ಕಿರುತೆರೆ ಮತ್ತು ಬೆಳ್ಳಿತೆರೆ ಎರಡರಲ್ಲೂ ಕೂಡ ಈ ಕ್ಯಾಸ್ಟಿಂಗ್ ಕೌಚ್ ಎನ್ನುವ ವಿಚಾರ ಭಾರಿ ಸದ್ದು ಮಾಡುತ್ತದೆ. ಮೊದಲೆಲ್ಲಾ ನಟಿಯರು ಈ ವಿಚಾರದ ಬಗ್ಗೆ ಹೆಚ್ಚಾಗಿ ಮಾತನಾಡುತ್ತಾ ಇರಲಿಲ್ಲ. ಆದರೆ ಕೆಲ ವರ್ಷಗಳಿಂದ ನಟಿಯರು ಈ ಬಗ್ಗೆ ಓಪನ್ ಆಗಿ ಮಾತನಾಡುತ್ತಾ ಇದ್ದಾರೆ. ನಟಿಯರು ತಮಗೆ ತೊಂದರೆ ಕೊಟ್ಟವರ ಜನ್ಮ ಜಾಲಾಡುತ್ತಿರುವುದು ಇನ್ನುಮುಂದೆ ಈ ರೀತಿಯ ಘಟನೆಗಳು ನಡೆಯದೇ ಇರುವ ಹಾಗೆ ತಡೆಗಟ್ಟುತ್ತಿದೆ ಎಂದು ಹೇಳಿದರೂ ತಪ್ಪಲ್ಲ. ಮಹಿಳೆಯರು ಧೈರ್ಯ ಮಾಡಿ ಎಲ್ಲಾ ವಿಚಾರಗಳನ್ನು ಹೇಳಿಕೊಳ್ಳುತ್ತಿರುವುದು, ಇದೇ ರೀತಿ ನೋವು ಅನುಭವಿಸಿರುವ ವ್ಯಕ್ತಿಗಳಿಗೆ ಸ್ಪೂರ್ತಿ ನೀಡುತ್ತಿದೆ, ತಾವು ಕೂಡ ಹೇಳಿಕೊಳ್ಳಬಹುದು ಎನ್ನುವ ಧೈರ್ಯ ತುಂಬುತ್ತಿದೆ. ಈ ರೀತಿಯ ಹಲವು ಕಥೆಗಳನ್ನು ನಾವು ಕೇಳುತ್ತಿದ್ದೇವೆ.
ಕ್ಯಾಸ್ಟಿಂಗ್ ಕೌಚ್ ಸಮಸ್ಯೆ ಇರುವುದು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ, ಎಲ್ಲಾ ಭಾಷೆಯ ಚಿತ್ರರಂಗದಲ್ಲಿ ಕೂಡ ಇದೇ ಕಥೆ ಆಗಿದೆ. ಪರಭಾಷೆಯ ಹಲವು ನಟಿಯರು ಈ ರೀತಿ ತಮಗಾದ ಸಮಸ್ಯೆಗಳ ಬಗ್ಗೆ ಹೇಳಿಕೊಂಡಿದ್ದಾರೆ. ಈಗಲೂ ಸಹ ಹಲವು ಕಥೆಗಳು ಕೇಳಿಬರುತ್ತದೆ. ಹಾಗೆಯೇ ಇದೆಲ್ಲವೂ ಇರುವುದು ಚಿತ್ರರಂಗದಲ್ಲಿ ಮಾತ್ರವಲ್ಲ, ಬೇರೆ ಬೇರೆ ಕ್ಷೇತ್ರಗಳಲ್ಲಿ ಸಹ ಈ ರೀತಿಯ ಅನುಭವಗಳು ಮಹಿಳಾ ಎಂಪ್ಲಾಯಿಗಳಿಗೆ ಆಗಿದೆ. ಇದರ ಬಗ್ಗೆ ಧೈರ್ಯವಾಗಿ ಮಾತನಾಡಬೇಕು, ಈ ರೀತಿ ಆಗುವುದಕ್ಕೆ ಬಿಡಬಾರದು. ಮಹಿಳೆಯರು ಜೋಪಾನವಾಗಿ ತಮ್ಮ ಕೆರಿಯರ್ ಅನ್ನು ಕಾಪಾಡಿಕೊಳ್ಳುವುದರ ಜೊತೆಗೆ ತಮ್ಮ ತನವನ್ನು ಸಹ ಬಿಟ್ಟುಕೊಡದ ಹಾಗೆ ಇರಬೇಕು. ಇದೀಗ ಇಂಥದ್ದೊಂದು ಘಟನೆ ಬಗ್ಗೆ ಕಿರುತೆರೆ ನಟಿ ಚಂದನಾ ಅನಂತಕೃಷ್ಣ ಮಾತನಾಡಿದ್ದಾರೆ.

