ಸಿನೆಮಾ ನಟ ನಟಿಯರು ಇವರಿಗಂತೂ ಸದಾ ಎಲ್ಲರ ಗಮನದ ನಡುವೆ ಜೀವನ ನಡೆಯಬೇಕಿದೆ.ಇವರ ಸಿನಿ ಜೀವನವಾಗಲಿ ಹಾಗೂ ವಯಕ್ತಿಕ ಜೀವನದ ಮೇಲೆ ಎಲ್ಲರ ಕಣ್ಣು ಇದ್ದೆ ಇರುತ್ತದೆ.ಇವರು ಹಾಕುವ ಉಡುಗೆ, ತೊಡುಗೆ , ಭಾಷೆ ಹೀಗೆ ಎಲ್ಲಾ ತರಹದ ಶೈಲಿಗಳ ಮೇಲೆ ಎಲ್ಲರ ಕಣ್ಣು ಇರುತ್ತದೆ. ಸ್ವಲ್ಪ ಯಾಮಾರಿದರು ಟ್ರೋಲ್ಸ್ ಹಾಗೂ ಟೀಕೆಗಳಿಗೆ ತುತ್ತಾಗುತ್ತಾರೆ.ಅದಕ್ಕಾಗಿ ಇವರು ಎಷ್ಟು ಜೋಪಾನವಾಗಿ ಹಾಗೂ ಜಾಗರೂಕತೆಯಿಂದ ಇದ್ದರು ಕೆಲವೊಂದು ಸಂಧರ್ಭದಲ್ಲಿ ಜನರ ಟೀಕೆಗಳಿಗೆ ಒಳಪಡಿಸಿಬಿಡುತ್ತದೆ.

ಹಾಗಾಗಿ ಸಿನಿಮಾ ರಂಗದಲ್ಲಿ ಗುರುತಿಸಿಕೊಳ್ಳುವುದು ಎಷ್ಟು ಕಷ್ಟವೋ ಅಷ್ಟೇ ತಾವು ಸಂಪಾದನೆ ಮಾಡಿದ ಕೆಲಸಗಳನ್ನು ಉಕಿಸಿಕೊಳ್ಳುವುದು ಅಷ್ಟೇ ಕಷ್ಟವಾಗಿದೆ. ಇನ್ನು ಈ ನಟ ನಟಿಯರು ಕೂಡ ತಮ್ಮ ಉಡುಗೆ ತೊಡುಗೆ ಹಾಗೂ ಆಹಾರ ಪದ್ಧತಿಗಳನ್ನು ತಮಗೆ ಬೇಕಾದಂತೆ ಇರಿಸಿಕೊಳ್ಳಲು ಸಾಧ್ಯವಿಲ್ಲ.ಇವರ ಮೈಕಟ್ಟು ಎಲ್ಲವನ್ನು ಸರಿಯಾದ ಕ್ರಮದಲ್ಲಿಯೇ ಪಾಲಿಸಿಕೊಂಡು ಹೋಗಬೇಕು.ಇತರಹದ ಪದ್ದತಿಗಳಲ್ಲಿ ಕೊಂಚಕ ಕೂಡ ಯಾಮಾರಿದರು ತಮ್ಮ ಆರೋಗ್ಯದ ದೊಡ್ಡ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ.
