ಒಂದು ಮದುವೆ ನಡೆಯುತ್ತಿದೆ ಎಂದರೆ ಮದುಮಕ್ಕಳು ಅಥವಾ ಮದುವೆ ಮನೆ ಶೃಂಗಾರಗೊಳ್ಳುವುದು, ಜಗಮಗಿಸುವುದು ಸಾಮಾನ್ಯ. ಆದರೆ ಇಲ್ಲೊಂದು ಸೆಲೆಬ್ರಿಟಿ ಮದುವೆಗಾಗಿ ಇಡೀ ಏರ್ಪೋರ್ಟ್ ಶೃಂಗಾರಗೊಂಡಿದೆ. ಹೌದು ಬಾಲಿವುಡ್ ಕ್ವೀನ್ ಪರಿಣಿತಿ ಚೋಪ್ರಾ ಹಾಗೂ ಆಪ್ ನಾಯಕ ರಾಘವ್ ಚಡ್ಡಾ ಮದುವೆಗಾಗಿ ಉದಯಪುರ ಏರ್ಪೋರ್ಟ್ ಅದ್ದೂರಿಯಾಗಿ ಶೃಂಗಾರಗೊಂಡಿದೆ. ಸದ್ಯ, ಈ ಫೋಟೋಗಳು ವೈರಲ್ ಆಗುತ್ತಿವೆ.

ಖ್ಯಾತ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ಮತ್ತು ಆಪ್ ನಾಯಕ ರಾಘವ್ ಚಡ್ಡಾ ಸೆಪ್ಟೆಂಬರ್ 24 ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ರಾಜಸ್ಥಾನದ ಉದಯಪುರದ ಲೀಲಾ ಪ್ಯಾಲೇಸ್ನಲ್ಲಿ ಇಬ್ಬರ ಮದುವೆ ನಡೆಯಲಿದೆ, ತಾಜ್ ಲೇಕ್ನಲ್ಲಿ ವಿವಾಹ ಸಮಾರಂಭ ನಡೆಯಲಿದೆ. ಈಗಾಗಲೇ ಮೂರು ದಿನಗಳಿಂದ ಫ್ರೀ ವೆಡ್ಡಿಂಗ್ ಕಾರ್ಯಕ್ರಮಗಳು ದೆಹಲಿಯಲ್ಲಿ ನಡೆದಿವು. ನಾಳೆಯಿಂದ ಮದುವೆಗೆ ನಡೆಯುವ ಅಧಿಕೃತ ಶಾಸ್ತ್ರಗಳು ಆರಂಭವಾಗಲಿದೆ ಎನ್ನಲಾಗಿದೆ.


ದೆಹಲಿಯಲ್ಲಿ ಕಳೆದ ಬುಧವಾರ ರಾತ್ರಿ ಸಂಗೀತ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮದಲ್ಲಿ ಪರಿಣಿತಿ ಸಂಬಂಧಿ ಪ್ರಿಯಾಂಕಾ, ತಾಯಿ ಮಧು ಚೋಪ್ರಾ, ಸಹೋದರ ಸಿದ್ಧಾರ್ಥ್ ಭಾಗಿಯಾಗಿದ್ದರು.ಜೊತೆಗೆ ಕ್ರಿಕೆಟಿಗ ಹರ್ಭಜನ್ ಸಿಂಗ್ ಕೂಡ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದರು. ಕಳೆದ ಮೇ ತಿಂಗಳಲ್ಲಿ ದೆಹಲಿಯ ಕಪುರ್ಥಲ್ ಹೌಸ್ನಲ್ಲಿ ಈ ಜೋಡಿ ನಿಶ್ಚಿತಾರ್ಥ ಮಾಡಿಕೊಂಡಿತ್ತು.



