ಕನ್ನಡ ಕಿರುತೆರೆಯಲ್ಲಿ ಹಲವು ಶೋಗಳು ಬರುತ್ತಲೇ ಇರುತ್ತವೆ. ಅವುಗಳ ಪೈಕಿ ಹೆಚ್ಚು ಗಮನ ಸೆಳೆಯುತ್ತಿರುವ ಶೋಗಳಲ್ಲಿ ಡಿಕೆಡಿ ಅಂದರೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಕೂಡ ಒಂದು. ಇದು ಜೀಕನ್ನಡ ವಾಹಿನಿಯ ಅಪ್ಪಟ ಡ್ಯಾನ್ಸ್ ರಿಯಾಲಿಟಿ ಶೋ ಆಗಿದೆ. ಈ ಶೋನ ಮೂಲಕ ಸಾಕಷ್ಟು ಪ್ರತಿಭೆಗಳು ಕಿರುತೆರೆಗೆ ಮತ್ತು ಚಿತ್ರರಂಗಕ್ಕೆ ಡ್ಯಾನ್ಸರ್ ಗಳಾಗಿ, ಕೋರಿಯಿಗ್ರಾಫರ್ ಗಳಾಗಿ ಎಂಟ್ರಿ ಕೊಟ್ಟಿದ್ದಾರೆ. ಹಲವರಿಗೆ ಒಳ್ಳೆಯ ಅವಕಾಶ ಸಿಕ್ಕಿದೆ. ಪ್ರತಿ ಸೀಸನ್ ನಲ್ಲಿ ಒಂದಲ್ಲಾ ಒಂದು ವಿಶೇಷತೆಯ ಜೊತೆಗೆ ಬರುವ ಈ ಶೋ, ಈ ಸೀಸನ್ ನಲ್ಲಿ ಕೂಡ ವಿಶೇಷತೆಯ ಜೊತೆಗೆ ಬಂದಿತ್ತು, ಇದೀಗ ಫಿನಾಲೆ ಕೂಡ ಮುಗಿದಿದೆ..

ಹೌದು, ಈ ಬಾರಿ ಡ್ಯಾನ್ಸರ್ ಗಳಲ್ಲದ ಕಲಾವಿದರು ಮತ್ತು ಡ್ಯಾನ್ಸರ್ ಗಳ ಜೋಡಿಯಾಗಿ ಮಾಡಿ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಅನ್ನು ಶುರು ಮಾಡಲಾಯಿತು. ಎಂದಿನಂತೆ ಶಿವಣ್ಣ, ಚಿನ್ನಿ ಮಾಸ್ಟರ್, ನಟಿ ರಕ್ಷಿತಾ, ಹಾಗೂ ವಿಜಯ್ ರಾಘವೇಂದ್ರ ಅವರು ಈ ನಾಲ್ವರು ಸಹ ಜಡ್ಜ್ ಗಳಾಗಿದ್ದು, ಅನುಶ್ರೀ ಅವರು ನಿರೂಪಣೆ ಮಾಡುತ್ತಿದ್ದರು. ಈ ಬಾರಿ ಕಿರುತೆರೆ ಕಲಾವಿದರು ಹಾಗೂ ಇನ್ನಿತರರು ಡಿಕೆಡಿ ಶೋಗೆ ಸ್ಪರ್ಧಿಗಳಾಗಿ ಬಂದಿದ್ದರು. ಆರಂಭದಿಂದಲೂ ಉತ್ತಮ ಪ್ರತಿಕ್ರಿಯೆಯನ್ನೇ ಪಡೆದುಕೊಳ್ಳುತ್ತಾ ಬಂದಿದೆ ಈ ಶೋ. ಈ ಸೀಸನ್ ನಲ್ಲಿ ಸಹ ಎಲ್ಲವೂ ಚೆನ್ನಾಗಿಯೇ ಸಾಗಿದ್ದು, ಕಳೆದ ಭಾನುವಾರ ಫಿನಾಲೆ ಸಂಚಿಕೆ ಪ್ರಸಾರವಾಗಿದೆ.
ಉತ್ತಮ ಸಂಬಂಧಗಳನ್ನು ಕಾಯ್ದುಕೊಳ್ಳಲು, ವಯಸ್ಸಾದ ಕಾಲದಲ್ಲಿ ನೆಮ್ಮದಿಯಾಗಿ ಬದುಕಲು ಕೌಟುಂಬಿಕ ವಿವಾದಗಳನ್ನು ನಿರ್ವಹಿಸಿದ ಕರ್ನಾಟಕ ಉಚ್ಚ ನ್ಯಾಯಲಯದಲ್ಲಿ ಹಿರಿಯ ವಕೀಲರಾಗಿ ಸೇವೆ ಸಲ್ಲಿಸುತ್ತಿರುವ ಶ್ರೀಮತಿ ಸುಶೀಲರವರು ಕೊಟ್ಟಿದ್ದಾರೆನ್ನುವ ಸಲಹೆಗಳು ಇಲ್ಲಿವೆ.
ಸಂಗಾತಿಯ ಚುಚ್ಚು ಮಾತುಗಳಿಂದ ನರಳಬೇಡಿ..!
