ಆಶಿಕಾ ರಂಗನಾಥ್ ಅವರು ಪ್ರಧಾನವಾಗಿ ಕನ್ನಡ ಭಾಷೆಯ ಚಲನಚಿತ್ರಗಳಲ್ಲಿ ಕಾಣಿಸಿಕೊಳ್ಳುವ ಸ್ಯಾಂಡಲ್ ವುಡ್ ನಟಿ . ಅವರು 2016 ರ ಚಲನಚಿತ್ರ ಕ್ರೇಜಿ ಬಾಯ್, ಮತ್ತು ರಾಂಬೊ 2 ನಲ್ಲಿ ಪ್ರಮುಖ ಪಾತ್ರಕ್ಕೆ ಹೆಸರುವಾಸಿಯಾಗಿದ್ದಾರೆ . ಬೆಂಗಳೂರಿಗೆ ಓದಲೆಂದು ತೆರಳಿದ್ದ ಅವರು ಕ್ಲೀನ್ ಮತ್ತು ಕ್ಲಿಯರ್ ಫ್ರೆಶ್ ಫೇಸ್ ಬೆಂಗಳೂರು ಸ್ಪರ್ಧೆಗಾಗಿ ಆಡಿಷನ್ ಮಾಡಿದರು. ಇದರಲ್ಲಿ ವಿನ್ ಆಗಿ ಮಿಸ್ ಫ್ರೆಶ್ ಫೇಸ್ 2014 ರ ರನ್ನರ್ ಅಪ್ ಆಗಿ ಹೊರಹೊಮ್ಮಿದರು. ಫ್ರೀಸ್ಟೈಲ್, ಬೆಲ್ಲಿ ಮತ್ತು ವೆಸ್ಟರ್ನ್ ಸೇರಿದಂತೆ ವಿವಿಧ ನೃತ್ಯ ಪ್ರಕಾರಗಳಲ್ಲಿ ತರಬೇತಿ ಪಡೆದಿದ್ದಾರೆ. ಹಾಗೂ ಯಾವ ತರಹದ ನೃತ್ಯಕ್ಕೂ ಸೈ ಎಣಿಸಿಕೊಳ್ಳುತ್ತಾರೆ.

ಹೀಗೆ ಮೆಲ್ಲನೆ ಚಿತ್ರೋದ್ಯಮಕ್ಕೆ ಕಾಲಿಟ್ಟ ಆಶಿಕಾ, ತನ್ನ ಸುಂದರ ಅಭಿನಯದ ಮೂಲಕ ಸ್ಯಾಂಡಲ್ ವುಡ್ ಮಾತ್ರವಲ್ಲದೆ ಟಾಲಿವುಡ್ ನಲ್ಲೂ ಬಹುಬೇಡಿಕೆಯ ನಟಿ ಆಗಿದ್ದಾರೆ. ಜನರ ಪ್ರೀತಿಯನ್ನು ಗಳಿಸಿ ಸಾವಿರಗಟ್ಟಲೆ ಅಭಿಮಾನಿಗಳನ್ನೂ ಪಡೆದುಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ 1.9M ಫಾಲ್ಲೋರ್ಸ್ ಕೂಡಾ ಇದ್ದಾರೆ. ಅಷ್ಟೆ ಅಲ್ಲದೆ ಇಲ್ಲಿಯವರೆಗೂ 730ಕ್ಕೂ ಹೆಚ್ಚು ಪೋಸ್ಟ್ ಗಳನ್ನು ಹಾಕಿದ್ದಾರೆ. ಇವರ ಇತ್ತೀಚಿನ ಪೋಸ್ಟ್ ಗಂತೂ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ.
ಸೀರೆ ಉಟ್ಟು ಚಂದದ ಲುಕ್ ನಲ್ಲಿ ಪೋಸ್ ನೀಡಿರುವುದು ನಿಜವಾಗಿಯೂ ಮನ ಸೆಳೆಯುವಂತಿದೆ. ಪೋಸ್ಟ್ ಹಾಕಿದ ಎಂಟೇ ಗಂಟೆಯಲ್ಲಿ ಲಕ್ಷಗಟ್ಟಲೆ ಲೈಕ್ಸ್ ಹಾಗೂ ಸಾವಿರಗಟ್ಟಲೆ ಕಮೆಂಟ್ಸ್ ಕೂಡಾ ಬಂದಿದೆ. ಸೀರೆಗೆ ತಕ್ಕಂತೆ ಕಣ್ಮನ ಸೆಳೆಯುವ ಆಭರಣಗಳನ್ನೂ ಧರಿಸಿದ್ದಾರೆ. ಬಂಗಾರದ ಗೊಂಬೆಯಂತೆ ಕಾಣಿಸುತ್ತಿದ್ದಾರೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.
