ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಚಿನ್ನದ ಸುದ್ದಿ ಭಾರಿ ಸದ್ದು ಮಾಡುತ್ತಿದೆ. ಚಿನ್ನದ ಸುದ್ದಿ ಅಂದರೆ ಗೋಲ್ಡ್ ರೇಟ್ ಹೆಚ್ಚು ಕಡಿಮೆ ಆಗುತ್ತಿರುವ ಸುದ್ದಿ ಅಲ್ಲ, ಕನ್ನಡದ ನಟಿ ರನ್ಯಾ ರಾವ್ ಗೋಲ್ಡ್ ಸಾಗಾಣಿಕೆ ಕೇಸ್ ನಲ್ಲಿ ಸಿಕ್ಕಿಹಾಕಿಕೊಂಡಿರುವ ಸುದ್ದಿ. ಕೆಲವು ದಿನಗಳ ಹಿಂದೆ ಈ ನಟಿ ಬೆಂಗಳೂರು ಏರ್ಪೋರ್ಟ್ ನಲ್ಲಿ ಪೊಲೀಸರ ಕೈಗೆ ಸಿಕ್ಕಿಹಾಕಿಕೊಂಡರು. ಆಗ ಇವರ ಬಳಿ 14.8 ಕೆಜಿ ಚಿನ್ನ ಇತ್ತು ಎನ್ನಲಾಗಿದೆ. ಅಲ್ಲಿಂದ ಇವರು ಪೊಲೀಸರ ಜೊತೆ ಸ್ಟೇಷನ್ ಗೆ ಹೋಗಿ, ಈಗ ನ್ಯಾಯಾಂಗ ಬಂಧನದಲ್ಲಿ ಇದ್ದಾರೆ. ಇವರ ವಿಚಾರಣೆ ಕ್ರಿಯೆಗಳು ಬಿಡುವಿಲ್ಲದೇ ನಡೆಯುತ್ತಿದೆ. ಈ ವೇಳೆ ರನ್ಯಾ ಅವರು ಕೆಲವು ವಿಚಾರಗಳನ್ನು ಶೇರ್ ಮಾಡಿಕೊಂಡಿದ್ದು, ಅವರಿಗೆ ಎಷ್ಟು ಕಮಿಷನ್ ಸಿಕ್ಕಿದೆ ಎನ್ನುವುದನ್ನು ತಿಳಿದು ಅಧಿಕಾರಿಗಳೇ ಶಾಕ್ ಆಗಿದ್ದಾರೆ ಎಂದು ಮಾಹಿತಿ ಸಿಕ್ಕಿದೆ..
ರನ್ಯಾ ರಾವ್ ಕರ್ನಾಟಕದ ಪೊಲೀಸ್ ಅಧಿಕಾರಿಯ ಮಗಳು. ಕಿಚ್ಚ ಸುದೀಪ್ ಅವರೊಡನೆ ಮಾಣಿಕ್ಯ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು. ಅದಾದ ಮೇಲೆ ಹೆಚ್ಚಿನ ಸಿನಿಮಾಗಳಲ್ಲಿ ನಟಿಸಿಲ್ಲ, ಆದರೆ ಮಾಣಿಕ್ಯ ಸಿನಿಮಾದ ಪಾತ್ರ ಇವರಿಗೆ ಒಳ್ಳೆಯ ಹೆಸರನ್ನು ಕೂಡ ತಂದುಕೊಟ್ಟಿತು. ಮಾಣಿಕ್ಯ ಸಿನಿಮಾದಲ್ಲಿ ಸುದೀಪ್ ಅವರ ಜೊತೆಗೆ ನಟಿಸಿದ್ದು ಜನಪ್ರಿಯತೆಯನ್ನು ಕೂಡ ತಂದುಕೊಟ್ಟಿತು. ಆದರೆ ಹೆಚ್ಚಾಗಿ ಇವರು ಸಿನಿಮಾಗಳಲ್ಲಿ ನಟಿಸದ ಕಾರಣ ಹೆಚ್ಚಿನ ಜನರಿಗೆ ಇವರ ಬಗ್ಗೆ ಗೊತ್ತಿಲ್ಲ. ಇವರು ಮದುವೆಯಾದ ಬಳಿಕ ನಟನೆ ಇಂದ ಸಂಪೂರ್ಣ ದೂರವೇ ಉಳಿದಿದ್ದಾರೆ ಎನ್ನಲಾಗಿದೆ. ರನ್ಯಾ ರಾವ್ ಅವರು ಇತ್ತೀಚೆಗೆ ಹಿರಿಯನಟಿ ಜಯಮಾಲಾ ಅವರ ಮಗಳ ಮದುವೆಯಲ್ಲಿ ಕಾಣಿಸಿಕೊಂಡಿದ್ದರು. ಆಗ ಬಹಳ ಸುಂದರವಾಗಿ ಕಂಡುಬಂದಿದ್ದರು.

