ಮತ್ತೆ ಬರ್ತಿದೆ ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ.. ಜನ ಮನ್ನಣೆ ಗಳಿಸಿರುವ TRP ಕೂಡಾ ಟಾಪ್ ಅಲ್ಲಿರುವ ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್ ಬಿಗ್ ರಿಯಾಲಿಟಿ ಶೋ.. ನಾವು ಏನ್ ಹೇಳ್ತಾ ಇದ್ದೀವಿ ಅಂತ ನಿಮಗೆ ಐಡಿಯಾ ಬಂದಿರಬಹುದು.. ಹೌದು ನೀವೇನಾದರೂ ಬಿಗ್ ಬಾಸ್ ಬಗ್ಗೆ ನಮ್ಮ ಪೀಠಿಕೆಯ ಕೇಳಿದ್ರೆ ಖಂಡಿತ ಎಸ್ ಎಸ್ ಎಸ್ ಎಸ್ .. ಬಿಗ್ ಬಾಸ್ 9ರ ವಿಜೇತನಾಗಿ ಕರಾವಳಿ ಕುವರ ರೂಪೇಶ್ ಶೆಟ್ಟಿ ಗೆದ್ದು ಬೀಗಿದ್ದಾರೆ.. ಅದಾದ ಮೇಲೆ ಮತ್ತೆ ಹಿಂದಿ ಮಾದರಿಯಲ್ಲಿ ಬಿಗ್ ಬಾಸ್ ಓಟಿಟಿ ಆರಂಭ ಮಾಡುವ ಪ್ಲಾನ್ ಕೂಡ ಇತ್ತು. ಇದರ ಭಾಗವಾಗಿ ಈಗ ಬಿಗ್ ಬಾಸ್ ಆರಂಭ ಮಾಡಲು ಭರ್ಜರಿ ತಯಾರಿ ನಡೆಯುತ್ತಿದೆ.

ಇನ್ನೂ ಈ ಬಾರಿ ಪರಮೇಶ್ವರ್ ಗುಂಡ್ಕಲ್ ಬಿಗ್ ಬಾಸ್ ಟೀಮ್ ಅಲ್ಲಿ ಇರುವುದಿಲ್ಲ.. ಅಷ್ಟೇ ಅಲ್ಲ ಸುದೀಪ್ ಕೂಡ ಸಖತ್ ಬ್ಯುಸಿ ಆಗಿದ್ದಾರೆ. ಕಿಚ್ಚ ಸುದೀಪ್ ವಿಕ್ರಾಂತ್ ರೋಣ ಸಿನಿಮಾದ ಬಳಿಕ ದೊಡ್ಡ ಗ್ಯಾಪ್ ತೆಗೆದು ಕೊಂಡಿದ್ರೂ. ಕೊನೆಗೂ ಈಗ ಸಿನಿಮಾದಲ್ಲಿ ತಮ್ಮನ್ನ ತಾವು ಸಂಪೂರ್ಣ ತೊಡಗಿಸಿ ಕೊಂಡಿದ್ದಾರೆ.. ಈಗಾಗಲೇ ಕಿಚ್ಚ ಹೇಳಿರುವ ಹಾಗೇ 50 ನೇ ಸಿನಿಮವರಗು ಕೂಡ ಕಿಚ್ಚನ ಶೆಡ್ಯೂಲ್ ಬ್ಯುಸಿ ಇದ್ಯಂತೆ. ಈ ಮಧ್ಯೆ ಬಿಗ್ ಬಾಸ್ ಓಟಿಟಿ ಮಾಡಬೇಕು. ಅದಾದ ಬಳಿಕ ಬಿಗ್ ಬಾಸ್ ಟಿವಿ ಶೋ ಕೂಡ ನಿರೂಪಣೆ ಮಾಡ್ಬೇಕು..
ಇನ್ನೂ ಈಗಾಗಲೇ ಬಿಗ್ ಬಾಸ್ ಆರಂಭ ಮಾಡಲು ಆಯೋಜನೆಯ ತಂಡ ಸಂಪೂರ್ಣ ತಯಾರಿ ಅಲ್ಲಿದೆ… Contestent ಯಾರಾಗಬೇಕು.. ಕಾರ್ಯಕ್ರಮದ ರೂಪು ರೇಷೆ ಯಾವ ತರ ಇರಬೇಕು? ಯಾವ್ಯಾವ ಟಾಸ್ಕ್ ಮಾಡಿಸಬೇಕು? ಹೀಗೆ ತಂಡದ ಸಂಪೂರ್ಣ ತಯಾರಿ ತೆರೆಮರೆಯಲ್ಲಿ ಆಗುತ್ತಿದ್ಯಂತೆ.. ಬಿಗ್ಬಾಸ್ 10ನೇ ಸೀಸನ್ ಹಾಗೂ ಒಟಿಟಿಯ ಎರಡನೇ ಸೀಸನ್ ಶೀಘ್ರವೇ ಪ್ರಾರಂಭವಾಗಲಿದೆ ಅನ್ನೋ ಮುನ್ಸೂಚನೆ ಸಿಕ್ಕಿದೆ.
ಇನ್ನೂ ಕಿಚ್ಚ ಪ್ರಸ್ತುತ ಕಿಚ್ಚ 46 ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಇನ್ನೂ ಈ ಸಿನಿಮಾ ಕಂಪ್ಲೀಟ್ ಆದ ಮೇಲೆ ಅನುಪ್ ಭಂಡಾರಿಯ ಹೊಸ ಸಿನಿಮಾದ ಚಿತ್ರೀಕರಣ ಕಿಚ್ಚ ಬಣ್ಣ ಹಚ್ಚುತ್ತಾರೆ. ಸುದೀಪ್ ಹೇಳಿರೋ ಪ್ರಕಾರ ಅವರ 50ನೇ ಸಿನಿಮಾ ವರೆಗೂ ಅವರು ಸತತವಾಗಿ ಬ್ಯುಸಿಯಾಗಿರುವುದು ಮಾತ್ರವಲ್ಲ ಸಾಲಾಗಿ ಸಿನಿಮಾಗಳು ಸಹ ಒಪ್ಪಿಗೆ ಆಗಿಬಿಟ್ಟಿವೆ. ಇವುಗಳ ನಡುವೆಯೇ ಬಿಗ್ಬಾಸ್ ರಿಯಾಲಿಟಿ ಶೋ ಕೂಡ ನಡೆಯುತ್ತೆ.. ಒಟ್ಟಿನಲ್ಲಿ ಬಿಗ್ ಬಾಸ್ ಪ್ರಿಯರಿಗೆ ಶೀಘ್ರವೇ ಮನರಂಜನೆಯ ರಸದೌತಣ ಸಿಗೋದ್ರಲ್ಲಿ ಅನುಮಾನವಿಲ್ಲ..