ಕನ್ನಡ ಕಿರುತೆರೆಯಲ್ಲಿ ಬಹಳಷ್ಟು ಜನಪ್ರಿಯತೆ ಪಡೆದು ಯಶಸ್ವಿ ಆಗಿರುವ ಧಾರಾವಾಹಿಗಳಲ್ಲಿ ಅಮೃತಧಾರ ಕೂಡ ಒಂದು. ಈ ಧಾರಾವಾಹಿ ಜನರಿಗೆ ತುಂಬಾ ಇಷ್ಟವಾಗಿದೆ. ಆದರೆ ಇದೀಗ ಅಮೃತಧಾರೆ ಧಾರಾವಾಹಿಯಲ್ಲಿ ಅಪೇಕ್ಷ ಪಾತ್ರದಲ್ಲಿ ನಟಿಸುತ್ತಿರುವ ಅಮೃತಾ ಸುಧು ಅವರಿಗೆ ಜನರು ಕಾಮೆಂಟ್ಸ್ ಗಳ ಮೂಲಕ ಬುದ್ಧಿವಾದ ಹೇಳುತ್ತಿದ್ದಾರೆ. ಕ್ಯಾರೆಕ್ಟರ್ ಸರಿಯಾಗಿ ಮಾಡಮ್ಮಾ ಎಂದು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಅಷ್ಟಕ್ಕೂ ಏನಾಗಿದೆ? ಚೆನ್ನಾಗಿರೋ ಧಾರಾವಾಹಿಯಲ್ಲಿ ನಟನೆ ಮಾಡ್ತಿರೋ ಇವರಿಗೆ ಜನರು ಕ್ಲಾಸ್ ತೆಗೆದುಕೊಂಡು, ಟ್ರೋಲ್ ಮಾಡ್ತಿರೋದು ಯಾಕೆ? ಫುಲ್ ಡೀಟೇಲ್ಸ್ ಇಲ್ಲಿದೆ ನೋಡಿ..

ಅಮೃತಧಾರೆ ಕಳೆದ ವರ್ಷ ಶುರುವಾದ ಧಾರಾವಾಹಿ. ಇದು ಹಿಂದಿಯ ಬಡೇ ಅಚ್ಛೆ ಲಗತೆ ಹೇ ಧಾರಾವಾಹಿಯ ರಿಮೇಕ್ ಆಗಿದೆ. ಆದರೆ ಕನ್ನಡದಲ್ಲಿ ಸಹ ಈ ಧಾರಾವಾಹಿಗೆ ಒಳ್ಳೆಯ ಜನಪ್ರಿಯತೆ ಸಿಕ್ಕಿದೆ. ಈ ವರ್ಷ ಜೀಕುಟುಂಬ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಗೌತಮ್ ಭೂಮಿಕಾ ಅವರಿಗೆ ಬೆಸ್ಟ್ ಜೋಡಿ ಅವಾರ್ಡ್ ಸಿಕ್ಕಿತು, ಇನ್ನು ಗೌತಮ್ ಅವರಿಗೆ ಬೆಸ್ಟ್ ಅಳಿಯ, ಭೂಮಿಕಾಗೆ ಬೆಸ್ಟ್ ನಟಿ ಅವಾರ್ಡ್ ಸಹ ಕೊಡಲಾಯಿತು. ಪ್ರತಿ ವಾರ ಟಿಆರ್ಪಿ ರೇಟಿಂಗ್ ನಲ್ಲಿ ಸಹ ಅಮೃತಧಾರೆ ಮುಂದಿದೆ. ಎರಡನೇ ಅಥವಾ ಮೂರನೇ ಸ್ಥಾನದಲ್ಲಿ ಇರುತ್ತದೆ. ಕೆಲ ವಾರಗಳ ಹಿಂದೆ ಕರ್ನಾಟಕದ ನಂಬರ್ 1 ಧಾರವಾಹಿ ಆಗಿತ್ತು ಅಮೃತಧಾರೆ.
ಇನ್ನು ಈ ಧಾರಾವಾಹಿಯ ಕಥೆ ಕೂಡ ಅಚ್ಚುಕಟ್ಟಾಗಿ ಸಾಗುತ್ತಿದೆ. ಬೇರೆ ಧಾರಾವಾಹಿಗಳ ಹಾಗೆ ಲ್ಯಾಗ್ ಇಲ್ಲದೇ, ಎಲ್ಲಾ ಸಮಸ್ಯೆಗಳಿಗೂ ಒಂದು ಪರಿಹಾರ ಕೊಡುತ್ತಾ, ಒಳ್ಳೆಯ ರೀತಿಯಲ್ಲಿ ಈ ಧಾರಾವಾಹಿಯನ್ನು ತೆಗೆದುಕೊಂಡು ಹೋಗಲಾಗುತ್ತಿದೆ. ಎಲ್ಲಾ ಪಾತ್ರಗಳಲ್ಲಿ ಅಭಿನಯಿಸುತ್ತಿರುವ ಕಲಾವಿದರ ಅಭಿನಯ ಕೂಡ ಅಷ್ಟೇ ಚೆನ್ನಾಗಿ ಮೂಡಿಬರುತ್ತಿದೆ. ಆದರೆ ಇದೀಗ ಭೂಮಿಕಾ ತಂಗಿ ಪಾತ್ರ ಆಗಿರುವ ಅಪೇಕ್ಷ ಪಾತ್ರದಲ್ಲಿ ನಟಿಸುತ್ತಿರುವ ನಟಿ ಅಮೃತಾ ಅವರಿಗೆ ನೆಟ್ಟಿಗರು ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ. ಅದಕ್ಕೆ ಕಾರಣ ಇವರ ಪಾತ್ರ ಈಗ ಭೂಮಿಕಾಗೆ ವಿರುದ್ಧವಾಗಿ ನಿಂತಿದೆ. ಆರಂಭದಿಂದಲೂ ಅಪೇಕ್ಷಾ ಮತ್ತು ಭೂಮಿಕಾ ತುಂಬಾ ಪ್ರೀತಿ ಇಂದ ಇದ್ದವರು.

