ಆಕ್ಟೊಬರ್ 29 ಇಡೀ ಕರ್ನಾಟಕ ಕಣ್ಣೀರು ಹಾಕಿದ ದಿನ ಎಂದು ಹೇಳಿದರೂ ಖಂಡಿತ ತಪ್ಪಲ್ಲ. ಅಂದು ಕರ್ನಾಟಕದ ರಾಜರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಇಹಲೋಕ ತ್ಯಜಿಸಿದ ದಿವಸ. 2021ರ ಆಕ್ಟೊಬರ್ 29ರಂದು ಪುನೀತ್ ರಾಜ್ ಕುಮಾರ್ ಅವರು ವಿಧಿವಶರಾದರು. ಆ ದಿವಸವನ್ನ ಯಾರು ಕೂಡ ಮರೆಯಲು ಸಾಧ್ಯವಿಲ್ಲ. ಮೊನ್ನೆಯಷ್ಟೇ ಅಪ್ಪು ಅವರ ಮೂರನೇ ವರ್ಷದ ಪುಣ್ಯಸ್ಮರಣೆ ನಡೆದಿದೆ.
ಕರ್ನಾಟಕದ ಎಲ್ಲೆಡೆಯಿಂದ ಅಭಿಮಾನಿಗಳು ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಮಾಧಿ ಸ್ಥಳಕ್ಕೆ ಆಗಮಿಸಿ, ಅವರ ದರ್ಶನ ಪಡೆದಿದ್ದಾರೆ. ದೊಡ್ಮನೆಯ ಇಡೀ ಕುಟುಂಬ ಬಂದು ಅಪ್ಪು ಅವರಿಗೆ ಪೂಜೆ ಸಲ್ಲಿಸಿದೆ. ಚಂದನವನದ ಹಲವು ನಟನಟಿಯರು ಕೂಡ ಈ ದಿನ ಅಪ್ಪು ಅವರ ದರ್ಶನ ಪಡೆದಿದ್ದಾರೆ. ಈ ದಿನ ನಟಿ ಸಂಗೀತ ಶೃಂಗೇರಿ ಅವರು ಮಾಡಿರುವ ಒಂದು ಕೆಲಸ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

ನಟಿ ಸಂಗೀತ ಶೃಂಗೇರಿ ಅವರು ಅಪ್ಪು ಅವರ ಸ್ಮಾರಕಕ್ಕೆ ಹೋಗಿ, ಪೂಜೆ ಸಲ್ಲಿಸಿ ಆಶೀರ್ವಾದ ಪಡೆಯುವುದರ ಜೊತೆಗೆ ಅಭಿಮಾನಿಗಳಿಗೆ ಅನ್ನದಾನ ಮಾಡಿದ್ದಾರೆ. ಆ ಸಂದರ್ಭದ ಫೋಟೋಗಳನ್ನು ಹಾಗೂ ವಿಡಿಯೋವನ್ನು ಸಂಗೀತ ಅವರು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದು, ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಂಗೀತ ಅವರ ಈ ಕಾರ್ಯಕ್ಕೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಸಂಗೀತ ಅವರ ಕೆಲಸಕ್ಕೆ ಭೇಷ್ ಎಂದಿದ್ದಾರೆ ನೆಟ್ಟಿಗರು.
ಸಂಗೀತ ಶೃಂಗೇರಿ ಅವರು ಹಲವು ಕಾರ್ಯಕ್ರಮಗಳಲ್ಲಿ ತಾವು ಅಪ್ಪು ಸರ್ ಅವರ ಬಿಗ್ ಫ್ಯಾನ್ ಎಂದು ಹೇಳಿಕೊಂಡಿದ್ದಾರೆ. ಇನ್ನು ಕಳೆದ ವರ್ಷ ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಸ್ಪರ್ಧಿಯಾಗಿ ಹೋಗಿದ್ದ ಸಂಗೀತ ಶೃಂಗೇರಿ, ನೇರ ನಡೆ, ನೇರ ನುಡಿ ಸ್ವಭಾವದಿಂದ ಜನರ ಮನಸ್ಸನ್ನು ಗೆದ್ದಿದ್ದರು. ಇವರಿಗೆ ಸಿಂಹಿಣಿ ಎಂದೇ ಹೆಸರು ಕೊಟ್ಟಿದ್ದಾರೆ ಅಭಿಮಾನಿಗಳು. ಬಿಗ್ ಬಾಸ್ ಇಂದ ಹೊರಬಂದಮೇಲು ಇವರ ಪಾಪ್ಯುಲಾರಿಟಿ ಮಾತ್ರ ಕಡಿಮೆ ಆಗಿಲ್ಲ. ಅದೇ ಸೌಂಡ್, ಅದೇ ಕ್ರೇಜ್ ಮುಂದುವರೆಯುತ್ತಲೇ ಇದೆ