ಒಬ್ಬ ಗ್ರಾಮ ಪಂಚಾಯತಿ ಅಧ್ಯಕ್ಷನ ಒಟ್ಟು ಆಸ್ತಿಯೂ ಕೂಡ ಲಕ್ಷದ ಲೆಕ್ಕದಲ್ಲಿ ಇರುತ್ತದೆ. ಹೀಗಿರುವಾಗ ಒಂದು ವಿಧಾನ ಸಭಾ ಕ್ಷೇತ್ರದ ಶಾಸಕನ ಒಟ್ಟು ಆಸ್ತಿ ಮೊತ್ತ ಕೇವಲ 1,700 ರೂಪಾಯಿ ಅಂದ್ರೆ ನೀವು ನಂಬುತ್ತೀರಾ. ಆದ್ರೆ ಇದು ಸತ್ಯ ಸಂಗತಿ. ಈ ಬಿಜೆಪಿ ಶಾಸಕನ ಒಟ್ಟು ಆಸ್ತಿಯೇ ಇಷ್ಟು. ಈತನನ್ನು ದೇಶದ ಅತ್ಯಂತ ‘ಬಡ ಶಾಸಕ’ ಎಂದು ಪರಿಗಣಿಸಲಾಗಿದೆ. ಇಷ್ಟು ಕಡಿಮೆ ಆಸ್ತಿಯ ಬಿಜೆಪಿ ಶಾಸಕ ಯಾರು ಎನ್ನುವ ಕುತೂಹಲ ನಿಮ್ಮಲ್ಲಿದ್ರೆ ಈ ವರದಿ ಓದಿ.

ಯಾರು ಈ ಬಡ ಶಾಸಕ!
ಪಶ್ಚಿಮ ಬಂಗಾಳದ ಬಿಜೆಪಿ ಶಾಸಕ ನಿರ್ಮಲ್ ಕುಮಾರ್ ಧಾರ ದೇಶದ ಅತ್ಯಂತ ಬಡ ಶಾಸಕ, 2021ರಲ್ಲಿ ಶಾಸನ ಸಭೆಯ ಆಯ್ಕೆಯಾಗಿರುವ ಧಾರ ಬಳಿ ಸ್ವಂತ ಮನೆ ಇಲ್ಲ, ಬ್ಯಾಂಕ್ ಅಕೌಂಟ್ ಇಲ್ಲ, ಯಾವುದೇ ವಾಹನಗಳಿಲ್ಲ ಎಂದು ದಿ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ ವರದಿ ತಿಳಿಸಿದ್ದು, ಇವರನ್ನು ದೇಶದ ಅತ್ಯಂತ ಬಡ ಶಾಸಕ ಎಂದು ಘೋಷಿಸಲಾಗಿದೆ. ಇವರು ಶಾಸಕರಾದ ನಂತರ ಬ್ಯಾಂಕ್ ಅಕೌಂಟ್ ತೆರೆದಿದ್ದರೂ ಕೂಡ ಅದರಲ್ಲಿ ಒಂದ ರೂ. ಹಣವಿಲ್ಲ ಎಂದು ವರದಿ ತಿಳಿಸಿದೆ.
ವೃತ್ತಿಯಲ್ಲಿ ಇಂಗ್ಲಿಷ್ ಶಿಕ್ಷಕರಾಗಿರುವ ಧಾರಾ 2009ರಲ್ಲಿ ಬುರ್ದ್ವಾನ್ ವಿವಿಯಲ್ಲಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂಎ ಪಡೆದರು. ಶಾಸಕರಾಗುವ ಮುನ್ನ ಟ್ಯೂಷನ್ ನಿಂದ ಬಂದ ಹಣದಿಂದಲೇ ಇವರು ಜೀವನ ಸಾಗಿಸುತ್ತಿದ್ದರು. 2021ರಲ್ಲಿ ಬಂಕುರ ಜಿಲ್ಲೆಯ ಇಂದಾಸ್ ವಿಧಾನ ಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸ ವಿಧಾನಸಭೆ ಪ್ರವೇಶ ಮಾಡಿ ಬಿಜೆಪಿ ಶಾಸಕರಾದರು.



