ಈಗಿನ ಕಾಲದಲ್ಲಿ ದೃಷ್ಟಿ ಅನ್ನೋದು ಒಂದು ಸಮಸ್ಯೆ ರೀತಿ ಆಗಿದೆ ಎಂದರೆ ತಪ್ಪಲ್ಲ. ಕೆಟ್ಟ ದೃಷ್ಟಿ ಹಾಕುವವರ ಸಂಖ್ಯೆ, ಹೊಟ್ಟೆ ಉರಿದುಕೊಳ್ಳುವವರ ಸಂಖ್ಯೆ ಜಾಸ್ತಿ ಆಗುತ್ತಲೇ ಇದೆ. ಇಂಥವರಿಂದ ದೂರ ಹೇಗೆ ಉಳಿಯಬೇಕು ಅನ್ನೋದು ಹಲವರಿಗೆ ಗೊತ್ತಾಗೋದಿಲ್ಲ. ಆದರೆ ನಮ್ಮನ್ನ ನಾವು ಸೇಫ್ ಮಾಡಿಕೊಳ್ಳೋದಕ್ಕೆ ಒಂದಲ್ಲಾ ಒಂದು ವಿಷಯವನ್ನು ಖಂಡಿತ ಮಾಡುತ್ತೇವೆ. ಅದರಲ್ಲು ರೈತರು ತಮ್ಮ ಜಮೀನಿಗೆ ಬೆಳೆಗೆ ದೃಷ್ಟಿ ಆಗಬಾರದು ಎಂದು ಏನಾದರೂ ಒಂದು ಬಂದೋಬಸ್ತ್ ಮಾಡುತ್ತಾರೆ. ಅದೇ ರೀತಿ ರೈತನೊಬ್ಬ ಆಂಕರ್ ಅನುಶ್ರೀ ಮತ್ತು ಕೆಲವು ಮಾಡೆಲ್ ಗಳ ಫೋಟೋವನ್ನು ದೃಷ್ಟಿ ಆಗಬಾರದು ಎಂದು ತನ್ನ ಜಮೀನಿಗೆ ಹಾಕಿದ್ದು, ಈ ಫೋಟೋಸ್ ಗಳು ಸಿಕ್ಕಾಪಟ್ಟೆ ವೈರಲ್ ಆಗಿದೆ. ಆ ರೈತ ಯಾರು? ಈ ರೀತಿ ನಡೆದಿರೋದು ಎಲ್ಲಿ? ಪೂರ್ತಿ ಡೀಟೇಲ್ಸ್ ಇಲ್ಲಿದೆ ನೋಡಿ..
ಆಂಕರ್ ಅನುಶ್ರೀ ಹಾಗೂ ಕೆಲವು ಮಾಡೆಲ್ ಗಳ ಫೋಟೋವನ್ನು ದೃಷ್ಟಿ ಬೊಂಬೆಯ ಬದಲಾಗಿ ಹಾಕಿರುವ ಘಟನೆ ನಡೆದಿರುವುದು ಮೈಸೂರಿನ, ನಂಜನಗೂಡಿನಲ್ಲಿ. ಹೌದು, ನಂಜನಗೂಡಿನಿಂದ ಮಡಹಳ್ಳಿ ಮತ್ತು ತಗಡೂರು ಹಳ್ಳಿಗೆ ಹೋಗುವ ದಾರಿಯಲ್ಲಿ ಸೋಮೇಶ್ ಎನ್ನುವವರ 4 ಎಕರೆ ನೆಲ ಇದೆ. ಅಲ್ಲಿ ಅವರು ಬಾಳೆ ಬೆಳೆದಿದ್ದಾರೆ. ಬೆಳೆ ಎಷ್ಟು ಚೆನ್ನಾಗಿ ಬಂದಿದೆ ಬಂದರೆ, ನೋಡೋರ ದೃಷ್ಟಿ ಬೀಳುಗ ಹಾಗಿದೆ. ಅಷ್ಟು ಸುಂದರವಾದ ತೋಟ ಮತ್ತು ಬೆಳೆ ಎರಡು ಕೂಡ ಸುಂದರ. ಬೆಳೆ ಸುಂದರವಾಗಿ ಬಂದಾಗ ರೈತರಿಗೆ ಸಾಮಾನ್ಯವಾಗಿ ಭಯ ಕೂಡ ಇದ್ದೇ ಇರುತ್ತದೆ. ತಮ್ಮ ನೆಲದ ಮೇಲೆ ಅಥವ ಬೆಳೆಯ ಮೇಲೆ ಯಾರದ್ದಾದರು ಕೆಟ್ಟ ದೃಷ್ಟಿ ಬಿದ್ದರೆ ಎನ್ನುವ ಭಯ ಕೂಡ ಇರುತ್ತದೆ. ಇದಕ್ಕಾಗಿ ಏನಾದರೂ ಸೇಫ್ಟಿ ಗಾಗಿ ಐಡಿಯಾ ಮಾಡುತ್ತಾರೆ. ಮೊದಲೆಲ್ಲಾ ದೃಷ್ಟಿ ಬೊಂಬೆಗಳನ್ನು ತೋಟದಲ್ಲಿ, ಗದ್ದೆಗಳಲ್ಲಿ ಇಡುತ್ತಿದ್ದರು.

