ನಟಿ ರಮ್ಯಾ ಕೃಷ್ಣನ್ ಅವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ದಕ್ಷಿಣ ಭಾರತ ಚಿತ್ರರಂಗದ ಎವರ್ ಗ್ರೀನ್ ನಟಿ ಇವರು. ಈಗಿನ ನಟಿಯರಿಗೆ ಇರುವುದಕ್ಕಿಂತ ಹೆಚ್ಚು ಬೇಡಿಕೆ ಇವರಿಗೆ ಇದೆ ಎಂದರು ತಪ್ಪಲ್ಲ. 80ರ ದಶಕದಿಂದ ಕೂಡ ನಟನೆಯಲ್ಲಿ ಸಕ್ರಿಯವಾಗಿರುವ ರಮ್ಯಾ ಕೃಷ್ಣನ್ ಅವರು ಇಂದಿಗೂ ಆಗಿನ ಹಾಗೆಯೇ ಗ್ಲಾಮರ್ ಉಳಿಸಿಕೊಂಡು ಬಂದಿರುವುದು ಹಾಗೂ ಅವರ ಸೌಂದರ್ಯ ಎಂದಿಗೂ ಮಾಸದ ಹಾಗೆ ಉಳಿದಿರುವುದು ಅವರ ಸೌಂದರ್ಯದ ಗುಟ್ಟು ಎಂದು ಹೇಳಿದರೂ ತಪ್ಪಲ್ಲ. ಇಂಥ ರಮ್ಯಾ ಕೃಷ್ಣನ್ ಅವರು ಯಾವುದೇ ಸ್ಟಾರ್ ನಟ ಅಥವಾ ಸ್ಟಾರ್ ನಟಿಗಿಂತ ಹೆಚ್ಚು ಆದಾಯ ಗಳಿಸುತ್ತಾರೆ ಎಂದರೆ ನೀವು ನಂಬುತ್ತೀರಾ? ನಂಬುವುದಕ್ಕೆ ಕಷ್ಟ ಅನ್ನಿಸಿದರೂ ಸಹ, ಇದು ನಿಜವೇ. ಹಾಗಿದ್ದರೆ ರಮ್ಯಾ ಕೃಷ್ಣನ್ ಅವರ ತಿಂಗಳ ಆದಾಯ ಎಷ್ಟು ಎಂದು ತಿಳಿಯೋಣ..
ರಮ್ಯಾ ಕೃಷ್ಣನ್ ಅವರು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ನಟಿ. ತಮಿಳು, ತೆಲುಗು, ಕನ್ನಡ, ಮಲಯಾಳಂ, ಹಿಂದಿ ಈ ಐದು ಭಾಷೆಗಳಲ್ಲಿ ಸಹ ನಟಿಸಿ, ಸಿಕ್ಕಾಪಟ್ಟೆ ಬೇಡಿಕೆ ಸೃಷ್ಟಿಸಿಕೊಂಡವರು. ಇವರ ನಟನೆ ಮತ್ತು ಡ್ಯಾನ್ಸ್ ಸೂಪರ್ ಅಂತಾರೆ ಫ್ಯಾನ್ಸ್. ಈಗಲೂ ಸಹ ರಮ್ಯಾ ಕೃಷ್ಣನ್ ಅಷ್ಟೇ ಚೆನ್ನಾಗಿ ಡ್ಯಾನ್ಸ್ ಮಾಡ್ತಾರೆ. ಇನ್ನು 80ರ ದಶಕದಲ್ಲಿ ಮತ್ತು 90ರ ದಶಕದಲ್ಲಿ ಎಲ್ಲಾ ಸ್ಟಾರ್ ಹೀರೋಗಳ ಜೊತೆಗೆ ನಾಯಕಿಯಾಗಿ ಅಭಿನಯಿಸಿ, ಹೆಸರು ಮಾಡಿದ ಚೆಲುವೆ ರಮ್ಯಾ. ಕನ್ನಡದಲ್ಲಿ ಸಹ ಹಲವು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ರವಿಚಂದ್ರನ್ ಹಾಗೂ ರಮ್ಯಾ ಕೃಷ್ಣನ್ ಅವರ ಕಾಂಬಿನೇಶನ್ ಎಲ್ಲರ ಫೇವರೆಟ್. ಗಡಿಬಿಡಿ ಗಂಡ, ಏಕಾಂಗಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ಇವರಿಬ್ಬರು ಜೊತೆಯಾಗಿ ನಟಿಸಿದ್ದಾರೆ.

