ಮಾಜಿ ವಿಶ್ವಸುಂದರಿ ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ದಂಪತಿಯ ಮುದ್ದಿನ ಮಗಳು ಆರಾಧ್ಯ ಬಚ್ಚನ್ ಆಗಾಗ ಮಾಧ್ಯಮಗಳ ಎದುರು ಕಾಣಿಸಿಕೊಳ್ಳುತಾರೆ. ಇವರು ಐಶ್ವರ್ಯ ರೈ ಅವರ ಮಗಳು ಎನ್ನುವ ಕಾರಣಕ್ಕೆ ಬಹಳಷ್ಟು ಜನರಿಗೆ ಇಷ್ಟ ಆಗಿರುವ ಹುಡುಗಿ ಎನ್ನುವುದು ಹೌದು, ಆಸರೆ ಆರಾಧ್ಯ ಬಚ್ಚನ್ ತಮ್ಮಲ್ಲಿರುವ ಸಂಸ್ಕೃತಿ, ಒಳ್ಳೇತನ, ದೊಡ್ಡವರಿಗೆ ಗೌರವ ಕೊಡುವುದು ಈ ಕೆಲವು ಗುಣಗಳಿಂದ ಸಹ ಜನರಿಂದ ಮೆಚ್ಚುಗೆ ಪಡೆದಿದ್ದಾರೆ. ಐಶ್ವರ್ಯ ರೈ ಅವರು ಮಗಳಿಗೆ ಒಳ್ಳೆಯ ಸಂಸ್ಕಾರ ಕಲಿಸಿದ್ದಾರೆ ಎನ್ನುವ ಅಭಿಪ್ರಾಯ ಎಲ್ಲರದ್ದು. ಅದು ನಿಜವೇ ಎನ್ನುವ ಹಾಗೆ ಆರಾಧ್ಯ ಬಚ್ಚನ್ ಶಿವಣ್ಣ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಸಂದರ್ಭದ ವಿಡಿಯೋ ವೈರಲ್ ಆಗಿತ್ತು.

ಇದೆಲ್ಲವೂ ಆ ಮಗುವಿನಲ್ಲಿ ಐಶ್ವರ್ಯ ಅವರು ತುಂಬಿರುವ, ಕಲಿಸಿರುವ ನಮ್ಮ ನೆಲದ ಸಂಸ್ಕೃತಿ ತಿಳಿದುಬರುತ್ತದೆ. ಇನ್ನು ಆರಾಧ್ಯ ಬಚ್ಚನ್ ಬಗ್ಗೆ ಹೇಳುವುದಾದರೆ, ಈಗ ಇವರಿಗೆ 13 ವರ್ಷ, ಆರಾಧ್ಯ 8ನೇ ತರಗತಿಯಲ್ಲಿ ಓದುತ್ತಿದ್ದಾರೆ. ಆರಾಧ್ಯ ಓದುತ್ತಿರುವುದು ಮುಂಬೈನ ಪ್ರತಿಷ್ಠಿತ ಶಾಲೆ ಧೀರೂಬಾಯ್ ಅಂಬಾನಿ ಇಂಟರ್ನ್ಯಾಷನಲ್ ಸ್ಕೂಲ್ ನಲ್ಲಿ. ಇದು ನಮ್ಮ ದೇಶದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದು, ಅಂಬಾನಿ ಕುಟುಂಬದವರ ಒಡೆತನದ ಶಾಲೆ. ಈ ಶಾಲೆಯಲ್ಲಿ ದೊಡ್ಡ ದೊಡ್ಡ ಶ್ರೀಮಂತರ ಮಕ್ಕಳು, ಸೆಲೆಬ್ರಿಟಿಗಳ ಮಕ್ಕಳು ಓದುತ್ತಿದ್ದಾರೆ. ಅನನ್ಯ ಪಾಂಡೆ, ಸಾರಾ ಅಲಿ ಖಾನ್ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಓದಿರೋದು ಇದೇ ಶಾಲೆಯಲ್ಲಿ..
