ಜೀಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ಸತ್ಯ ಧಾರವಾಹಿ ಯಾರಿಗೆ ತಾನೇ ಇಷ್ಟ ಆಗಿರಲಿಲ್ಲ ಹೇಳಿ? ರೌಡಿ ಬೇಬಿ ಸತ್ಯ ಪಾತ್ರದಲ್ಲಿ ನಟಿ ಗೌತಮಿ ಜಾಧವ್ ಅಷ್ಟು ಅದ್ಭುತವಾಗಿ ನಟಿಸಿದ್ದರು. ಸೀರಿಯಲ್ ನಲ್ಲಿ ಪಕ್ಕಾ ಲೋಕಲ್ ಗರ್ಲ್ ಆಗಿ, ಮಾಸ್ ಹುಡುಗನ ಹಾಗಿರುವ ಹುಡುಗಿಯ ಹಾಗೆ ಕಾಣಿಸಿಕೊಂಡಿದ್ದರು ಗೌತಮಿ. ಇವರನ್ನ ಎಲ್ಲರೂ ಸತ್ಯ ಎಂದೇ ಕರೆಯುವುದಕ್ಕೆ ಶುರು ಮಾಡಿದ್ದರು, ಇವರ ಸ್ಟೈಲ್, ಕನ್ನಡ ಮಾತನಾಡುವ ಶೈಲಿ, ಬೈಕ್ ಓದಿಸಿಕೊಂಡು ಬರುವುದು ಇದೆಲ್ಲವು ಜನರಿಗೆ ತುಂಬಾ ಇಷ್ಟವಾಗಿತ್ತು. ಸತ್ಯ ಧಾರಾವಾಹಿ ಅದಕ್ಕಿಂತ ಮೊದಲು ಇನ್ನು ಕೆಲವು ಧಾರಾವಾಹಿಗಳು ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ ಗೌತಮಿ. ಆದರೆ ಇವರಿಗೆ ಹೆಸರು ತಂದುಕೊಟ್ಟಿದ್ದು ಸತ್ಯ ಧಾರಾವಾಹಿ..
ಶಾರ್ಟ್ ಹೇರ್ ಲುಕ್ ನಲ್ಲಿ, ಖಡಕ್ ಆಗಿ ತುಂಬಾ ಚೆನ್ನಾಗಿ ಅಭಿನಯಿಸುತ್ತಿದ್ದರು ಗೌತಮಿ. ಇವರ ನಟನೆಯ ಬಗ್ಗೆ ಹೇಳೋದಕ್ಕೆ ಎರಡು ಮಾತಿಲ್ಲ. ಇಂಥ ಗೌತಮಿ ಅವರು ಸತ್ಯ ಧಾರಾವಾಹಿ ಮುಗಿದ ಬಳಿಕ ಬಂದಿದ್ದು ಬಿಗ್ ಬಾಸ್ ಶೋಗೆ. ಈ ಶೋನಲ್ಲಿ ಗೌತಮಿ ಅವರ ನಿಜ ವ್ಯಕ್ತಿತ್ವ ಗೊತ್ತಾಯಿತು. ಧಾರಾವಾಹಿಯಲ್ಲಿ ಸದಾ ಮಾಸ್ ಆಗಿರುತ್ತಿದ್ದ ಗೌತಮಿ, ಬಿಗ್ ಬಾಸ್ ಮನೆಯೊಳಗೆ ಬಹಳ ಕೂಲ್ ಆಗಿ ಸಾಫ್ಟ್ ಆಗಿ ಇರುತ್ತಿದ್ದರು. ಇವರು ಜಗಳ ಆಡಿದ್ದು, ಜೋರಾಗಿ ಮಾತನಾಡಿದ್ದು ಕೂಡ ಬಹಳ ಕಡಿಮೆ. ಹಲವು ಜನ ಗೌತಮಿ ಫೇಕ್ ಮಾಡುತ್ತಿದ್ದಾರೆ ಅಂದುಕೊಂಡಿದ್ದು ಸುಳ್ಳಲ್ಲ, ಆದರೆ ಗೌತಮಿ ಅವರ ಸ್ವಭಾವ ಇರುವುದೇ ಹಾಗೆ. ಸದಾ ಪಾಸಿಟಿವ್ ಆಗಿರುವುದಕ್ಕೆ ಪ್ರಯತ್ನ ಪಡುವ ಹುಡುಗಿ ಗೌತಮಿ. ಬಿಗ್ ಬಾಸ್ ಮನೆಯ ಒಳಗೆ ಅದೇ ರೀತಿ ಇದ್ದರು..

