ಅಪ್ಪು ಅವರ ನೆನಪುಗಳು, ಜನರಿಗೆ ಅವರ ಬಗ್ಗೆ ಇರುವ ಪ್ರೀತಿಯನ್ನು ಎಷ್ಟು ಅಳೆದರು ಕಡಿಮೆಯೇ. ಅಂಥಾ ದೇವರಂಥ ಮನುಷ್ಯ ನಮ್ಮ ಜೊತೆಗೆ ಇದ್ದುಬಿಡಬೇಕಿತ್ತು, ಅಷ್ಟು ಬೇಗ ಈ ಪ್ರಪಂಚವನ್ನು ಬಿಟ್ಟು ಹೋಗಬಾರದಿತ್ತು ಎನ್ನುವುದು ಎಲ್ಲರಲ್ಲೂ ಇರುವ ನೋವು. ಇಂಥ ಒಬ್ಬ ನಟ, ಟ್ಯಾಲೆಂಟ್, ವ್ಯಕ್ತಿ, ಸರಳತೆ ಇರುವ ಮನುಷ್ಯ, ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡಿದವರು, ಇಂಥ ಅಪ್ಪು ಅವರನ್ನು ಬೇಗ ಕಳೆದುಕೊಂಡ ಅಭಿಮಾನಿಗಳು ಅವರನ್ನು ಒಮ್ಮೆಯಾದರೂ ನೋಡಬೇಕಿತ್ತು ಎಂದು ಬೇಸರ ಮಾಡಿಕೊಂಡ ಕ್ಷಣಗಳು ಅನೇಕ. ಇದೀಗ ಎಲ್ಲಾ ಅಭಿಮಾನಿಗಳಿಗೆ ಅಪ್ಪು ಅವರ ಜೊತೆಗೆ ಕನೆಕ್ಟ್ ಆಗುವುದಕ್ಕೆ ಒಂದು ಅವಕಾಶ ಸಿಗುತ್ತಿದೆ. ಇದಕ್ಕಾಗಿ ಒಂದು ವಿಶೇಷ ಪ್ರಯತ್ನ ನಡೆಯುತ್ತಿದ್ದು ಶೀಘ್ರದಲ್ಲೇ ಅಭಿಮಾನಿಗಳಿಗೆ ಗುಡ್ ನ್ಯೂಸ್ ಸಿಗಲಿದೆ. ಏನದು ಎಂದು ತಿಳಿಸುತ್ತೇವೆ ನೋಡಿ..

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಎಂದೆಂದಿಗೂ ಅಭಿಮಾನಿಗಳ ಮನಸ್ಸಲ್ಲಿ ಜೀವಂತ. ಅವರನ್ನು ತೆರೆಮೇಲೆ ಹೊಸದಾಗಿ ನೋಡುವ ಅವಕಾಶ ಸಿಗುತ್ತಿಲ್ಲ, ಅಭಿಮಾನಿಗಳು ಅವರನ್ನು ಭೇಟಿ ಮಾಡಲು ಆಗುತ್ತಿಲ್ಲ ಎನ್ನುವ ನೋವು ಅವರ ಫ್ಯಾನ್ಸ್ ಗಳಲ್ಲಿ ಇದೆ. ಅಪ್ಪು ಅವರ ಹಳೆಯ ವಿಡಿಯೋಗಳು, ಅವರ ಮಾತುಗಳು ಎಲ್ಲವೂ ಸಹ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುತ್ತದೆ. ಅಭಿಮಾನಿಗಳು ಅದೆಲ್ಲವನ್ನು ಶೇರ್ ಮಾಡಿಕೊಳ್ಳುತ್ತಾರೆ.. ಅಪ್ಪು ಅವರು ನಮ್ಮ ಜೊತೆಗೆ ಇದ್ದಾರೆ ಎಂದು ಅನ್ನಿಸುವ ಹಾಗೆ ಮಾಡುತ್ತಾರೆ. ಕರ್ನಾಟಕದ ಮೂಲೆ ಮೂಲೆಗಳಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಎಲ್ಲಾ ಕಡೆ ನಾವು ಅಪ್ಪು ಅವರನ್ನು ನೋಡಬಹುದು. ಒಂದೊಂದು ರಸ್ತೆಯಲ್ಲಿ, ಬೀದಿಗಳಲ್ಲಿ, ಅಂಗಡಿಗಳಲ್ಲಿ ಅಪ್ಪು ಅವರ ಫೋಟೋ ಇರುತ್ತದೆ, ಅಪ್ಪು ಅಬರ ಹೆಸರು ಕಂಡುಬರುತ್ತದೆ. ಜನರಿಗೆ ಅವರನ್ನು ಕಂಡರೆ ಅಷ್ಟರ ಮಟ್ಟಿಗೆ ಪ್ರೀತಿ ಮತ್ತು ಅಭಿಮಾನ.

