ಬಿಗ್ ಬಾಸ್ ಕನ್ನಡ ಸೀಸನ್ 11 ದಿನದಿಂದ ದಿನಕ್ಕೆ ರಂಗೇರುತ್ತಿದೆ ಎಂದರೆ ತಪ್ಪಲ್ಲ. ಪ್ರತಿದಿನ ಈ ಮನೆಯೊಳಗೆ ಒಂದಲ್ಲಾ ಒಂದು ಜಗಳ ನಡೆಯುತ್ತಲೇ ಇದೆ. ಮೊನ್ನೆ ನಡೆದ ವೀಕೆಂಡ್ ಸಂಚಿಕೆಯಲ್ಲಿ ಕಿಚ್ಚ ಸುದೀಪ್ ಅವರು ಕೂಡ ಮೊದಲ ಬಾರಿಗೆ ಆ ಮಟ್ಟಿಗೆ ತಾಳ್ಮೆ ಕಳೆದುಕೊಂಡು, ಮನೆಯ ಕೆಲವು ಸದಸ್ಯರಿಗೆ ಬೈದು, ಅವರವರ ತಪ್ಪುಗಳನ್ನು ಅರ್ಥಮಾಡಿಸಿದ್ದಾರೆ. ಸುದೀಪ್ ಅವರು ಮಾತನಾಡಿದ್ದು ಕೂಡ ಬಹಳ ಖಾರವಾಗಿಯೇ ಇತ್ತು.
ಸುದೀಪ್ ಅವರಿಂದ ಅಷ್ಟೆಲ್ಲಾ ಬುದ್ಧಿಮಾತು ಕೇಳಿಸಿಕೊಂಡಿದ್ದರೂ ಸಹ ಮನೆಯ ಒಳಗಿರುವ ಸ್ಪರ್ಧಿಗಳಿಗೆ ಬುದ್ಧಿ ಬಂದಿರುವ ಹಾಗೆ ಕಾಣುತ್ತಿಲ್ಲ. ಈಗಲೂ ಕೂಡ ಜಗಳ ಕದನ ಅಂತೂ ಕಡಿಮೆ ಆಗಿಲ್ಲ. ಮೊನ್ನೆಯಷ್ಟೇ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಮನೆಗೆ ಬಂದಿರುವ ಹನುಮಂತ ಅವರೊಡನೆ ಜಗಳ ನಡೆದಿದೆ, ಆತ ತೆಗೆದುಕೊಂಡ ನಿರ್ಧಾರಕ್ಕೆ ಮನೆಮಂದಿ ತಿರುಗಿ ಬಿದ್ದ ಘಟನೆಯು ನಡೆಯಿತು. ಆದರೆ ಇದೀಗ ಹೊಸದಾಗಿ ಮಾನಸ ಮತ್ತು ಐಶ್ವರ್ಯ ನಡುವೆ ಜಗಳ ಶುರುವಾಗಿದೆ.
ಇವರಿಬ್ಬರ ನಡುವೆ ಜಗಳ ಶುರುವಾಗಿರುವುದು ನಾಮಿನೇಶನ್ ಕಾರಣಕ್ಕೆ. ನೇರವಾಗಿ ನಾಮಿನೇಟ್ ಮಾಡಬೇಕು ಎಂದು ಬಿಗ್ ಬಾಸ್ ಹೇಳಿದ್ದು, ತ್ರಿವಿಕ್ರಮ್ ಹಾಗೂ ಐಶ್ವರ್ಯ ಇಬ್ಬರೂ ನಿಂತಿದ್ದಾರೆ. ಇದರಲ್ಲಿ ಐಶ್ವರ್ಯ ಅವರು ಮಾನಸ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದು, ಮಾನಸ ಅವರು ಇಮ್ಮೆಚ್ಯುರ್ ಈ ಕಾರಣಕ್ಕೆ ನೇರವಾಗಿ ನಾಮಿನೇಟ್ ಮಾಡುತ್ತಿದ್ದೇನೆ ಎಂದು ಕಾರಣ ನೀಡಿದ್ದಾರೆ. ಐಶ್ವರ್ಯ ಈ ರೀತಿ ಹೇಳುತ್ತಿದ್ದ ಹಾಗೆಯೇ ಮಾನಸ ಜಗಳ ಶುರು ಮಾಡಿ, ಐಶ್ವರ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ನೀನ್ ಯಾರು ನನ್ನ ವ್ಯಕ್ತಿತ್ವ ಡಿಸೈಡ್ ಮಾಡೋಕೆ ಎಂದು ಐಶ್ವರ್ಯ ವಿರುದ್ಧ ಕಿಡಿಕಾರಿದ್ದಾರ್ ಮಾನಸ. ಜೋರಾಗಿ ಜಗಳ ಆಡುವ ದನಿಯಲ್ಲಿ ಐಶ್ವರ್ಯ ನೆಲೆ ರೇಗಾಡಿದ್ದಾರೆ. ಇದೇ ಡೈರೆಕ್ಟ್ ನಾಮಿನೇಶನ್ ಕಾರಣಕ್ಕೆ ಮಂಜಣ್ಣ ಹಾಗೂ ತ್ರಿವಿಕ್ರಮ್ ಇವರಿಬ್ಬರ ನಡುವೆ ಕೂಡ ವಾದ ವಾಗ್ವಾದಗಳು ಶುರುವಾಗಿದೆ. ಒಟ್ಟಿನಲ್ಲಿ ಬಿಗ್ ಬಾಸ್ ಮನೆಯಲ್ಲಿ ಒಂದು ದಿನವೂ ನೆಮ್ಮದಿ ಇಲ್ಲದ ಹಾಗೆ ಆಗಿದ್ದು, ಜಗಳ ಇಲ್ಲದೇ ದಿನ ನಡೆಯುವುದೇ ಇಲ್ಲವೇನೋ ಅನ್ನೋ ಹಾಗೆ ಆಗಿದೆ ಎಂದರೂ ತಪ್ಪಲ್ಲ.
ವೀಕ್ಷಕರು ಈ ಶೋ ಅನ್ನು ಬಹಳ ಇಷ್ಟಪಟ್ಟು ನೋಡುತ್ತಿದ್ದಾರೆ. ಹೊರಗಡೆ ನೋಡಿದರೆ, ಮಾನಸ ಅವರ ಮೇಲೆ ಯಾರಿಗೂ ಒಳ್ಳೆಯ ಅಭಿಪ್ರಾಯ ಇಲ್ಲ, ಅವಳನ್ನು ಹೊರಗೆ ಕರೆಸಿ ಎನ್ನುವುದು ವೀಕ್ಷಕರ ಅಭಿಪ್ರಾಯ ಆಗಿದ್ದು, ಮಾನಸ ಯಾವಾಗ ಎಲಿಮಿನೇಟ್ ಆಗ್ತಾರೆ ಎನ್ನುತ್ತಿದ್ದಾರೆ ವೀಕ್ಷಕರು. ಹಾಗೆಯೇ ಈ ವಾರ ವೀಕೆಂಡ್ ಸಂಚಿಕೆಗೆ ಕಿಚ್ಚ ಸುದೀಪ್ ಅವರು ಬರುತ್ತಾರೋ ಇಲ್ಲವೋ ಎನ್ನುವ ಪ್ರಶ್ನೆ ಕೂಡ ಅಭಿಮಾನಿಗಳ ವಲಯದಲ್ಲಿ ಶುರುವಾಗಿದೆ.