ತಮಿಳಿನ ಸ್ಟಾರ್ ಹೀರೋ ಆಗಿರುವ ವಿಜಯ್ ಅವರು ಇತ್ತೀಚೆಗೆ ತಮ್ಮದೇ ಆದ ಹೊಸ ರಾಜಕೀಯ ಪಕ್ಷ ಶುರು ಮಾಡಿದ್ದಾರೆ. ಜೊತೆಗೆ ಅವರ ಕೊನೆಯ ಸಿನಿಮಾ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಕೊನೆಯ ಸಿನಿಮಾ ಮುಗಿದ ಬಳಿಕ ವಿಜಯ್ ಅವರು ಸಿನಿಮಾ ಇಂದ ಸಂಪೂರ್ಣವಾಗಿ ನಿವೃತ್ತಿ ಪಡೆಯುತ್ತಾರೆ ಎನ್ನುವ ಸುದ್ದಿ ಈಗಾಗಲೇ ಅವರ ಅಭಿಮಾನಿಗಳಿಗೆ ಗೊತ್ತಾಗಿದ್ದು, ಫ್ಯಾನ್ಸ್ ಈ ವಿಷಯದಿಂದ ಬೇಸರದಲ್ಲಿ ಇದ್ದಾರೆ. ಆದರೆ ಅವರು ರಾಜಕೀಯದಲ್ಲಿ ಆಕ್ಟಿವ್ ಆಗಿರುತ್ತಾರೆ ಎನ್ನುವ ವಿಷಯ ಸ್ವಲ್ಪ ಸಮಾಧಾನ ಕೂಡ ತಂದಿದೆ. ಆದರೆ ಇದೀಗ ವಿಜಯ್ ಅವರ ಬಗ್ಗೆ ಹೊಸ ಗಾಸಿಪ್ ಕೇಳಿಬಂದಿದೆ..

ನಟ ವಿಜಯ್ ಅವರು ಸ್ಟಾರ್ ಹೀರೋ ಆಗಿ ಗುರುತಿಸಿಕೊಂಡಿರುವವರು. ಇವರ ಜೊತೆಗೆ ಅನೇಕ ನಾಯಕಿಯರು ಹೀರೋಯಿನ್ ಆಗಿ ನಟಿಸಿದ್ದರು ಸಹ ವಿಜಯ್ ಅವರ ಜೊತೆಗೆ ಬೆಸ್ಟ್ ಜೋಡಿ ಎಂದು ನಟಿ ತ್ರಿಷಾ ಅವರನ್ನು ಕರೆಯಲಾಗುತ್ತದೆ. ಇವರಿಬ್ಬರು ಜೊತೆಯಾಗಿ ಅಭಿನಯಿಸಿದ ಗಿಲ್ಲಿ ಸಿನಿಮಾ ಎಷ್ಟು ದೊಡ್ಡ ಹಿಟ್, ಇವರಿಬ್ಬರ ಜೋಡಿಗೆ ಯಾವ ಮಟ್ಟಿಗೆ ಜನಪ್ರಿಯತೆ ತಂದುಕೊಟ್ಟಿದೆ ಎನ್ನುವ ವಿಷಯ ನಮಗೆಲ್ಲ ಗೊತ್ತೇ ಇದೆ. ಗಿಲ್ಲಿ ನಂತರ ಇನ್ನು ಕೆಲವು ಸಿನಿಮಾಗಳಲ್ಲಿ ವಿಜಯ್ ಹಾಗೂ ತ್ರಿಷಾ ಜೋಡಿ ಒಟ್ಟಿಗೆ ನಾಯಕ ನಾಯಕಿಯಾಗಿ ಅಭಿನಯಿಸಿದ್ದಾರೆ. ಈ ಜೋಡಿಗೆ ದೊಡ್ಡ ಫ್ಯಾನ್ ಬೇಸ್ ಕೂಡ ಇದೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಬಹಳಷ್ಟು ಜನಪ್ರಿಯತೆ ಗಳಿಸಿರುವ ಈ ಜೋಡಿಯ ಬಗ್ಗೆ ಕೆಲವು ದಿನಗಳಿಂದ ವದಂತಿಗಳು ಕೇಳಿ ಬರುತ್ತಿದೆ. ನಟಿ ತ್ರಿಷಾ ಅವರ ಜೊತೆಗೆ ನಟ ವಿಜಯ್ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಬಹಳ ವೈರಲ್ ಆಗಿದೆ. ಇಬ್ಬರು ಹಲವು ಸಾರಿ ಪ್ರೈವೇಟ್ ಆಗಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಹಾಗೆಯೇ ಇವರಿಬ್ಬರು ಸಹ ಹಲವು ಕಡೆಗಳಲ್ಲಿ ಜೊತೆಜೊತೆಯಾಗಿ ಹೋಗುವುದನ್ನು ಜನರು ಕಂಡಿದ್ದಾರೆ, ಹಾಗೆಯೇ ಮಾಧ್ಯಮದವರ ಕಣ್ಣಿಗೂ ಬಿದ್ದಿದ್ದಾರೆ. ಇವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಹೊಸದಂತೂ ಅಲ್ಲ. ಹಲವು ವರ್ಷಗಳಿಂದ ಈ ಸುದ್ದಿ ಕೇಳಿಬರುತ್ತಿದೆ. ಈ ಬಾರಿ ದೊಡ್ಡದಾಗುವುದಕ್ಕೆ ಒಂದು ಪ್ರಮುಖವಾದ ಕಾರಣ ಸಹ ಇದೆ.

