ಬಿಗ್ ಬಾಸ್ ಮನೆಯ ಒಳಗೆ ಸಿಕ್ಕಾಪಟ್ಟೆ ಸದ್ದು ಮಾಡಿದ ಸ್ಪರ್ಧಿಗಳಲ್ಲಿ ಚೈತ್ರಾ ಕುಂದಾಪುರ ಸಹ ಒಬ್ಬರು. ಇವರು ತಮ್ಮ ಮಾತಿನಿಂದಲೇ ಸಿಕ್ಕಾಪಟ್ಟೆ ಫೇಮಸ್ ಆದವರು. ಚೈತ್ರಾ ಕುಂದಾಪುರ ಅವರ ಮಾತು ಅಂದ್ರೆ ಸ್ಪರ್ಧಿಗಳು ಮಾತ್ರವಲ್ಲ, ಕಿಚ್ಚ ಸುದೀಪ್ ಅವರು ಸಹ ಟೆನ್ಷನ್ ಮಾಡಿಕೊಳ್ಳುತ್ತಿದ್ದರು. ಸುದೀಪ್ ಅವರು ಚೈತ್ರಾ ಅವರ ಜೊತೆಗೆ ಹಲವಾರು ಬಾರಿ ಗಂಟೆಗಟ್ಟಲೇ ಮಾತನಾಡಿದ್ದು, ಇವರುಗಳಿಗೆ ಹಲವು ಬಾರಿ ಸಾಕಪ್ಪ ಸಾಕು ಎಂದು ಸಹ ಹೇಳಿದ್ದಾರೆ. ಬಿಗ್ ಬಾಸ್ ಮನೆಯೊಳಗೆ ಸಿಕ್ಕಾಪಟ್ಟೆ ಹವಾ ಸೃಷ್ಟಿಸಿದ್ದ ಚೈತ್ರಾ ಕುಂದಾಪುರ ಅವರು ಈಗ ಫುಲ್ ಚೇಂಜ್ ಆಗಿದ್ದಾರೆ. ಇವರ ಚೈತ್ರಾ ಬಿಗ್ ಬಾಸ್ ಬದಲಾವಣೆ ಎಲ್ಲರಿಗೂ ತುಂಬಾ ಇಷ್ಟವಾಗಿದೆ, ನೆಟ್ಟಿಗರು ಸಹ ಚೈತ್ರಾ ಕುಂದಾಪುರ ಅವರನ್ನು ಹೊಗಳುತ್ತಿದ್ದಾರೆ.

ಬಿಗ್ ಬಾಸ್ ಮನೆಯ ಒಳಗೆ, ಚೈತ್ರಾ ಮಾತನಾಡುತ್ತಿದ್ದ ಮಾತಿಗೆ ಯಾರು ಸಹ ಉತ್ತರ ಕೊಡುವುದಕ್ಕೆ ಸಾಧ್ಯ ಆಗುತ್ತಿರಲಿಲ್ಲ. ಆ ಮಟ್ಟಕ್ಕೆ ಇರುತ್ತಿತ್ತು ಅವರ ಮಾತುಗಳು. ಲಾಯರ್ ಜಗದೀಶ್ ಹಾಗೂ ಚೈತ್ರಾ ನಡುವಿನ ಒಂದು ಸಂಭಾಷಣೆ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇನ್ನು ರಜತ್ ಬಂದ ಬಳಿಕ ರಜತ್ ಹಾಗೂ ಚೈತ್ರಾ ಕಾಂಬಿನೇಷನ್ ಯಾವ ರೇಂಜ್ ಗೆ ಸದ್ದು ಮಾಡಿತ್ತು ಎಂದು ಗೊತ್ತೇ ಇದೆ. ರಜತ್ ಚೈತ್ರಾ ಅವರನ್ನು ಬಾಸ್ ಬಾಸ್ ಎಂದು ಕರೆಯುತ್ತಾ ಇದ್ದಿದ್ದು ಎಲ್ಲರಿಗೂ ಸಿಕ್ಕಾಪಟ್ಟೆ ಇಷ್ಟ ಆಗಿತ್ತು. ಹೊರಗಡೆ ದೊಡ್ಡ ದೊಡ್ಡ ಭಾಷಣಗಳಿಂದ ಫೇಮಸ್ ಆಗಿದ್ದ ಚೈತ್ರಾ ಅವರು ಬಿಗ್ ಬಾಸ್ ಮನೆಯಲ್ಲೂ ಸಹ ಮಾತನನ್ನೇ ಬಂಡವಾಳ ಆಗಿ ಇಟ್ಟುಕೊಂಡಿದ್ದರು ಎಂದರೂ ತಪ್ಪಲ್ಲ. ಟಾಸ್ಕ್ ಗಳಲ್ಲಿ ಅಷ್ಟಕ್ಷ್ಟೇ ಆಗಿದ್ದರೂ, ಫಿನಾಲೆ ವರೆಗು ಬಂದಿದ್ದರು.