ಬಾಲಿವುಡ್ ನ ಬಹಳಷ್ಟು ಸೆಲೆಬ್ರಿಟಿಗಳ ಮಕ್ಕಳು ಕೂಡ ಇದೇ ಶಾಲೆಯಲ್ಲಿ ಓದುತ್ತಿದ್ದಾರೆ. ಕರೀನಾ ಕಪೂರ್ ಮಕ್ಕಳು, ಶಾಹಿದ್ ಕಪೂರ್ ಮಗ, ಶಾರುಖ್ ಖಾನ್ ಅವರ ಕೊನೆಯ ಮಗ ಹೀಗೆ ಎಲ್ಲರೂ ಓದುತ್ತಿದ್ದಾರೆ. ಈ ಶಾಲೆಯಲ್ಲಿ ಅಂತರಾಷ್ಟ್ರೀಯ ಗುಣಮಟ್ಟ ಹೊಂದಿರುವ ಶಿಕ್ಷಣ ನೀಡಲಾಗುತ್ತದೆ. ನರ್ಸರಿ ಇಂದ 12ನೇ ತರಗತಿ ವರೆಗು ಈ ಶಾಲೆಯಲ್ಲಿ ತರಗತಿಗಳಿವೆ. ಅತ್ಯಂತ ಪ್ರತಿಷ್ಠಿತ ಶಾಲೆ ಆಗಿರುವ ಕಾರಣ ಇಲ್ಲಿನ ಸ್ಕೂಲ್ ಫೀಸ್ ಕೂಡ ಅಷ್ಟೇ ದುಬಾರಿ ಆಗಿರುತ್ತದೆ. ಧೀರೂಬಾಯ್ ಅಂಬಾನಿ ಶಾಲೆಯಲ್ಲಿ ನರ್ಸರಿ ಇಂದ 7ನೇ ತರಗತಿ ವರೆಗು ಕಟ್ಟಬೇಕಾದ ವಾರ್ಷಿಕ ಫೀಸ್ ₹1.70 ಲಕ್ಷ ರೂಪಾಯಿ ಆಗಿರುತ್ತದೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
8 ರಿಂದ 10ನೇ ತರಗತಿ ವರೆಗು ಕಟ್ಟಬೇಕಾದ ವಾರ್ಷಿಕ ಫೀಸ್ 4.70 ಲಕ್ಷ ರೂಪಾಯಿ ಆಗಿದೆ. ಇನ್ನು 11 ಮತ್ತು 12ನೇ ತರಗತಿಗೆ 9.65 ಲಕ್ಷ ರೂಪಾಯಿ ವಾರ್ಷಿಕ ಫೀಸ್ ಆಗಿದೆ. ಐಶ್ವರ್ಯ ರೈ ಅವರ ಮಗಳು 8ನೇ ತರಗತಿಯಲ್ಲಿ ಓದುತ್ತಿರುವ ಕಾರಣ, ಅವರ ಸ್ಕೂಲ್ ಫೀಸ್ ವರ್ಷಕ್ಕೆ 4.70 ಲಕ್ಷ ರೂಪಾಯಿ ಆಗಿದೆ. ಇಷ್ಟು ದುಡ್ಡಲ್ಲಿ ಒಂದು ಬಡ ಕುಟುಂಬ ಇಡೀ ವರ್ಷ ಊಟ ಮಾಡಬಹುದು. ಈ ವಿಷಯ ಅಂತೂ ಸುಳ್ಳಲ್ಲ. ಇದೇ ದುಡ್ಡಲ್ಲಿ ಒಂದಷ್ಟು ಜನ ಕಷ್ಟದಲ್ಲಿರೋ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೂಡ ಕೊಡಿಸಬಹುದು. ಏನೇ ಇರಲಿ ದೊಡ್ಡವರ ಮನೆ ಮಕ್ಕಳು ಎಂದರೆ ಇದೇ ರೀತಿ ಐಷಾರಾಮಿ ಶಾಲೆ ಕಾಲೇಜುಗಳಲ್ಲೇ ವ್ಯಾಸಂಗ ಮಾಡುತ್ತಾರೆ..

ಇದೆಲ್ಲವೂ ಆರಾಧ್ಯ ಓದಿಗೆ ಸಂಬಂಧಿಸಿದ ವಿಚಾರ ಆಗಿದೆ. ಆರಾಧ್ಯ ಬಚ್ಚನ್ ಅವರ ಶಾಲೆಯಲ್ಲಿ ಇತ್ತೀಚೆಗೆ ಸ್ಕೂಲ್ ಡೇ ಈವೆಂಟ್ ಸಹ ನಡೆಯಿತು. ಅದರಲ್ಲಿ ಆರಾಧ್ಯ ಪರ್ಫಾರ್ಮ್ ಮಾಡಿದರು, ಅದನ್ನು ನೋಡಲು ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಜೊತೆಯಾಗಿ ಬಂದಿದ್ದರು, ಜೊತೆಗೆ ಅಮಿತಾಭ್ ಬಚ್ಚನ್ ಸಹ ಮೊಮ್ಮಗಳ ಪರ್ಫಾರ್ಮೆನ್ಸ್ ನೋಡಲು ಬಂದಿದ್ದರು ಎನ್ನಲಾಗಿದೆ. ಈ ಮೂಲಕ ಬಚ್ಚನ್ ಕುಟುಂಬದಲ್ಲಿ ಮನಸ್ತಾಪ ಇದೆ, ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ಇಬ್ಬರೂ ದೂರ ಆಗುತ್ತಾರೆ ಎಂದು ಕೇಳಿಬಂದಿದ್ದ ಎಲ್ಲಾ ವದಂತಿಗಳಿಗೆ ಬ್ರೇಕ್ ಬಿದ್ದ ಹಾಗೆ ಆಗಿದೆ. ಇಬ್ಬರು ಬಹಳ ಸಂತೋಷವಾಗಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.



