ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಬಾಲಿವುಡ್ ನಟ ಬಿಗ್ಬಿ ಅಭಿಮಾನಿಗಳು ಆತಂಕಕ್ಕೆ ಗುರಿಯಾಗುವಂತಾಯಿತು. ತಮಗೆ ಪೆಟ್ಟಾದ ವಿಚಾರವನ್ನು ಬಿಗ್ಬಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕೌನ್ ಬನೇಗಾ ಕರೋಡ್ಪತಿ ಸೆಟ್ನಲ್ಲಿ ಕಬ್ಬಿಣದ ತುಂಡು ಕಾಲಿಗೆ ತಗುಲಿ ತೀವ್ರ ರಕ್ತಸ್ರಾವ ಆಗಿದ್ದು, ಕೂಡಲೇ ಸೆಟ್ನಲ್ಲಿ ಇದ್ದವರು ಬಿಗ್ಬಿ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವಿಚಾರವನ್ನು ತಮ್ಮ ಬ್ಲಾಗ್ನಲ್ಲಿ ಬರೆದುಕೊಂಡಿದ್ದಾರೆ.
ವೈದ್ಯರು ಗಾಯಕ್ಕೆ ಹೊಲಿಗೆ ಹಾಕಿ ಪ್ರಥಮ ಚಿಕಿತ್ಸೆ ಮಾಡಿದ್ದಾರೆ. ಜೊತೆಗೆ ಕೆಲ ದಿನಗಳ ಕಾಲ ವಿಶ್ರಾಂತಿ ಪಡೆಯಲು ಸಲಹೆ ನೀಡಿದ್ದಾರೆ. ಟ್ರೆಡ್ಮಿಲ್ ಮೇಲೆ ಕೂಡ ನಡೆಯದಂತೆ ಹೇಳಿದ್ದು, ಯಾವುದೇ ಒತ್ತಡ ಇಲ್ಲದೇ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ. ಪ್ರಸ್ತುತ ನಾನು ಆರೋಗ್ಯವಾಗಿ ಇದ್ದೀನಿ ಯಾರು ಆತಂಕಪಡಬೇಡಿ ಎಂದು ಅಮಿತಾಬ್ ಬಚ್ಚನ್ ತಿಳಿಸಿದ್ದಾರೆ. ಅಭಿಮಾನಿಗಳು ಶೀಘ್ರ ಗುಣಮುಖರಾಗುವಂತೆ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.