ಬಾಲಿವುಡ್ ನಲ್ಲಿ ಅಕ್ಷಯ್ ಕುಮಾರ್ ಅಂದ್ರೆ ಚಿರಪರಿಚಿತ ಹೆಸರು. ಇವರು ಭಾರತೀಯ ಚಲನಚಿತ್ರ ನಟರಾಗಿ 100 ಕ್ಕೂ ಹೆಚ್ಚು ಹಿಂದಿ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.2000ದಲ್ಲಿ ಬಿಡುಗಡೆಯಾದ ಹೇರಾ ಫೆರಿ ಸಿನಿಮಾದ ಮೂಲಕ ಅತ್ಯದ್ಭುತ ಗೆಲುವನ್ನು ಕಂಡಿದ್ದಾರೆ. ನಂತರದಲ್ಲಿ ನಟಿಸಿದ ಕೆಲ ಹಾಸ್ಯ ಸಿನಿಮಾಗಳು ಜನರ ಮೆಚ್ಚುಗೆಯನ್ನು ಪಡೆದುಕೊಂಡಿತು. ಅಕ್ಷಯ್ ಕುಮಾರ್ ತನ್ನ ಲುಕ್ ನಿಂದ ಎಲ್ಲರಿಗೂ ಇಷ್ಟ ಆಗುತಿದ್ದರು. ಈ ಹೀರೋ ಆಕ್ಷನ್ ಗೂ ಸೈ, ಆಕ್ಟಿಂಗ್ ಗೂ ಸೈ ಹಾಗೇ ಡಾನ್ಸ್ ಗೂ ಸೈ ಎನಿಸಿಕೊಂಡಿದ್ದಾರೆ. 2007ರಲ್ಲಿ ಸತತವಾಗಿ 4 ಹಿಟ್ ಚಿತ್ರಗಳನ್ನು ನೀಡಿದಾಗ ಇವರ ಹೆಸರು ಉತ್ತುಂಗಕ್ಕೇರಿತ್ತು.

ಆ ಸಮಯದಲ್ಲಿ ಇವರಿಗೆ ಹೆಚ್ಚಿನ ಮಂದಿ ಅಭಿಮಾನಿಗಳೂ ಕೂಡಾ ಆಗಿದ್ದರು. ಅಕ್ಷಯ್ ಕುಮಾರ್ ಭಾರತೀಯ ಚಿತ್ರರಂಗ ಕ್ಕೆ ನೀಡಿದ ಕೊಡುಗೆಯನ್ನು ಗಮನಿಸಿ ಸರಕಾರ ಗೌರವ ಡಾಕ್ಟರೇಟ್ ಅನ್ನು ನೀಡಿ ಗೌರವಿಸಿತ್ತು. ಇವರ ಕೆಲವು ಸಿನಿಮಾಗಳೆಲ್ಲಾ ಭಾರೀ ಮೆಚ್ಚುಗೆಯನ್ನು ಪಡೆದುಕೊಂಡಿದ್ದರೂ, ಇತ್ತೀಚಿಗೆ ಬಿಡುಗಡೆಯಾದ “ಸೆಲ್ಫೀ ” ಸಿನಿಮಾ ಸ್ವಲ್ಪ ಮಟ್ಟಿಗೆ ಸೋತು ಹೋಗಿತ್ತು. ಆದರೂ ಎದೆಗುಂದದೆ ಇನ್ನೊಂದು ಸಿನಿಮಾದ ಮೂಲಕ ಬಾಲಿವುಡ್ ಗೆ ಭರ್ಜರಿ ಎಂಟ್ರಿ ನೀಡಿದ್ದಾರೆ ಅಕ್ಷಯ್ ಕುಮಾರ್.
ಹೌದು ಅಕ್ಷಯ್ ಕುಮಾರ್ ನಟನೆಯ ಹೊಸ ಸಿನಿಮಾ “ಒಎಂಜಿ 2” ನ ಟೀಸರ್ ಜುಲೈ 11ಕ್ಕೆ ರಿಲೀಸ್ ಆಗಿದೆ. ಅಷ್ಟೆ ಅಲ್ಲದೆ ಭಾರೀ ಮೆಚ್ಚುಗೆಯನ್ನೂ ಪಡೆದುಕೊಂಡಿದೆ. ಅಕ್ಷಯ್ ಕುಮಾರ್ ಬಗ್ಗೆ ಅಭಿಮಾನಿಗಳಿಗೆ ಭಾರೀ ನಿರೀಕ್ಷೆ ಇದ್ದು ಈ ಬಾರಿ ಅಕ್ಷಯ್ ಕುಮಾರ್ ನಿರೀಕ್ಷೆ ಮೀರಿ ನಟ್ಟಿಸಿದ್ದಾರೆಂಬುದು ಈ ಟೀಸರ್ ಮೂಲಕ ತಿಳಿದು ಬಂದಿದೆ. ಇದರಲ್ಲಿ ಕೆಲವು ದೃಶ್ಯಗಳು ಜನರ ಗಮನ ಸೆಳೆದಿದೆ. ಅಕ್ಷಯ್ ಈ ಸಿನಿಮಾದ ಮೂಲಕ ಜಯ ಗಳಿಸಲಿ ಎಂಬುದು ಜನರ ಹಾರೈಕೆಯಾಗಿದೆ.