ಯಾರ ವಿಷಯಕ್ಕೂ ಅನಾವಶ್ಯಕವಾಗಿ ಹೋಗುತ್ತಿರಲಿಲ್ಲ. ಬೇಕೆಂದೇ ಜಗಳ ಆಡುತ್ತಿರಲಿಲ್ಲ, ಆದರೆ ಇವರು ಹೆಚ್ಚಾಗಿ ಗುರುತಿಸಿಕೊಂಡಿದ್ದು ಮಂಜು ಅವರ ಫ್ರೆಂಡ್ಶಿಪ್ ಇಂದ. ಮೊದಲಿಗೆ ಗೌತಮಿ, ಮಂಜು ಮತ್ತು ಮೋಕ್ಷಿತಾ ಜೊತೆಯಾಗಿರುತ್ತಿದ್ದರು. ಅಣ್ಣ ತಂಗಿಯರ ಬಾಂಧವ್ಯ ಇವರಲ್ಲಿತ್ತು, ಆದರೆ ಕೆಲ ದಿನಗಳ ನಂತರ ಮೋಕ್ಷಿತಾ ಇವರಿಬ್ಬರಿಂದ ದೂರವಾದರು. ಆಗ ಉಳಿದಿದ್ದು ಗೌತಮಿ ಮತ್ತು ಮಂಜು ಮಾತ್ರ. ಆ ವೇಳೆ ಮಂಜು ಅವರಿಂದ ಗೌತಮಿ ಅವರಿಗೆ ನೋವಾದರು ಸಹ, ಸಂಭಾಳಿಸಿಕೊಂಡು ಹೋಗುತ್ತಿದ್ದರು. ಶೋ ಮುಗಿಯುವ ಕೆಲ ವಾರಗಳಿರುವಾಗ ಗೌತಮಿ ಅವರ ಪತಿ ಅಭಿಷೇಕ್ ಬಂದು ತಿಳಿಸಿ ಹೇಳಿದಾಗ ಎಲ್ಲವನ್ನು ಅರ್ಥ ಮಾಡಿಕೊಂಡರು ಗೌತಮಿ..
ಒಟ್ಟಿನಲ್ಲಿ ಇವರಿಬ್ಬರ ಫ್ರೆಂಡ್ಶಿಪ್ ವಿಚಾರಕ್ಕೆ ಸಿಕ್ಕಾಪಟ್ಟೆ ಸುದ್ದಿ ಆಗಿದ್ದಂತೂ ಹೌದು. ಹೊರಗಡೆ ಬಂದ ಮೇಲೆ ಸಹ ಗೌತಮಿ ಹಾಗೂ ಮಂಜು ಅವರ ಫ್ರೆಂಡ್ಶಿಪ್ ಬಗ್ಗೆ ಕೇಳಲಾಗುತ್ತಿತ್ತು, ಹಾಗೆಯೇ ಬಿಗ್ ಬಾಸ್ ಮನೆಯೊಳಗೆ ಆದ ವಿಶೇಷ ಅನುಭವಗಳ ನಗ್ಗೆ ಗೌತಮಿ ಅವರಿಗೆ ಪ್ರಶ್ನೆ ಕೇಳಲಾಗುತ್ತಿದೆ. ಅದಕ್ಕೆಲ್ಲಾ ಚೆನ್ನಾಗಿಯೇ ಉತ್ತರ ಕೊಡುತ್ತಿದ್ದಾರೆ. ಇದೆಲ್ಲದರ ನಡುವೆ ಈಗ ಗೌತಮಿ ಅವರ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ಹಾಗೆ ಮತ್ತೊಂದು ಸುದ್ದಿ ಕೇಳಿಬರುತ್ತಿದ್ದು, ಇವರ ಗಂಡನ ಮನೆಯವರ ಜೊತೆಗೆ ಎಲ್ಲವೂ ಸರಿಯಿಲ್ಲ ಎಂದು ಗೊತ್ತಾಗುವ ಹಾಗೆ ಮಾಡಿದ್ದು, ಗೌತಮಿ ಅವರ ಮಾವ ಅಂದರೆ ಗೌತಮಿ ಅವರ ಪತಿ ಅಭಿಷೇಕ್ ಕಾಸರಗೋಡು ಅವರ ತಂದೆ ಗಣೇಶ್ ಕಾಸರಗೋಡು ಅವರ ಸೋಷಿಯಲ್ ಮೀಡಿಯಾ ಪೋಸ್ಟ್. ಇದು ಸಾಕಷ್ಟು ಅನುಮಾನಗಳು ಮತ್ತು ಪ್ರಶ್ನೆಗಳನ್ನು ಹುಟ್ಟು ಹಾಕಿದೆ..

ಗೌತಮಿ ಅವರು ಎಲಿಮಿನೇಟ್ ಆಗಿ ಹೊರಬಂದ ದಿವಸ ಅವರ ಮಾವ ಗಣೇಶ್ ಅವರು, ತಪ್ಪು ಕೋರಿಕೆಗಳನ್ನು ತಾಯಿ ವನದೇವಿ ಪೂರೈಸುವುದಿಲ್ಲ ಎನ್ನುವ ಅರ್ಥದಲ್ಲಿ ಪೋಸ್ಟ್ ಹಾಕಿದ್ದರು. ಸೊಸೆ ಎಲಿಮಿನೇಟ್ ಆಗಿದ್ದನ್ನು ಸಂಭ್ರಮಿಸುತ್ತಿದ್ದಾರೆ ಎನ್ನುವ ಅರ್ಥ ಆ ಪೋಸ್ಟ್ ನಲ್ಲಿ ತಿಳಿದುಬಂದಿತ್ತು. ಬಳಿಕ ಗಣೇಶ್ ಕಾಸರಗೋಡು ಅವರು ಇನ್ನೊಂದು ಪೋಸ್ಟ್ ಹಂಚಿಕೊಂಡರು, ಅದರಲ್ಲಿ..
“ಅಪ್ಪ-ಅಮ್ಮನನ್ನು ಬಿಟ್ಟು ಕುರುಡು ಮೋಹಕ್ಕೆ ಮರುಳಾಗಿ ಹೆಂಡತಿಯ ಬಾಲ ಹಿಡಿದು ಹೊರಟು ಹೋಗುವ ನಿಯತ್ತಿಲ್ಲದ ಗಂಡು ಮಕ್ಕಳಿಗೆ ಅರ್ಪಣೆ…!” ಎಂದು ಬರೆಯಲಾಗಿತ್ತು. ಈ ಪೋಸ್ಟ್ ಸಹ ಸಿಕ್ಕಾಪಟ್ಟೆ ವಿವಾದಕ್ಕೆ ಕಾರಣವಾಯಿತು. ಇದರ ಜೊತೆಗೆ ಇದೀಗ ಇನ್ನೊಂದು ಪೋಸ್ಟ್ ಶೇರ್ ಮಾಡಿದ್ದಾರೆ. ಅದರಲ್ಲಿ ಅವರ ಕಿರಿಯಮಗ, ಸೊಸೆ, ಗಣೇಶ್ ಅವರು ಮತ್ತು ಅವರ ಪತ್ನಿ ಇದ್ದಾರೆ.
