ನ್ಯೂಸ್ ಆ್ಯರೋ : ಖ್ಯಾತ ನಟ ಆಶಿಷ್ ವಿದ್ಯಾರ್ಥಿ ಇತ್ತೀಚೆಗಷ್ಟೆ ತಮ್ಮ ಮದುವೆಯ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಎಲ್ಲರೂ ಅವಕ್ಕಾಗುವಂತೆ ಮಾಡಿದ್ದರು. ಇದೀಗ ಹನಿಮೂನ್ ಗಾಗಿ ಬಾಲಿಗೆ ಪತ್ನಿ ಜೊತೆಗೆ ತೆರಳಿದ್ದಾರೆ. ಆಶಿಷ್ ಜೊತೆಗಿನ ಸುಂದರ ಫೋಟೋಗಳನ್ನು ಅವರ ಪತ್ನಿ ರೂಪಾಲಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು.ನವ ಜೋಡಿಗಳು ಹನಿಮೂನ್ ಮೂಡ್ ನಲ್ಲಿ ಇದ್ದಾರೆ.

ಕನ್ನಡದ ‘ಕೋಟಿಗೊಬ್ಬ’ ಸೇರಿದಂತೆ ತಮಿಳು, ತೆಲುಗು, ಹಿಂದಿ, ಮಲೆಯಾಳಂ ಚಿತ್ರರಂಗದಲ್ಲಿ ಖ್ಯಾತ ಖಳನಟ ಎನಿಸಿಕೊಂಡ ಆಶಿಷ್ ವಿದ್ಯಾರ್ಥಿ ತಮ್ಮ 60ನೇ ವಯಸ್ಸಿನಲ್ಲಿ ಎರಡನೇ ಮದುವೆಯಾಗಿ ಅಚ್ಚರಿ ಮೂಡಿಸಿದ್ದರು. ಇತ್ತೀಚೆಗಷ್ಟೇ ಫ್ಯಾಷನ್ ಇಂಡಸ್ಟ್ರಿ ಉದ್ಯಮಿ ರೂಪಾಲಿ ಜೊತೆಗೆ ವಿವಾಹವಾದ ಫೋಟೋಗಳು ಭಾರೀ ಸುದ್ದಿಯಾಗಿತ್ತು.
ನಟ ಆಶಿಷ್ ವಿದ್ಯಾರ್ಥಿ ಈ ಹಿಂದೆ ರಾಜೋಶಿ ಎಂಬವರನ್ನು ವಿವಾಹವಾಗಿ ಹಲವು ವರ್ಷಗಳ ಕಾಲ ಒಟ್ಟಿಗೆ ಜೀವನ ನಡೆಸಿದ್ದರು. ಆದರೆ ವರ್ಷಗಳು ಕಳೆದಂತೆ ಇವರಿಬ್ಬರ ನಡುವೆ ಹೊಂದಾಣಿಕೆಯ ಕೊರತೆ ಕಂಡುಬಂತು ಈ ಕಾರಣದಿಂದ ಸಂಬಂಧ ಹದಗೆಟ್ಟು ಡಿವೋರ್ಸ್ ಪಡೆದರು. ಬಳಿಕ ಆಶಿಷ್ ವಿದ್ಯಾರ್ಥಿ ರೂಪಾಲಿಯ ಕೈ ಹಿಡಿದರು.
ರಾಜೋಶಿ ಅವರಿಗೆ ಡಿವೋರ್ಸ್ ನೀಡಿದ ಆಶಿಷ್ ಬಳಿಕ ರೂಪಾಲಿಯವರನ್ನು ಎರಡನೇ ಮದುವೆಯಾದರು. ಕಳೆದ ಮೇ ತಿಂಗಳಲ್ಲಿ ಕೊಲ್ಕತ್ತಾದ ಕ್ಲಬ್ನಲ್ಲಿ ಸರಳವಾಗಿ ವಿವಾಹವಾದರು. ಗುರು ಹಿರಿಯರ ಸಮ್ಮುಖದಲ್ಲಿ ವಿವಾಹವಾದ ಆಶಿಷ್ ರೂಪಾಲಿ ಜೋಡಿ ‘ಸರಳವಾಗಿ ವಿವಾಹವಾಗಬೇಕು ಎಂಬುದು ನಮ್ಮಆಸೆಯಾಗಿತ್ತು ಅದರಂತೆ ಮದುವೆಯಾಗಿರುವುದು ಖುಷಿ ತಂದಿದೆ’ ಎಂದಿದ್ದಾರೆ. ಇದೀಗ ಈ ಜೋಡಿ ಬಾಲಿಯಲ್ಲಿ ಜಾಲಿ ಮೂಡ್ ನಲ್ಲಿದೆ.