ಆದರೆ ಇದು ಸೋಷಿಯಲ್ ಮೀಡಿಯಾ ಯುಗ, ಮೊದಲಿನ ಹಾಗೆ ಯಾವುದು ಇಲ್ಲ. ಈಗ ಎಲ್ಲವೂ ಬದಲಾಗಿದೆ. ಕೆಲ ದಿನಗಳ ಹಿಂದೆ ಒಬ್ಬ ಮಹಿಳೆಯ ಫೋಟೋವನ್ನು ದೃಷ್ಟಿ ಬೊಂಬೆಯ ಬದಲಾಗಿ ಇಡಲಾಗಿತ್ತು, ಆ ಫೋಟೋಗಳು ಕೂಡ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆದರೆ ನಂಜನಗೂಡಿನ ರೈತ ಸೋಮೇಶ್ ಅವರು ಇದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ, ತಮ್ಮ ನೆಲಕ್ಕೆ ದೃಷ್ಟಿ ಬೊಂಬೆಯ ಬದಲಾಗಿ ಮಾಡೆಲ್ ಗಳ ಫೋಟೋ ಹಾಕಿದ್ದಾರೆ. ಜಮೀನಿನ 10 ಕಡೆಗಳಲ್ಲಿ ಮಾಡೆಲ್ ಗಳ ಫೋಟೋ ಹಾಕಿದ್ದು, ಅದರಲ್ಲಿ ಕನ್ನಡದ ಖ್ಯಾತ ಆಂಕರ್ ಅನುಶ್ರೀ ಅವರ ಫೋಟೋ ಕೂಡ ಇದೆ. ಇದನ್ನ ನೋಡಿದರೆ ಒಂದು ಕ್ಷಣಕ್ಕೆ ನಮಗೆ ನಗು ಬರುವುದಂತೂ ನಿಜ. ಅನುಶ್ರೀ ಅವರ ಫೋಟೋ ಆಗಲಿ, ಮಾಡೆಲ್ ಗಳ ಫೋಟೋ ಆಗಲಿ ಯಾಕೆ ಹಾಕಬೇಕಿತ್ತು ಅಂತ ಅನ್ನಿಸೋದು ಕೂಡ ನಿಜ. ಆದರೆ ರೈತ ಸೋಮೇಶ್ ಅವರು ಹೇಳುವುದೇ ಬೇರೆ..