ನಟಿ ಚಂದನಾ ಅನಂತಕೃಷ್ಣ ಅವರ ಬಗ್ಗೆ ನಮಗೆಲ್ಲಾ ಗೊತ್ತೇ ಇದೆ. ಇವರು ಈ ಹಿಂದೆ ಹೂಮಳೆ ಧಾರಾವಾಹಿಯಲ್ಲಿ ನಟಿಸಿ ಯಶಸ್ವಿ ಆಗಿದ್ದರು. ಪ್ರಸ್ತುತ ಜೀಕನ್ನಡ ವಾಹಿನಿಯ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಇವರ ಪಾತ್ರದ ಹೆಸರು ಜಾಹ್ನವಿ, ಆದರೆ ಇವರನ್ನು ಎಲ್ಲರೂ ಚಿನ್ನಮರಿ ಎಂದೇ ಕರೆಯುತ್ತಾರೆ. ಜಯಂತ್ ಇಟ್ಟಿರುವ ಚಿನ್ನಮರಿ ಅನ್ನೋ ಹೆಸರು ಅಷ್ಟರ ಮಟ್ಟಿಗೆ ಫೇಮಸ್ ಆಗಿದ್ದು, ಚಂದನಾ ಅವರು ಎಲ್ಲರೂ ಕರೆಯುವುದೇ ಚಿನ್ನಮರಿ ಎಂದು. ಲಕ್ಷ್ಮಿನಿವಾಸ ಧಾರಾವಾಹಿ ಇವರಿಗೆ ಬಹಳಷ್ಟು ಜನಪ್ರಿಯತೆ, ಒಳ್ಳೆಯ ಹೆಸರು, ಎಲ್ಲವನ್ನು ತಂದುಕೊಟ್ಟಿದೆ. ಇನ್ನು ಚಂದನಾ ಅವರು ಇತ್ತೀಚೆಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಕನ್ನಡ ಚಿತ್ರರಂಗದ ಹಿರಿಯನಟ ಉದಯ್ ಹುತ್ತಿನಗದ್ದೆ ಅವರ ಮಗ ಪ್ರತ್ಯುಕ್ಷ್ ಅವರ ಜೊತೆಗೆ ಮದುವೆಯಾಗಿದ್ದಾರೆ.