ಗ್ಲಾಮರಸ್ ಪಾತ್ರಗಳು, ಮುಗ್ಧ ಪಾತ್ರಗಳು, ಕೌಟುಂಬಿಕ ಪಾತ್ರಗಳು, ವಿಲ್ಲನ್ ಪಾತ್ರಗಳು ಹೀಗೆ ಎಲ್ಲಾ ಥರದ ಪಾತ್ರಕ್ಕೂ ಒಪ್ಪುವ ಪ್ರತಿಭೆ ಇವರು. ರಜನಿಕಾಂತ್, ಕಮಲ್ ಹಾಸನ್, ವಿಷ್ಣುವರ್ಧನ್ ಇವರಂಥ ಎಲ್ಲಾ ಘಟಾನುಘಟಿ ಕಲಾವಿದರ ಎದುರು ನಟಿಸಿ, ಸ್ಟಾರ್ ಆಗಿ ಬೆಳೆದಿದ್ದಾರೆ. ಪಡಯಪ್ಪ ಸಿನಿಮಾದಲ್ಲಿ ರಜನಿಕಾಂತ್ ಅವರ ಎದುರು ನೀಲಾಂಬರಿಯಾಗಿ ಅಬ್ಬರಿಸಿದ್ದನ್ನು ಜನರು ಇವತ್ತಿಗೂ ಸಹ ಮರೆತಿಲ್ಲ. ಇಂಥ ನಟಿ ರಮ್ಯಾ ಕೃಷ್ಣನ್ ಅವರು ಸೆಕೆಂಡ್ ಇನ್ನಿಂಗ್ಸ್ ನಲ್ಲಿ ಬಹಳ ಸೌಂಡ್ ಮಾಡಿದ್ದಾರೆ. ಬಾಹುಬಲಿ ಸಿನಿಮಾದ ಶಿವಗಾಮಿ ಪಾತ್ರದಲ್ಲಿ ಇವರ ಅಭಿನಯ ಅದ್ಭುತ. ಈ ಪಾತ್ರದಲ್ಲಿ ಬೇರೆ ಯಾರು ಇವರಷ್ಟು ಚೆನ್ನಾಗಿ ಅಭಿನಯಿಸೋಕೆ ಆಗೋದೇ ಇಲ್ಲ ಎನ್ನಿಸುವಂತೆ ಇತ್ತು ರಮ್ಯಾ ಕೃಷ್ಣನ್ ಅವರ ಅಭಿನಯ. ಅಷ್ಟು ಚೆನ್ನಾಗಿ ನಟಿಸಿದ್ದರು.