ಸೋಮೇಶ್ ಅವರ ಮಾತು ಏನು ಎಂದರೆ, ಅವರ ಜಮೀನಿನಲ್ಲಿ ಬೆಳೆ ಅಷ್ಟು ಚೆನ್ನಾಗಿ ಬಂದಿರುವ ಕಾರಣ ಸೋಮೇಶ್ ಅವರಿಗೆ ದೃಷ್ಟಿ ಬಿದ್ದರೆ ಎನ್ನುವ ಭಯ ಕೂಡ ಇತ್ತಂತೆ. ಆದರೆ ಈ ಮಾಡೆಲ್ ಗಳ ಫೋಟೋಗಳನ್ನು ಜಮೀನಿನಲ್ಲಿ ಹಾಕಿದ ಬಳಿಕ ಯಾವುದೇ ರೀತಿಯ ದೃಷ್ಟಿ ಆಗಿಲ್ಲವಂತೆ. ಎಲ್ಲವೂ ತುಂಬಾ ಚೆನ್ನಾಗಿ ನಡೆದುಕೊಂಡು ಹೋಗುತ್ತಿದೆಯಂತೆ. ಈ ವಿಚಾರವನ್ನು ಸೋಮೇಶ್ ಅವರು ಹೇಳಿದ್ದು, ಬಹುಶಃ ಮುಂದಿನ ದಿನಗಳಲ್ಲಿ ಬೇರೆ ರೈತರು ಕೂಡ ಈ ರೀತಿ ಮಾಡೆಲ್ ಗಳ ಫೋಟೋಗಳು ಅಥವಾ ಆಂಕರ್ ಅನುಶ್ರೀ ಅವರ ಫೋಟೋಗಳನ್ನು ತಮ್ಮ ಗದ್ದೆ ಜಮೀನುಗಳಲ್ಲಿ ದೃಷ್ಟಿಯ ಬದಲಾಗಿ ಹಾಕಿಕೊಂಡರೆ ಆಶ್ಚರ್ಯ ಪಡಬೇಕಾಗಿಲ್ಲ. ಒಟ್ಟಿನಲ್ಲಿ ರೈತರು ಕೂಡ ಅಪ್ಡೇಟ್ ಆಗಿ, ಹೊಸ ಹೊಸತನ್ನು ಏನಾದರೂ ಪ್ರಯತ್ನ ಪಡುತ್ತಲೇ ಇದ್ದಾರೆ.

ಇನ್ನು ಆಂಕರ್ ಅನುಶ್ರೀ ಅವರ ಫೋಟೋ ಹಾಕಿರುವುದು ಇದೇ ಮೊದಲಿರಬಹುದು, ಆದರೆ ಈ ಮೊದಲು ನಟಿ ಶ್ರೀಲೀಲಾ ಅವರ ಫೋಟೋ, ಸನ್ನಿ ಲಿಯೋನ್ ಅವರ ಫೋಟೋಗಳನ್ನು ಕೂಡ ದೃಷ್ಟಿ ಬೊಂಬೆಯ ಬದಲಾಗಿ ಹಾಕಲಾಗಿದೆ. ಇದು ನೆಟ್ಟಿಗರಾಗಿ ನಮಗೆ ತಮಾಷೆ ಅನ್ನಿಸುತ್ತದೆ. ಆದರೆ ಒಬ್ಬ ನಟಿಯಾಗಿ ಅಥವಾ ಹೆಣ್ಣಾಗಿ ನೋಡಿದರೆ ಈ ರೀತಿ ಮಾಡುವುದು ತಪ್ಪು ಎಂದು ಕೂಡ ಅನ್ನಿಸದೇ ಇರದು. ನಮ್ಮ ಹಿರಿಯರು ಒಂದು ಅರ್ಥದಿಂದ ಉದ್ದೇಶದಿಂದ ದೃಷ್ಟಿ ಬೊಂಬೆಗಳನ್ನು ಜಮೀನಿನಲ್ಲಿ ಗದ್ದೆಗಳಲ್ಲಿ ಹಾಕುವುದಕ್ಕೆ ಶುರು ಮಾಡಿದ್ದರು, ಅದೇ ಪದ್ಧತಿ ಮತ್ತೆ ಶುರುವಾದರೆ ಎಲ್ಲವು ಒಳ್ಳೆಯದಾಗುತ್ತದೆ.. ರೈತರಿಗೆ ಒಳ್ಳೆಯ ಬೆಳೆ ಬರಬೇಕು, ಬೆಳೆಗೆ ತಕ್ಕ ಬೆಲೆ ಕೂಡ ಸಿಗಬೇಕು. ರೈತ ಚೆನ್ನಾಗಿದ್ದರೆ ಇಡೀ ದೇಶದ ಜನತೆಯ ಹೊಟ್ಟೆ ತಣ್ಣಗಿರುತ್ತದೆ.