ಪೇರಳೆ ಹಣ್ಣು ಅಥವಾ ಸೀಬೆಕಾಯಿ ಚಳಿಗಾಲದ ಹಣ್ಣು. ಸಾಮಾನ್ಯವಾಗಿ ಪ್ರತಿಯೊಬ್ಬರು ಈ ಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಇದು ಸಿಹಿಯಾಗಿರುವುದರಿಂದ ರುಚಿ ಹೆಚ್ಚು. ಪೋಷಕಾಂಶಗಳಿಂದ ಸಮೃದ್ಧವಾಗಿರುವ ಈ ಹಣ್ಣು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ವಿಟಮಿನ್ ಸಿ, ಫೈಬರ್, ಸೋಡಿಯಂ, ಪೊಟ್ಯಾಶಿಯಂ, ಪ್ರೋಟೀನ್ ಮತ್ತು ಕಬ್ಬಿಣವು ಇದರಲ್ಲಿ ಹೇರಳವಾಗಿ ಕಂಡುಬರುತ್ತದೆ. ಇದರ ಸೇವನೆಯಿಂದ ಅನೇಕ ಆರೋಗ್ಯ ಸಮಸ್ಯೆಗಳು ಗುಣವಾಗುತ್ತವೆ. ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸುತ್ತದೆ ಮತ್ತು ತ್ವರಿತವಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಆದರೆ, ಕೆಲವರು ಪೇರಳೆ ಹಣ್ಣು ಸೇವನೆ ಮಾಡುವುದರಿಂದ ಅನಾರೋಗ್ಯವೇ ಹೆಚ್ಚು ಎಂಬುದು ನಿಮಗೆ ತಿಳಿದಿದೆಯೇ. ಹಾಗಾದರೆ ಬನ್ನಿ ಪೇರಳೆ ಹಣ್ಣನ್ನು ಯಾರೆಲ್ಲಾ ಸೇವಿಸಬಾರದು ತಿಳಿಯೋಣ…
ಇವರೆಲ್ಲಾ ಪೇರಳೆ ಹಣ್ಣು ಸೇವಿಸಬಾರದು
ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು
ಪೇರಳೆ ಹಣ್ಣು ಬಹಳ ಒಳ್ಳೆಯದು. ಆದರೆ ಪೇರಳೆ ಎಲೆಯ ಸಾರವನ್ನು ಹೊಂದಿರುವ ಪೂರಕಗಳ ಬಗ್ಗೆ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (FDA) ಅನುಮೋದಿಸಿಲ್ಲ. ಆದ್ದರಿಂದ ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು ಪೇರಳೆ ತಿನ್ನುವ ಮೊದಲು ತಮ್ಮ ವೈದ್ಯರೊಂದಿಗೆ ಮಾತನಾಡಬೇಕು.
ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳು
ಪೇರಳೆ ಹಣ್ಣು ಮತ್ತು ಎಲೆಗಳಲ್ಲಿರುವ ರಾಸಾಯನಿಕಗಳು ಚರ್ಮದ ಕಿರಿಕಿರಿಯನ್ನು ಉಂಟುಮಾಡಬಹುದು. ಎಸ್ಜಿಮಾದಂತಹ ಯಾವುದೇ ಚರ್ಮ ಸಂಬಂಧಿತ ಸಮಸ್ಯೆ ಇರುವವರಲ್ಲಿ ಇದು ಹೆಚ್ಚಾಗಿ ಸಂಭವಿಸುತ್ತದೆ, ಆದ್ದರಿಂದ ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳಿರುವ ಜನರು ಪೇರಳೆ ಹಣ್ಣು ತಿನ್ನುವುದನ್ನು ತಪ್ಪಿಸಬೇಕು, ಏಕೆಂದರೆ ಇದು ಅವರ ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸುತ್ತದೆ.
ಹೊಟ್ಟೆಯುಬ್ಬರ ಸಮಸ್ಯೆ ಇರುವವರು
ತಿಂದ ಆಹಾರ ಬೇಗ ಜೀರ್ಣವಾಗದಿರುವವರು ಅಥವಾ ಹೊಟ್ಟೆಯುಬ್ಬರ ಸಮಸ್ಯೆ ಇರುವವರು ಪೇರಳೆ ಹಣ್ಣು ತಿನ್ನಬಾರದು. ವಿಟಮಿನ್ ಸಿ ಮತ್ತು ಫ್ರಕ್ಟೋಸ್ ಇದರಲ್ಲಿ ಕಂಡುಬರುತ್ತದೆ. ಈ ಕಾರಣದಿಂದಾಗಿ, ಅದನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗಬಹುದು.
ಅಲರ್ಜಿಯ ಸಾಧ್ಯತೆ
ನಿಮಗೆ ಅಲರ್ಜಿ ಇದ್ದರೆ ಈ ಹಣ್ಣನ್ನು ಸೇವಿಸಬೇಡಿ. ಪೇರಳೆ ಹಣ್ಣಿನಲ್ಲಿರುವ ಕೆಲವು ರಾಸಾಯನಿಕಗಳು ಅಲರ್ಜಿ ಉಂಟು ಮಾಡುವ ಸಾಧ್ಯತೆಯಿದೆ ಎಂದು ಅಧ್ಯಯನಗಳು ತೋರಿಸುತ್ತವೆ. ಹೆಚ್ಚು ಹೆಚ್ಚು ಹಣ್ಣನ್ನು ಸಂಗ್ರಹಿಸಲು ಬಳಸುವ ರಾಸಾಯನಿಕಗಳು ಆರೋಗ್ಯದ ಅಪಾಯಗಳನ್ನು ಉಂಟುಮಾಡಬಹುದು. ಆದ್ದರಿಂದ, ಪೇರಳೆ ಹಣ್ಣು ತಿನ್ನುವ ಮೊದಲು ಅದನ್ನು ಚೆನ್ನಾಗಿ ತೊಳೆಯಬೇಕು.