ನಟಿ ರಮ್ಯಾ ಅವರು ಯಾವುದಕ್ಕೂ ಯಾವತ್ತಿಗೂ ತಲೆ ಕೆಡಿಸಿಕೊಂಡವರಲ್ಲ. ಮನಸ್ಸಿಗೆ ಬಂದಿದ್ದನ್ನು ಬಂದ ಹಾಗೆ ಹೇಳುವ ವ್ಯಕ್ತಿತ್ವ ಅವರದ್ದು. ರಮ್ಯಾ ಅವರು ಈ ಕಾರಣಕ್ಕೆ ಹಲವು ಬಾರಿ ಕಾಂಟ್ರಾವರ್ಸಿ ಗಳಿಗೆ ಸಿಲುಕಿಕೊಂಡಿದ್ದಾರೆ. ಆದರೆ ಏನೇ ನಡೆದರು ತಮ್ಮ ಸ್ವಭಾವವನ್ನು ಬಿಟ್ಟುಕೊಟ್ಟಿಲ್ಲ. ಯಾವುದೇ ವಿಚಾರ ಇರಲಿ ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ರಮ್ಯಾ ಅವರು ಅಭಿಮಾನಿಗಳ ಫೇವರೆಟ್ ಆಗಿರುವುದು ಕೂಡ ಇದೇ ಕಾರಣಕ್ಕೆ. ಮಹಿಳೆಯರ ಸಮಸ್ಯೆಗಳು, ಚಿತ್ರರಂಗದಲ್ಲಿ ಕಂಡುಬರುವ ಸಮಸ್ಯೆಗಳು ಇದೆಲ್ಲದರ ಬಗ್ಗೆ ಕೂಡ ರಮ್ಯಾ ಅವರು ಹಲವು ಬಾರಿ ಧ್ವನಿ ಎತ್ತಿದ್ದಾರೆ. ಇದೀಗ ರಮ್ಯಾ ಅವರು ಸ್ಯಾಂಡಲ್ ವುಡ್ ನಲ್ಲಿ ಇರುವ ಸಂಭಾವನೆ ತಾರತಮ್ಯದ ಬಗ್ಗೆ ಮಾತನಾಡಿದ್ದಾರೆ. ರಮ್ಯಾ ಅವರ ಮಾತನ್ನು ಕೇಳಿ ಯಶ್ ಅವರಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರಾ? ಅಂತಿದ್ದಾರೆ ಫ್ಯಾನ್ಸ್..
ನಟಿ ರಮ್ಯಾ ಅವರು ಈಗ ಮತ್ತೆ ಬಹಳ ಆಕ್ಟಿವ್ ಆಗಿದ್ದಾರೆ. ಹಲವು ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟಿ ರಕ್ಷಿತಾ ಅವರ ತಮ್ಮನ ಮದುವೆಗೆ ಬ್ಲ್ಯಾಕ್ ಸೀರೆ ಧರಿಸಿಕೊಂಡು ಬಂದಿದ್ದ ರಮ್ಯಾ ಅಭಿಮಾನಿಗಳ ಹೃದಯ ಕದ್ದಿದ್ದರು. ಅಂದು ರಕ್ಷಿತಾ ಹಾಗೂ ರಮ್ಯಾ ಇಬ್ಬರ ಸಮಾಗಮ ನೋಡಿ ಫ್ಯಾನ್ಸ್ ಫುಲ್ ಖುಷ್ ಆಗಿದ್ದರು. ಅಂದು ರಮ್ಯಾ ಅವರ ಕೈಯಲ್ಲಿದ್ದ ರಿಂಗ್ ಭಾರಿ ಚರ್ಚೆಗೆ ಕಾರಣವಾಗಿತ್ತು. ರಮ್ಯಾ ಅವರು ಹಾರ್ಟ್ ಶೇಪ್ ರಿಂಗ್ ಧರಿಸಿದ್ದಾರೆ, ಸದ್ದಿಲ್ಲದೇ ಮದುವೆ ಆಗಿದ್ದಾರಾ ಎನ್ನುವ ಮಾತುಗಳು ಕೇಳಿಬಂದಿತ್ತು. ಆದರೆ ಇದ್ಯಾವುದಕ್ಕೂ ಸಹ ರಮ್ಯಾ ಅವರು ಉತ್ತರ ಕೊಟ್ಟಿಲ್ಲ. ಐ ಲವ್ ಮೈ ಸೆಲ್ಫ್ ಎಂದು ಹೇಳಿದರು. ಹಾಗೆಯೇ ಪರ್ಸನಲ್ ವಿಚಾರಗಳು ಇವಾಗ ಬೇಡ ಎಂದು ಕೂಡ ಹೇಳಿದ್ದರು. ಈ ವಿಷಯದಲ್ಲಿ ಅಭಿಮಾನಿಗಳಿಗೆ ಭಾರಿ ಕುತೂಹಲ ಇದೆ.