ಈ ಬಾರಿ ಡಿಕೆಡಿ ಶೋ ವಿನ್ನರ್ ಆದವರು ಕಿರುತೆರೆ ನಟಿ ಕಾವ್ಯ ಶೈವ ಮತ್ತು ಅವರ ಪಾರ್ಟ್ನರ್ ಹಾಗೂ ಕೋರಿಯಿಗ್ರಾಫರ್. ಇವರಿಬ್ಬರಿಗೆ ಎಲ್ಲರ ಕಡೆಯಿಂದ ವಿಶ್ ಗಳು ಸಹ ಬಂದವು. ಒಳ್ಳೆಯ ಬಹುಮಾನ ಸಹ ಸಿಕ್ಕಿತು. ಆದರೆ ಈ ಸೀಸನ್ ನಲ್ಲಿ ಹೆಚ್ಚು ಮನರಂಜನೆ ಸಿಕ್ಕಿದ್ದು ಗಗನಾ ಭಾರಿ ಮತ್ತು ಗಿಲ್ಲಿ ನಟ ಅವರಿಂದ ಎಂದು ಹೇಳಿದರೆ ಖಂಡಿತ ತಪ್ಪಲ್ಲ. ಇವರಿಬ್ಬ ಕಾಂಬಿನೇಷನ್ ತಮಾಷೆ, ಇದೆಲ್ಲವೂ ವೀಕ್ಷಕರಿಗೆ ಸಿಕ್ಕಾಪಟ್ಟೆ ಇಷ್ಟವಾಗಿತ್ತು. ಈ ಜೋಡಿ ವಿನ್ನರ್ ಆಗಲಿಲ್ಲ, ಇಬ್ಬರಲ್ಲಿ ಒಬ್ಬರಿಗೂ ಸಹ ವಿನ್ನರ್ ಪಟ್ಟ ಸಿಗಲಿಲ್ಲ, ಹಾಗಿದ್ದಮೇಲೆ ಇವರಿಗೆ ಸಿಕ್ಕ ಬಹುಮಾನ ಏನು ಎನ್ನುವ ಕುತೂಹಲ ಜನರಲ್ಲಿ ಮೂಡಿದ್ದು, ಇಂದು ಅದರ ಬಗ್ಗೆ ತಿಳಿಯೋಣ..

ಡಿಕೆಡಿ ಶೋ ನಲ್ಲಿ ಪ್ರಾಪರ್ಟಿ ಕಾಮಿಡಿ ಇಂದ ಹೆಚ್ಚು ಫೇಮಸ್ ಆಗಿದ್ದು ಗಿಲ್ಲಿನಟ, ಇವರ ಕಾಮಿಡಿ ಟೈಮಿಂಗ್ ಗೆ ನಕ್ಕು ಮನಸೋಲದವರಿಲ್ಲ, ಇಂಥ ಗಿಲ್ಲಿನಟ ಹಲವು ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕಾಮಿಡಿ ಕಿಲಾಡಿಗಳು ಭರ್ಜರಿ ಬ್ಯಾಚುಲರ್ಸ್ ಹೀಗೆ ಎಲ್ಲಾ ಶೋಗಳಲ್ಲಿ ಪಾರ್ಟಿಸಿಪೇಟ್ ಮಾಡಿದ್ದಾರೆ. ಭರ್ಜರಿ ಬ್ಯಾಚುಲರ್ಸ್ ನಲ್ಲಿ ರನ್ನರ್ ಅಪ್ ಆಗಿದ್ದ ಗಿಲ್ಲಿ, ಡಿಕೆಡಿ ಶೋಗೆ ಎಂಟ್ರಿ ಕೊಟ್ಟು ಇಲ್ಲಿ ಕೂಡ ಒಳ್ಳೆಯ ಎಂಟರ್ಟೈನ್ಮೆಂಟ್ ನೀಡಿ, ಜನರ ಮನಗೆದ್ದರು..ಈ ಶೋನಲ್ಲಿ ಗಿಲ್ಲಿ ಅವರಿಗೆ ಅವರ ಪರ್ಫಾಮೆನ್ಸ್ ಗಳಿಗೆ ಹಾಗೂ ಫಿನಾಲೆ ವರೆಗು ಬಂದಿದ್ದಕ್ಕೆ, ವೈಟ್ ಗೋಲ್ಡ್ ಕಡೆಯಿಂದ 1 ಲಕ್ಷ ಬಹುಮಾನ ಸಿಕ್ಕಿದೆ.
ಇನ್ನು ಗಗನಾ ಭಾರಿ ಈಕೆ ಮೊದಲ ಸಾರಿ ರಿಯಾಲಿಟಿ ಶೋಗೆ ಬಂದಿದ್ದು ಮಹಾನಟಿ ರಿಯಾಲಿಟಿ ಶೋ ಮೂಲಕ. ಮಹಾನಟಿಯಲ್ಲಿ ತನ್ನ ಮುಗ್ಧತೆ ಇಂದ ಹಾಗೂ ಕಾಮಿಡಿ, ತಮಾಶೇ ಇಂದ ಜನರಿಗೆ ಬಹಳ ಇಷ್ಟವಾಗಿದ್ದ ಹುಡುಗಿ ಗಗನ. ಮಹಾನಟಿಯಲ್ಲಿ ಫಿನಾಲೆ ತಲುಪಿದ್ದ ಗಗನ ಡಿಕೆಡಿ ಗೆ ಎಂಟ್ರಿ ಕೊಟ್ಟರು, ಇಲ್ಲಿ ಕೂಡ ಉತ್ತಮ ಪರ್ಫಾರ್ಮೆನ್ಸ್ ಮತ್ತು ತಮ್ಮ ಕ್ಯೂಟ್ನೆಸ್ ಇಂದ ಹೆಚ್ಚು ಜನಪ್ರಿಯತೆ ಪಡೆದುಕೊಂಡರು. ಗಗನಾ ಹಾಗು ಉಜ್ವಲ್ ಜೋಡಿ ವಿನ್ನರ್ ಆಗದೇ ಹೋದರು ಸಹ ಇವರಿಬ್ಬರಿಗೂ ಕೂಡ 1 ಲಕ್ಷ ರೂಪಾಯಿಗಳ ಬಹುಮಾನ ಸಿಕ್ಕಿದೆ.