ಬಾಲಿವುಡ್ ನಟ ಸುನೀಲ್ ಶೆಟ್ಟಿ ಅವರ ಪುತ್ರಿ, ಕ್ರಿಕೆಟಿಗ ಕೆಎಲ್ ರಾಹುಲ್ ಅವರ ಪತ್ನಿ, ನಟಿ ಅಥಿಯಾ ಶೆಟ್ಟಿ ಇಂದು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಮುಂದಿನ ವರ್ಷ ಪುಟಾಣಿ ಮಗುವಿನ ನಗು ಅಥಿಯಾ ಶೆಟ್ಟಿ ಹಾಗೂ ಕೆಎಲ್ ರಾಹುಲ್ ಮನೆಯಲ್ಲಿ ಪ್ರತಿಧ್ವನಿಸಲಿದೆ. ಹೌದು, ಸುನೀಲ್ ಶೆಟ್ಟಿ ಶೀಘ್ರದಲ್ಲೇ ಅಜ್ಜನಾಗಲಿದ್ದಾರೆ. ಅಥಿಯಾ ಮತ್ತು ರಾಹುಲ್ ಮುಂದಿನ ವರ್ಷ ಮನೆಗೆ ಪುಟ್ಟ ಪಾಪುವನ್ನು ಬರಮಾಡಿಕೊಳ್ಳಲಿದ್ದಾರೆ
ಅಥಿಯಾ ಶೆಟ್ಟಿ ಇನ್ಸ್ಟಾದಲ್ಲಿ ಪೋಸ್ಟ್ ಮಾಡುವ ಮೂಲಕ ಈ ಗುಡ್ ನ್ಯೂಸ್ ತಿಳಿಸಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ತಾವು ಅಮ್ಮನಾಗಲಿರುವ ಸುದ್ದಿಯನ್ನು ಶೇರ್ ಮಾಡಿರುವ ಅಥಿಯಾ ‘Our beautiful blessing is coming soon’ (ಶೀಘ್ರದಲ್ಲೇ ನಮ್ಮ ಮನೆಗೆ ಹೊಸ ಅತಿಥಿಯ ಆಗಮನವಾಗಲಿದೆ) ಎಂದು ಬರೆದುಕೊಂಡಿದ್ದಾರೆ. ಇದಲ್ಲದೆ, ಅಥಿಯಾ ಅವರು ಚಿಕ್ಕ ಮಗುವಿನ ಪಾದಗಳ ಇಮೋಜಿಯನ್ನು ಸಹ ಹಾಕಿ 2025 ಎಂದು ಬರೆದಿದ್ದಾರೆ.
ಈ ಮೂಲಕ ತಮ್ಮ ಮನೆಗೆ ಪುಟ್ಟ ಅತಿಥಿ ಬರುವ ಬಗ್ಗೆ ಅಭಿಮಾನಿಗಳಿಗೆ ಮಾಹಿತಿ ನೀಡಿರುವುದು ಸ್ಪಷ್ಟವಾಗಿದೆ. ಈ ಪೋಸ್ಟ್ ಬಂದ ತಕ್ಷಣ, ಅಥಿಯಾ ಅವರ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳ ಜೊತೆಗೆ ದೊಡ್ಡ ದೊಡ್ಡ ಸೆಲೆಬ್ರಿಟಿಗಳು ಕೂಡ ಕಮೆಂಟ್ ಮಾಡಿ ದಂಪತಿಗೆ ಶುಭ ಕೋರುತ್ತಿದ್ದಾರೆ.
ಅಥಿಯಾ ತಮ್ಮ ಹುಟ್ಟುಹಬ್ಬ ಕೆಲವೇ ದಿನಗಳು ಬಾಕಿ ಇರುವಾಗ ತಾವು ಗರ್ಭಿಣಿಯಾಗಿರುವ ವಿಷಯವನ್ನು ತಿಳಿಸಿದ್ದಾರೆ. ರಾಹುಲ್ ಸದ್ಯ ಆಸ್ಟ್ರೇಲಿಯಾದಲ್ಲಿದ್ದಾರೆ.
ಅಥಿಯಾ ಶೆಟ್ಟಿ-ಕೆಎಲ್ ರಾಹುಲ್ ಪ್ರೇಮಕಥೆ
ಬಾಲಿವುಡ್ ನಟಿ ಅಥಿಯಾ ಶೆಟ್ಟಿ 2019 ರಲ್ಲಿ ಕೆಎಲ್ ರಾಹುಲ್ ಅವರನ್ನು ಕಾಮನ್ ಫ್ರೆಂಡ್ ಮೂಲಕ ಭೇಟಿಯಾದರು. ಈ ಭೇಟಿಯ ನಂತರ, ಇಬ್ಬರೂ ಸ್ನೇಹಿತರಾದರು. ಈ ಸ್ನೇಹ ಪ್ರೇಮಕ್ಕೆ ತಿರುಗಿತು. ನಾಲ್ಕು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ ಈ ಜೋಡಿ ಜನವರಿ 23, 2023 ರಂದು ಸುನೀಲ್ ಶೆಟ್ಟಿ ಅವರ ಖಂಡಾಲ ಫಾರ್ಮ್ ಹೌಸ್ನಲ್ಲಿ ವಿವಾಹವಾದರು. ದಂಪತಿಗಳು ತಮ್ಮ ಕುಟುಂಬ ಸದಸ್ಯರು ಮತ್ತು ಆಪ್ತ ಸ್ನೇಹಿತರ ಸಮ್ಮುಖದಲ್ಲಿ ಸಪ್ತ ಪದಿ ತುಳಿದರು.