ಇನ್ನು ರಮ್ಯಾ ಅವರು ಇತ್ತೀಚೆಗೆ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಚಿತ್ರತಂಡದ ವಿರುದ್ಧ ಹಾಕಿದ ಕೇಸ್ ನಲ್ಲಿ ಕೂಡ ಗೆದ್ದಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಸಿನಿಮಾದ ಟ್ರೇಲರ್ ನಲ್ಲಿ ರಮ್ಯಾ ಕಾಣಿಸಿಕೊಂಡಿದ್ದರು, ಇದು ರಮ್ಯಾ ಅವರ ಕಂಬ್ಯಾಕ್ ಸಿನಿಮಾ ಎಂದೇ ಎಲ್ಲರೂ ಭಾವಿಸಿದರು. ಆದರೆ ರಮ್ಯಾ ಅವರು ಸಿನಿಮಾ ಬಿಡುಗಡೆ ವೇಳೆ ಕೇಸ್ ಹಾಕಿದ್ದರು. ತಮ್ಮ ಪರ್ಮಿಶನ್ ಇಲ್ಲದೇ ತಾವು ನಟಿಸಿರುವ ದೃಶ್ಯಗಳನ್ನು ಸಿನಿಮಾದಲ್ಲಿ ಬಳಸಿಕೊಂಡಿದ್ದಾರೆ, ನಾನು ಕೇವಲ ಪ್ರೊಮೋಷನಲ್ ವಿಡಿಯೋದಲ್ಲಿ ಮಾತ್ರ ನಟಿಸಿದ್ದು ಎಂದು ಕೋರ್ಟ್ ಮೆಟ್ಟಿಲೇರಿದ್ದರು. ಸಿನಿಮಾ ಬಿಡುಗಡೆಗೆ ತಡೆಯಾಜ್ಞೆ ತರಲು ರಮ್ಯಾ ಟ್ರೈ ಮಾಡಿದ್ದರು, ಆದರೆ ಅದು ಸಾಧ್ಯವಾಗಲಿಲ್ಲ. ಸಿನಿಮಾ ತೆರೆಕಂಡು, ಯಶಸ್ವಿಯಾಗಿತ್ತು. ಆದರೆ ಈಗ ರಮ್ಯಾ ಅವರ ಪರವಾಗಿ ಕೋರ್ಟ್ ನಲ್ಲಿ ತೀರ್ಪು ಬಂದಿದೆ..