ತಂಗಿಯ ಎಲ್ಲಾ ಆಸೆಗಳನ್ನು ಪೂರೈಸೋದಕ್ಕೆ ಭೂಮಿಕಾ ಪ್ರಯತ್ನ ಪಡುತ್ತಿದ್ದಳು, ಅಪೇಕ್ಷಾಳಿಗೆ ಕೂಡ ಅಕ್ಕನ ಮೇಲೆ ಅಷ್ಟೇ ಪ್ರೀತಿ ಇತ್ತು. ಅಪ್ಪ ಅಮ್ಮನಿಗಿಂತ ಅಕ್ಕನ ಮೇಲೆ ಅಪೇಕ್ಷಾಗೆ ಪ್ರೀತಿ ಇತ್ತು. ಅಷ್ಟು ಚೆನ್ನಾಗಿದ್ದ ಅಕ್ಕ ತಂಗಿ ನಡುವೆ ಭಿನ್ನಾಭಿಪ್ರಾಯ ಬರೋ ಹಾಗೆ ಮಾಡಿರೋದು ಗೌತಮ್ ತಾಯಿ ಶಕುಂತಲಾ. ಆದರೆ ಇದು ಅಪೇಕ್ಷಾಗೆ ಗೊತ್ತಿಲ್ಲದೇ ಅಕ್ಕನನ್ನು ತಪ್ಪು ತಿಳಿದುಕೊಂಡಿದ್ದಾಳೆ. ಭೂಮಿಕಾಗೆ ಎದುರು ಮಾತನಾಡೋದು, ಭೂಮಿಕಾ ಅಂದ್ರೆ ದ್ವೇಷಾ ಮಾಡೋದು ಮಾಡುತ್ತಿದ್ದಾಳೆ. ಇದು ನೆಟ್ಟಿಗರಿಗೆ ಇಷ್ಟವಾಗುತ್ತಿಲ್ಲ. ಈಗ ಭೂಮಿಕಾಗೆ ಏಟಾಗಿದ್ದರು ಸಹ ಅಕ್ಕನನ್ನು ನೋಡೋಕೆ ಅಪೇಕ್ಷಾ ಹೋಗಲಿಲ್ಲ. ಈ ರೀತಿ ಪಾತ್ರ ನೆಗಟಿವ್ ಆಗಿರೋದಕ್ಕೆ ನೆಟ್ಟಿಗರು ಇವರಿಗೆ ಕ್ಲಾಸ್ ತೆಗೆದುಕೊಳ್ಳುತ್ತಿದ್ದಾರೆ.
ಅಪೇಕ್ಷಾ ಪಾತ್ರ ನಿರ್ವಹಿಸುತ್ತಿರುವ ಅಮೃತಾ ಅವರು ಇನ್ಸ್ಟಾಗ್ರಾಮ್ ನಲ್ಲಿ ಸಿಕ್ಕಾಪಟ್ಟೆ ಆಕ್ಟಿವ್, ಆಗಾಗ ರೀಲ್ಸ್ ಶೇರ್ ಮಾಡುತ್ತಾರೆ. ಅದೇ ರೀತಿ ಕುಚ್ ಕುಚ್ ಹೋ ಗಯಾ ಹಾಡಿಗೆ ಇವರು ರೀಲ್ಸ್ ಮಾಡಿದ್ದು, ಇದಕ್ಕೆ ನೆಟ್ಟಿಗರು ಕಾಮೆಂಟ್ ಮಾಡಿ, ಬೈದಿದ್ದಾರೆ. ಮೊದಲು ಕ್ಯಾರೆಕ್ಟರ್ ಸರಿ ಮಾಡಿಕೊಳ್ಳಿ ಎಂದು ಅಪೇಕ್ಷಾ ಪಾತ್ರಕ್ಕೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಒಬ್ಬ ಕಲಾವಿದರ ಪಾತ್ರಕ್ಕೆ ಈ ರೀತಿ ನೆಗಟಿವ್ ಕಾಮೆಂಟ್ಸ್ ಬರುತ್ತಿದೆ ಎಂದರೆ ಅವರ ಅಭಿನಯ ಅಷ್ಟು ಚೆನ್ನಾಗಿ ಮೂಡಿ ಬರುತ್ತಿದೆ ಅನ್ನೋದನ್ನ ಕೂಡ ನಾವು ಅರ್ಥ ಮಾಡಿಕೊಳ್ಳಬೇಕು. ಒಟ್ಟಿನಲ್ಲಿ ಒಬ್ಬ ಕಲಾವಿದೆಯಾಗಿ ಅಮೃತಾ ಅವರು ಗೆದ್ದಿದ್ದಾರೆ.