ಮದುವೆ ಅನ್ನುವುದು ಪ್ರತಿಯೊಬ್ಬರ ಬದುಕಿನಲ್ಲೂ ಒಂದು ಅವಿಸ್ಮರಣೀಯ ಘಟನೆ. ಸಾಕಷ್ಟು ಜನ ತಮ್ಮ ಮದುವೆಯನ್ನು ಹೆಚ್ಚು ಚಂದಗಾಣಿಸಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಾರೆ. ಇತ್ತೀಚೆಗಂತೂ ಮದುವೆ ಮನೆಯಲ್ಲಿ ಡಿಜೆ, ಡ್ಯಾನ್ಸ್, ಹಾಡು, ಪಾರ್ಟಿ ಮಾಮೂಲಿ. ಇದೀಗ ವಧುವರರ ಜೋಡಿಯೊಂದು ಮದುವೆ ದಿನ ಬಾಲಿವುಡ್ ಹಾಡೊಂದಕ್ಕೆ ಸ್ಟೆಪ್ ಹಾಕಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗುತ್ತಿದೆ.

ಬಾಲಿವುಡ್ನಲ್ಲಿ 2011ರಲ್ಲಿ ಬಿಡುಗಡೆಯಾದ ‘ಕಭಿ ಖುಷಿ ಕಬಿ ಘಮ್’ ಚಿತ್ರದ ‘ಬೋಲೆ ಜೋಡಿಯಾ’ ಹಾಡಿಗೆ ವಧುವರರಿಬ್ಬರು ಡ್ಯಾನ್ಸ್ ಮಾಡಿದ್ದಾರೆ. ಉತ್ತರ ಭಾರತ ಶೈಲಿಯ ಬಟ್ಟೆ ತೊಟ್ಟಿರುವ ಜೋಡಿಗಳು ಮಾಡಿರುವ ಈ ಡ್ಯಾನ್ಸ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ 1.7 ಲಕ್ಷ ವೀಕ್ಷಣೆ ಕಂಡಿದ್ದು, 1000 ಸಾವಿರ ಜನ ಲೈಕ್ ಮಾಡಿದ್ದಾರೆ. ಆಕರ್ಷಕವಾಗು ನೃತ್ಯ ಮಾಡಿರುವ ಜೋಡಿಯನ್ನು ನೆಟ್ಟಿಗರು ಇಷ್ಟ ಪಟ್ಟಿದ್ದು, ದಾಂಪತ್ಯ ಜೀವನಕ್ಕೆ ಸಾಕಷ್ಟು ಜನ ಶುಭಹಾರೈಸಿದ್ದಾರೆ.
ವಧುವರರ ಡ್ಯಾನ್ಸ್ ಕಂಡು ಫೀದಾ ಆಗಿರುವ ನೆಟ್ಟಿಗರೊಬ್ಬರು ‘ನಿಮ್ಮ ಆಕರ್ಷಕ ನೃತ್ಯ ಕಂಡು ನಾನಂತು ಸಕ್ಕತ್ ಎಂಜಾಯ್ ಮಾಡಿದೆ’ ಎಂದಿದ್ದಾನೆ. ಮತ್ತೊಬ್ಬ ‘ನಿಮ್ಮ ನೃತ್ಯದಷ್ಟೇ ಉತ್ತಮವಾಗು ನಿಮ್ಮ ದಾಂಪತ್ಯ ಜೀವನ ಮುಂದುವರೆಯಲಿ’ ಎಂದು ಶುಭಹಾರೈಸಿದ್ದಾನೆ. ಇನ್ನೊಬ್ಬ ‘ನೀವಿಬ್ಬರು ವೃತ್ತಿಪರ ಡ್ಯಾನ್ಸರ್ ಗಳಂತೆ ಕಾಣುತ್ತೀರಿ’ ಎಂದಿದ್ದಾನೆ. ಅಂತೂ-ಇಂತೂ ವಧುವರರು ಮದುವೆ ಸಂಭ್ರಮದಲ್ಲಿ ಮಾಡಿರುವ ಡ್ಯಾನ್ಸ್ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗುತ್ತಿದೆ.