ಮದುವೆಯಾದ ನಂತರ ಚಂದನಾ ಅವರು ನಟನೆ ಇಂದ ಬ್ರೇಕ್ ಪಡೆಯಬಹುದು ಎನ್ನಲಾಗಿತ್ತು, ಆದರೆ ಚಂದನ ಅವರು ನಟನೆಯನ್ನು ಕಂಟಿನ್ಯೂ ಮಾಡಿದ್ದಾರೆ. ಒಂದು ವೇಳೆ ಇವರು ಧಾರಾವಾಹಿ ಇಂದ ಹೊರಗಡೆ ಬಂದಿದ್ದರೆ, ಬಹುಶಃ ಚಿನ್ನಮರಿ ಪಾತ್ರದಲ್ಲಿ ಬೇರೆ ಯಾರನ್ನು ಕೂಡ ಊಹಿಸಿಕೊಳ್ಳುವುದು ಕಷ್ಟವೇ. ಈಗ ಇವರು ನಟಿಸುತ್ತಿದ್ದಾರೆ ಎನ್ನುವುದೇ ಸಂತೋಷದ ವಿಷಯ ಆಗಿದೆ. ಚಂದನಾ ಅವರು ಇತ್ತೀಚೆಗೆ ಮದುವೆಯಾಗಿ ಖುಷಿಯಾಗಿದ್ದಾರೆ ಜೊತೆಗೆ, ಕೆಲವು ಇಂಟರ್ವ್ಯೂ ಗಳಲ್ಲಿ ಸಹ ಪಾಲ್ಗೊಂಡು, ಅನೇಕ ವಿಚಾರಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಅದೇ ರೀತಿ ಒಂದು ಇಂಟರ್ವ್ಯೂ ನಲ್ಲಿ ತಮಗೆ ಆದ ಕ್ಯಾಸ್ಟಿಂಗ್ ಕೌಚ್ ಅನುಭವವನ್ನು ತೆರೆದಿಟ್ಟಿದ್ದಾರೆ ಚಂದನಾ ಅನಂತಕೃಷ್ಣ ಅವರು. ಎರಡು ಸಾರಿ ಇವರಿಗೆ ಅಂಥದ್ದೇ ಆದ ಅನುಭವ ಆಗಿದೆ.

ಚಂದನಾ ಅವರು ಹೇಳಿರುವ ಘಟನೆ ಏನು ಎಂದರೆ.. ಒಂದು ಸಾರಿ ಚಂದನ ಅವರಿಗೆ ಯಾರೋ ಒಬ್ಬ ವ್ಯಕ್ತಿಯ ಪರಿಚಯವಾಗಿ, ಅವರು ಚಂದನ ಅವರಿಗೆ ನಿರ್ಮಾಪಕರ ಜೊತೆಗೆ ಭೇಟಿ ಮಾಡಿಸುತ್ತೇನೆ ಎಂದು ಹೇಳಿದರಂತೆ. ಅದಕ್ಕಾಗಿ ಚಂದನಾ ಅವರ ಮಾಡರ್ನ್ ಫೋಟೋಗಳನ್ನು ಕೇಳಿದರಂತೆ, ಆ ವೇಳೆ ಮಾಡರ್ನ್ ಫೋಟೋಶೂಟ್ ಮಾಡಿಸದೇ ಇದ್ದ ಕಾರಣ, ತಮ್ಮ ಬಳಿ ಇದ್ದ ಕೆಲವು ಮಾಡರ್ನ್ ಫೋಟೋಸ್ ಗಳನ್ನು ಶೇರ್ ಮಾಡಿದ್ದರಂತೆ ಚಂದನಾ. ಬಳಿಕ ಆ ವ್ಯಕ್ತಿ ಮೇಕಪ್ ಇಲ್ಲದ ಫೋಟೋಗಳನ್ನು ಶೇರ್ ಮಾಡೋದಕ್ಕೆ ಕೇಳಿದನಂತೆ, ಅದಕ್ಕೂ ಓಕೆ ಎಂದು ಹೇಳಿ ಚಂದನಾ ಅವರು ಮೇಕಪ್ ಇಲ್ಲದ ಫೋಟೋಗಳನ್ನು ಕಳಿಸಿದರಂತೆ. ಬಳಿಕ ಆ ವ್ಯಕ್ತಿ ವಿಡಿಯೋ ಕಾಲ್ ಮಾಡೋದಕ್ಕೆ ಶುರು ಮಾಡಿದ್ದಾನೆ. ಚಂದನಾ ಅವರು ಅವಾಯ್ಡ್ ಮಾಡೋಕೆ ಟ್ರೈ ಮಾಡಿದ್ದರೂ ಸಹ ಆ ವ್ಯಕ್ತಿ ಬಿಟ್ಟಿಲ್ಲ.