ಈ ಮದುವೆಯಾದ ಕೆಲವೇ ದಿನಗಳಿಗೆ ರನ್ಯಾ ಈ ಕೇಸ್ ಇಂದ ಪೊಲೀಸರ ಅತಿಥಿಯಾಗಿದ್ದಾರೆ. ರನ್ಯಾ ಅವರ ಕೇಸ್ ಬಗ್ಗೆ ಪೊಲೀಸರು ರನ್ಯಾ ರಾವ್ ಅವರ ತಂದೆಯ ಜೊತೆಗೆ ಮಾತನಾಡಲು ಟ್ರೈ ಮಾಡಿದಾಗ ಅವರು ಮದುವೆಯ ನಂತರ ಮಗಳು ತಮ್ಮೊಡನೆ ಇಲ್ಲ, ಈ ವಿಚಾರದ ಬಗ್ಗೆ ತಮಗೆ ಗೊತ್ತಿಲ್ಲ ಎಂದು ತಿಳಿಸಿದ್ದಾರೆ. ಇದೆಲ್ಲವನ್ನು ನೋಡಿದರೆ ರನ್ಯಾ ಅವರು ತಮ್ಮ ತಂದೆ ಕಡೆಯ ಫ್ಯಾಮಿಲಿಗೆ ಗೊತ್ತಿಲ್ಲದೇ ಈ ಕೆಲಸವನ್ನು ಮಾಡುತ್ತಿದ್ದರು ಎಂದು ಅನ್ನಿಸುತ್ತಿದೆ. ಇನ್ನು ಜೈಲಿನಲ್ಲಿ ಇರುವ ಫೋಟೋಗಳು ಲೀಕ್ ಆಗಿ, ಅವುಗಳನ್ನು ನೋಡಿದರೆ, ನಿಜಕ್ಕೂ ಇದು ರನ್ಯಾ ರಾವ್ ಅವರೇನಾ ಎಂದು ಆಶ್ಚರ್ಯ ಪಡುವ ಹಾಗೆ ಆಗಿದ್ದಾರೆ. ಯಾರಾದರು ಇವರಿಗೆ ತೊಂದರೆ ಕೊಟ್ಟಿರಬಹುದಾ ಎನ್ನುವ ಅನುಮಾನ ಸಹ ಕಂಡುಬಂದಿತ್ತು.