ಫಿನಾಲೆಗೆ ಇನ್ನು ಕೇವಲ ಎರಡು ವಾರಗಳ ಸಮಯ ಇದೆ ಎನ್ನುವ ವೇಳೆ ಚೈತ್ರಾ ಬಿಗ್ ಬಾಸ್ ಇಂದ ಎಲಿಮಿನೇಟ್ ಆಗಿದ್ದರು. ಚೈತ್ರಾ ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆಗಬಾರದು, ಫಿನಾಲೆ ವರೆಗು ತಲುಪಬೇಕು ಎನ್ನುವುದು ಅವರ ಅಭಿಮಾನಿಗಳ ಆಸೆ ಆಗಿತ್ತು. ಆದರೆ ಚೈತ್ರ ಹೊರಗಡೆ ಬರಬೇಕಾಯಿತು. ಇನ್ನು ಹೊರಗಡೆ ಬಂದ ಮೇಲೆ ಚೈತ್ರಾ ಅವರ ಹವಾ ಏನು ಕಡಿಮೆ ಆಗಿಲ್ಲ. ಈಗ ಕಲರ್ಸ್ ಕನ್ನಡ ವಾಹಿನಿಯ ಬಾಯ್ಸ್ ವರ್ಸಸ್ ಗರ್ಲ್ಸ್ ಶೋಗೆ ಸಹ ಬಂದಿದ್ದಾರೆ. ಇಲ್ಲಿ ಸಹ ಚೈತ್ರಾ ಅವರ ಹವಾ ಮುಂದುವರೆದಿದೆ. ರಜತ್ ಹಾಗೂ ಚೈತ್ರಾ ಕಾಂಬಿನೇಷನ್ ಸಹ ಮುಂದುವರಿದಿದ್ದು, ಜನರಿಗೆ ಬಹಳ ಇಷ್ಟವಾಗಿದೆ. ಇದಷ್ಟೇ ಅಲ್ಲದೇ ಚೈತ್ರಾ ಅವರು ಇನ್ನೊಂದು ಕಾರಣಕ್ಕೆ ಎಲ್ಲರಿಗೂ ಬಹಳ ಇಷ್ಟವಾಗುತ್ತಿದ್ದಾರೆ. ಅದು ಏನು ಎಂದು ಪೂರ್ತಿ ವಿಷಯ ತಿಳಿಯೋಣ..