ಇದೇ ರೀತಿಯ ಉಧಹರಣೆಗಳನ್ನು ನಾವು ಈಗಾಗಲೇ ಬಹಳ ನೋಡಿದ್ದೇವೆ.ಈ ಹಿಂದೆ ಕಿರುತೆರೆಯ ನಟಿ “ಅಮೂಲ್ಯ” ಅವರು ತಮ್ಮ ಬೊಜ್ಜನ್ನು ವೈದ್ಯಕೀಯ ಸಲಹೆಯ ಮೇರೆಗೆ ಆಪ್ರೆಷನ್ ಮಾಡಿಸಿಕೊಳ್ಳುವ ಮುಕಾಂತರ ತಮ್ಮ ದೇಹದ ಬೊಜ್ಜನ್ನು ಕಡಿಮೆ ಮಾಡಿಕೊಳ್ಳಲು ಹೋಗಿ ಆಪರೇಷನ್ ಮಧ್ಯದಲ್ಲಿ ಈ ನಟಿ ಕೊನೆ ಉಸುರು ಎಳೆದಿರುವ ಸುದ್ದಿ ನಿಮಗೆಲ್ಲರಿಗೂ ತಿಳಿದೇ ಇದೇ. ಇದೀಗ ಖ್ಯಾತ ನಟನ ಪತ್ನಿ ಕೇವಲ ಊಟದಿಂದಲೇ ತನ್ನ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಹೋಗಿ ಇದೀಗ ತಮ್ಮ ದೇಹ ತ್ಯಾ*ಗ ಮಾಡಿದ್ದಾರೆ.ಆ ನಟ ಯಾರು ಎಂದು ತಿಳಿಯಲು ಮುಂದಿನ ಸಾಲುಗಳನ್ನು ಓದಿ.
ಬಣ್ಣದ ಲೋಕದಲ್ಲಿ 60-70ರ ದಶಕದಲ್ಲಿ “ಕಲ್ಯಾಣ್ ಕುಮಾರ್” ಎಂಬ ಹೆಸರು ಬಹಳ ಪ್ರಸಿದ್ದಿ ಪಡೆದಿತ್ತು.ಈ ನಟ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದು ಬಾಲ ಕಲಾವಿದನಾಗಿ. ಭರತ್ ಅವರು ತಮ್ಮ ವೃತ್ತಿ ಜೀವನ ಆರಂಭಿ ಸಾಕಷ್ಟು ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.ಕನ್ನಡ ಅಲ್ಲದೆ ಈ ನಟ ಕೆಲ ತಮಿಳು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.ಈ ನಟ “ಪ್ರಿಯದರ್ಶಿನಿ” ಎಂಬುವವರನ್ನು ಮದುವೆಯಾಗಿ ಅವರಿಬ್ಬರ ಪ್ರೀತಿಯ ಸಂಕೇತವಾಗಿ ಒಂದು ಗಂಡು ಹಾಗೂ ಹೆಣ್ಣು ಮಗು ಇದೆ. ಇನ್ನು ಪ್ರಿಯದರ್ಶಿನಿ ತಮ್ಮ ದೇಹದ ತೂಕ ಇಳಿಸಿಕೊಳ್ಳಲು ತಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿಕೊಂಡರು.
ಪ್ರಿಯದರ್ಶಿನಿ ಅವರು ಬದಲಾಯಿಸಿಕೊಂಡ ಆಹಾರ ಪದ್ಧತಿಯನ್ನು ದಿನನಿತ್ಯ ಅನುಸರಿಸಿದ್ದರು. ಇದರ ಅನುಸಾರ ಅವರ ಆಹಾರದಲ್ಲಿ ಯಾವುದೇ ಡೈರಿ ಉತ್ಪನ್ನಗಳು ಇರಲಿಲ್ಲ. ನಿತ್ಯ ಹಣ್ಣು, ತರಕಾರಿ, ಮೀನು ಹಾಗೂ ಸಂಸ್ಕರಿಸಿದ ಆಹಾರವನ್ನು ಮಾತ್ರ ಅವರು ತಿನ್ನುತ್ತಿದ್ದರು. ಏಕಾಏಕಿ ಆಹಾರದಲ್ಲಿ ಬದಲಾವಣೆ ಆಗಿದ್ದರಿಂದ ಅವರ ರಕ್ತದಲ್ಲಿನ ಸಕ್ಕರೆ ಅಂಶ ಮಿತಿಮೀರಿ ಏರಿದೆ. ಇದರಿಂದ ಪ್ರಿಯದರ್ಶಿನಿ ಕೋಮಾಗೆ ತೆರಳಿದ್ದರು.ಕೊಡಲೇ ಚೆನ್ನೈ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.ಆದರೆ ಚಿಕಿತ್ಸೆ ಫಲಕಾರಿಯಾಗದೆ ಪ್ರಿಯದರ್ಶಿನಿ ಕೊ*ನೆಯುಸಿರು ಎಳೆದಿದ್ದಾರೆ.