ಇತ್ತೀಚೆಗೆ ನಟಿ ಕೀರ್ತಿ ಸುರೇಶ್ ಅವರ ಮದುವೆ ನಡೆಯಿತು, ಇವರ ಮದುವೆ ನಡೆದದ್ದು ಗೋವಾದಲ್ಲಿ. ಕೀರ್ತಿ ಸುರೇಶ್ ಅವರ ಮದುವೆಗೆ ಹಲವು ಸೆಲೆಬ್ರಿಟಿಗಳು ಹೋಗಿದ್ದರು, ಹಾಗೆಯೇ ನಟ ವಿಜಯ್ ಅವರು ಕೀರ್ತಿ ಸುರೇಶ್ ಅವರ ಮದುವೆಗೆ ತಮ್ಮ ಪತ್ನಿಯ ಜೊತೆಗೆ ಹೋಗದೇ ತ್ರಿಷಾ ಅವರ ಜೊತೆಗೆ ಹೋಗಿದ್ದರು ಎಂದು ಹೇಳಲಾಗುತ್ತಿದೆ. ಹಾಗೆಯೇ ಇವರಿಬ್ಬರು ಕೂಡ ಏರ್ಪೋರ್ಟ್ ನಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ. ಈ ಎಲ್ಲಾ ಕಾರಣಗಳಿಂದ ಇವರಿಬ್ಬರ ಬಗೆಗಿನ ಸುದ್ದಿಗಳು ವೈರಲ್ ಆಗುತ್ತಿದೆ. ಪತ್ನಿ ಸಂಗೀತ ಅವರಿಗೆ ವಿಜಯ್ ಅವರು ವಿಚ್ಛೇದನ ಕೊಟ್ಟು ತ್ರಿಷಾ ಅವರ ಜೊತೆಗೆ ಮದುವೆ ಆಗುತ್ತಾರಾ ಎಂದು ಕೂಡ ಸುದ್ದಿಗಳು ಕೇಳಿಬರುತ್ತಿದೆ.
ಹಾಗೆಯೇ ವಿಜಯ್ ಹಾಗೂ ತ್ರಿಷಾ ಇಬ್ಬರು ಸಹ ಒಂದೇ ಅಪಾರ್ಟ್ಮೆಂಟ್ ನಲ್ಲಿ ಪಕ್ಕ ಪಕ್ಕದಲ್ಲೇ ಹೊಸದಾಗಿ ಮನೆಗಳನ್ನ ಖರೀದಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಇಷ್ಟೆಲ್ಲಾ ಸುದ್ದಿಗಳು ಇವರಿಬ್ಬರ ಬಗ್ಗೆ ಕೇಳಿಬಂದಿದ್ದು, Justice for Sangeetha ಎನ್ನುವ ಹ್ಯಾಶ್ ಟ್ಯಾಗ್ ಒಂದು ವೈರಲ್ ಆಗುತ್ತಿದೆ. ವಿಜಯ್ ಅವರ ಪತ್ನಿ ಸಂಗೀತ ಅವರಿಗೆ ನ್ಯಾಯ ಸಿಗಬೇಕು, ಅವರಿಗೆ ಅನ್ಯಾಯ ಆಗಬಾರದು ಎನ್ನುವ ಒಂದು ವಿಷಯ, ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಇದೆಲ್ಲವೂ ಬರೀ ಗಾಸಿಪ್ ಗಳು ಅಷ್ಟೇನಾ ಅಥವಾ ನಿಜಕ್ಕೂ ಅವರಿಬ್ಬರು ಡೇಟಿಂಗ್ ಮಾಡುತ್ತಿದ್ದಾರಾ? ಈ ಬಗ್ಗೆ ಮಾಹಿತಿ ಸಿಕ್ಕಿಲ್ಲ..