ಇದೆಲ್ಲವೂ ಒಂದು ಕಡೆಯಾದರೆ ಮತ್ತೊಂದು ಕಡೆ ಈ ಕೇಸ್ ನ ವಿಚಾರಣೆ ಕೂಡ ಜೋರಾಗಿಯೇ ಸಾಗುತ್ತಿದೆ. ಇತ್ತೀಚಿನ ವಿಚಾರಣೆಯಲ್ಲಿ ರನ್ಯಾ ಅವರು ರಿವೀಲ್ ಮಾಡಿರುವ ವಿಷಯಗಳು ಅಧಿಕಾರಿಗಳಿಗೆ ಶಾಕ್ ಕೊಟ್ಟಿದೆ ಎಂದು ಹೇಳಲಾಗುತ್ತಿದೆ. ಪ್ರಸ್ತುತ ಈ ಕೇಸ್ ಅನ್ನು ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಇನ್ವೆಸ್ಟಿಗೇಟ್ ಮಾಡುತ್ತಿದೆ. ಜೊತೆಗೆ ಸಿಬಿಐ ಕೂಡ ಕೈಜೋಡಿಸಿದೆ. ಈ ಎರಡು ತಂಡಗಳು ಕೇಸ್ ಅನ್ನು ಹಾಗೂ ರನ್ಯಾ ರಾವ್ ಅವರನ್ನು ವಿಚಾರಣೆ ಮಾಡುತ್ತಿದ್ದಾರೆ. ಕೇಸ್ ನಲ್ಲಿ ರನ್ಯಾ ಅವರು ಚಿನ್ನ ಸಾಗಾಣಿಕೆ ಮಾಡುತ್ತಿದ್ದರು ಎನ್ನುವುದು ಗೊತ್ತಾಗಿದೆ. ಚಿನ್ನವನ್ನು ಸಾಗಿಸುವುದಕ್ಕೆ ಪೊಲೀಸರ ಸಹಾಯ, ಏರ್ಪೋರ್ಟ್ ಸಿಬ್ಬಂದಿಗಳ ಸಹಾಯ ಎಲ್ಲವೂ ಇತ್ತು ಎಂದು ಖುದ್ದಾಗಿ ರನ್ಯಾ ಅವರೇ ಒಪ್ಪಿಕೊಂಡಿದ್ದಾರೆ.

ಅಧಿಕಾರಿಗಳ ಎದುರು ಈ ವಿಚಾರವನ್ನು ಒಪ್ಪಿಕೊಂಡು, ಇನ್ನಷ್ಟು ವಿಚಾರಗಳನ್ನು ರನ್ಯಾ ಅವರು ರಿವೀಲ್ ಮಾಡಿದ್ದು, ಇದನ್ನು ಕೇಳಿ ಅಧಿಕಾರಿಗಳೇ ಶಾಕ್ ಆಗಿದ್ದಾರಂತೆ. ಅಂದು ಏರ್ಪೋರ್ಟ್ ಗೆ ದುಬೈ ಇಂದ ಬಂದಾಗ ರನ್ಯಾ ಅವರ ಬಳಿ ಇದ್ದಿದ್ದು 14.8 ಕೆಜಿ ಚಿನ್ನ ಇದರ ಮೌಲ್ಯ ಸರಿಸುಮಾರು 15 ರಿಂದ 16 ಕೋಟಿ ಎಂದು ತಿಳಿದುಬಂದಿದೆ. ಒಂದು ಬಾರಿಗೆ 15 ಕೆಜಿ ವರೆಗಿನ ತೂಕದಷ್ಟು ಚಿನ್ನವನ್ನು ಸಾಗಿಸುತ್ತಿದ್ದರು ಎಂದು ಮಾಹಿತಿ ಸಿಕ್ಕಿದ್ದು, ಇದುವರೆಗೂ ಸುಮಾರು 40 ಬಾರಿ ದುಬೈಗೆ ಹೋಗಿ ಬಂದಿದ್ದಾರೆ. ಇದರಲ್ಲೇ ಲೆಕ್ಕ ಹಾಕಿದರೆ, ಇದುವರೆಗೂ ಸುಮಾರು 520 ಕೆಜಿ ಚಿನ್ನವನ್ನು ಸಾಗಾಣಿಕೆ ಮಾಡಿದ್ದಾರೆ ಎಂದು ತಿಳಿದು ಬರುತ್ತದೆ. ಸ್ಟ್ರಾಂಗ್ ಹ್ಯಾಂಡ್ ಸಪೋರ್ಟ್ ಇಲ್ಲದೇ ಈ ಕೆಲಸವನ್ನು ಮಾಡುವುದಕ್ಕೆ ಸಾಧ್ಯ ಆಗುವುದಿಲ್ಲ. ಇದರ ಹಿಂದೆ ದೊಡ್ಡ ದೊಡ್ಡ ವ್ಯಕ್ತಿಗಳು ಇರಬಹುದು ಎಂದು ಅನುಮಾನ ವ್ಯಕ್ತವಾಗಿದೆ.

