6 ವರ್ಷಗಳ ಹಿಂದೆ ಸ್ಯಾಂಡಲ್ ವುಡ್ ನಲ್ಲಿ ಭಾರಿ ಸಂಚಲನ ಸೃಷ್ಟಿಸಿದ ಸಿನಿಮಾಗಳಲ್ಲಿ ಅಯೋಗ್ಯ ಕೂಡ ಒಂದು. ನಟ ಸತೀಶ್ ನೀನಾಸಂ ಹಾಗೂ ನಟಿ ರಚಿತಾ ರಾಮ್ ಇಬ್ಬರು ಜೊತೆಯಾಗಿ ನಟಿಸಿದ ಸಿನಿಮಾ ಅಯೋಗ್ಯ. ಈ ಸಿನಿಮಾದ ಏನಮ್ಮಿ ಏನಮ್ಮಿ ಹಾಡು ಎಷ್ಟು ವೈರಲ್ ಆಗಿತ್ತು ಎಂದು ನಮಗೆಲ್ಲಾ ಗೊತ್ತೇ ಇದೆ. ಅಪ್ಪಟ ಹಳ್ಳಿ ಸೊಗಡಿನ ಲವ್ ಸ್ಟೋರಿ ಆಗಿದ್ದ ಅಯೋಗ್ಯ ಸಿನಿಮಾ ಕನ್ನಡ ಚಿತ್ರಪ್ರೇಮಿಗಳಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು, ಜನರ ಮನಗೆದ್ದ ಸಿನಿಮಾ ಇದೀಗ ಸೀಕ್ವೆಲ್ ಮೂಲಕ ಮತ್ತೆ ಬರಲಿದ್ದು. ಇಂದು ಅಯೋಗ್ಯ 2 ಸಿನಿಮಾ ಲಾಂಚ್ ಆಗಿದೆ. ಇಬ್ಬರು ಕಲಾವಿದರ ಫ್ಯಾನ್ಸ್ ಇದರಿಂದ ಬಹಳ ಖುಷಿಯಾಗಿದ್ದಾರೆ.

ನಟಿ ರಚಿತಾ ರಾಮ್ ಅವರು ಅಯೋಗ್ಯ ಸಿನಿಮಾದಲ್ಲಿ ಪಕ್ಕಾ ಮಂಡ್ಯ ಹುಡುಗಿಯಾಗಿ ಕಾಣಿಸಿಕೊಂಡಿದ್ದರು. ಸಿನಿಮಾದಲ್ಲಿ ಇವರ ಅಭಿನಯಕ್ಕೆ ಹಲವು ಪ್ರಶಸ್ತಿಗಳು ಸಹ ಸಿಕ್ಕವು. ಹಾಗೆಯೇ ಏನಮ್ಮಿ ಏನಮ್ಮಿ ಹಾಡಲ್ಲಿ ರಚಿತಾ ರಾಮ್ ಅವರ ಸುಂದರವಾದ ಡ್ಯಾನ್ಸ್ ಅನ್ನು ಕೂಡ ನಾವು ಮರೆಯುವ ಹಾಗಿಲ್ಲ. ಇನ್ನು ಸತೀಶ್ ನೀನಾಸಂ ಅವರು ತಮ್ಮ ಪಾತ್ರದಲ್ಲಿ ಎಷ್ಟು ಅಚ್ಚುಕಟ್ಟಾಗಿ ಅಭಿನಯಿಸಿದ್ದರು ಎನ್ನುವ ವಿಷಯ ಸಹ ನಮಗೆ ಗೊತ್ತೇ ಇದೆ. ಹೀಗಿರುವಾಗ ಇದೇ ಚಿತ್ರತಂಡ ಇದೀಗ ಮತ್ತೆ ಅಯೋಗ್ಯ2 ಸಿನಿಮಾ ಮೂಲಕ ವೀಕ್ಷಕರ ಎದುರು ಬರಲಿದೆ. ಇದಕ್ಕಾಗಿ ವೀಕ್ಷಕರು ಸಹ ಕಾಯುತ್ತಿದ್ದರು.