“ಯಾವವ ಸುಂಟರಗಾಳಿಯೂ ಇಲ್ಲ ಬಿರುಗಾಳಿಯೂ ಇಲ್ಲ, ಇದು ನಮ್ಮ ಹ್ಯಾಪಿ ಕುಟುಂಬ..”, ಎಂದು ಕ್ಯಾಪ್ಶನ್ ಬರೆದು ಫೋಟೋ ಶೇರ್ ಮಾಡಿದ್ದಾರೆ. ಗೌತಮಿ ಅವರ ಮಾವ ಈ ರೀತಿ ಪೋಸ್ಟ್ ಮಾಡಿರುವುದು ಅನುಮಾನ ತಂದಿದ್ದು, ಇವರ ನಡುವೆ ಎಲ್ಲವೂ ಸರಿ ಇಲ್ಲ, ಅಲ್ಲೇನೋ ಸಮಸ್ಯೆ ಇದೆ ಎನ್ನುವ ಹಾಗಿದೆ. ಈ ಬಗ್ಗೆ ಗಣೇಶ್ ಕಾಸರಗೋಡು ಅವರನ್ನೇ ಕೇಳಿದಾಗ, ಅಭಿಷೇಕ್ ಗೌತಮಿಯನ್ನೇ ಕೇಳಿ ಎಂದಿದ್ದಾರೆ. ಇನ್ನು ಗೌತಮಿ ಅವರನ್ನು ಕೇಳಿದಾಗ, ಕುಟುಂಬದ ವಿಷಯ ಕುಟುಂಬದ ನಡುವೆಯೇ ಇರಬೇಕು ಎಂದಿದ್ದಾರೆ. ಇನ್ನು ಗೌತಮಿ ಅವರ ಪತಿಯ ಬಗ್ಗೆ ಹೇಳುವುದಾದರೆ ಇವರ ಹೆಸರು ಅಭಿಷೇಕ್ ಕಾಸರಗೋಡು, ಇವರು ಚಂದನವನದಲ್ಲಿ ಸಿನಿಮಾಟೋಗ್ರಾಫರ್ ಆಗಿ ಗುರುತಿಸಿಕೊಂಡಿದ್ದಾರೆ.

ಕವಲುದಾರಿ ಸೇರಿದಂತೆ ಉತ್ತಮವಾದ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅಭಿಷೇಕ್ ಹಾಗೂ ಗೌತಮಿ ಅವರದ್ದು ಲವ್ ಮ್ಯಾರೇಜ್. ಅಭಿಷೇಕ್ ಹಾಗೂ ಗೌತಮಿ ಅವರದ್ದು ಲವ್ ಮ್ಯಾರೇಜ್, ಅಭಿಷೇಕ್ ಅವರ ತಂದೆ ಗಣೇಶ್ ಕಾಸರಗೋಡು ಅವರು ಕನ್ನಡ ಚಿತ್ರರಂಗದ ಹಿರಿಯ ಪತ್ರಕರ್ತರಲ್ಲಿ ಒಬ್ಬರು. ಹಾಗೆಯೇ ಇವರು ಬರಹಗಾರರು ಸಹ ಹೌದು. ಈಗ ಇವರೆಲ್ಲರೂ ಜೊತೆಯಾಗಿ ವಾಸ ಮಾಡುತ್ತಿಲ್ಲ. ಅಭಿಶೇಕ್ ಗೌತಮಿ ಬೇರೆ ಇದ್ದು, ಗಣೇಶ್ ಕಾಸರಗೋಡು ಅವರು ತಮ್ಮ ಕಿರಿಯ ಮಗನ ಜೊತೆಗೆ ಇದ್ದಾರೆ. ಇದೆಲ್ಲವೂ ಸಹ ಗೌತಮಿ ಅವರ ವೈಯಕ್ತಿಕ ಜೀವನದಲ್ಲಿ ಸಮಸ್ಯೆ ತಂದಿದೆ ಎನ್ನುವುದನ್ನು ತೋರಿಸಿಕೊಡುತ್ತಿದೆ.