ಅಕ್ಷಯ್ ಕುಮಾರ್ ಚಿತ್ರರಂಗದಲ್ಲಿ ಸಾಲುಸಾಲಾಗಿ ಸೋಲು ಕಾಣುತ್ತಾ ಬಂದವರು. 2023 ಇವರ ಜೀವನದಲ್ಲಿ ಗೆಲುವಿನ ವರ್ಷವಾಗಲಿದೆ ಎಂಬುದು ಈ ಸಿನಿಮಾದ ಟೀಸರ್ ಮೂಲಕ ತಿಳಿದುಬಂದಿದೆ. ಈ ಸಿನಿಮಾದಲ್ಲಿ ಪಂಕಜ್ ತ್ರಿವಾರಿ ನಟಿಸಿದ್ದಾರೆ. ಇವರು ದೇವರ ಭಕ್ತ ನ ಪಾತ್ರದಲ್ಲಿ ಕಾಣಿಸಿಕೊಂಡರೆ, ಅಕ್ಷಯ್ ಕುಮಾರ್ ಅವರು ಶಿವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ನಲ್ಲಿ ಗಮನಿಸಿದ ಪ್ರಕಾರ ಶಿವನ ತಲೆ ಮೇಲೆ ನೀರು ಬೀಳುತ್ತಿದೆ. ಇವರು ಕುಳಿತ ಹಿಂಭಾಗದಲ್ಲಿ ಚಂದ್ರ ಕಾಣುತ್ತಿದ್ದಾನೆ.
ದೇವರ ಸಿನಿಮಾವು ಸತ್ಯ ವಿಷಯವನ್ನೇ ಒಳಗೊಂಡಿರಬೇಕು. ಬಹಳ ಜಾಗರೂಕತೆಯಿಂದ ಮಾಡಬೇಕು. ಇವನ್ನೆಲ್ಲ ತಂಡ ಸರಿಯಾಗಿ ನಿಭಾಯಿಸಿದೆ ಎಂದು ಅಭಿಮಾನಿಗಳು ಟೀಸರ್ ನೋಡಿ ಹೇಳಿದ್ದಾರೆ. ಒಎಂಜಿ ಸಿನಿಮಾವನ್ನು ಅಮಿತ್ ರೊಯ್ ಅವರು ನಿರ್ದೇಶನ ಮಾಡಿದ್ದಾರೆ. ಜನರಿಗೆ ಇಷ್ಟ ಆಗುವ ನಿಟ್ಟಿನಲ್ಲಿ ದೇವರ ಸಿನಿಮಾವನ್ನು ಏನೂ ಲೋಪ ಬರದಂತೆ ಶಿಸ್ತಿನಿಂದ ತೆಗೆದುಕೊಂಡು ಹೋಗಿದ್ದಾರೆ. ಸಿನಿಮಾದಲ್ಲಿ ಪಂಕಜ್ ತ್ರಿಪಾಠಿ, ಅರುಣ್ ಗೋವಿಲ್, ಯಾಮಿ ಗೌತಮ್, ಅರುಣ್ ಗೋವಿಲ್ ಮುಂತಾದವರು ನಟಿಸಿದ್ದಾರೆ.
ಪಂಕಜ್ ತ್ರಿಪಾಠಿ ಶಿವನ ದಾಸ ನ ಪಾತ್ರದಲ್ಲಿ ನಟಿಸಿದ್ದಾರೆ. ಒಟ್ಟಾರೆಯಾಗಿ ಈ ಟೀಸರ್ ಜನರಲ್ಲಿ ಬಹಳಷ್ಟು ಕುತೂಹಲ ಮೂಡಿಸಿದೆ. ಸಿನಿಮಾದ ಬಿಡುಗಡೆಗೆಂದೇ ಕಾಯುತ್ತಿದ್ದಾರೆ ಅಭಿಮಾನಿಗಳು. ಈ ಸಿನಿಮಾ ಆಗಸ್ಟ್ 11ರಂದು ತೆರೆ ಮೇಲೆ ಕಾಣಿಸಿಕೊಳ್ಳಲಿದೆ. ಹಾಸ್ಯ ಹಾಗೂ ಭಕ್ತಿ ಆಧಾರಿತವಾದ ಈ ಸಿನಿಮಾವನ್ನು ಕಾಣಲು ಅಭಿಮಾನಿಗಳಂತೂ ಕಾತುರದಿಂದ ಕಾಯುತ್ತಿದ್ದಾರೆ