ಬಾಲಿವುಡ್ ಬೆಡಗಿ ಪರಿಣಿತಿ ಚೋಪ್ರಾ ನಿನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಮ್ ಆದ್ಮಿ ಪಕ್ಷದ ನಾಯಕ ರಾಘವ್ ಚಡ್ಡಾ ಅವರ ಜೊತೆಗೆ ಹಸಮಣೆ ಏರುವ ಮೂಲಕ ಸಪ್ತಪದಿ ತುಳಿದಿದ್ದಾರೆ.ಉದಯಪುರದಲ್ಲಿ ಲೀಲಾ ಪ್ಯಾಲೇಸ್ನಲ್ಲಿ ರಾಘವ್ ಮತ್ತು ಪರಿಣಿತಿ ವಿವಾಹವಾದರು. ವಿವಾಹದ ಬಳಿಕ ಪರಿಣಿತಿ ಲೆಹಂಗಾ ಧರಿಸಿ ಅಪ್ಸರೆಯಂತೆ ಮಿಂಚಿದರು, ರಾಘವ್ ಶೇರ್ವಾನಿ ಧರಿಸಿ ರಾಜನಂತೆ ಕಂಗೊಳಿಸಿದ್ದಾರೆ. ಸದ್ಯ ಇವರಿಬ್ಬರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.



ಅದ್ಧೂರಿಯಾಗಿ ಪರಿಣಿತಿ ಮತ್ತು ರಾಘವ್ ಚಡ್ಡಾ ವಿವಾಹ ಕಾರ್ಯಕ್ರಮ ನೆರವೇರಿದೆ. ಇವರ ಮದುವೆಯಲ್ಲಿ ಅನೇಕರು ಭಾಗಿಯಾಗಿದ್ದರು. ಬಾಲಿವುಡ್ ತಾರೆಯರು ಸೇರಿ, ರಾಜಕೀಯ ನಾಯಕರು, ಸ್ನೇಹಿತರು, ಕುಟುಂಬಸ್ಥರು ನೆರೆದಿದ್ದರು. ಇನ್ನು ವಿವಾಹ ಕಾರ್ಯಕ್ರಮದಲ್ಲಿ 90ರ ದಶಕದ ಸಂಗೀತ ರಸಮಂಜರಿ ಸಂಯೋಜಿಸಲಾಗಿತ್ತು. ಗಾಯಕ ನವರಾಜ್ ಹನ್ಸ್ ಲೈವ್ ಆಗಿ ಹಾಡುವ ಮೂಲಕ ನೆರೆದಿದ್ದ ಬಂಧುಗಳನ್ನು ಸಂತಸದಲ್ಲಿ ತೇಲುವಂತೆ ಮಾಡಿದ್ದರು.
ಪರಿಣಿತಿ ಚೋಪ್ರಾ ಅವರ ಸ್ನೇಹಿತೆ ಸಾನಿಯಾ ಮಿರ್ಜಾ, ಮನೀಶ್ ಮಲ್ಹೋತ್ರಾ ಕೂಡ ಈ ಮದುವೆಯಲ್ಲಿ ಸಾಕ್ಷಿಯಾದರು. ಹತ್ತಿರದ ಸಂಬಂಧಿಯಾದ ಪ್ರಿಯಾಂಕ ಚೋಪ್ರಾ ಕೂಡ ಮದುವೆಯಲ್ಲಿ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಪರಿಣಿತಿ ಸಿನಿಮಾ ವಿಚಾರಕ್ಕೆ ಬರುವುದಾದರೆ, ಉಂಚೈ ಸಿನಿಮಾದಲ್ಲಿ ಪರಿನೀತಿ ಕಾಣಿಸಿಕೊಂಡಿದ್ದಾರೆ. ಅಕ್ಷಯ್ ಕುಮಾರ್ ಜೊತೆಗೆ ಮಿಷನ್ ರಾಣಿಗಂಜ್ನಲ್ಲಿ ನಟಿಸಿದ್ದು, ಈ ಸಿನಿಮಾ ಬಿಡುಗಡೆಯಾಬೇಕಿದೆ.