ಮಿಲ್ಕ್ ಬ್ಯುಟಿ ಆಶಿಕಾ ರಂಗನಾಥ್ ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿ ಆಗಿದ್ದಾರೆ. ಆದರೂ ಫ್ಯಾನ್ಸ್ ಗಳನ್ನು ಮರೆಯುತ್ತಿಲ್ಲ.
ಆಗಾಗ ಪೋಸ್ಟ್ ಗಳನ್ನು ಹಾಕುತ್ತಾ ಫ್ಯಾನ್ಸ್ ಗಳನ್ನು ಖುಷಿ ಪಡಿಸುತ್ತಿದ್ದಾರೆ. ಅಷ್ಟೆ ಅಲ್ಲದೆ ಆಶಿಕಾ ಫಿಟ್ನೆಸ್ ವಿಚಾರದಲ್ಲಿಯೂ ತುಂಬಾ ಸ್ಟ್ರಿಕ್ಟ್. ಶೂಟಿಂಗ್ ನಲ್ಲಿ ಬ್ಯುಸಿ ಆಗಿದ್ದರೂ ಫಿಟ್ನೆಸ್ ಅನ್ನು ಮರೆಯೋದೆ ಇಲ್ಲ. ಸ್ಯಾಂಡಲ್ ವುಡ್ ನ ಈ ಬೆಡಗಿದೆ ಟ್ಯಾಲಿವುಡ್ ನಲ್ಲೂ ಬೇಡಿಕೆ ಹೆಚ್ಚಿರುವುದು ಖುಷಿಯ ಸಂಗತಿ. ತೆಲುಗಿನ ಅಮಿಗೋಸ್ ಚಿತ್ರದಲ್ಲಿ ನಂದಮುರಿ ಕಲ್ಯಾಣರಾಮ್ಗೆ ಸ್ಯಾಂಡಲ್ ವುಡ್ ಬೆಡಗಿ ಆಶಿಕಾ ರಂಗನಾಥ್ ಹೀರೋಯಿನ್ ಆಗಿ ನಟಿಸಿದ್ದಾರೆ . ಆಮಿಗೋಸ್ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಅಭಿಮಾನಿಗಳಿಗೆ ನಟಿ ಧನ್ಯವಾದವನ್ನು ಹೇಳಿದ್ದಾರೆ.
2016 ರಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಇವರು ಕ್ರೇಜಿ ಬಾಯ್ ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಮುಗುಳುನಗೆ, ರಾಜು ಕನ್ನಡ ಮೀಡಿಯಂ,ಮಾಸ್ ಲೀಡರ್ ಸೇರಿದಂತೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕನ್ನಡಕ್ಕೆ ನೀಡಿದ್ದಾರೆ. ಮುಂದೆ ಆಶಿಕಾ ರಂಗನಾಥ್ ತಮಿಳು ಹಾಗೂ ತೆಲುಗು ಚಿತ್ರದಲ್ಲಿ ನಟಿಸಲಿದ್ದಾರೆ. ಇದಕ್ಕಾಗಿ ಫ್ಯಾನ್ಸ್ ಗಳು ಕೂಡಾ ಕಾಯ್ತಾ ಇದ್ದಾರೆ. ಚೆಂದದ ಬೆಡಗಿ, ಮಿಲ್ಕ್ ಬ್ಯುಟಿ ಗೆ ಯಶಸ್ಸು ದಿರೆಯುವುದಂತೂ ಖಂಡಿತ. ಏಕೆಂದರೆ ಇವರು ನಿಜ ಜೀವನದಲ್ಲೂ ಸದಾ ನಗುವನ್ನು ಬೀರುವ ಚೆಲುವೆ. ಯಾವುದೇ ಕಾಂಟ್ರಾವೆರ್ಸೀ ಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳದೆ, ತಮ್ಮಷ್ಟಕ್ಕೆ ತಾವೇ ಕೆಲಸಗಳನ್ನು ಮಾಡುತ್ತಾ ಎಲ್ಲರ ಜೊತೆ ಒಳ್ಳೆಯ ಸಂಬಂಧವನ್ನು ಇರಿಸಿಕೊಂಡಿದ್ದಾರೆ.