾರವಾದ ವೇಳಾಪಟ್ಟಿಯಂದೇ ನಡೆಯಲಿದೆ, ಆದರೆ ಎರಡು ಮ್ಯಾಚ್ ಗಳ ವೇಳಾಪಟ್ಟಿಯನ್ನು ಮಾತ್ರ ಬದಲಾವಣೆ ಮಾಡಲಾಗಿದೆ. ಈಗ ಹೊಸದಾಗಿ ಬಂದಿರುವ ವೇಳಾಪಟ್ಟಿಯನ್ನು ಈ ಮಾಹಿತಿಯಲ್ಲಿ ತಿಳಿಸಲಿದ್ದೇವೆ.

ಅಕ್ಟೋಬರ್ 8 ರಂದು ಆಸ್ಟ್ರೇಲಿಯಾ ವಿರುದ್ಧ ಚೆನ್ನೈನಲ್ಲಿ,
ನಂತರ ಅಕ್ಟೋಬರ್ 11ರಂದು ಅಫ್ಘಾನಿಸ್ಥಾನ ವಿರುದ್ಧ ದೆಹಲಿಯಲ್ಲಿ, ಮೂರನೇ ಪಂದ್ಯ ಅಕ್ಟೋಬರ್ 14 ಪಾಕಿಸ್ತಾನದ ವಿರುದ್ಧ ಅಹಮದಾಬಾದ್ ನಲ್ಲಿ, ಈ ಪಂದ್ಯ ಮೊದಲು ಅಕ್ಟೋಬರ್ 15ರಂದು ನಿಗದಿಯಾಗಿತ್ತು ಆದರೆ ದಸರಾ ಹಬ್ಬದ ಪ್ರಯುಕ್ತ ನವರಾತ್ರಿ ಶುರುವಾಗುವುದರಿಂದ ಅದನ್ನು ಬದಲಾವಣೆ ಮಾಡಿ ಅಕ್ಟೋಬರ್ ಹದಿನಾಲ್ಕಕ್ಕೆ ಪ್ರೀಪೋನ್ ಮಾಡಲಾಯಿತು.
ನಂತರ ನಾಲ್ಕನೇ ಪಂದ್ಯ ಅಕ್ಟೋಬರ್ 19ರಂದು ಬಾಂಗ್ಲಾದೇಶದ ವಿರುದ್ಧ ಪುಣೆಯಲ್ಲಿ ನಡೆಯಲಿದೆ,
ಐದನೇ ಪಂದ್ಯ 22 ರಂದು ನ್ಯೂಜಿಲೆಂಡ್ ವಿರುದ್ಧ ಧರ್ಮಾಶಾಲಾದಲ್ಲಿ ನಡೆಯಲಿದೆ,
ನಂತರ ಆರನೇ ಪಂದ್ಯ ಅಕ್ಟೋಬರ್ 29 ಲಕ್ನೋದಲ್ಲಿ ನಡೆಯಲಿದೆ,
ಏಳನೇ ಪಂದ್ಯ ನವೆಂಬರ್ 2 ಶ್ರೀಲಂಕಾ ವಿರುದ್ಧ ಮುಂಬೈನಲ್ಲಿ ನಡೆಯಲಿದೆ, ಎಂಟನೇ ಪಂದ್ಯ ನವೆಂಬರ್ 5 ಸೌತ್ ಆಫ್ರಿಕಾ ವಿರುದ್ಧ ಕೊಲ್ಕೊತ್ತದಲ್ಲಿ ನಡೆಯಲಿದೆ,
ನಂತರ ನವೆಂಬರ್ 12 ರಂದು ನೆದರ್ ಲ್ಯಾಂಡ್ ವಿರುದ್ಧ ಒಂಬತ್ತನೇ ಪಂದ್ಯ, ಇದು ಕೊನೆಯ ಪಂದ್ಯ, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ, ಈ ಮೊದಲು ನವೆಂಬರ್ 11 ಕ್ಕೆ ಈ ಪಂದ್ಯ ನಿಗದಿಯಾಗಿತ್ತು, ಕಾರಣಾಂತರಗಳಿಂದ ನವೆಂಬರ್ 12 ಕ್ಕೆ ಮುಂದೂಡಲಾಗಿದೆ,
ಹಾಗಾದರೆ ವಿಶ್ವಕಪ್ ನ ವೇಳಾಪಟ್ಟಿಯಲ್ಲಿ ಭಾರತದ ಕಡೆಯಿಂದ ಎರಡು ಬದಲಾವಣೆಯಾಗಿದೆ, ಒಂದು ಪಂದ್ಯ 15 ನೇ ತಾರೀಖು ನಡೆಯಬೇಕಾಗಿದ್ದುದ್ದು ಅದನ್ನು ಪ್ರೀಪೋನ್ ಮಾಡಿ ಅಕ್ಟೋಬರ್ 14 ಕ್ಕೆ ಹಾಕಲಾಗಿದೆ, ಅದು ಪಾಕಿಸ್ತಾನದ ವಿರುದ್ಧ ಅಹಮದಾಬಾದ್ ನಲ್ಲಿ ನಡೆಯಲಿದೆ, ಮತ್ತೆ ನವೆಂಬರ್ 11ಕ್ಕೆ ನಡೆಯಬೇಕಾಗಿದ್ದ ನೆದರ್ ಲ್ಯಾಂಡ್ ವಿರುದ್ಧ ಪಂದ್ಯವನ್ನು ನವೆಂಬರ್ 12ಕ್ಕೆ ಮುಂದೂಡಲಾಗಿದೆ.