ಅಭಿಮಾನಿಗಳು ಅಪ್ಪು ಅವರ ಸಿನಿಮಾ ರೀರಿಲೀಸ್ ಗಳನ್ನು ಎಂಜಾಯ್ ಮಾಡುತ್ತಿದ್ದಾರೆ. ಕಳೆದ ವರ್ಷ ಅಭಿಮಾನಿಗಳಿಗೆ ಜಾಕಿ ಸಿನಿಮಾ ರೀರಿಲೀಸ್ ಮಾಡಲಾಗಿತ್ತು, ಈ ವರ್ಷ ಅಪ್ಪು ಸಿನಿಮಾ ರೀರಿಲೀಸ್ ಮಾಡಲಾಗಿದೆ. ಪುನೀತ್ ರಾಜ್ ಕುಮಾರ್ ಅವರು ನಾಯಕನಾಗಿ ಅಭಿನಯಿಸಿದ ಮೊದಲ ಸಿನಿಮಾ ಅಪ್ಪು. ಈ ಸಿನಿಮಾದ ಕ್ರೇಜ್ ಎಷ್ಟರ ಮಟ್ಟಿಗೆ ಇದೆ ಎಂದು ನಮಗೆಲ್ಲ ಗೊತ್ತೇ ಇದೆ. ಒಂದೊಂದು ಡೈಲಾಗ್ ಗಳು ಅಭಿಮಾನಿಗಳಿಗೆ ಸಂತೋಷ ತರುವಂಥ ಡೈಲಾಗ್ ಗಳೇ ಆಗಿದೆ. ಅಪ್ಪು ಅವರ ಡೈಲಾಗ್ ಗಳು, ಆ ಡ್ಯಾನ್ಸ್ ಎಲ್ಲವನ್ನು ಸಹ ನಾವು ಮರೆಯಲು ಸಾಧ್ಯವಿಲ್ಲ. ಆ ಹಾಡುಗಳನ್ನ ಇವತ್ತಿಗು ಎಲ್ಲರೂ ಎಂಜಾಯ್ ಮಾಡುತ್ತಾರೆ. ಅಪ್ಪು ಅವರ ಡ್ಯಾನ್ಸ್ ಬಗ್ಗೆ ಹೇಳೋದೇ ಬೇಡ..