ಇವರು ಚಿನ್ನ ಸಾಗಿಸುತ್ತಾ ಇದ್ದಿದ್ದು ಹೌದು, ಆದರೆ ಆ ಚಿನ್ನವನ್ನು ಯಾರಿಗೆ ತಂದುಕೊಡುತ್ತಿದ್ದರು ಎನ್ನುವುದು ಇವತ್ತಿಗೂ ತಿಳಿದುಬಂದಿಲ್ಲ. ಈ ಒಂದು ವಿಷಯದ ಬಗ್ಗೆ ರನ್ಯಾ ರಾವ್ ಇನ್ನು ಕೂಡ ಬಾಯಿ ಬಿಟ್ಟಿಲ್ಲ ಎನ್ನಲಾಗಿದೆ. ಸಿಬಿಐ ಮತ್ತು ಡಿ.ಆರ್.ಐ ಕಚೇರಿಗಳು ಈ ಬಗ್ಗೆ ತನಿಖೆ ನಡೆಸಿ, ಆ ನಿಜವಾದ ಅಪರಾಧಿ ಯಾರು ಎಂದು ಕಂಡು ಹಿಡಿಯಬೇಕಿದೆ. ಹಾಗೆಯೇ ರನ್ಯಾ ಅವರನ್ನು ತನಿಖೆ ಮಾಡುವ ವೇಳೆ, ಒಂದು ಕೆಜಿ ಚಿನ್ನ ಸಾಗಿಸಿದರೆ ಎಷ್ಟು ಕಮಿಷನ್ ಸಿಗುತ್ತಿತ್ತು? ಇದುವರೆಗೂ ಇವರು ಸಾಗಿಸಿರುವ ಚಿನ್ನಕ್ಕೆ ಎಷ್ಟು ಕಮಿಷನ್ ಪಡೆದಿದ್ದಾರೆ ಎನ್ನುವ ವಿಚಾರವನ್ನು ರಿವೀಲ್ ಮಾಡಲಾಗಿದೆ. ರನ್ಯಾ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಅದನ್ನು ಕೇಳಿ ಅಧಿಕಾರಿಗಳು ಶಾಕ್ ಆಗಿದ್ದಾರೆ.

ರನ್ಯಾ ಅವರು ಹೇಳಿರುವ ಮಾಹಿತಿಯ ಅನುಸಾರ, ಒಂದು ಕೆಜಿ ಚಿನ್ನ ಸಾಗಿಸಲು 3.80 ಲಕ್ಷ ರೂಪಾಯಿ ಕಮಿಷನ್ ಸಿಗುತ್ತಿತ್ತಂತೆ. 40 ಬಾರಿ ದುಬೈಗೆ ಹೋಗಿ ಬಂದಿದ್ದಾರೆ, 520 ಕೆಜಿ ಚಿನ್ನ ಸಾಗಿಸಿದ್ದಾರೆ. ಒಂದು ಕೆಜಿಗೆ 3.80 ಲಕ್ಷ ಕಮಿಶನ್ ಎಂದರೆ, 520 ಕೆಜಿಗೆ ₹19 ಕೋಟಿ 76 ಲಕ್ಷ ಕಮಿಶನ್ ಸಿಕ್ಕಿದೆ ಎಂದು ಅಂದಾಜಿಸಲಾಗಿದೆ. ಆದರೆ ಈ ವಿಚಾರವಾಗಿ ಡಿ.ಆರ್.ಐ ಇನ್ನು ಕೂಡ ಅಧಿಕೃತ ಮಾಹಿತಿ ನೀಡಿಲ್ಲ. ಮುಂದಿನ ದಿನಗಳಲ್ಲಿ ಈ ಪ್ರಕರಣ ಇನ್ನು ಯಾವ ರೀತಿಯ ಟ್ವಿಸ್ಟ್ ಗಳನ್ನು ಪಡೆದುಕೊಳ್ಳಬಹುದು ಎಂದು ಕುತೂಹಲ ನೆಟ್ಟಿಗರಲ್ಲಿ ಶುರುವಾಗಿದೆ. ಈ ಕೇಸ್ ನಲ್ಲಿ ಇರುವ ದೊಡ್ಡ ಜನರು ಯಾರು ಎನ್ನುವುದನ್ನು ಕೂಡ ಇನ್ನು ಪತ್ತೆ ಹಚ್ಚಬೇಕಿದೆ.