ಬಿಗ್ ಬಾಸ್ ಶೋನಲ್ಲಿ ಚೈತ್ರಾ ಕುಂದಾಪುರ ಬಹುತೇಕ ಎಲ್ಲಾ ಸಮಯದಲ್ಲೂ ಸಿಕ್ಕಾಪಟ್ಟೆ ಸಿಂಪಲ್ ಆಗಿರುತ್ತಿದ್ದರು. ಒಂದು ಕಾಜಲ್ ಕೂಡ ಹಾಕುತ್ತಿರಲಿಲ್ಲ. ಅಷ್ಟು ಸಿಂಪಲ್ ಆಗಿರುತ್ತಿದ್ದರು. ಇನ್ನು ಕಿಚ್ಚ ಸುದೀಪ್ ಅವರು ಸಹ ಚೈತ್ರಾ ಯಾಕೆ ನೀವು ಕಾಜಲ್ ಕೂಡ ಹಾಕೋದಿಲ್ಲ ಎಂದು ಕೇಳಿದಾಗ, ಎಲ್ಲರೂ ಸಹ ವೀಕೆಂಡ್ ಬಂತು ಅಂದ್ರೆ ಏನಾಗುತ್ತೋ ಅನ್ನೋ ಭಯದಲ್ಲಿ ಹಾಗೆ ಇರ್ತಾರೆ ಎಂದಿದ್ದರು. ಚೈತ್ರಾ ಸಹ ಈ ವಿಷಯಕ್ಕೆ ಬಹಳ ನಕ್ಕಿದ್ದು ಇದೆ. ಆದರೆ ಈಗ ಚೈತ್ರಾ ಫುಲ್ ಚೇಂಜ್ ಆಗಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಸೀರೆ ಹಾಗೂ ಮೇಕಪ್ ಮಾಡುವವರು ಇವರೆಲ್ಲರ ಜೊತೆ ಸಹ ಕೊಲ್ಯಾಬ್ ಮಾಡುವ ಅವಕಾಶ ಚೈತ್ರಾ ಅವರಿಗೆ ಸಿಗುತ್ತಿದ್ದು, ಇವುಗಳಲ್ಲಿ ಮಿಂಚುತ್ತಿದ್ದಾರೆ ಚೈತ್ರಾ.

ಹೌದು, ನೀಲಿ ಬಣ್ಣದ ಮೈಸೂರು ಕ್ರೇಪ್ ಸಿಲ್ಕ್ ಸೀರೆಯಲ್ಲಿ ಚೈತ್ರಾ ಕುಂದಾಪುರ ಅವರು ಮಿಂಚುತ್ತಿದ್ದು, ಕಣ್ಣಿಗೆ ಕಾಡಿಗೆ, ಮುಖಕ್ಕೆ ಸುಂದರವಾದ ಮೇಕಪ್ ಸಹ ಮಾಡಿಕೊಂಡು, ಚೈತ್ರಾ ಅವರು ಮಿಂಚುತ್ತಿದ್ದಾರೆ. ಇವರನ್ನು ನೋಡಿದ ನೆಟ್ಟಿಗರು ನೀವೇ ಚೆನ್ನಾಗಿದ್ದೀರಿ, ತುಂಬಾ ಚೆನ್ನಾಗಿ ಕಾಣಿಸುತ್ತೀರಿ, ಬೇರೆಯವರು ಹರಿದಿರೋ ಬಟ್ಟೆಗಳನ್ನ ಹಾಕಿಕೊಂಡು ವೈಯಾರ ಮಾಡ್ತಾರೆ ಎಂದು ನೆಟ್ಟಿಗರು ಚೈತ್ರಾ ಅವರನ್ನು ಹಾಡಿ ಹೊಗಳುತ್ತಿದ್ದಾರೆ. ಇನ್ನು ಹಲವು ಕೊಲ್ಯಾಬ್ ಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಚೈತ್ರಾ, ನಮ್ಮ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತಿರುವ ಕಾರಣ, ಎಲ್ಲರಿಗೂ ತುಂಬಾ ಇಷ್ಟವಾಗುತ್ತಿದ್ದಾರೆ. ಬಾಯ್ಸ್ ವರ್ಸಸ್ ಗರ್ಲ್ಸ್ ಶೋನಲ್ಲಿ ಸಹ ಚೈತ್ರಾ ಅವರು ಮಿಂಚುವುದರಲ್ಲಿ ಯಾವುದೇ ಸಂಶಯವಿಲ್ಲ.