ಈ ವರ್ಷ ರೀರಿಲೀಸ್ ನಲ್ಲಿ ಅಪ್ಪು ಅತಿಹೆಚ್ಚು ಹೌಸ್ ಫುಲ್ ಶೋಗಳನ್ನು ಕಂಡಿದೆ, ಅಭಿಮಾನಿಗಳು ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಒಂದೊಂದು ಶೋನಲ್ಲೂ ಅಭಿಮಾನಿಗಳ ಶಿಳ್ಳೆ, ಚಪ್ಪಾಳೆ, ಕಿರುಚಾಟ ಸೆಲೆಬ್ರೇಷನ್ ಗಳು ಮುಗಿಲು ಮುಟ್ಟಿದೆ. ಥಿಯೇಟರ್ ಗಳ ರೂಫ್ ಕಿತ್ತು ಹೋಗೋ ಮಟ್ಟಕ್ಕೆ ಅಭಿಮಾನಿಗಳು ಅಪ್ಪು ಸಿನಿಮಾವನ್ನು ಎಂಜಾಯ್ ಮಾಡುತ್ತಿದ್ದಾರೆ. ಸಿನಿಮಾ ಶುರುವಿನಲ್ಲಿ ಎಲ್ಲರೂ ಎಂಜಾಯ್ ಮಾಡಿದರು ಸಹ, ಸಿನಿಮಾ ಮುಗಿಯುವ ವೇಳೆಗೆ ಅಪ್ಪು ಅವರು ನಮ್ಮ ಜೊತೆಗೆ ಇಲ್ಲ ಎನ್ನುವುದು ಅರಿವಾಗಿ, ಬೇಸರ ಆಗುವುದು ಖಂಡಿತ. ಅಭಿಮಾನಿಗಳು ಅಪ್ಪು ಅವರನ್ನು ಅಷ್ಟು ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಇದರಿಂದ ಅಭಿಮಾನಿಗಳಿಗೆ ಒಂದು ಗುಡ್ ನ್ಯೂಸ್ ಸಿಕ್ಕಿದೆ.

ಅಭಿಮಾನಿಗಳು ಅಪ್ಪು ಅವರ ಜೊತೆಗೆ ಕನೆಕ್ಟ್ ಆಗೋದಕ್ಕೆ ತಂಡ ಒಂದು ಶ್ರಮ ಹಾಕುತ್ತಿದ್ದು, ಅಭಿಮಾನಿಗಳಿಗೆ ಒಂದು ದೊಡ್ಡ ಸರ್ಪ್ರೈಸ್ ಸಿಗಲಿದೆ. ಇದರ ಬಗ್ಗೆ ಸಣ್ಣ ಝಲಕ್ ಒಂದನ್ನು ನಿನ್ನೆ ಅಪ್ಪು ಅವರ ಹುಟ್ಟುಹಬ್ಬದ ದಿವಸ ಅಭಿಮಾನಿಗಳಿಗೆ ಸಿಕ್ಕಿದೆ. ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಖುದ್ದಾಗಿ ಈ ಬಗ್ಗೆ ತಿಳಿಸಿದ್ದಾರೆ. ಆ ಸರ್ಪ್ರೈಸ್ ಏನು ಎಂದರೆ, ಅಪ್ಪು ಅವರಿಗೆ ಇನ್ನು ಹತ್ತಿರ ಆಗೋದಕ್ಕೆ, ಅಪ್ಪು ಅವರ ಜೊತೆಗೆ ಇನ್ನು ಕನೆಕ್ಟ್ ಆಗೋದಕ್ಕೆ, ಅವರನ್ನು ಜೀವಂತವಾಗಿ ಇರಿಸೋದಕ್ಕೆ ಒಂದು ಆಪ್ ಅಭಿಮಾನಿಗಳಿಗಾಗಿ ಬರುತ್ತಿದೆ. ಹೌದು, ಈ ಆಪ್ ನ ಹೆಸರು PRK Star Fandom. ಇಡೀ ಭಾರತದಲ್ಲಿ ಇದು ಒಂದು ವಿಶಿಷ್ಟ ಪ್ರಯತ್ನ ಆಗಿದ್ದು, ಅಭಿಮಾನಿಗಳಿಗಾಗಿ ಬಂದಿರುವ ಹೊಸ ಆಪ್ ಇದಾಗಿದೆ. ಅಶ್ವಿನಿ ಅವರು ಈ ಆಪ್ ಬಗ್ಗೆ ಪೋಸ್ಟ್ ಮಾಡಿದ್ದಾರೆ.