ಕಳೆದ ಕೆಲವು ದಿನಗಳಿಂದ ಅಯೋಗ್ಯ2 ಬಗ್ಗೆ ಅಪ್ಡೇಟ್ ಸಿಗುತ್ತದೆ ಎನ್ನುವ ಸುದ್ದಿ ಕೇಳಿಬಂದಿದ್ದೇನೋ ನಿಜ. ಶೀಘ್ರದಲ್ಲೇ ಅಯೋಗ್ಯ2 ಸಿನಿಮಾ ಬಗ್ಗೆ ಸತೀಶ್ ನೀನಾಸಂ ಅವರು ಅಪ್ಡೇಟ್ ಗುಡ್ ನ್ಯೂಸ್ ಕೊಡುತ್ತಾರೆ ಎನ್ನುವ ವಿಚಾರ ಅಂತೂ ಕೇಳಿ ಬರುತ್ತಲೇ ಇತ್ತು. ಇಂದು ಫೈನಲಿ ಸತೀಶ್ ನೀನಾಸಂ ಅವರು ಇಡೀ ಅಯೋಗ್ಯ2 ತಂಡದ ಜೊತೆಗೆ ಸಿನಿಮಾ ಅನೌನ್ಸ್ಮೆಂಟ್ ಮಾಡಿದ್ದಾರೆ. ನಿರ್ದೇಶಕರು, ನಿರ್ಮಾಪಕರು, ನಟ ಸತೀಶ್ ನೀನಾಸಂ ಹಾಗೂ ನಟಿ ರಚಿತಾ ರಾಮ್ ಇವರೆಲ್ಲರೂ ಸಹ ಈ ಅನೌನ್ಸ್ಮೆಂಟ್ ನಲ್ಲಿ ಪಾಲ್ಗೊಂಡಿದ್ದು, ಅನೌನ್ಸ್ಮೆಂಟ್ ಕಾರ್ಯಕ್ರಮದ ವಿಡಿಯೋ ಒಂದನ್ನು ಸಹ ಅಪ್ಲೋಡ್ ಮಾಡಿದ್ದಾರೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಅಯೋಗ್ಯ2 ಬಗ್ಗೆ ಇದೀಗ ಭಾರಿ ನಿರೀಕ್ಷೇ ಶುರುವಾಗಿದೆ. ಅಯೋಗ್ಯ ಮೊದಲ ಭಾಗ ಈಗಾಗಲೇ ಶತದಿನೋತ್ಸವ ಆಚರಿಸಿರುವ ಸಿನಿಮಾ ಆಗಿದ್ದು, ಸೂಪರ್ ಹಿಟ್ ಸಿನಿಮಾದ ಎರಡನೇ ಪಾರ್ಟ್ ಬರುತ್ತಿದೆ ಎಂದರೆ ಅಭಿಮಾನಿಗಳಲ್ಲಿ ಹಾಗೂ ಚಿತ್ರರಂಗದಲ್ಲಿ ನಿರೀಕ್ಷೆಗಳು ಜಾಸ್ತಿಯೇ ಇರುತ್ತದೆ. ಹಾಗಾಗಿ ಅಯೋಗ್ಯ2 ಸಿನಿಮಾ ಮೇಲೆ ಕೂಡ ಅದೇ ನಿರೀಕ್ಷೆ ಇದೆ. ಈ ಸಿನಿಮಾದ ಕಥೆಯನ್ನು ನಿರ್ದೇಶಕರು ಹೇಗೆ ತೆಗೆದುಕೊಂಡು ಹೋಗುತ್ತಾರೆ? ಅಯೋಗ್ಯ2 ಸಿನಿಮಾದ ಹಾಡುಗಳು ಹೇಗಿರಲಿದೆ? ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ಅವರ ಜೋಡಿ ಈ ಬಾರಿ ಹೇಗೆ ಮೋಡಿ ಮಾಡುತ್ತದೆ ಎಂದು ಕಾದು ನೋಡಬೇಕಿದೆ.
ಇನ್ನು ಸತೀಶ್ ನೀನಾಸಂ ಅವರು ಹಾಗೂ ರಚಿತಾ ರಾಮ್ ಅವರು ಇಬ್ಬರು ಸಹ ಜೊತೆಯಾಗಿ ನಟಿಸಿದ ಮೊದಲ ಸಿನಿಮಾ ಅಯೋಗ್ಯ. ಇವರಿಬ್ಬರು ಈಗ ಬೇರೆ ಬೇರೆ ಸಿನಿಮಾಗಳಲ್ಲಿ ಸಹ ಬ್ಯುಸಿ ಆಗಿದ್ದಾರೆ. ರಚಿತಾ ರಾಮ್ ಅವರು ಸಂಜು ವೆಡ್ಸ್ ಗೀತಾ ಸಿನಿಮಾದಲ್ಲಿ ಸಹ ನಟಿಸಿದ್ದು, ಈ ಸಿನಿಮಾ ಕೂಡ ಶೀಘ್ರದಲ್ಲೇ ಬಿಡುಗಡೆ ಆಗಲಿದೆ. ಶ್ರೀನಗರ ಕಿಟ್ಟಿ ಅವರ ಜೊತೆಗೆ ಸಂಜು ವೆಡ್ಸ್ ಗೀತಾ ಸಿನಿಮಾದಲ್ಲಿ ನಟಿಸಿದ್ದಾರೆ. ಇನ್ನು ಸತೀಶ್ ನೀನಾಸಂ ಅವರು ಸಹ ಬೇರೆ ಸಿನಿಮಾಗಳಲ್ಲಿ ನಟನಾಗಿ, ನಿರ್ಮಾಪಕನಾಗಿ ಸಹ ಸತೀಶ್ ಅವರು ಬ್ಯುಸಿ ಇದ್ದು, ಇದೀಗ ಇವರಿಬ್ಬರು ಅಯೋಗ್ಯ2 ಮೂಲಕ ಮತ್ತೆ ಜೊತೆಯಾಗಿದ್ದಾರೆ.