ದೇಶದಲ್ಲೇ ದಿ ಬೆಸ್ಟ್ ಸಾರಿಗೆ ಸೇವೆಗೆ ಸಾಕ್ಷಿಯಾಗಿ ನಮ್ಮ ರಾಜ್ಯವೇ ಮೊದಲ ಸಾಲಿನಲ್ಲಿ ಬರುತ್ತೆ. ಅದ್ರಲ್ಲೂ ಶಕ್ತಿ ಯೋಜನೆ ಬಂದಾಗಲಿಂದಲೂ ರಾಜ್ಯದ ಎಲ್ಲಾ ಸಾರಿಗೆ ಬಸ್ ಗಳಲ್ಲೂ ಮಹಿಳೆಯರ ಕಾರುಬಾರು ಶುರುವಾಗಿಬಿಟ್ಟಿದೆ. ನಿತ್ಯವೂ ಲಕ್ಷಾಂತರ ಮಹಿಳೆಯರು ಉಚಿತ ಸೇವೆ ಪಡೆಯುತ್ತಿದ್ದು ಸೀಟ್ ಗಾಗಿ ಜಡೆ ಜಗಳವು ಸಾಮಾನ್ಯವಾಗಿದೆ. ಇಷ್ಟೆಲ್ಲದರ ನಡುವೆ ಸಾರಿಗೆ ಸಚಿವರು ಶಾಕಿಂಗ್ ನ್ಯೂಸ್ ಒಂದನ್ನ ನೀಡಿದ್ದು, ಬಸ್ ನ ಚಾಲಕ, ನಿರ್ವಾಹಕರ ಎದೆ ನಡುಗಿಸುವಂತೆ ಮಾಡಿದ್ದಾರೆ.

ರಾಜ್ಯದಲ್ಲಿ ಶಕ್ತಿ ಯೋಜನೆ ಜಾರಿಯಾಗಿ ಈ ತಿಂಗಳ 11ಕ್ಕೆ ಎರಡು ತಿಂಗಳು ಕಂಪ್ಲೀಟ್ ಆಗುತ್ತೆ. ಒಂದೊಳ್ಳೇ ಯೋಜನೆ ಎಂಬ ಸಂದೇಶಗಳು ಇತರೆ ರಾಜ್ಯಗಳಿಂದ ಪ್ರಶಂಸೆಗಳ ಸುರಿಮಳೆಯೂ ರಾಜ್ಯ ಸರ್ಕಾರಕ್ಕೆ ಹರಿದು ಬರ್ತಿದೆ. ನಿತ್ಯವೂ ಕೆಎಸ್ಆರ್ಟಿಸಿ, ಬಿಎಂಟಿಸಿ, ಕೆಕೆಆರ್ಟಿಸಿ, ಎನ್ಡಬ್ಲ್ಯೂಕೆಆರ್ಟಿಸಿ ಬಸ್ ಗಳಲ್ಲಿ ಲಕ್ಷಾಂತರ ಮಹಿಳಾ ಪ್ರಯಾಣಿಕರು ಸಂಚಾರ ನಡೆಸುತ್ತಿದ್ದಾರೆ. ಪ್ರತಿ ನಿತ್ಯ ಗ್ರಾಮೀಣ ಸಾರಿಗೆ ಹಾಗೂ ನಗರ ಸಾರಿಗೆ ಬಸ್ ಗಳಲ್ಲಿ ನಿಲ್ಲೋಕೂ ಜಾಗವಿಲ್ಲದಷ್ಟು ಪ್ರಯಾಣಿಕರು ಸಂಚಾರ ಮಾಡ್ತಿದ್ದು, ಸರ್ಕಾರಕ್ಕೆ ಇದು ಒಳ್ಳೆ ರೆಸ್ಪಾನ್ಸ್ ಅಂದ್ರೆ ತಪ್ಪಾಗಲ್ಲ.
ಇದೆಲ್ಲವೂ ಒಂದು ಕಡೆ ಆದ್ರೆ, ಇತ್ತೀಚಿನ ದಿನಗಳಲ್ಲಿ ಮಹಿಳಾ ಪ್ರಯಾಣಿಕರ ಮೇಲೆ ಬಸ್ ನಲ್ಲಿರುವ ಸಿಬ್ಬಂದಿಗಳಿಂದ ಗಲಾಟೆ, ಹಲ್ಲೆ ಪ್ರಕರಣಗಳೂ ಕೇಳಿ ಬರುತ್ತಿವೆ. ಹೀಗಾಗಿ ಇಂತಹ ಪ್ರಕರಣ ಮರುಕಳಿಸದಂತೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಕೆ ನೀಡಿದ್ದಾರೆ. ಬಸ್ ಗಳಲ್ಲಿ ಪ್ರಯಾಣಿಸುವ ವೇಳೆ ಬಸ್ ನ ಸಿಬ್ಬಂದಿ ಮಹಿಳೆಯರ ಮೇಲೆ ಗಲಾಟೆ, ಹಲ್ಲೆ ಮಾಡಿದ್ರೆ ಕೂಡಲೇ ಡಿಸ್ಮಿಸ್ ಮಾಡಲಾಗುತ್ತೆ ಎಂಬ ಖಡಕ್ ಸಂದೇಶ ರವಾನಿಸಿದ್ದಾರೆ.
ಇನ್ನು, ಕಳೆದ ಎರಡು ತಿಂಗಳಿಂದ ಸಂಚಾರದ ವಿಚಾರವಾಗಿ ಮಹಿಳೆಯರಿಂದ ಮಹಿಳೆಯರೇ ಗಲಾಟೆ ಪ್ರಕರಣಗಳು ಸಾಕಷ್ಟು ಕೇಳಿ ಬಂದಿದೆ. ಇದ್ರ ನಡುವೆ ನಮ್ಮ ಸಿಬ್ಬಂದಿಗಳಿಂದಲೂ ಹಲ್ಲೆಯಾಗಿರುವ ವಿಚಾರವಾಗಿ ಐದಾರು ಪ್ರಕರಣ ಸಾರಿಗೆ ಇಲಾಖೆಯಲ್ಲಿ ದಾಖಲಾಗಿದೆ. ಇದರ ಬಗ್ಗೆ ಆಯಾ ಎಂಡಿಗಳಿಗೆ ಸೂಚಿಸಿದ್ದೇನೆ. ಎಲ್ಲೆಲ್ಲಿ , ಯಾವ ಸಮಯಕ್ಕೆ ಪ್ರಕರಣ ನಡೆದಿದೆ ಅಂತಲೂ ತಿಳಿಸಲಾಗಿದೆ. ಅದೆಲ್ಲವೂ ಸಾಬೀತಾದ್ರೆ ಅವರಿಗೂ ಡಿಸ್ಮಿಸ್ ಕಟ್ಟಿಟ್ಟ ಬುತ್ತಿ ಎನ್ನಲಾಗಿದೆ.ಸಚಿವರ ಖಡಕ್ ಸಂದೇಶ ಇದೀಗ ಎಲ್ಲಾ ಚಾಲಕ ನಿರ್ವಾಹಕರಿಗೆ ತಲೆ ನೋವು ತರಿಸಿದೆ.