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ತಂಡದವರು 50 ಸಾವಿರ ಡೆಪಾಸಿಟ್ ಇಡಬೇಕು ಎಂದು ಕೋರ್ಟ್ ತೀರ್ಪು ಕೊಟ್ಟಿದೆ. ಒಟ್ಟಿನಲ್ಲಿ ರಮ್ಯಾ ಅವರಿಗೆ ಗೆಲುವು ಸಿಕ್ಕಿರುವುದು ಸಂತೋಷದ ವಿಷಯ. ಇದೆಲ್ಲದರ ಜೊತೆಗೆ ರಮ್ಯಾ ಅವರು ಬೆಂಗಳೂರು ಇಂಟರ್ನ್ಯಾಷನಲ್ ಫಿಲ್ಮ್ ಫೆಸ್ಟಿವಲ್ ನಲ್ಲಿ ಕೂಡ ಭಾಗವಹಿಸಿದ್ದರು, ಮಹಿಳೆ ಮತ್ತು ಸಿನಿಮಾ ಈ ಸಂವಾದದಲ್ಲಿ ಪಾಲ್ಗೊಂಡು ಮಾತನಾಡಿದ ರಮ್ಯಾ ಅವರು ಸಂಭಾವನೆ ವಿಷಯದಲ್ಲಿ ನಡೆಯುವ ತಾರತಮ್ಯದ ಬಗ್ಗೆ ಮಾತನಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ನಾಯಕರು ಮಾತ್ರವಲ್ಲ ನಾಯಕಿಯರು ಕೂಡ ಅವರಷ್ಟೇ ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಆದರೆ ನಾಯಕಿಯರಿಗೆ ಕಡಿಮೆ ಸಂಭಾವನೆ ಎನ್ನುತ್ತಾರೆ ರಮ್ಯಾ. ರಮ್ಯಾ ಅವರು ಪೀಕ್ ನಲ್ಲಿದ್ದಾಗ ಅವರೊಡನೆ ನಟಿಸೋದ ಹೀರೋಗೆ ಅವರಿಗಿಂತ ಕಡಿಮೆ ಸಂಭಾವನೆ ನಿಗದಿ ಆಗಿತ್ತಂತೆ.

ಈಗ ಅವರೆಲ್ಲರೂ ಕೋಟಿಗಟ್ಟಲೆ ಸಂಭಾವನೆ ಪಡೆಯುತ್ತಾರೆ. ಒಂದು ಸಿನಿಮಾ ಗೆದ್ದು ಸೂಪರ್ ಹಿಟ್ ಆದಾಗ ನಾಯಕರ ಮುಂದಿನ ಸಿನಿಮಾಗೆ 50 ಪಟ್ಟು ಹೆಚ್ಚು ಸಂಭಾವನೆ ಕೊಡುತ್ತಾರೆ, ನಾಯಕಿಯರಿಗೆ 5 ಪಟ್ಟು ಹೆಚ್ಚು ಸಂಭಾವನೆ ಕೊಡುವುದು ಕಷ್ಟ. ಹೀರೋ ಹೀರೋಯಿನ್ ಇಬ್ಬರಿಂದಲು ಸಿನಿಮಾ ಗೆದ್ದಿರುತ್ತದೆ, ಆದರೆ ಹೀರೋಗೆ ಸುಲಭವಾಗಿ ಕೋಟಿಗಟ್ಟಲೆ ಸಂಭಾವನೆ ಕೊಡುತ್ತಾರೆ, ಹೀರೋಯಿನ್ ಆಗಿ 1 ಕೋಟಿ ಸಂಭಾವನೆ ಪಡೆಯೋಕೆ ನಾನು ಹರಸಾಹಸ ಪಡಬೇಕು, ಕನ್ನಡ ಚಿತ್ರರಂಗ ಈ ಸಂಭಾವನೆ ವಿಚಾರದಲ್ಲಿ ಬದಲಾಗಬೇಕು ಎನ್ನುತ್ತಾರೆ ರಮ್ಯಾ. ರಮ್ಯಾ ಅವರು ಹೇಳಿರುವ ಈ ಮಾತು ಯಶ್ ಅವರಿಗೆ ಟಾಂಗ್ ಕೊಡುತ್ತಿರಬಹುದು ಅಂತಿದ್ದಾರೆ ನೆಟ್ಟಿಗರು. ಯಾಕೆಂದರೆ ರಮ್ಯಾ ಅವರು ಪೀಕ್ ನಲ್ಲಿದ್ದಾಗ ಯಶ್ ಹಾಗೂ ರಮ್ಯಾ ಒಂದು ಸಿನಿಮಾ ಮಾಡಿದ್ದರು. ಆ ವೇಳೆ ಯಶ್ ಅವರಿಗೆ ಅಷ್ಟೇನು ಜನಪ್ರಿಯತೆ ಇರಲಿಲ್ಲ.