ಪದೇ ಪದೇ ಕಾಲ್ ಮಾಡಿದ್ದಾನೆ, ಚಂದನಾ ಅವರ ಫ್ರೆಂಡ್ಸ್ ಗಳು ಕಾಲ್ ಪಿಕ್ ಮಾಡಬೇಡ ಎಂದರಂತೆ. ಆದರೂ ಆ ವ್ಯಕ್ತಿ ಪದೇ ಪದೇ ವಿಡಿಯೋ ಕಾಲ್ ಮಾಡುತ್ತಲೇ ಇದ್ದ, ಕೊನೆಗೆ ಆತನ ಕಾಲ್ ಅನ್ನು ಅವಾಯ್ಡ್ ಮಾಡಿದರಂತೆ. ಇದು ಒಂದು ಘಟನೆ ಆದರೆ ಮತ್ತೊಂದು ಘಟನೆ ಸಹ ಇದೆ, ಒಂದು ಏಜೆನ್ಸಿ ಯವರು ಚಂದನಾ ಅವರಿಗೆ ಮೆಸೇಜ್ ಮಾಡಿ, ನಿಮಗೆ ಒಂದು ಅವಕಾಶ ಇದೆ, 3 ತಿಂಗಳ ಶೂಟಿಂಗ್ ಇರುತ್ತದೆ, ಆದರೆ ನೀವು ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದಿದ್ದರಂತೆ. ಮೆಸೇಜ್ ನಲ್ಲಿಯೇ ಅದನ್ನು ತಿಳಿಸಿದ್ದರಂತೆ. ಈ ನಂಬರ್ ಗೆ ಏನೂ ಪ್ರತಿಕ್ರಿಯೆ ಕೊಡದೇ ಬ್ಲಾಕ್ ಮಾಡಿದ್ದರಂತೆ ಚಂದನಾ. ತಮಗೆ ಆದ ಈ ಎರಡು ಅನುಭವಗಳನ್ನು ಇಂಟರ್ವ್ಯೂ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇವರ ಅನುಭವಕ್ಕೆ ಬಂದ ಈ ಘಟನೆಗಳ ಬಗ್ಗೆ ಈಗ ಕಿರುತೆರೆಯಲ್ಲಿ ಭಾರಿ ಚರ್ಚೆ ಆಗುತ್ತಿದೆ.
ಇನ್ನು ಚಂದನಾ ಅವರಿಗೆ ಈಗ ಆ ರೀತಿಯ ಯಾವುದೇ ಸಮಸ್ಯೆ ಇಲ್ಲ. ಇವರು ಈಗ ಗುರುತಿಸಿಕೊಂಡಿರುವ ಕಾರಣ, ಆ ರೀತಿವ ತೊಂದರೆಗಳು ಮತ್ತೆ ಬರುವುದಕ್ಕೆ ಸಾಧ್ಯವಿಲ್ಲ. ಸಧ್ಯ ಚಂದನಾ ಅನಂತಕೃಷ್ಣ ಅವರು ಜಾಹ್ನವಿ ಪಾತ್ರದಲ್ಲಿ ಅದ್ಭುತವಾಗಿ ನಟಿಸುತ್ತಿದ್ದು, ಜೊತೆಗೆ ವೈಯಕ್ತಿಕ ಜೀವನದಲ್ಲಿ ಸಹ ಬಹಳ ಸಂತೋಷವಾಗಿದ್ದಾರೆ. ಚಂದನಾ ಅವರನ್ನು ಕಿರುತೆರೆಯಲ್ಲಿ ನೋಡೋದಕ್ಕೆ ಅವರ ಫ್ಯಾನ್ಸ್ ಕೂಡ ಅಷ್ಟೇ ಖುಷಿ ಪಟ್ಟಿದ್ದಾರೆ.



