
“ಹನ್ಸಿಕಾ ಮೊಟ್ವಾನಿ” ಈ ಹೆಸರು ಕನ್ನಡ ಚಿತ್ರರಂಗದಲ್ಲಿ ಅಲ್ಲದೆ ತೆಲಗು, ತಮಿಳು, ಮಲಯಾಳಂ ಅಲ್ಲದೆ ಹಿಂದೆ ಭಾಷೆಯಲ್ಲೂ ಕೂಡ ನಟಿಸಿದ್ದಾರೆ.ಈ ನಟಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಬಹಳ ಚಿಕ್ಕ ವಯಸ್ಸಿನಲ್ಲಿಯೇ.ಬಾಲ ನಟಿಯಾಗಿ ಹನ್ಸಿಕಾ ಮೊಟ್ವಾನಿ ಅವರು ಸಿನಿಮಾ ಪ್ರಪಂಚಕ್ಕೆ ಕಾಲಿಟ್ಟಿದ್ದಾರೆ.ತದ ನಂತರ ತಮ್ಮ 15ನೆ ವಯಸ್ಸಿನಲ್ಲಿ “ಅಲ್ಲು ಅರ್ಜುನ್” ಅಭಿನಯದ, “ಪೂರಿ ಜಗನ್ನಾಥ್” ನಿರ್ದೇಶನದ ‘ದೇಶಮುದುರು’ ಚಿತ್ರದಲ್ಲಿ ನಟಿಸಿ ಪೂರ್ಣ ಪ್ರಮಾಣದ ನಾಯಕಿಯಾಗಿ ಬಡ್ತಿ ಪಡೆದರು.ಸಂಪೂರ್ಣ ನಟಿಯಾಗಿ ಗುರುತಿಸಿಕೊಂಡ ಮೊದಲ ಚಿತ್ರದಲ್ಲಿಯೇ ಫುಲ್ ಮಾರ್ಕ್ಸ್ ಪಡೆದುಕೊಂಡರು.
ಇವರ ನಟನೆಯ ಮೊದಲ ಚಿತ್ರದ ಮೂಲಕವೇ ದೊಡ್ಡ ಮಟ್ಟದ ಸಂಖ್ಯೆಯ ಅಭಿಮಾನಿಗಳನ್ನು ಗಳಿಸಿಕೊಳ್ಳುತ್ತಾರೆ.ಆ ನಂತರ ಈ ನಟಿ ಮುಟ್ಟಿದೆಲ್ಲ ಚಿನ್ನಾ ಎಂದರೆ ತಪ್ಪಾಗಲಾರದು. ಇವರು ಆಯ್ಕೆ ಮಾಡಿಕೊಂಡ ಪ್ರತಿ ಸಿನಿಮಾ ಕೂಡ ಬಾಕ್ಸ್ ಅಫೀಸ್ನಲ್ಲಿ ದೊಡ್ಡ ಮಟ್ಟದ ಕಲೆಕ್ಷನ್ ಮಾಡುತ್ತಾ ಇವರ ಜನಪ್ರಿಯತೆ ಕೂಡ ಹೆಚ್ಚುತ್ತಾ ಹೋಗುತ್ತದೆ.ಕೇವಲ ಟಾಲಿವುಡ್ ನಲ್ಲಿ ಗುರುತಿಸಿಕೊಂಡ ಈ ನಟಿಯನ್ನು ಒಳ್ಳೆಯ ಒಳ್ಳೆಯ ಪ್ರಾಜೆಕ್ಟ್ ಬೇರೆ ಭಾಷೆಯಿಂದ ಕೂಡ ಬರಲು ಆರಂಭಿಸುತ್ತದೆ.ಪರ ಭಾಷೆಯಲ್ಲಿ ಕೂಡ ಈ ನಟಿ ಒಳ್ಳೆಯ ಹೆಸರು ಮಾಡಿ ಬಹು ಭಾಷಾ ನಟಿ ಎಂದು ಗುರುತಿಸಿಕೊಳ್ಳುತ್ತಾರೆ.
ಹನ್ಸಿಕಾ ಮೊಟ್ವಾನಿ ಅವರು ನಮ್ಮ ಸ್ಯಾಂಡಲ್ ವುಡ್ ನಲ್ಲೂ ಕೂಡ ತನ್ನ ನಟನಾ ಕೌಶಲ್ಯವನ್ನು ಗುರುತಿಸಿಕೊಂಡಿದ್ದಾರೆ. ಹೌದು ಈ ನಟಿ ನಮ್ಮ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ನಟನೆಯ ಬಿಂದಾಸ್ ಚಿತ್ರದಲ್ಲಿ ನಟಿಯಾಗಿ ಕಾಣಿಸಿಕೊಂಡು ಕನ್ನಡಿಗರ ಹೃದಯವನ್ನು ಗೆದ್ದಿದ್ದಾರೆ.ಹೀಗೆ ಸಾಕಷ್ಟು ಹೆಸರು ಗಳಿಸಿದ ಈ ನಟಿ ಕಳೆದ ಎರಡು ವರ್ಷಗಳಿಂದ ಖಾಲಿ ಕೈಯಲ್ಲಿ ಕುಳಿತಿದ್ದಾರೆ. ಇವರನ್ನು ಅರಸಿ ಕಥೆಗಳು ಬರಿಟ್ಟಿಲ್ಲವೋ ಅಥವಾ ಬಂದ ಕತೆಗಳು ಇವರಿಗೆ ಇಷ್ಟ ಆಗದೆ ಸಮಯ ತೆಗೆದುಕೊಂಡಿದ್ದಾರೆ ಎಂದು ಇದುವರೆಗೂ ತಿಳಿದುಬಂದಿಲ್ಲ.ಆದರೆ ಈ ನಟಿ ಅವಾರ್ಡ್ ಫಂಕ್ಷನ್ ಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ.