ಖಂಡಿತವಾಗಿಯು ಯಶ್ ಅವರಿಗೆ ಕಡಿಮೆ ಸಂಭಾವನೆ ಕೊಟ್ಟಿರುತ್ತಾರೆ. ಆದರೆ ಇಂದು ಯಶ್ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಹಾಗಾಗಿ ರಮ್ಯಾ ಅವರು ಸಂಭಾವನೆ ವಿಷಯದಲ್ಲಿ ಪರೋಕ್ಷವಾಗಿ ಯಶ್ ಅವರಿಗೆ ಟಾಂಗ್ ಕೊಟ್ಟಿದ್ದಾರಾ ಎನ್ನುವ ಮಾತು ಕೇಳಿಬರುತ್ತಿದೆ. ಆದರೆ ನಿಜವೋ ಸುಳ್ಳೋ ಗೊತ್ತಿಲ್ಲ. ಇದಷ್ಟೇ ಅಲ್ಲದೇ ರಮ್ಯಾ ಅವರು ಮಹಿಳಾ ಪ್ರಧಾನ ಸಿನಿಮಾಗಳ ಬಗ್ಗೆ ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಲಯಾಳಂ ನಲ್ಲಿ ಒಳ್ಳೊಳ್ಳೆಯ ಮಹಿಳಾ ಪ್ರಧಾನ ಸಿನಿಮಾಗಳು ಬರುತ್ತಿದೆ, ಕನ್ನಡದಲ್ಲಿ ತುಂಬಾ ಕಡಿಮೆ ಆಗಿದೆ. ಕನ್ನಡದಲ್ಲಿ ಮಹಿಳಾ ಪ್ರಧಾನ ಸಿನಿಮಾ ಅಂದ್ರೆ ಹೀರೋಯಿನ್ ಗೆ ಪೊಲೀಸ್ ಡ್ರೆಸ್ ಹಾಕಿಸಿ, ರೌಡಿಗಳ ಜೊತೆಗೆ ಫೈಟ್ ಮಾಡಿಸೋದು ಅಂದುಕೊಂಡಿದ್ದಾರೆ ಎಂದು ಹೇಳುತ್ತಾರೆ ರಮ್ಯಾ.

ಈ ನಿಟ್ಟಿನಲ್ಲಿ ಕನ್ನಡ ಚಿತ್ರರಂಗ ಬೆಳೆಯಬೇಕು, ಒಳ್ಳೆಯ ಸಿನಿಮಾಗಳು ಬರಬೇಕು ಎಂದಿದ್ದಾರೆ. ರಮ್ಯಾ ಅವರ ಮಾತುಗಳು ಈ ಒಂದು ವಿಷಯದಲ್ಲಿ ನಿಜ ಎಂದರೆ ತಪ್ಪಲ್ಲ. ಕಾಮನ್ ಆಗಿರುವಂಥ ಮಸಾಲ, ಕಮರ್ಷಿಯಲ್ ಸಿನಿಮಾಗಳನ್ನು ಹೊರತು ಪಡಿಸಿ ಒಳ್ಳೆಯ ಕಾಂಟೆಂಟ್ ಇರುವ ಸಿನಿಮಾಗಳು ಬರಬೇಕು. ಸಿನಿಮಾಗಳು ಬರುತ್ತದೆ, ಆದರೆ ಜನರು ಕೂಡ ಆ ಪ್ರಯತ್ನಗಳಿಗೆ ಬೆಂಬಲ ಕೊಡಬೇಕು. ಬೇರೆ ಭಾಷೆಯಲ್ಲಿ ಬರುವ ಸಿನಿಮಾಗಳನ್ನು ನೋಡುವ ಜನರು, ನಮ್ಮ ಕನ್ನಡ ಸಿನಿಮಾಗಳನ್ನು ನೋಡಿ ಬೆಳೆಸಬೇಕು. ಹೊಸ ತಂಡಗಳಿಗೆ ಪ್ರೋತ್ಸಾಹ ಕೊಡಬೇಕು. ಇನ್ನು ಮತ್ತೆ ರಮ್ಯಾ ಅವರ ವಿಷಯಕ್ಕೆ ಬರುವುದಾದರೆ, ಇನ್ನು ಒಳ್ಳೆ ಸ್ಕ್ರಿಪ್ಟ್ ಗಾಗಿ ಕಾಯುತ್ತಿರುವ ರಮ್ಯಾ ಅವರು ಯಾವಾಗ ಕಂಬ್ಯಾಕ್ ಮಾಡುತ್ತಾರೆ ಎಂದು ಕಾದು ನೋಡಬೇಕಿದೆ.