ಡಾ. ಸಮರ್ಥ್ ಹಾಗೂ ಅವರ ತಂಡ ಈ ಆಪ್ ಡೆವೆಲಪ್ ಮಾಡುತ್ತಿದ್ದು, ಶೀಘ್ರದಲ್ಲೇ ಅಭಿಮಾನಿಗಳು ಈ ಆಪ್ ಅನ್ನು ಉಪಯೋಗಿಸಬಹುದು. ಈ ಆಪ್ ನಲ್ಲಿ ಅಭಿಮಾನಿಗಳಿಗೆ ಅಪ್ಪು ಅವರ ಬಗ್ಗೆ ಹೆಚ್ಚು ಹೆಚ್ಚು ಮಾಹಿತಿ ಸಿಗುತ್ತದೆ. ಅಪ್ಪು ಅವರನ್ನು ಜೀವಂತವಾಗಿ ಇರಿಸಬಹುದು. ಅವರ ಜೊತೆಗೆ ಸಮಯ ಕಳೆಯುವ ಅನುಭವ ಕೂಡ ಸಿಗುತ್ತದೆ. ಈ ಆಪ್ ಅನ್ನು ಅಪ್ಪು ಅವರನ್ನು ಮಿಸ್ ಮಾಡಿಕೊಳ್ಳುತ್ತಿರುವ ಅವರ ಎಲ್ಲಾ ಫ್ಯಾನ್ಸ್ ಗಾಗಿ ವಿಶೇಷವಾಗಿ ಡೆವೆಲಪ್ ಮಾಡಲಾಗುತ್ತಿದೆ. ಕೆಲವೇ ದಿನಗಳಲ್ಲಿ ಈ ಆಪ್ ಅನ್ನು ಲಾಂಚ್ ಮಾದಲಾಗುತ್ತಿದೆ. ಈ ಆಪ್ ಮೂಲಕ ಅಭಿಮಾನಿಗಳಿಗೆ ಅಪ್ಪು ಅವರನ್ನು ಹತ್ತಿರ ಮಾಡುತ್ತಿರುವ ಡಾ. ಸಮರ್ಥ್ ಹಾಗೂ ಅವರ ತಂಡಕ್ಕೆ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ವಿಶ್ ಮಾಡಿದ್ದಾರೆ..
ಅಭಿಮಾನಿಗಳಿಗಾಗಿ ಈ ರೀತಿ ಆಪ್ ತಯಾರಾಗುತ್ತಿರುವುದು ಇದೇ ಮೊದಲು. ಎಲ್ಲಾ ವಿಚಾರದಲ್ಲೂ ವಿಶೇಷತೆ ತರುವ ಅಪ್ಪು ಅವರು, ಈಗ ಈ ವಿಷಯದಲ್ಲಿ ಸಹ ಸ್ಪೆಶಲ್ ಆಗಿದ್ದಾರೆ. ಇನ್ನುಮುಂದೆ ಅಪ್ಪು ಅವರ ಫ್ಯಾನ್ಸ್ ಇನ್ನು ಸ್ಪೆಷಲ್ ಆಗಿ ಪರಮಾತ್ಮನ ಜೊತೆಗೆ ಕನೆಕ್ಟ್ ಆಗಬಹುದು. ಇನ್ನು ನಿನ್ನೆಯಷ್ಟೇ ಅಪ್ಪು ಅವರ ಹುಟ್ಟುಹಬ್ಬ ಆಗಿದ್ದು, ಅಭಿಮಾನಿಗಳು ರಾಜ್ಯಾದ್ಯಂತ ಜೋರಾಗಿ, ಅದ್ಧೂರಿಯಾಗಿ ಅಪ್ಪು ಅವರ ಬರ್ತ್ ಡೇ ಸೆಲೆಬ್ರೇಟ್ ಮಾಡಿದ್ದಾರೆ. ಬೆಂಗಳೂರಿನಲ್ಲಿ ಅಪ್ಪು ಅವರ ಸ್ಮಾರಕದ ಬಳಿ ಜನಸಾಗರವೇ ನೆರೆದಿತ್ತು. ಶೀಘ್ರದಲ್ಲೇ ಈ ಆಪ್ ಕೂಡ ಲಾಂಚ್ ಆದರೆ ಅಭಿಮಾನಿಗಳ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಅಶ್ವಿನಿ ಮೇಡಂ ಸಪೋರ್ಟ್ ಸಿಕ್ಕಿರೋದು ಇನ್ನೊಂದು ರೀತಿ ಸ್ಪೆಶಲ್ ಆಗಿದೆ.