ಕೆಲ ದಿನಗಳಿಂದ ಈ ನಟಿ ಹೆಸರು ಗಾಳಿಸುದ್ದಿಯಲ್ಲಿ ಸಿಲುಕಿಕೊಂಡಿತ್ತು.ಅದೇನೆಂದರೆ ಈ ನಟಿಗೆ ಈಗಾಗಲೇ ಈ ನಟಿಗೆ ಒಬ್ಬ ಗೆಳೆಯ ಇದ್ದ ಈ ನಟಿ ಪ್ರೀತಿಯಲ್ಲಿ ಬಿದ್ದಿದ್ದಾರೆ ಮದುವೆಯಾಗಳಿದ್ದರೆ ಹಾಗೂ ಈಗಾಗಲೇ ಗುಟ್ಟಾಗಿ ಮದುವೆ ಆಗಿದ್ದಾರೆ ಎಂದು ಹಲವಾರು ಸುದ್ದಿ ಹರಿದಾಡುತ್ತಿತ್ತು. ಆದರೆ ಈ ನಟಿ ಆ ಎಲ್ಲಾ ಗಾಳಿ ಸುದ್ದಿಗೆ ಬ್ರೇಕ್ ಹಾಕಲು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮುಕಾಂತರ ಎಲ್ಲಾ ಗಾಳಿಸುದ್ದಿಗೆ ಬ್ರೇಕ್ ಹಾಕಿದ್ದಾರೆ.ಅವರು ಹಂಚಿಕೊಂಡ ಪೋಸ್ಟ್ ನಲ್ಲಿ ಏನಿತ್ತು ಎಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ.
ಈ ನಟಿಯ ಬಗ್ಗೆ ಹರಿದಾಡುತ್ತಿದ್ದ ಸುದ್ದಿ ಬಹುತೇಕ ನಿಜವಾಗಿದೆ.ತಮ್ಮ ದೀರ್ಘಕಾಲದ ಸ್ನೇಹಿತನಾಗಿದ್ದ ಸೋಹೈಲ್ ಕಥುರಿಯಾ ಜತೆ. ಹೌದು, ಬ್ಯುಸಿನೆನ್ಮನ್ ಆಗಿರುವ “ಸೋಹೈಲ್” ಕಥುರಿಯಾ ‘ಹನ್ಸಿಕಾ ಮೊಟ್ವಾನಿ ಈವೆಂಟ್ಸ್ ಲಿಮಿಟೆಡ್ ಲಯಬಲಿಟಿ ಪಾರ್ಟ್ನರ್ಸ್’ ಕಂಪೆನಿಯಲ್ಲಿ ಪಾರ್ಟ್ನರ್ ಆಗಿದ್ದರು. ಇನ್ನು ಪ್ಯಾರಿಸ್ನ ಎಫೆಲ್ ಟವರ್ ಮುಂದೆ ಸೋಹೈಲ್ ಕಥುರಿಯಾ ಮಂಡಿಯೂರಿ ಪ್ರಪೋಸ್ ಮಾಡಿದ್ದಾರೆ. ಇನ್ನು ನಟಿ ಹನ್ಸಿಕಾ ಈ ಫೋಟೊವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದು ‘ಈಗ ಮತ್ತು ಎಂದೆಂದಿಗೂ’ ಎಂದು ಬರೆದುಕೊಂಡಿದ್ದಾರೆ.ಇವರಿಬ್ಬರ ಮದುವೆ ಇದೆ ವರ್ಷದ ಕೊನೆಯಲ್ಲಿ ರಾಜಸ್ಥಾನದ ಜೈಪುರದಲ್ಲಿ ಅದ್ದೋರಿಯಾಗಿ ನಡೆಯಲಿದೆ ಎಂದು ತಿಳಿದುಬಂದಿದೆ.ಹಾಗೆಯೇ ಇದರೊಟ್ಟಿಗೆ ತಮ್ಮ ಎರಡು ವರ್ಷದ ಬ್ರೇಕ್ ಮುಗಿಸಿ “ಮಹಾ” ಎಂಬ ತಮಿಳು ಚಿತ್ರದಲ್ಲಿ ನಟಿಸುವ ಮೂಲಕ ಮತ್ತೆ ತೆರೆ ಮೇಲೆ ಕಂಬ್ಯಾಕ್ ಮಾಡಲಿದ್ದಾರೆ.