ಬಾಹುಬಲಿ ಮತ್ತು ಬಾಹುಬಲಿ2 ಈ ಎರಡು ಸಿನಿಮಾಗಳು ರಮ್ಯಾ ಕೃಷ್ಣನ್ ಅವರಿಗೆ ಸಿಕ್ಕಾಪಟ್ಟೆ ಹೆಸರು, ಜನಪ್ರಿಯತೆ, ಒಳ್ಳೆಯ ಅವಕಾಶಗಳು ಎಲ್ಲವನ್ನು ತಂದುಕೊಟ್ಟಿತು. ರಮ್ಯಾ ಕೃಷ್ಣನ್ ಅವರು ಈ ಸಿನಿಮಾ ಯಶಸ್ಸಿನಿಂದ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡರು. ಯಾವುದೇ ಹೀರೋಯಿನ್ ಗಿಂತ ಹೆಚ್ಚಿನ ಬೇಡಿಕೆ ಇವರಿಗೆ. ಇವರು ಒಂದು ದಿನಕ್ಕೆ 10 ಲಕ್ಷ ಸಂಭಾವನೆ ಪಡೆಯುತ್ತಾರೆ. ಒಂದು ಸಿನಿಮಾಗೆ 10. ದಿವಸ ಶೂಟಿಂಗ್ ಎಂದರೂ ಅಲ್ಲೇ 1 ಕೋಟಿ ಆದಾಯ. ಇನ್ನು ಪ್ರತಿ ತಿಂಗಳು 5 ಕೋಟಿಗಿಂತ ಹೆಚ್ಚು ಆದಾಯ ರಮ್ಯಾ ಕೃಷ್ಣನ್ ಅವರದ್ದು ಎಂದು ಹೇಳಲಾಗುತ್ತದೆ. ಈ ಆದಾಯದ ಮೂಲ ಯಾವುದು ಎಂದು ನೋಡುವುದಾದರೆ. ರಮ್ಯಾ ಕೃಷ್ಣನ್ ಅವರು ನಟನೆ ಮಾತ್ರವಲ್ಲದೇ ಬೇರೆ ಮೂಲಗಳಿಂದ ಸಹ ಆದಾಯ ಹೊಂದಿದ್ದಾರೆ..

ರಮ್ಯಾ ಕೃಷ್ಣನ್ ಅವರ ಬಳಿ ಕೇರಳದಲ್ಲಿ 5 ಐದು ದೊಡ್ಡ ಬ್ಯೂಟಿ ಪಾರ್ಲರ್ ಗಳು ಇವೆ, ಇನ್ನು ಹೈದರಾಬಾದ್ ನಲ್ಲಿ ಇವರಿಗೆ ಸೇರಿದ 3 ಚಿನ್ನ ಬೆಳ್ಳಿ ಒಡವೆಯ ಅಂಗಡಿಗಳು ಸಹ ಇದೆ. ಇದಷ್ಟೇ ಅಲ್ಲದೇ ಹಲವು ಕಡೆಗಳಲ್ಲಿ ತಮ್ಮ ಹಣವನ್ನು ಇನ್ವೆಸ್ಟ್ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಹಾಗೆಯೇ ಸಿನಿಮಾಗಳು ಮತ್ತು ಜಾಹೀರಾತುಗಳಲ್ಲಿ ಸಹ ರಮ್ಯಾ ಕೃಷ್ಣನ್ ಅವರು ಕಾಣಿಸಿಕೊಳ್ಳುತ್ತಾರೆ. ಈ ಎಲ್ಲಾ ಮೂಲದಿಂದ ಅವರಿಗೆ ತಿಂಗಳಿಗೆ 5 ಕೋಟಿಗಿಂತ ಹೆಚ್ಚು ಆದಾಯ ಸಿಗುತ್ತದೆ ಎಂದು ಹೇಳಲಾಗುತ್ತದೆ.. ಹಾಗೆಯೇ ಪ್ರತಿ ವರ್ಷ ದುಬಾರಿ ಮೊತ್ತವನ್ನೇ ಐಟಿ ರಿಟರ್ನ್ಸ್ ಕಟ್ಟುತ್ತಾರಂತೆ. ಇವರಷ್ಟು ಆದಾಯ ಸ್ಟಾರ್ ಹೀರೋ ಅಥವಾ ಸ್ಟಾರ್ ಹೀರೋಯಿನ್ ಗಳಿಗೂ ಇರುತ್ತಾ ಅನ್ನೋದೇ ಗೊತ್ತಿಲ್ಲ.